11:58 PM (IST) Feb 26

India Latest News Live:Food Adulteration - 4000 ಕೆಜಿ ಕಲಬೆರಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಜಪ್ತಿ, ನೋಡಿದ್ರೆ ವಾಕರಿಕೆ ಗ್ಯಾರಂಟಿ!

ಹೈದರಾಬಾದ್ ಪೊಲೀಸರು ಅಕ್ರಮವಾಗಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ. 21 ವರ್ಷದ ಯುವಕನನ್ನು ಬಂಧಿಸಿದ್ದು, ಅತ್ಯಂತ ಅನೈರ್ಮಲ್ಯಕರ ವಾತಾವರಣದಲ್ಲಿ ತಯಾರಾದ 4000 ಕೆಜಿ ಕಲಬೆರಕೆ ಪೇಸ್ಟ್ ವಶಪಡಿಸಿಕೊಂಡಿದ್ದಾರೆ.
Read Full Story
11:04 PM (IST) Feb 26

India Latest News Live:IPL ಡೀಲ್‌ಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ವೆಸ್ಟ್‌ ಇಂಡೀಸ್‌? ಪಾಕ್‌ ಮಾಜಿ ಸ್ಪಿನ್ನರ್‌ ಸಕ್ಲೇನ್ ಮುಷ್ತಾಕ್ ಗಂಭೀರ ಆರೋಪ!

ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ ತಂಡದ ಹೀನಾಯ ಸೋಲಿನ ಬಗ್ಗೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಫಿಕ್ಸಿಂಗ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಂಡೀಸ್ ಆಟಗಾರರ ಬೇಜವಾಬ್ದಾರಿ ಆಟ ಮತ್ತು ಐಪಿಎಲ್ ಹಿತಾಸಕ್ತಿಗಳನ್ನು ಅವರು ಉಲ್ಲೇಖಿಸಿದ್ದಾರೆ.

Read Full Story
10:54 PM (IST) Feb 26

India Latest News Live:IND vs ZIM - T20 ವಿಶ್ವಕಪ್‌ನಲ್ಲಿ ಭಾರತದ ವಿಶ್ವರೂಪ; ಜಿಂಬಾಬ್ವೆ ಈ ಸೋಲನ್ನು ವರ್ಷಗಳ ಕಾಲ ನೆನಪಿಸಿಕೊಳ್ಳುತ್ತದೆ!

ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಅಭಿಷೇಕ್ ಶರ್ಮಾ ಅವರ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ-ತಿಲಕ್ ವರ್ಮಾ ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ, ಟಿ20 ವಿಶ್ವಕಪ್ ಇತಿಹಾಸದ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿತು.
Read Full Story
10:43 PM (IST) Feb 26

India Latest News Live:ಚೆಪಾಕ್‌ ನೆಲದಲ್ಲಿ ಜಿಂಬಾಬ್ವೆ ಛಿದ್ರ ಮಾಡಿದ ಟೀಮ್‌ ಇಂಡಿಯಾ, ಸೆಮಿಫೈನಲ್‌ಗೆ ಈಗ ವಿಂಡೀಸ್‌ ಜೊತೆ ಫೈಟ್‌!

ಟಿ20 ವಿಶ್ವಕಪ್ ಸೂಪರ್‌-8 ಪಂದ್ಯದಲ್ಲಿ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಭಾರತ ತಂಡವು ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರ ಅರ್ಧಶತಕಗಳ ನೆರವಿನಿಂದ ಭಾರತ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 

Read Full Story
10:23 PM (IST) Feb 26

India Latest News Live:ಒಂದು ಕೆಜಿ ಸಿಎನ್‌ಜಿಗೆ 34 ಕಿ.ಮೀ ಮೈಲೇಜ್! ನಿಮ್ಮ ಹಣ ಉಳಿಸಲಿವೆ ಈ 5 ಬಜೆಟ್ CNG ಕಾರುಗಳು

ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ, ಮಧ್ಯಮ ವರ್ಗದವರಿಗೆ ಸಿಎನ್‌ಜಿ ಕಾರುಗಳು ಉತ್ತಮ ಆಯ್ಕೆಯಾಗಿವೆ. ಈ ಲೇಖನದಲ್ಲಿ, ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿಯ ಟಾಪ್ 5 ಸಿಎನ್‌ಜಿ ಕಾರುಗಳಾದ ಸೆಲೆರಿಯೊ, ವ್ಯಾಗನ್ ಆರ್, ಆಲ್ಟೊ ಕೆ10, ಡಿಜೈರ್ ಮತ್ತು ಸ್ವಿಫ್ಟ್ ಬಗ್ಗೆ ಮಾಹಿತಿ ನೀಡಲಾಗಿದೆ.
Read Full Story
10:09 PM (IST) Feb 26

India Latest News Live:ಭಯೋತ್ಪಾದನೆ ವಿರುದ್ಧ ಇಸ್ರೇಲ್‌ ಜೊತೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ - ಪಾಕ್‌ಗೆ ಮೋದಿ ಎಚ್ಚರಿಕೆ!

ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿಯು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟಕ್ಕೆ ನಾಂದಿ ಹಾಡಿದೆ. ಉಭಯ ದೇಶಗಳು 'ವಿಶೇಷ ಕಾರ್ಯತಂತ್ರದ ಪಾಲುದಾರಿಕೆ'ಗೆ ಸಹಿ ಹಾಕಿದ್ದು, ರಕ್ಷಣೆ, ತಂತ್ರಜ್ಞಾನ (ಯುಪಿಐ), ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ನಿರ್ಧರಿಸಿವೆ.
Read Full Story
09:54 PM (IST) Feb 26

India Latest News Live:ಹೊಸ ಸ್ಕೂಟರ್‌ ಖರೀದಿ ಮಾಡೋ ಪ್ಲ್ಯಾನ್‌ ಇದ್ಯಾ? ಬೆಸ್ಟ್‌ ಸೆಲ್ಲಿಂಗ್‌ ಆಗ್ತಿದೆ 75 ಸಾವಿರ ಬೆಲೆಯ ಈ ಸ್ಕೂಟರ್‌!

Best Selling Scooters in India Jan 2026: Honda Activa Tops List ಭಾರತೀಯ ಸ್ಕೂಟರ್ ಮಾರುಕಟ್ಟೆಯಲ್ಲಿ ಜನವರಿ ತಿಂಗಳ ಮಾರಾಟದ ವರದಿ ಬಿಡುಗಡೆಯಾಗಿದೆ. ಹೋಂಡಾ ಆಕ್ಟಿವಾ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದು, ಟಿವಿಎಸ್ ಜುಪಿಟರ್ ಮತ್ತು ಸುಜುಕಿ ಆಕ್ಸೆಸ್ ನಂತರದ ಸ್ಥಾನಗಳಲ್ಲಿವೆ. 

Read Full Story
09:45 PM (IST) Feb 26

India Latest News Live:Food Adulteration - ಹೋಳಿ ಹಬ್ಬದ ಹೊತ್ತಲ್ಲೇ ಆಹಾರ ಕಲಬೆರಕೆ ವಿರುದ್ಧ ದೆಹಲಿಯಲ್ಲಿ ಬಿಗ್ ಆಪರೇಷನ್!

ಹೋಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ದೆಹಲಿಯ ಆಹಾರ ಸುರಕ್ಷತಾ ಇಲಾಖೆ ಕಲಬೆರಕೆ ತಿನಿಸುಗಳ ವಿರುದ್ಧ ದೊಡ್ಡ ಕಾರ್ಯಾಚರಣೆ ಶುರುಮಾಡಿದೆ. ಈಗಾಗಲೇ ಹಲವು ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದು, ಹಬ್ಬದ ಸಿಹಿತಿಂಡಿಗಳಾದ ಖೋವಾ, ಪನೀರ್ ಮೇಲೆ ವಿಶೇಷ ನಿಗಾ ಇಟ್ಟಿದೆ. 

Read Full Story
09:38 PM (IST) Feb 26

India Latest News Live:ಭಾರತ ಸೇರಿದಂತೆ ವಿಶ್ವದ 40 ದೇಶಗಳಿಂದ ಚಿಕನ್‌, ಮೊಟ್ಟೆ ಆಮದು ಬ್ಯಾನ್‌ ಮಾಡಿದ ಮುಸ್ಲಿಂ ದೇಶ!

ಹಕ್ಕಿ ಜ್ವರದ ಭೀತಿಯಿಂದ ಸೌದಿ ಅರೇಬಿಯಾ, ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಆಮದನ್ನು ನಿಷೇಧಿಸಿದೆ. ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರದ ಈ ನಿರ್ಧಾರವು ಇತ್ತೀಚೆಗೆ ಗಣನೀಯ ಬೆಳವಣಿಗೆ ಕಂಡಿದ್ದ ಭಾರತದ ಕೋಳಿ ರಫ್ತು ವಲಯಕ್ಕೆ ದೊಡ್ಡ ಹಿನ್ನಡೆ ಉಂಟುಮಾಡುವ ಸಾಧ್ಯತೆಯಿದೆ.
Read Full Story
08:53 PM (IST) Feb 26

India Latest News Live:ಹೊಡಿ ಬಡಿ ಆಟ, ಗೆಲ್ಲಲೇಬೇಕಾದ ಹಠ, ಜಿಂಬಾಬ್ವೆಗೆ 257 ರನ್ ಟಾರ್ಗೆಟ್ ಕೊಟ್ಟು ದಾಖಲೆ ಬರೆದ ಭಾರತ

ಹೊಡಿ ಬಡಿ ಆಟ, ಗೆಲ್ಲಲೇಬೇಕಾದ ಹಠ, ಜಿಂಬಾಬ್ವೆಗೆ 257 ರನ್ ಟಾರ್ಗೆಟ್ ಕೊಟ್ಟ ಭಾರತ, ಸೂಪರ್ 8 ಮೊದಲ ಪಂದ್ಯದ ಸೋಲಿನಿಂದ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಜಿಂಬಾಬ್ವೆ ವಿರುದ್ದ ಭಾರತ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

Read Full Story
08:41 PM (IST) Feb 26

India Latest News Live:ನ್ಯಾಯಾಂಗದ ವಿರುದ್ಧ ಪಿತೂರಿ - ಎನ್‌ಸಿಇಆರ್‌ಟಿ 8ನೇ ತರಗತಿ ಪಠ್ಯಕ್ಕೆ ಸುಪ್ರೀಂ ತಡೆ! ಅಷ್ಟಕ್ಕೂ ಪಾಠದಲ್ಲೇನಿತ್ತು?

ಎನ್​ಸಿಇಆರ್​​ಟಿ 8ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿನ ಭ್ರಷ್ಟಚಾರ’ ಎಂಬ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ವ್ಯವಸ್ಥಿತ ಪಿತೂರಿ ಎಂದಿರುವ ನ್ಯಾಯಾಲಯ, ಈ ಅಧ್ಯಾಯವನ್ನು ಎಲ್ಲ ಪ್ರತಿಗಳಿಂದ ತೆಗೆದುಹಾಕಲು, ಬೋಧನೆ ನಿಷೇಧಿಸಲು ಆದೇಶಿಸಿದೆ.

Read Full Story
08:17 PM (IST) Feb 26

India Latest News Live:ಹೇಗಿದೆ ಗೊತ್ತಾ ಅನಿಲ್‌ ಅಂಬಾನಿ ಅರಮನೆ - ಹೆಲಿಪ್ಯಾಡ್, ಈಜುಕೊಳವಿರುವ 17 ಮಹಡಿಗಳ ಸ್ವರ್ಗ Abode

ED Attaches Anil Ambani's ₹3,716 Cr Mumbai House ‘Abode’ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ₹3,716 ಕೋಟಿ ಮೌಲ್ಯದ ಮುಂಬೈ ನಿವಾಸ 'ಅಬೋಡ್' ಅನ್ನು ಜಪ್ತಿ ಮಾಡಿದೆ. 

Read Full Story
07:54 PM (IST) Feb 26

India Latest News Live:Gen-z ಉದ್ಯೋಗಿಗಳ ಜೊತೆ ಈ ಆಟ ಎಲ್ಲಾ ನಡೆಯಲ್ಲ - ವಿಮಾನ ಏರುವಾಗ ರಜೆ ಕ್ಯಾನ್ಸಲ್ ಎಂದ ಬಾಸ್ - ಯುವತಿ ಮಾಡಿದ್ದೇನು?

ಪ್ರವಾಸಕ್ಕೆಂದು ವಿಮಾನ ನಿಲ್ದಾಣದಲ್ಲಿದ್ದ ಜೆನ್ ಜಿ ಯುವತಿಗೆ, ಬಾಸ್ ಕೊನೆ ಕ್ಷಣದಲ್ಲಿ ರಜೆ ರದ್ದುಗೊಳಿಸಿ ಸಂದೇಶ ಕಳುಹಿಸಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವತಿ ಐ ಡೋಂಟ್ ಕೇರ್ ಎಂದಿದ್ದು, ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story
07:51 PM (IST) Feb 26

India Latest News Live:Viral Pics - ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!

ಬಹುಕಾಲದ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿರುವ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿಗಳಾಗಿದ್ದಾರೆ. ತೆಲುಗು ಮತ್ತು ಕೊಡವ ಎಂಬ ಎರಡು ಸಂಪ್ರದಾಯಗಳೆರಡರಲ್ಲೂ ವಿವಾಹವಾಗಿದ್ದು, ತಮ್ಮ ಮದುವೆಯ ಫೋಟೋಗಳು ಮತ್ತು ಹೃದಯಸ್ಪರ್ಶಿ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Read Full Story
07:16 PM (IST) Feb 26

India Latest News Live:ಏಕಕಾಲದಲ್ಲಿ ಮದುವೆ ಫೋಟೋ ಹಂಚಿಕೊಂಡ ರಶ್ಮಿಕಾ, ವಿಜಯ್‌ - ಅತಿವೇಗವಾಗಿ ಮಿಲಿಯನ್‌ ಲೈಕ್ಸ್‌ ಪಡೆದವರು ಯಾರು?

ದಕ್ಷಿಣ ಭಾರತದ ಖ್ಯಾತ ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದ ಉದಯಪುರದಲ್ಲಿ ಗುಟ್ಟಾಗಿ ವಿವಾಹವಾಗಿದ್ದಾರೆ. ಫೆ.26ರಂದು ನಡೆದ ಈ ವಿವಾಹದ ಚಿತ್ರಗಳನ್ನು ಇಬ್ಬರೂ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿವೆ.
Read Full Story
07:02 PM (IST) Feb 26

India Latest News Live:Fauda - 'ಫೌಡಾ' ನಟರ ಜೊತೆ ಪ್ರಧಾನಿ ಮೋದಿ ಸೆಲ್ಫಿ! ಫೋಟೋ ಸಖತ್ ವೈರಲ್

ಇಸ್ರೇಲ್ ಪ್ರವಾಸದ ವೇಳೆ ಪ್ರಧಾನಿ ಮೋದಿ, ಅಲ್ಲಿನ ಜನಪ್ರಿಯ 'ಫೌಡಾ' ಸೀರೀಸ್ ನಟರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಸೆಲ್ಫಿ ತೆಗೆದು, 'ಇಲ್ಲಿ ಯಾವುದೇ ಅಂಡರ್‌ಕವರ್ ಆಪರೇಷನ್ ಬೇಕಾಗಿಲ್ಲ' ಎಂದು ತಮಾಷೆ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
Read Full Story
06:44 PM (IST) Feb 26

India Latest News Live:Operation Sindoor - ಆಪರೇಷನ್ ಸಿಂದೂರ್-2 ಇನ್ನೂ ಮುಗಿದಿಲ್ಲ, ಪಾಕಿಸ್ತಾನಕ್ಕೆ ಭಾರತದ ಖಡಕ್ ವಾರ್ನಿಂಗ್!

ಖಾರ್ಗಾ ಕಾರ್ಪ್ಸ್‌ನ ಜಿಒಸಿ ಲೆಫ್ಟಿನೆಂಟ್ ಜನರಲ್ ರಾಜೇಶ್ ಪುಷ್ಕರ್ 'ಆಪರೇಷನ್ ಸಿಂಧೂರ್' ಇನ್ನೂ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ 'ನ್ಯೂಕ್ಲಿಯರ್ ಬ್ಲಫ್'ಗೆ ಭಾರತ ಹೆದರುವುದಿಲ್ಲ ಮತ್ತು ಮುಂದಿನ ಪ್ರತೀಕಾರವು ಹಿಂದೆಂದಿಗಿಂತಲೂ ಕಠಿಣವಾಗಿರುತ್ತದೆ ಎಂದು ಎಚ್ಚರಿಸಿದರು.

Read Full Story
06:43 PM (IST) Feb 26

India Latest News Live:ಎಆರ್‌ ರೆಹಮಾನ್‌ರನ್ನ ಮದುವೆಯಾಗೋ ಆಸೆ ಇತ್ತು, ಅವರು ಮತಾಂತರವಾಗಿದ್ದರಿಂದ ಮನಸ್ಸು ಬದಲಿಸಿದೆ ಎಂದ ಕನ್ನಡದ ನಟಿ!

ದಕ್ಷಿಣ ಭಾರತದ ಖ್ಯಾತ ನಟಿ ಮೋಹಿನಿ, ತಾವು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಮದುವೆಯಾಗಲು ಬಯಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ರೆಹಮಾನ್ ಅವರ ಮತಾಂತರದಿಂದ ತಮಗೆ ನೋವಾಗಿತ್ತು ಎಂದು ಹೇಳಿದ್ದಾರೆ,

Read Full Story
06:32 PM (IST) Feb 26

India Latest News Live:ಕೆಲ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕುಟುಂಬ - ಅಣ್ಣನ ಹಾದಿ ಹಿಡಿದ ತಂಗಿ

ರಾಜಸ್ಥಾನದ ನಾಗುರ್ ಜಿಲ್ಲೆಯಲ್ಲಿ, 5ನೇ ತರಗತಿ ವಿದ್ಯಾರ್ಥಿನಿ ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದು, ದುರಂತವೆಂದರೆ, ಕೆಲವೇ ತಿಂಗಳ ಹಿಂದೆ ಆಕೆಯ ಅಣ್ಣ ಕೂಡ ಇದೇ ರೀತಿ ಮೃತಪಟ್ಟಿದ್ದರು.

Read Full Story
06:32 PM (IST) Feb 26

India Latest News Live:ಅಂದು ಸ್ವಾತಂತ್ರ್ಯ ಈಗ ದಿವಾಳಿ, 170 ವರ್ಷ ಬಳಿಕ ಮತ್ತೆ ಸ್ಥಗಿತಗೊಂಡ ಈಸ್ಟ್ ಇಂಡಿಯಾ ಕಂಪನಿ

ಅಂದು ಸ್ವಾತಂತ್ರ್ಯ ಈಗ ದಿವಾಳಿ, 170 ವರ್ಷ ಬಳಿಕ ಮತ್ತೆ ಸ್ಥಗಿತಗೊಂಡ ಈಸ್ಟ್ ಇಂಡಿಯಾ ಕಂಪನಿ, 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡಾಗ ಈಸ್ಟ್ ಇಂಡಿಯಾ ಕಂಪನಿ ಸ್ಥಗಿತಗೊಂಡಿತ್ತು. ಇದೀಗ ದಿವಾಳಿಯಾಗಿ ಸ್ಥಗಿತಗೊಂಡಿದೆ.

Read Full Story