ಭಾರತೀಯ ರೈಲ್ವೇ ಇದೀಗ ಅತೀ ದೊಡ್ಡ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಈ ಬಾರಿ 9 ದಿನಗಳ ಜಪಾನ್ ಟೂರ್ ಪ್ಯಾಕೇಜ್ ಘೋಷಿಸಿದೆ. ಆಸಕ್ತರು ಟಿಕೆಟ್ ಬುಕ್ ಮಾಡಿ ಸೀಟು ಕಾಯ್ದಿರಿಸಬಹುದು. ಟಿಕೆಟ್ ಬೆಲೆ ಎಷ್ಟು

ಭಾರತೀಯ ರೈಲ್ವೇ ದೇಶದ ಹಲವೆಡೆಗೆ ಪ್ರವಾಸ ಪ್ಯಾಕೆಜ್ ನೀಡುತ್ತಿದೆ. ತೀರ್ಥ ಯಾತ್ರೆ, ರಾಮಾಯಾಣ ಪ್ರವಾಸ, ಹಿಮಾಚಲ ಸೇರಿದಂತೆ ಸುಂದರ ತಾಣಗಳಿಗೆ ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಇದೀಗ ಭಾರತೀಯ ರೈಲ್ವೇ ಅತ್ಯಂತ ಮಹತ್ವಾಕಾಂಕ್ಷಿ ಹಾಗೂ ಅತೀ ದೊಡ್ಡ ಟೂರ್ ಪ್ಯಾಕೇಜ್ ಘೋಷಿಸಿದೆ. ಭಾರತೀಯ ರೈಲ್ವೇಯ ಭಾರತ ಟು ಜಪಾನ್ ಟೂರ್ 9 ದಿನಗಳ ಪ್ರವಾಸ. ಅಕ್ಟೋಬರ್ 25ರಂದು ಪ್ರವಾಸ ಆರಂಭಗೊಳ್ಳಲಿದೆ. ಜಪಾನ್ ಟೂರ್ ಮಾಡಲು ಆಸಕ್ತ ಪ್ರವಾಸಿಗರು ಭಾರತೀಯ ರೈಲ್ವೇ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.

ಮುಂಬೈನಿಂದ ಜಪಾನ್ ಟೂರ್

ಟಿಕೆಟ್ ಬುಕಿಂಗ್ ಮಾಡುವ ಪ್ರಯಾಣಿಕರ ಪ್ರವಾಸ ಮುಂಬೈನಿಂದ ಆರಂಭಗೊಳ್ಳಲಿದೆ. ಬಳಿಕ ಜಪಾನ್‌ನ ಹಲವು ಪ್ರವಾಸಿ ತಾಣ, ಪ್ರಮುಖ ನಗರಗಳಲ್ಲಿ ಸಂಚರಿಸಿ 8 ರಾತ್ರಿ 9 ದಿನಗಳ ದೊಡ್ಡ ಟೂರ್ ಇದಾಗಿದೆ. ಅಕ್ಟೋಬರ್ 25 ಆರಂಭಗೊಂಡು ನವೆಂಬರ್ 3ಕ್ಕೆ ಅಂತ್ಯಗೊಳ್ಳಲಿದೆ.

ಭಾರತ -ಜಪಾನ್ ಟೂರ್ ಪ್ಯಾಕೇಜ್ ಬೆಲೆ

  • ಒಬ್ಬರು: ಪ್ರತಿ ವ್ಯಕ್ತಿಗೆ ರೂ. 4,14,770
  • ಟ್ವಿನ್ ಶೇರಿಂಗ್: ಪ್ರತಿ ವ್ಯಕ್ತಿಗೆ ರೂ. 3,36,200
  • ಟ್ರಿಪಲ್ ಶೇರಿಂಗ್: ಪ್ರತಿ ವ್ಯಕ್ತಿಗೆ ರೂ. 3,36,200
  • ಮಗು ಬೆಡ್‌ನೊಂದಿಗೆ (2-11 ವರ್ಷ): ಪ್ರತಿ ಮಗುವಿಗೆ ರೂ. 3,36,200
  • ಮಗು ಬೆಡ್ ಇಲ್ಲದೆ (2-11 ವರ್ಷ): ಪ್ರತಿ ಮಗುವಿಗೆ ರೂ. 2,63,100

ಮುಂಬೈನಿಂದ ಜಪಾನ್ ಪ್ರಯಾಣ ಹೇಗೆ?

ಸೆಪ್ಟೆಂಬರ್ 25 ರಂದು ಪ್ರಯಾಣಿಕರು ಮುಂಬೈನ ಛತ್ರಪತಿ ಶಿವಾಜಿ ಮಾಹಾರಾಜ್ ವಿಮಾನ ನಿಲ್ದಾಣದಿಂದ ವಿಮಾನ ಮೂಲಕ ಪ್ರಯಾಣ ಬೆಳೆಸಲಿದ್ದಾರೆ. ಟೋಕಿಯೋಗೆ ನೇರ ವಿಮಾನ ಮೂಲಕ ಪ್ರಯಾಣ ಮಾಡಲಿದ್ದಾರೆ. ಟೋಕಿಯೋ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರನ್ನು ಮಾರ್ಗದರ್ಶಕರು ಸ್ವಾಗತಿಸಲಿದ್ದಾರೆ. ಬಳಿಕ ಭಾರತೀಯ ರೆಸ್ಟೋರೆಂಟ್‌ನಲ್ಲಿ ಊಟ,ತಿಂಡಿ ಸವಿದ ಬಳಿಕ ಇಮ್ಮರ್ಸಿವ್ ಡಿಜಿಟಲ್ ಆರ್ಟ್ ಮ್ಯೂಸಿಯಂ ಆದ ಟೀಮ್ ಲ್ಯಾಬ್ ಪ್ಲಾನೆಟ್ಸ್ ಭೇಟಿಯನ್ನು ಒಳಗೊಂಡಿರುತ್ತದೆ, ನಂತರ ಐತಿಹಾಸಿಕ ಉಯೆನೋ ಪಾರ್ಕ್ ಸೇರಿದಂತೆ ಕೆಲ ಪ್ರಮುಖ ತಾಣಗಳಿಗೆ ಭೇಟಿ ನೀಡಲಿದ್ದಾರೆ.

ಟೋಕಿಯೋದ ಹಲವು ತಾಣಗಳಿಗೆ ತೆರಳಲಿರುವ ಪ್ರವಾಸಿಗರು, ಸೆನ್ಸೋ ಜೀ ಜೇವಸ್ಥಾನ, ನಕಾಮಿಸೆ ಡೋರಿ, ಅಸಾಕುಸಾ, ಶಿಬುಯಾ ಕ್ರಾಸಿಂಗ್ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಇನ್ನು ಪ್ರವಾಸಿಗರು ಐಕಾನಿಕ್ ಮೌಂಟ್ ಫುಜಿ ಕಡೆಗೆ ತೆರಳಲಿದ್ದಾರೆ. ನಂತರ ಮಹೋನ್ನತ ಜ್ವಾಲಾಮುಖಿ ವೀಕ್ಷಿಸಲಿದ್ದಾರೆ. ಇದರ ನಂತರ ಓವಾಕುದಾನಿ ಕಣಿವೆಯ ಮೇಲೆ ಹಕೋನ್ ರೋಪ್‌ವೇ ಪ್ರವಾಸ ಮತ್ತು ಸುಂದರವಾದ ಲೇಕ್ ಅಶಿ ಪೈರೇಟ್ ಶಿಪ್ ಕ್ರೂಸ್ ಪ್ರಯಾಣ ಇರಲಿದೆ ಜಪಾನ್ ಕೋಚ್ ಪ್ರವಾಸದ ಮೂಲಕ ನಾಗೋಯಾ ಪ್ರವಾಸ, ಟೊಯೋಟಾ ಮ್ಯೂಸಿಯಂ ರೈಲ್ವೇ ಪಾರ್ಕ್ ಭೇಟಿ ನೀಡಲಿದ್ದಾರೆ.

ಶಾಂತ ಅರಶಿಯಾಮಾ ಬಂಬೂ ಗ್ರೋವ್ ಮತ್ತು ಸುಂದರವಾದ ಕಿಂಕಾಕು-ಜಿ, ಚಿನ್ನದ ದೇವಸ್ಥಾನ ಎಂದೂ ಕರೆಯಲ್ಪಡುವ ತಾಣಗಳನ್ನು ಭೇಟಿ ಮಾಡಲಿದ್ದಾರೆ. ಸಾವಿರಾರು ಜೀವಂತ ಕಿತ್ತಳೆ ಟೋರಿ ಗೇಟ್‌ಗಳಿಂದ ಸಾಲಾಗಿರುವ ಐಕಾನಿಕ್ ಮಾರ್ಗದೊಂದಿಗೆ ಫುಶಿಮಿ ಇನಾರಿ ತೈಶಾವನ್ನು ಅನ್ವೇಷಿಸಲಿದ್ದಾರೆ. ನಾರಾ ಪಾರ್ಕ್ ಮತ್ತು ದೈತ್ಯಾಕಾರದ ಗ್ರೇಟ್ ಬುದ್ಧನ ನೆಲೆಯಾದ ಟೋಡಾಯಿ-ಜಿ ದೇವಸ್ಥಾನಕ್ಕೆ ದಿನದ ಪ್ರವಾಸ ಕೈಗೊಳ್ಳಲಿದ್ದಾರೆ. ನಂತರ ಪ್ರಪಂಚ-ಪ್ರಸಿದ್ಧ ಓಸಾಕಾ ಅಕ್ವೇರಿಯಂ ಕೈಯುಕಾನ್ ಅನ್ನು ಅನ್ವೇಷಿಸಲು ಓಸಾಕಾಗೆ ತೆರಳಲಿದ್ದಾರೆ. ಹಿರೋಷಿಮಾ ಪ್ರಯಾಣ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.