- Home
- News
- India News
- India Latest News Live: ಪ್ರೀತಿಸಿ ಮದ್ವೆಯಾದ್ರೂ ಕಿರುಕುಳ; ವಿಷ ಸೇವಿಸಿ ಪ್ರಾಣ ಕಳೆದುಕೊಂಡ ಬ್ಯಾಂಕರ್ ಅಂಕಿತ್!
India Latest News Live: ಪ್ರೀತಿಸಿ ಮದ್ವೆಯಾದ್ರೂ ಕಿರುಕುಳ; ವಿಷ ಸೇವಿಸಿ ಪ್ರಾಣ ಕಳೆದುಕೊಂಡ ಬ್ಯಾಂಕರ್ ಅಂಕಿತ್!

ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ ಆಮದಿನ ಮೇಲೆ ಸದಾ ಕಾಲ ಕಿಡಿಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಐರೋಪ್ಯ ದೇಶಗಳಿಗೆ ಭಾರತ ಸರ್ಕಾರ ಸೋಮವಾರ ತೀಕ್ಷ್ಣ ತಿರುಗೇಟು ನೀಡಿದೆ. ರಷ್ಯಾದ ಜೊತೆಗೆ ಭಾರತದ ವ್ಯವಹಾರಕ್ಕಿಂತ ಐರೋಪ್ಯ ರಾಷ್ಟ್ರಗಳ ವ್ಯಾಪಾರ ಜಾಸ್ತಿಯಿದೆ. ಅಲ್ಲದೇ ಭಾರತದ ಮೇಲೆ ಪ್ರಹಾರ ಬೀಸುವ ಅಮೆರಿಕವು ರಷ್ಯಾದಿಂದ ಪರಮಾಣು ಶಕ್ತಿಗೆ ಬೇಕಾದ ರಾಸಾಯನಿಕ, ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ತಿವಿದಿದೆ. ಯುರೋಪ್-ರಷ್ಯಾ ವ್ಯಾಪಾರವು ಕೇವಲ ಶಕ್ತಿಯನ್ನು ಮಾತ್ರವಲ್ಲದೆ, ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಸಹ ಒಳಗೊಂಡಿದೆ.
India Latest News Live 5th August 2025 ಪ್ರೀತಿಸಿ ಮದ್ವೆಯಾದ್ರೂ ಕಿರುಕುಳ; ವಿಷ ಸೇವಿಸಿ ಪ್ರಾಣ ಕಳೆದುಕೊಂಡ ಬ್ಯಾಂಕರ್ ಅಂಕಿತ್!
India Latest News Live 5th August 2025 ರಷ್ಯಾದ ಡ್ರೋನ್‌ಗಳಲ್ಲಿ ಬೆಂಗಳೂರು ಕಂಪೆನಿಯ ಚಿಪ್, ಉಕ್ರೇನ್ ಭಾರೀ ಆರೋಪ
India Latest News Live 5th August 2025 ಆಪರೇಷನ್ ಸಿಂದೂರ್‌ನ ಭಾರೀ ಯಶಸ್ಸು, ಬೃಹತ್ ಪ್ರಮಾಣದಲ್ಲಿ 'ಬ್ರಹ್ಮೋಸ್' ಆರ್ಡರ್ ಹೇಳಿದ ಐಎಎಫ್, ನೇವಿ!
ಆಪರೇಷನ್ ಸಿಂದೂರ್‌ನಲ್ಲಿ ಬ್ರಹ್ಮೋಸ್ ಕ್ಷಿಪಣಿಗಳ ಯಶಸ್ವಿ ಬಳಕೆಯ ನಂತರ, ಭಾರತವು ತನ್ನ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಕ್ಷಿಪಣಿಗಳನ್ನು ಖರೀದಿಸಲು ಯೋಜಿಸಿದೆ. ಈ ಖರೀದಿಯು ನೌಕಾಪಡೆ ಮತ್ತು ವಾಯುಪಡೆಯನ್ನು ಬಲಪಡಿಸುತ್ತದೆ.
India Latest News Live 5th August 2025 ರಾಪಿಡೋ ಚಾಲಕ ದಪ್ಪ ಇದ್ದಾನೆ ಅಂತ ಟ್ರಿಪ್ ಕ್ಯಾನ್ಸಲ್ ಮಾಡಿದ ಮಹಿಳೆ ವರ್ತನೆಗೆ ತೀವ್ರ ಆಕ್ರೋಶ
ರಾಪಿಡೋ ಚಾಲಕನ ದೇಹದಾಕಾರವನ್ನು ನೋಡಿ ಮಹಿಳೆಯೊಬ್ಬರು ಟ್ರಿಪ್ ರದ್ದುಗೊಳಿಸಿ, ವೀಡಿಯೊ ಮಾಡಿ ಅಣಕಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
India Latest News Live 5th August 2025 ಕೆನಡಾದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅತೀ ಎತ್ತರದ ಪ್ರತಿಮೆ ಅನಾವರಣ
ವಿದೇಶದಲ್ಲಿ ಹಿಂದೂಗಳ ಆರಾಧ್ಯ ದೈವ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಉತ್ತರ ಅಮೆರಿಕಾದ ಕೆನಡಾದಲ್ಲಿ ಶ್ರೀರಾಮನ ಅತೀ ಎತ್ತರದ ಮೂರ್ತಿಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಗಿದೆ.
India Latest News Live 5th August 2025 ಅಮೆರಿಕದ ಜೊತೆ ನಯಾ ಪೈಸೆ ವ್ಯಾಪಾರ ಮಾಡದೇ ವಿಶ್ವದ ಭೂಪಟದಲ್ಲಿದೆ ಈ ದೇಶಗಳು!
ದೀರ್ಘಕಾಲದವರೆಗೆ ಅಮೆರಿಕದೊಂದಿಗೆ ಉದ್ವಿಗ್ನ ಸಂಬಂಧ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಇರಾನ್ ಅಗ್ರಸ್ಥಾನದಲ್ಲಿದೆ. ಇಸ್ಲಾಮಿಕ್ ಕ್ರಾಂತಿಯ ನಂತರ, ಎರಡೂ ದೇಶಗಳ ನಡುವಿನ ಕಹಿ ಭಾವನೆಗಳು ಹೆಚ್ಚಾಗಿವೆ.
India Latest News Live 5th August 2025 ಈ ಬಾರಿ ರಾಕಿ ಕಟ್ಟಲು ನಾ ಇರುವುದಿಲ್ಲ - ತಮ್ಮನಿಗೆ ಭಾವುಕ ಪತ್ರ ಬರೆದು ಸಾವಿಗೆ ಶರಣಾದ ನವ ವಿವಾಹಿತೆ
ಆಂಧ್ರಪ್ರದೇಶದಲ್ಲಿ ನವವಿವಾಹಿತೆಯೊಬ್ಬರು ಪತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಸೋದರನಿಗೆ ಬರೆದ ಪತ್ರದಲ್ಲಿ ಕೌಟುಂಬಿಕ ಹಿಂಸೆಯನ್ನು ವಿವರಿಸಿದ್ದಾರೆ. ಇದೇ ವೇಳೆ ಗುಜರಾತ್‌ನಲ್ಲಿ ಪತ್ನಿಯೊಬ್ಬರು ಪತಿಯನ್ನು ಕೊಂದು ತಾವು ಸಾವಿಗೆ ಶರಣಾಗಿದ್ದಾರೆ.
India Latest News Live 5th August 2025 Photos - ಉತ್ತರಕಾಶಿ ಮೇಘಸ್ಫೋಟದ ಬೆಚ್ಚಿಬೀಳಿಸುವ ದೃಶ್ಯಗಳು, ಧರಾಲಿ ಗ್ರಾಮವೇ ನಿರ್ನಾಮ!
India Latest News Live 5th August 2025 ಉತ್ತರಕಾಶಿಯಲ್ಲಿ ಭೀಕರ ಭೂಕುಸಿತಕ್ಕೆ ಕಾರಣವಾದ ಮೇಘಸ್ಫೋಟ; ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
India Latest News Live 5th August 2025 ರೋಡ್ ಬ್ಲಾಕ್ ಮಾಡಿ ಟ್ರಕ್ ತಪಾಸಣೆ ಮಾಡಿದ ಗಜರಾಜ - ದೋಣಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ತಿಮಿಂಗಿಲ - ವೀಡಿಯೋ
ಒಡಿಶಾದಲ್ಲಿ ಆನೆಯೊಂದು ರಸ್ತೆ ತಡೆದು ವಾಹನಗಳ ತಪಾಸಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.ಹಾಗೆಯೇ ಮತ್ತೊಂದೆಡೆ ತಿಮಿಂಗಿಲವೊಂದು ಬೋಟ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದೆ. ಈ ಎರಡು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
India Latest News Live 5th August 2025 ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನಿಧನರಾಗಿದ್ದು, ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯಕ್ಕೀಡಾದ ಅವರನ್ನು ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
India Latest News Live 5th August 2025 ಕೇಂದ್ರದಿಂದ ಬಂಪರ್ - 3.5 ಕೋಟಿ ಉದ್ಯೋಗ- 15 ಸಾವಿರ ರೂ. ಹೆಚ್ಚುವರಿ ವೇತನ- ಏನಿದು PM-VBR ಯೋಜನೆ?
ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಮತ್ತು ಮೊದಲ ಬಾರಿಗೆ ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೊಳಿಸಿದೆ. ಏನಿದು PM-VBR ಯೋಜನೆ?
India Latest News Live 5th August 2025 ತನ್ನ ಬೇಟೆಯನ್ನು ವೀಡಿಯೋ ಮಾಡ್ತಿದ ವ್ಯಕ್ತಿ ಮೇಲೆ ರೊಚ್ಚಿಗೆದ್ದ ಸಿಂಹ ಆಮೇಲೇನಾಯ್ತು ನೋಡಿ
ಗುಜರಾತ್‌ನ ಭಾವನಗರದಲ್ಲಿ ಸಿಂಹವೊಂದು ಬೇಟೆಯಾಡಿ ತಿನ್ನುತ್ತಿದ್ದಾಗ ವ್ಯಕ್ತಿಯೊಬ್ಬ ವಿಡಿಯೋ ಮಾಡಲು ಹೋಗಿ ಸಿಂಹದ ಕೋಪಕ್ಕೆ ಗುರಿಯಾಗಿದ್ದಾನೆ. ಸಿಂಹ ಆತನನ್ನು ಓಡಿಸಿಕೊಂಡು ಬಂದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ರೆಕಾರ್ಡ್ ಆಗಿದೆ.
India Latest News Live 5th August 2025 200 ಕೆಜಿ ತೂಕದ ಹಸುವನ್ನು ಚಿಕಿತ್ಸೆಗಾಗಿ ಬೆನ್ನ ಮೇಲೆ ಹೊತ್ತು 3 ಕಿ.ಮೀ ನಡೆದ ಸೋದರರು - ವೈರಲ್ ವೀಡಿಯೋ
ಹಿಮಾಚಲ ಪ್ರದೇಶದಲ್ಲಿ ಇಬ್ಬರು ಸೋದರರು ತಮ್ಮ ಅನಾರೋಗ್ಯ ಪೀಡಿತ 200 ಕೇಜಿ ತೂಕದ ಹಸುವನ್ನು ಬೆನ್ನ ಮೇಲೆ ಹೊತ್ತುಕೊಂಡು 3 ಕಿ.ಮೀ. ಕಡಿದಾದ ರಸ್ತೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ಘಟನೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India Latest News Live 5th August 2025 ಅಮೆರಿಕಾದಲ್ಲಿ ಮನೆ ಗೃಹಪ್ರವೇಶಕ್ಕೆ ಹವನ ಮಾಡಿದ ಭಾರತೀಯ ಕುಟುಂಬ - ಬೆಂಕಿ ಬಿತ್ತೆಂದು ಸ್ಥಳಕ್ಕೆ ಬಂದ ಅಗ್ನಿಶಾಮಕ ವಾಹನ
ಅಮೆರಿಕದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದಾಗ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಹೊಸ ಮನೆಯ ಗೃಹಪ್ರವೇಶಕ್ಕಾಗಿ ಹೋಮ ಮಾಡುವಾಗ ಈ ಘಟನೆ ನಡೆದಿದ್ದು ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
India Latest News Live 5th August 2025 ಪ್ರೇಮ ವಿವಾಹಕ್ಕೆ ನಿಷೇಧ ವಿಧಿಸಿದ ಗ್ರಾಮಸ್ಥರು; ಪಂಚಾಯ್ತಿಯಿಂದ ನಿರ್ಣಯ ಅಂಗೀಕಾರ
ಗ್ರಾಮದಲ್ಲಿ ಕುಟುಂಬದ ಒಪ್ಪಿಗೆಯಿಲ್ಲದ ಪ್ರೇಮ ವಿವಾಹಗಳನ್ನು ನಿಷೇಧಿಸಲಾಗಿದೆ. ಈ ನಿರ್ಧಾರವು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹಲವರು ಆರೋಪಿಸಿದ್ದಾರೆ. ಗ್ರಾಮ ಪಂಚಾಯತ್ ಮಾತ್ರ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.