Asianet Suvarna News Asianet Suvarna News

ಮಾಲ್ಡೀವ್ಸ್‌ಗೆ ಮತ್ತೊಂದು ಆಘಾತ, ಗರಿಷ್ಠ ಪ್ರವಾಸಿಗರ ಭೇಟಿಯಲ್ಲಿ 3ರಿಂದ 5ನೇ ಸ್ಥಾನಕ್ಕೆ ಇಳಿದ ಭಾರತ

ಮಾಲ್ಡೀವ್ಸ್ ಸರ್ಕಾರ ತೋರಿದ ಅಹಂಕಾರದ ನಡೆಯಿಂದ ಇದೀಗ ಮಾಲ್ಡೀವ್ಸ್‌ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಲ್ಡೀವ್ಸ್ ಸಂಸತು ಇಂಪೀಚ್‌ಮೆಂಟ್ ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ ಪ್ರವಾಸೋದ್ಯಮ ಇಲಾಖೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರತ 3ನೇ ಗರಿಷ್ಠ ಪ್ರವಾಸಿಗರನ್ನು ನೀಡುತ್ತಿದ್ದ ದೇಶವಾಗಿತ್ತು. ಇದೀಗ 5ನೇ ಸ್ಥಾನಕ್ಕೆ ಇಳಿದಿದೆ.

India drop 3rd to 5th position in Top tourism market for Maldives after huge row over PM Modi ckm
Author
First Published Jan 29, 2024, 6:55 PM IST

ಮಾಲ್ಡೀವ್ಸ್(ಜ.29) ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿಯ ಭಾರತ ವಿರೋಧಿ ನಡೆ, ಮಾಲ್ಡೀವ್ಸ್ ಸರ್ಕಾರದ ಸಚಿವರು ಪ್ರಧಾನಿ ಮೋದಿ ಹಾಗೂ ಭಾರತೀಯರ ವಿರುದ್ಧ ಹಾಕಿದ ಟ್ವೀಟ್‌ಗಳಿಂದ ಮಾಲ್ಡೀವ್ಸ್ ಬುಡಮೇಲಾಗಿದೆ. ಇತ್ತ ಮಾಲ್ಡೀವ್ಸ್ ಅಧ್ಯಕ್ಷನ ಪದಚ್ಯುತಿಗೆ ತಯಾರಿಗಳು ನಡೆಯುತ್ತಿದೆ. ಇತ್ತ ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರಿ ಇಳಿಕೆಯಾಗಿದೆ. ಇದುವರೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಗರಿಷ್ಠ ಪ್ರವಾಸಿಗರ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು. ಆದರೆ ಪ್ರಧಾನಿ ಮೋದಿ ಹಾಗೂ ಭಾರತೀಯರನ್ನು ನಿಂದಿಸಿದ ಬಳಿಕ ಪ್ರವಾಸಿಗರ ಸಂಖ್ಯೆ ಇಳಿಕೆಯಾಗುತ್ತಲೇ ಹೋಗಿದೆ. ಕಳೆದ 3 ವಾರಗಳ ಅಂಕಿ ಅಂಶವನ್ನು ಮಾಲ್ಡೀವ್ಸ್ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮಾಲ್ಡೀವ್ಸ್‌ಗೆ ಗರಿಷ್ಠ ಪ್ರವಾಸಿಗರು ಭೇಟಿ ನೀಡುವ ರಾಷ್ಟ್ರಗಳಲ್ಲಿ ಭಾರತ 3ರಿಂದ 5ನೇ ಸ್ಥಾನಕ್ಕೆ ಕುಸಿದಿದೆ.

ಜನವರಿ ತಿಂಗಳಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡಿದವರ ಒಟ್ಟು ಸಂಖ್ಯೆ 174,400. ಈ ಪೈಕಿ ಭಾರತೀಯರ ಸಂಖ್ಯೆ 13,989. ಶೇಕಡಾ 8 ರಷ್ಟು ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತವಾಗಿದೆ. ರಷ್ಯಾ, ಇಟಲಿ, ಚೀನಾ ಹಾಗೂ ಲಂಡನ್ ಆರಂಭಿಕ ಸ್ಥಾನಗಳನ್ನು ಪಡೆದಿದೆ. ಜನವರಿ ಮೂರು ವಾರಗಳಲ್ಲಿ 18,561 ರಷ್ಯಾ ಪ್ರವಾಸಿಗರು ಮಾಲ್ಡೀವ್ಸ್ ಭೇಟಿ ನೀಡಿದ್ದಾರೆ. ಇನ್ನು ಇಟಲಿಯ 18,111, ಚೀನಾದ 16,529 ಹಾಗೂ ಯುಕೆಯಿಂದ 14,588 ಪ್ರವಾಸಿಗರು ಮಾಲ್ಡೀವ್ಸ್ ಭೇಟಿ ನೀಡಿದ್ದಾರೆ. 

ಭಾರತ ವಿರೋಧಿ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ವಿಪಕ್ಷದ ಪ್ರತಿಭಟನೆ, ಸಂಸತ್ತಿನಲ್ಲಿ ಮಾರಾಮಾರಿ!

2023ರಲ್ಲಿ ಭಾರತದ 209,193 ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದರು. ಇನ್ನು 2022ರಲ್ಲಿ 2.41 ಲಕ್ಷ ಹಾಗೂ 2021ರಲ್ಲಿ 2.91  ಲಕ್ಷ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದರು. ಈ ಮೂಲಕ ಗರಿಷ್ಠ ಪ್ರವಾಸಿಗರ ಸಂಖ್ಯೆಯಲ್ಲಿ ಮುಂಚೂಣಿ ಸ್ಥಾನ ಪಡೆದಿತ್ತು. ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಿ ಎಂದು ಭಾರತಕ್ಕೆ ತಾಕೀತು ಮಾಡುತ್ತಾ ಅಧಿಕಾರಕ್ಕೆ ಬಂದ ಅಧ್ಯಕ್ಷ ಮುಯಿಝಿ, ಚೀನಾ ಪರ ವಾಲಿದ್ದರು. ಇದಕ್ಕೆ ಮಾಲ್ಡೀವ್ಸ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತದ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಉತ್ತೇಜಿಸಿದ್ದರು. 

ಮೋದಿ ಲಕ್ಷದ್ವೀಪ ಭೇಟಿಯಿಂದ ಮಾಲ್ಡೀವ್ಸ್ ಸಚಿವರು ಉರಿದುಬಿದ್ದಿದ್ದರು. ಮೋದಿ, ಭಾರತ ಹಾಗೂ ಭಾರತೀಯರನ್ನು ನಿಂದಿಸಿ ಟ್ವೀಟ್ ಮಾಡಿದ್ದರು. ಇಲ್ಲಿಂದ ಹುಟ್ಟಿಕೊಂಡ ಜ್ವಾಲೆ ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿ ಪದ್ಯಚ್ಯುತಿ ತಯಾರಿವರೆಗೂ ಬಂದು ನಿಂತಿದೆ.

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್‌ ಮುಯಿಝು ಪದಚ್ಯುತಿ ಸನ್ನಿಹಿತ!

Follow Us:
Download App:
  • android
  • ios