ಕಾಂಗ್ರೆಸ್ ರ‍್ಯಾಲಿಯಲ್ಲಿ ಹೊಸ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ, ಈ ಭಾರಿಯ ಭರವಸೆ ಏನು? ವೋಟ್ ಚೋರಿ ಕುರಿತು ದೆಹಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ತಮ್ಮ ಗ್ಯಾರೆಂಟಿ ಭರವಸೆ ನೀಡಿದ್ದಾರೆ.
ನವದೆಹಲಿ (ಡಿ.14) ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ಸತತವಾಗಿ ಮಾಡುತ್ತಿರುವ ಮತಗಳ್ಳತನ ಆರೋಪ ಇದೀಗ ದೆಹಲಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಆಯೋಜಿಸಿದ ಬೃಹತ್ ವೋಟ್ ಚೋರಿ ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಈ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಹೊಸ ಗ್ಯಾರೆಂಟಿ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಐದು ಗ್ಯಾರೆಂಟಿ, ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಈಗಾಗಲೇ ಕಾಂಗ್ರೆಸ್ ಹಲವು ಗ್ಯಾರೆಂಟಿ ಘೋಷಣೆ ಮಾಡಿದೆ. ಇದೀಗ ದೇಶದ ಜನತೆಗೆ ರಾಹುಲ್ ಗಾಂಧಿ ಹೊಸ ಗ್ಯಾರೆಂಟಿ ನೀಡಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಅವರ ಆರ್‌ಎಸ್‌ಎಸ್ ಸರ್ಕಾರವನ್ನು ದೇಶದಿಂದ ಖಾಲಿ ಮಾಡಿಸುತ್ತೇವೆ ಎಂದು ರಾಹುಲ್ ಗಾಂಧಿ ಗ್ಯಾರೆಂಟಿ ನೀಡಿದ್ದಾರೆ.
ಸತ್ಯಂ ಶಿವಂ ಸುಂದರಂ ಕೇಳಿದ್ದೀರಾ?
ದೆಹಲಿಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ ಕೇಂದ್ರ ಬೆಜೆಪಿ ಸರ್ಕಾರ, ಆರ್‌ಎಸ್‌ಎಸ್ ಸೇರಿದಂತೆ ಹಲವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸತ್ಯಂ ಶಿವಂ ಸುಂದರಂ ಕೇಳಿದ್ದೀರಾ?, ಸತ್ಯಮೇವೋ ಜಯತೆ ಕೇಳಿದ್ದೀರಾ? ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಇದೇ ವೇಳೆ ಆರ್‌ಎಸ್‌ಎಸ್ ಸಂಚಾಲಕ ಮೋಹನ್ ಭಾಗವತ್‌ಗೆ ಟಾಂಗ್ ನೀಡಿದ್ದಾರೆ. ವಿಶ್ವ ಸತ್ಯವನ್ನು ನೋಡಲ ಬದಲಿಗೆ ಶಕ್ತಿ ನೋಡುತ್ತೆ ಎಂದಿದ್ದಾರೆ ಭಾಗವತ್. ಸತ್ಯ ಏನು ಅನ್ನೋದು ತೋರಿಸ್ತಿವಿ. ಸತ್ಯಕ್ಕಾಗಿ ಈ ದೇಶ ಜೀವ ಕೊಟ್ಟಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಗಾಂಧಿ ಹೇಳುತ್ತಿದ್ದರು, ಸತ್ಯ ಅತ್ಯಂತ ಅವಶ್ಯಕ ಎಂದು. ನಮ್ಮ ಧರ್ಮದಲ್ಲಿ ಸತ್ಯವನ್ನು ಅತ್ಯಂತ ಮುಖ್ಯ ಎಂದು ಭಾವಿಸಲಾಗಿದೆ. ಅದಕ್ಕಾಗಿ ಧರ್ಮದಲ್ಲಿ ಸತ್ಯಂ, ಶಿವಂ ಸುದರಂ ಎಂದು ಉಲ್ಲೇಖಿಸಿದೆ. ಆದರೆ ಆರ್‌ಎಸ್‌ಎಸ್ ಸಿದ್ಧಾಂತ ಬೇರೆ, ಅವರಿಗೆ ಸತ್ಯ ಬೇಕಿಲ್ಲ, ಅಧಿಕಾರ ಬೇಕು. ಹೀಗಾಗಿ ಸತ್ಯ ಹಾಗೂ ಅಸತ್ಯದ ಹೋರಾಟ ನಡೆಯುತ್ತಿದೆ. ನಾವು ಸತ್ಯದ ಹಿಂದೆ ನಿಂತು ಮೋದಿ ಅಮಿತ್ ಶಾ ಅವರ ಆರ್‌ಎಸ್‌ಎಸ್ ಸರ್ಕಾರವನ್ನು ದೇಶದಿಂದ ಖಾಲಿ ಮಾಡಿಸುತ್ತೇವೆ. ಇದು ನನ್ನ ಗ್ಯಾರೆಂಟಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಧಿಕಾರಿಗಳನ್ನು ಬಿಡುವುದಿಲ್ಲ
ಚುನಾವಣೆ ವೇಳೆ ಹತ್ತು ಸಾವಿರ ನೀಡುತ್ತಾರೆ. ಇದನ್ನು ಚುನಾವಣಾ ಆಯೋಗ ಪರಿಗಣಿಸುವುದಿಲ್ಲ, ಅಕ್ಷೇಪ ವ್ಯಕ್ತಪಡಿಸುವುದಿಲ್ಲ. ನಾವಣೆ ಆಯೋಗ ಬಿಜೆಪಿ ಸರ್ಕಾರದ ಜೊತೆಗೆ ನಿಂತು ಕೆಲಸ ಮಾಡುತ್ತಿದೆ. ಅಯೋಗಕ್ಕಾಗಿ ಈ ಸರ್ಕಾರ ಹೊಸ ಕಾನೂನು ಜಾರಿ ಮಾಡಿದೆ. ಆಯುಕ್ತರು ಏನೇ ಮಾಡಿದರು ಅವರ ವಿರುದ್ಧ ಕ್ರಮ ಇಲ್ಲ. ಆಯೋಗದ ಆಯುಕ್ತರಿಗೆ ಹೇಳುತ್ತೇನೆ ಮೋದಿ ಚುನಾವಣಾ ಆಯುಕ್ತರಲ್ಲ. ಮುಂದೆ ಅಸತ್ಯದ ಜೊತೆಗೆ ನಿಂತಿರುವ ಅಧಿಕಾರಿಗಳನ್ನು ಬಿಡುವುದಿಲ್ಲ. ಬ್ರೆಜಿಲ್ ಮಹಿಳೆ 22 ಬಾರಿ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ತಾತಾರೆ. ಎರಡು ಎರಡು ಕಡೆ ಮತದ ಹಕ್ಕು ಹೊಂದಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಆಯೋಗ ಈವರೆಗೂ ಉತ್ತರ ನೀಡಿಲ್ಲ. ನನ್ನ ಆರೋಪಗಳ ಮೇಲೆ ಸಂಸತ್ ಮೇಲೆ ಡಿಬೆಟ್ ಮಾಡಲು ಬಿಜೆಪಿ ತಯಾರಿಲ್ಲ. ಇಂದು ಅವರ ಬಳಿಕ ಅಧಿಕಾರ ಇರಬಹುದು. ಇವರ ಕೈಯಿಂದ ಅಧಿಕಾರ ಹೊಗ್ತಿದ್ದಂತೆ ಅವರ ಧೈರ್ಯ ಏನಾಗುತ್ತೆ ನೋಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮೋದಿ ಸರ್ಕಾರ ಇಬ್ಬರು ಶ್ರೀಮಂತರಿಗಾಗಿ ಕೆಲಸ ಮಾಡುತ್ತಾರೆ. ಭಾರತದಲ್ಲಿ ಸತ್ಯದ ಗೆಲುವುವಾಗಲಿದೆ. ಮೋದಿ ಅಮಿತ್ ಶಾ ಏನ್ ಭಾಷಣ ಮಾಡಬೇಕು ಮಾಡಿ ಬಿಡಿ. ದ್ವೇಷ ಹಿಂಸೆಯಿಂದಲ್ಲ, ಸತ್ಯ ಅಹಿಂಸೆಯಿಂದ ನಾವು ಅವರನ್ನು ಸೋಲಿಸುತ್ತೇವೆ. ಮೋದಿ ಅವರ ಮುಖ ನೋಡಿ ಅವರ ವಿಶ್ವಾಸ ಕುಗ್ಗಿ ಹೋಗಿದೆ. ಮೋದಿ ನೇೃತ್ವದ ಆರ್‌ಎಸ್‌ಎಸ್ ಸರ್ಕಾರ ಪ್ರಜಾಪ್ರಭುತ್ವ ಮೇಲೆ ದಾಳಿ ಮಾಡುತ್ತಿದ್ದಾರೆ. ನಮ್ಮ ಯಾವ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರಿಸಲ್ಲ. ಧಿಕಾರದಲ್ಲಿ ಕೂತವರನ್ನು ಕೆಳಗಿಳಿಸಬೇಕು. ಆರ್‌ಎಸ್ಎಸ್ ಸಿದ್ಧಾಂತ ಮುಗಿಸಲು ನಾವು ಹೋರಾಡುತ್ತೇವೆ. ಪ್ರಿಯಾಂಕ ಕೂಡ ನಮ್ಮ ಜೊತೆ ನಿಂತು ಹೋರಾಡುತ್ತಿದ್ದಾರೆ. ಆರ್‌ಎಸ್‌ಎಸ್ ಸಿದ್ಧಾಂತ ಬಡವರಿಗೆ ಅಪಾಯಕಾರಿ. ಸಂವಿಧಾನ ನೀಡಿದ ಅಧಿಕಾರವನ್ನು ಇವರು ರದ್ದು ಮಾಡ್ತಾರೆ. ಅವರೂ ಎಂದಿಗೂ ಬಡವರ ಬಗ್ಗೆ ಯೋಚನೆ ಮಾಡಲ್ಲ. ಬಡವರನ್ನು ಇನ್ನಷ್ಟು ಬಡವರಾಗಿ, ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

