ಆನೆ ದಾಳಿಯಿಂದ ರಕ್ಷಣೆಗಾಗಿ ಮನೆಯಲ್ಲಿ ಜೊತೆಯಾಗಿ ಮಲಗಿದ್ದ 3 ಮಕ್ಕಳು ಹಾವು ಕಡಿದು ಸಾವು!

ಗ್ರಾಮದಲ್ಲಿ ವಿಪರೀತ ಆನೆಗಳ ದಾಳಿಯಿಂದ ರಕ್ಷಣೆ ಪಡೆಯಲು ಮಕ್ಕಳನ್ನು ಸುರಕ್ಷಿತ ಮನೆಯಲ್ಲಿ ಮಲಗಲು ಸೂಚಿಸಲಾಗಿತ್ತು. ಆದರೆ ಮಕ್ಕಳು ಆನೆಯಿಂದ ಬಚಾವ್ ಆದರೂ ಹಾವಿನಿಂದ ದುರಂತ ಅಂತ್ಯ ಕಂಡ ಘಟನೆ ನಡೆದಿದೆ.

Childrens dies due to snakebite while sleeping in safe house to avoid elephant attack Jharkhand ckm

ರಾಂಚಿ(ಸೆ.07) ಗ್ರಾಮದಲ್ಲಿ ಸತತವಾಗಿ ಆನೆ ದಾಳಿಗೆ ಕೆಲವರು ಬಲಿಯಾಗಿದ್ದಾರೆ. ಹೀಗಾಗಿ ಗ್ರಾಮಸ್ಥರು ಸಂಜೆಯಾಗುತ್ತಿದ್ದಂತೆ ಸುರಕ್ಷಿತ ಮನೆ, ಶಾಲಾ ಕಟ್ಟಡದ ಟರೇಸ್ ಸೇರಿದಂತೆ ಒಂದೊಂದು ಕಡೆಯಲ್ಲಿ ಮಲಗುವ ಪರಿಪಾಠ ಆರಂಭಿಸಿದ್ದಾರೆ. ಹಲವು ಕುಟುಂಬಗಳು ಜೊತೆಯಾಗಿ ಮಲಗಿ ರಾತ್ರಿ ಕಳೆಯುತ್ತಿದ್ದರು. ಹೀಗೆ ಆನೆ ದಾಳಿಯಿಂದ ಮಕ್ಕಳು ಸುರಕ್ಷಿತವಾಗಿರಲಿ ಎಂದು ಪೋಷಕರು 8 ರಿಂದ 10 ಮಕ್ಕಳನ್ನು ಟರೇಸ್ ಮನೆಯಲ್ಲಿ ಮಲಗಿಸಿದ್ದರು. ಆನೆಯಿಂದ ಬಚಾವ್ ಆದರೂ ಈ ಪೈಕಿ ಮೂವರು ಮಕ್ಕಳು ಹಾವು ಕಡಿದು ಮೃತಪಟ್ಟ ಘಟನೆ ಜಾರ್ಖಂಡ್‌ನ ಚಪ್‌ಕ್ಲಿ ಗ್ರಾಮದಲ್ಲಿ ನಡೆದಿದೆ.

ಪನ್ನಾಲಾಲ್ ಕೊರ್ವಾ(15),ಕಾಂಚನ್ ಕುಮಾರಿ(8) ಹಾಗೂ ಬೇಬಿ ಕುಮಾರು(9) ಮೃತ ದುರ್ದೈವಿಗಳು. ಚಪ್‌ಕ್ಲಿ ಕಾಂಡಂಚಿನ ಗ್ರಾಮ. ಇತ್ತೀಚೆಗೆ ಆನೆಗಳ ದಾಳಿ ಸಾಮಾನ್ಯವಾಗಿದೆ. ಪ್ರಮುಖವಾಗಿ ಕಾಡಿನಲ್ಲಿನ ಹಲವು ಮರಗಳು ಟಿಂಬರ್ ಉದ್ಯಮಕ್ಕೆ ಬಲಿಯಾಗಿದೆ. ಕಾಡು ಬರಿದಾಗಿದೆ. ಹೀಗಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿದೆ. 

ಬ್ಯಾಂಕ್‌ಗೆ ಬಂದ ಹಾವನ್ನು ಬರಿಗೈಯಲ್ಲಿ ಹಿಡಿದ ಉರಗತಜ್ಞನ ನೋಡಿ ಬೆಚ್ಚಿದ ನೌಕರರು!

ಈ ಪೈಕಿ ಕಾಡಾನೆಗಳ ಹಿಂಡು ನಾಡಿನತ್ತ ಧಾವಿಸುತ್ತಿದೆ. ಗ್ರಾಮಕ್ಕೆ ನುಗ್ಗುತ್ತಿರುವ ಕಾಡಾನೆಗಳನ್ನು ಗ್ರಾಮಸ್ಥರು ಪ್ರತಿ ದಿನ ಓಡಿಸುತ್ತಿದ್ದಾರೆ. ಇದರಿಂದ ಭಯಭೀತಗೊಂಡಿರುವ ಆನೆಗಳು ಮಾನವನ ಮೇಲೆ ಭೀಕರ ದಾಳಿ ನಡೆಸುತ್ತಿದೆ. ಈಗಾಗಲ ಚಪ್‌ಕ್ಲಿ ಗ್ರಾಮದ ಹಲವರ ಮೇಲೆ ಆನೆ ದಾಳಿ ಮಾಡಿದೆ. ಹೀಗಾಗಿ ಸಣ್ಣ ಡೇರೆ, ಚಪ್ಪಡಿ ಮನೆಗಳಲ್ಲಿ ವಾಸವಿದ್ದ ಕೂಲಿ ಕಾರ್ಮಿಕರು ಸಂಜೆಯಾಗುತ್ತಿದ್ದಂತೆ ಸುರಕ್ಷಿತ ಮನೆಗಳು, ಶಾಲಾ ಕಟ್ಟಡ, ಸರ್ಕಾರಿ ಕಟ್ಟಟದ ಟರೇಸ್ ಮೇಲೆ ಮಲಗುತ್ತಿದ್ದಾರೆ.

ಹೀಗೆ ಗ್ರಾಮಸ್ಥರು 8 ರಿಂದ 10 ಮಕ್ಕಳನ್ನು ಸುರಕ್ಷಿತ ಮನೆಯಲ್ಲಿ ಮಲಗಿಸಿದ್ದಾರೆ. ಆದರೆ ಆನೆ ದಾಳಿ ಮಾಡಿದರೂ ಮಕ್ಕಳು ಸುರಕ್ಷಿತವಾಗಿರಲಿದ್ದಾರೆ ಅನ್ನೋ ಲೆಕ್ಕಾಚಾರದಲ್ಲಿ ಪೋಷಕರು ಮಕ್ಕಳನ್ನು ಮಲಗಿಸಿದ್ದಾರೆ. ಆದರೆ ನೆಲದ ಮೇಲೆ ಮಲಗಿದ್ದ ಮಕ್ಕಳ ಪೈಕಿ ಮೂವರು ಮಕ್ಕಳಿಗೆ ನಿದ್ದೆಯಲ್ಲಿರುವಾಗಲೇ ಹಾವು ಕಡಿದಿದೆ. 

ಹಾವು ಕಡಿತದಿಂದ ಚೀರಾಡಿ ಎದ್ದ ಮಕ್ಕಳು ಗಾಬರಿಗೊಂಡಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ಎದ್ದಿದ್ದಾರೆ. ರಾತ್ರೋ ರಾತ್ರಿ ಮಕ್ಕಳನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಸಮಯ ಮೀರಿ ಹೋಗಿದೆ. ಮಕ್ಕಳು ಮೃತಪಟ್ಟಿದ್ದಾರೆ. ಆನೆಯಿಂದ ಮಕ್ಕಳು ಸುರಕ್ಷಿತವಾಗಿರಲಿ ಎಂದು ಸುರಕ್ಷಿತ ಮನೆಯಲ್ಲಿ ಮಲಗಿಸಿದರೆ ಹಾವು ಕಡಿದು ಮತಪಟ್ಟ ಘಟನೆಯಿಂದ ಮಕ್ಕಳ ಪೋಷಕರು, ಗ್ರಾಮಸ್ಥರು ಆಘಾತಗೊಂಡಿದ್ದಾರೆ. ಇದೇ ವೇಳೆ ಸ್ಥಳೀಯ ಜಿಲ್ಲಾಡಳಿತ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಆಟವಾಡುತ್ತಿದ್ದ ವೇಳೆ ಆಟಿಕೆ ಎಂದು ಹಾವನ್ನೇ ಕಚ್ಚಿದ 1 ವರ್ಷದ ಮಗು, ನಡೆಯಿತು ಮಹಾ ಅಚ್ಚರಿ!


 

Latest Videos
Follow Us:
Download App:
  • android
  • ios