ಹಲವು ದಿನ ಬಳಿಕ ವಿಜಯ್ ಮಲ್ಯ ಟ್ವೀಟ್, ಬ್ಯಾಂಕ್ ರಜಾ ದಿನವೇ ಬ್ರೋ ಟ್ವೀಟ್ ಎಂದ ನೆಟ್ಟಿಗರು!
ಹಲವು ದಿನಗಳ ಬಳಿಕ ಬ್ಯಾಂಕ್ ವಂಚನೆ ಆರೋಪಿ ವಿಜಯ್ ಮಲ್ಯ ಟ್ವೀಟ್ ಮಾಡಿ ಶುಭಕೋರಿದ್ದಾರೆ. ಆದರೆ ಅಷ್ಟೇ ವೇಗದಲ್ಲಿ ಟ್ರೋಲ್ ಆಗಿದ್ದಾರೆ. ಮಲ್ಯ ಬ್ಯಾಂಕ್ ರಜಾ ದಿನ ನೋಡಿಕೊಂಡೆ ಟ್ವೀಟ್ ಮಾಡುತ್ತಾರೆ ಎಂದಿದ್ದಾರೆ.
ನವದೆಹಲಿ(ಸೆ.07) ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಇದೀಗ ಹಲವು ದಿನಗಳ ಬಳಿಕ ಟ್ವೀಟ್ ಮಾಡಿದ್ದಾರೆ. ಗಣೇಶ ಹಬ್ಬಕ್ಕೆ ಶುಭಕೋರಿ ವಿಜಯ್ ಮಲ್ಯ ಮಾಡಿದ ಟ್ವೀಟ್ ಇದೀಗ ಟ್ರೋಲ್ ಮಾಡಲಾಗುತ್ತಿದೆ. ವಿಜಯ್ ಮಲ್ಯ, ಬ್ಯಾಂಕ್ ರಜಾ ದಿನ ನೋಡಿಕೊಂಡು ಟ್ವೀಟ್ ಮಾಡುತ್ತಾರೆ. ವಿದೇಶದಲ್ಲಿದ್ದರೂ ಮಲ್ಯ ಭಾರತದ ರಜೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಯಾವತ್ತು ಬ್ಯಾಂಕ್ ರಜೆ ಇರುತ್ತೋ ಅವತ್ತೆ ಟ್ವೀಟ್ ಮಾಡುತ್ತಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಎಲ್ಲರಿಗೂ ಗಣೇಶ ಹಬ್ಬದ ಶುಭಾಶಗಳು ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಮೇ, 22, 2024ರಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದರು. ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕವಾಗಿ ಸೆಮಿಫೈನಲ್ ಹಂತ ಪ್ರವೇಶಿಸಿತ್ತು. ಈ ವೇಳೆ ಆರ್‌ಸಿಬಿ ತಂಡವನ್ನು ಅಭಿನಂದಿಸಿ, ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಕೆಲ ತಿಂಗಳು ಉರುಳಿದೆ. ಇದೀಗ ಗಣೇಶ ಹಬ್ಬಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ.
ಕೈಗೆಟುಕುವ ದರದಲ್ಲಿ ಮಾರಾಟಕ್ಕಿದೆ ವಿಜಯ್ ಮಲ್ಯ ಮರ್ಸಿಡಿಸ್ ಮೇಬ್ಯಾಕ್ 62 ಕಾರು!
ವಿಜಯ್ ಮಲ್ಯ ಟ್ವೀಟ್ ಮಾಡುತ್ತಿದ್ದಂತೆ ಹಲವರು ಮುಗಿಬಿದ್ದಿದ್ದಾರೆ. ಸಾರ್ವಜನಿಕ ರಜಾ ದಿನವೇ ಬ್ರೋ ಟ್ವೀಟ್ ಮಾಡುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ರಜಾ ದಿನವನ್ನು ಹೇಗೆ ಚೆಕ್ ಮಾಡಬೇಕು? ಕ್ಯಾಲೆಂಡರ್ ಮೂಲಕ ಅಲ್ಲ, ವಿಜಯ್ ಮಲ್ಯ ಟ್ವೀಟ್ ಮೂಲಕ ಪರಿಶೀಲಿಸಬಹುದು ಎಂದು ಮತ್ತೆ ಕೆಲವರು ಟ್ವೀಟ್ ಮಾಡಿದ್ದಾರೆ. ಯುಗಾದಿ, ದೀಪಾವಳಿ ಸೇರಿದಂತೆ ಹಬ್ಬಗಳ ರಜಾ ದಿನಗಳಲ್ಲಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಇದನ್ನೇ ನೆಟ್ಟಿಗರು ನೆನಪಿಸಿ ಇದೀಗ ಟ್ರೋಲ್ ಮಾಡುತ್ತಿದ್ದಾರೆ.
ಮಲ್ಯ ವಿರುದ್ಧ ಭಾರತ ಕಾನೂನು ಹೋರಾಟ ಮುಂದುವರಿಸಿದೆ. ಇತ್ತ ವಿಜಯ್ ಮಲ್ಯ ಕೂಡ ಲಂಡನ್‌ನಲ್ಲಿ ತಮ್ಮ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ಪುತ್ರ ಸಿದ್ದಾರ್ಥ್ ಮಲ್ಯ ವಿವಾಹ ಮಹೋತ್ಸವದಲ್ಲಿ ವಿಜಯ್ ಮಲ್ಯ ಕಾಣಿಸಿಕೊಂಡಿದ್ದರು. ಮಲ್ಯ ವಿರುದ್ದ ಇತ್ತೀಚೆಗೆ ಸೆಬಿ ನಿರ್ಬಂಧ ಹೇರಿದೆ. ಷೇರು ಮಾರುಕಟ್ಟೆಯಲ್ಲಿ ಹಾಗೂ ಇತರ ಲಿಸ್ಟೆಡ್ ಕಂಪನಿಗಳ ಜೊತೆ ಯಾವುದೇ ವ್ಯವಹಾರ ನಡೆಸಿದಂತೆ 3 ವರ್ಷಗಳ ಕಾಲ ನಿರ್ಬಂಧ ಹೇರಿದೆ.
ನನ್ನ ಜೀವನದಲ್ಲಿ ಸರ್‌ನೇಮ್ ಯಾವತ್ತೂ ನೆರವಾಗಿಲ್ಲ, ಬರಿ ಅವಮಾನವೇ ಎಂದ ಸಿದ್ಧಾರ್ಥ್ ಮಲ್ಯ!
ವಿಜಯ್ ಮಲ್ಯ ತಮ್ಮ ಪ್ರಮುಖ ಕಂಪನಿಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಯೂನೈಟೆಡ್ ಬ್ರಿವರಿಸ್ ಕಂಪನಿಯಲ್ಲಿ ಶೇಕಡಾ 8.1ರಷ್ಟು ಪಾಲು ಹಾಗೂ ಸ್ಮಿರ್ನಾಫ್ ವೋಡ್ಕಾ ಕಂಪನಿಯಲ್ಲಿ ಶೇಕಡಾ 0.01 ಪಾಲು ಹೊಂದಿದ್ದಾರೆ. ಬೇರೆ ಹೆಸರಿನ ಮೂಲಕ ವಿಜಯ್ ಮಲ್ಯ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಅನ್ನೋ ಕಾರಣಕ್ಕೆ ಸೆಬಿ ಈ ನಿರ್ಧಾರ ಘೋಷಿಸಿತ್ತು.