Asianet Suvarna News Asianet Suvarna News

ಚೆನ್ನೈ ಬೀದಿಯಲ್ಲಿ ಚಿಕನ್ ಕಬಾಬ್ ಮಾರುತ್ತಿರುವ ಪಿಹೆಚ್‌ಡಿ ಸ್ಕಾಲರ್ ಪತ್ತೆ ಹಚ್ಚಿದ ಅಮೆರಿಕ ವ್ಲೋಗರ್!

ಆತ ಪಿಹೆಚ್‌ಡಿ ಸ್ಕಾಲರ್, ಪಿಚ್‌ಹೆಡಿಗಾಗಿ ಮಾಡುತ್ತಿರುವ ಸಂಶೋಧನೆ, ಥೀಸಿಸ್ ಎಲ್ಲವೂ ಗೂಗಲ್‌ನಲ್ಲಿ ಲಭ್ಯವಿದೆ. ಆದರೆ ಚೆನ್ನೈ ಬೀದಿ ಬದಿಯಲ್ಲಿ ಚಿಕನ್ ಕಬಾಬ್ ಮಾರುತ್ತಾ ವಿದ್ಯಾಭ್ಯಾಸ ಮಾಡುತ್ತಿರುವ ಈ ವಿಧ್ವಾಂಸನ ಅಮೆರಿಕನ್ ವ್ಲೋಗರ್ ಪತ್ತೆ ಹಚ್ಚಿದ್ದಾರೆ. ಈನತ ವಿಡಿಯೋ ಇದೀಗ ಸದ್ದು ಮಾಡುತ್ತಿದೆ.

American vlogger catches phd scholar selling chicken kebab street food in chennai ckm
Author
First Published Sep 7, 2024, 10:48 PM IST | Last Updated Sep 7, 2024, 10:48 PM IST

ಚೆನ್ನೈ(ಸೆ.07) ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಅನ್ನೋ ಮಾತು ಹೊಸದೇನಲ್ಲ. ಆದರೆ ಕಳೆದ ಹಲವು ವರ್ಷಗಳಿಂದ ರಾಜಕೀಯ ಕೆಸರೆರೆಚಾಟಕ್ಕೂ ದಾರಿಮಾಡಿಕೊಟ್ಟಿದೆ. ಡಿಗ್ರಿ ಮಾಡಿ ಪಕೋಡ ಮಾರಿ ಅನ್ನೋ ಮಾತುಗಳು ಭಾರಿ ವೈರಲ್ ಆಗಿದೆ. ಆದರೆ ಇದೆಲ್ಲಕ್ಕಿಂತ ಭಿನ್ನವಾದ ಹಾಗೂ ಮಾದರಿಯಾದ ಘಟನೆಯೊಂದು ಇದೀಗ ಸದ್ದು ಮಾಡುತ್ತಿದೆ.  ಚೆನ್ನೈ ಬೀದಿ ಬದಿ ಚಿಕನ್ ಕಬಾಬ್ ಮಾರುತ್ತಿರುವ ಪಿಹೆಚ್‌ಡಿ ಸ್ಕಾಲರನ್ನು ಅಮೆರಿಕ ವ್ಲೋಗರ್ ಪತ್ತೆ ಹಚ್ಚಿದ್ದಾನೆ.

ಅಮೆರಿಕದ ಖ್ಯಾತ ವ್ಲೋಗರ್ ಕ್ರಿಸ್ಟೋಫರ್ ಲಿವಿಸ್ ಭಾರತ ಪ್ರವಾಸದಲ್ಲಿ ಈ ವಿಶೇಷ ಘಟನೆಯನ್ನು ಸೆರೆ ಹಿಡಿದಿದ್ದಾನೆ. ಚೆನ್ನೈ ಡಿಸ್ಕವರಿ ಮಾಡಲು ಹೊರಟ ಲಿವಿಸ್ ಗೂಗಲ್ ಮ್ಯಾಪ್ ಮೂಲಕ ಬೀದಿ ಬದಿಯ ಚಿಕನ್ ಕಬಾಬ್ ಅಂಗಡಿದೆ ಬಂದಿದ್ದಾನೆ. ಸಾಲು ಸಾಲು ಸ್ಟ್ರೀಟ್ ಫುಡ್‌ಗಳ ನಡುವೆ ವ್ಲೋಗರ್ ಗೂಗಲ್ ಮ್ಯಾಪ್ ಮಾಡಿ ಈತನ ಬಳಿ ಬಂದಿದ್ದಾನೆ.

ಧಾರವಾಡ: ಸತತ 18 ವರ್ಷಗಳ ದಣಿವರಿಯದೆ ಸಂಶೋಧನೆ; 89ನೇ ವಯಸ್ಸಿನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ವೃದ್ಧ!

ಬಳಿಕ ಚಿಕನ್ 65 ಆರ್ಡರ್ ಮಾಡಿದ್ದಾನೆ. ಎಷ್ಟು ಎಂದು ವ್ಲೋಗರ್ ಪ್ರಶ್ನೆಗೆ 100 ಗ್ರಾಂಗೆ 50 ರೂಪಾಯಿ ಎಂದು ಉತ್ತರಿಸಿದ್ದಾನೆ. ನಿಮ್ಮ ಶಾಪ್ ಗೂಗಲ್ ಮ್ಯಾಪ್‌ನಲ್ಲಿದೆ. ಹೀಗಾಗಿ ಇಲ್ಲಿಗೆ ಬಂದೆ ಎಂದು ಲಿವಿಸ್ ಹೇಳಿದ್ದಾನೆ. ಚಿಕನ್ 65 ತಿನ್ನುತ್ತಾ ಅಮೆರಿಕನ್ ವ್ಲೋಗರ್, ಇದೇ ಸ್ಟ್ರೀಟ್ ಫುಡ್ ಯುವಕನ ಬಳಿಕ ಮಾತನಾಡಿದ್ದಾನೆ. ಈ ವೇಳೆ ಅಚ್ಚರಿ ವಿಚಾರವೊಂದನ್ನು ಈತ ಬಯಲು ಮಾಡಿದ್ದಾನೆ.

ನಾನು ಚಿಕನ್ ಕಬಾಬ್ ಮಾರುತ್ತಿದ್ದೇನೆ, ಮತ್ತೊಂದೆಡೆ ನನ್ನ ವಿದ್ಯಾಭ್ಯಾಸ ಮುಂದುವರಿಸಿದ್ದೇನೆ ಎಂದಿದ್ದಾರೆ. ಇಷ್ಟೇ ಅಲ್ಲ, ಸದ್ಯ ನಾನು ಪಿಹೆಚ್‌ಡಿ ಮಾಡುತ್ತಿದ್ದೇನೆ ಎಂದಿದ್ದಾನೆ. ಅರೆ ವಾವ್, ಯಾವ ವಿಷಯದಲ್ಲಿ ಎಂದು ವ್ಲೋಗರ್ ಕೇಳಿದ್ದಾನೆ. ಬಯೋಟೆಕ್ನಾಲಜಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ, ಕೆಲಸ ಮಾಡುತ್ತಾ ವಿದ್ಯಾಭ್ಯಾಸವನ್ನೂ ಪೂರೈಸುತ್ತಿದ್ದೇನೆ ಎಂದಿದ್ದಾನೆ. ಗೂಗಲ್‌ಲ್ಲಿ ನಾನು ರೀಸರ್ಚ್ ಮಾಡಿದ ವಿಷಗಳು, ಲೇಖನ, ಅಧ್ಯಯನ ಥೀಸಿಸ್ ಲಭ್ಯವಿದೆ ಎಂದಿದ್ದಾನೆ. ಬಳಿಕ ಗೂಗಲ್ ಸರ್ಚ್ ಮಾಡಿ ವಿದೇಶಿ ವ್ಲೋಗರ್‌ಗೆ ತೋರಿಸಿದ್ದಾನೆ.

 

 

ಈ ಯುವಕನಿಂದ ಅಮೆರಿಕನ್ ವ್ಲೋಗರ್ ಇಂಪ್ರೆಸ್ ಆಗಿದ್ದಾನೆ. ಕಠಿಣ ಪರಿಶ್ರಮ, ಜೊತೆಗೆ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ನಿನಗೆ ಒಳ್ಳೆಯದಾಗಲಿ. ಆಲ್ ದಿ ಬೆಸ್ಟ್ ಎಂದು ಶುಭಹಾರೈಸಿ ಅಮೆರಿಕನ್ ವ್ಲೋಗರ್ ತೆರಳಿದ್ದಾನೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಲೆಕ್ಚರರ್ ಕೆಲಸ ಬಿಟ್ಟು ತರಕಾರಿ ಮಾರಾಟಕ್ಕಿಳಿದ 4 ಮಾಸ್ಟರ್ ಡಿಗ್ರಿ ಹೊಂದಿರುವ ಪಿಹೆಚ್‌ಡಿ ಸ್ಕಾಲರ್
 

Latest Videos
Follow Us:
Download App:
  • android
  • ios