ಗುಜರಾತ್ ವಿಮಾನ ಅಪಘಾತವಾಗಿ ಒಂದು ವರ್ಷಕಳೆದಿದೆ. 260 ಮಂದಿಯನ್ನು ಬಲಿ ಪಡೆದ ಘಟನೆಯನ್ನು ಸಾಮಾನ್ಯರಿಗೆ ಮರೆಯಲು ಸಾಧ್ಯವಿಲ್ಲ. ಇನ್ನು ಅದನ್ನು ನೇರವಾಗಿ ನೋಡಿದ ವ್ಯಕ್ತಿ ಸ್ಥಿತಿ ಏನಾಗ್ಬೇಡ. 

ಗುಜರಾತ್‌ ನ ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ಮೊದಲ ಲೈವ್ ವಿಡಿಯೋ ಮಾಡಿದ ಆರ್ಯನ್ ಅಸಾರಿಯ ಜೀವನ ಅಪಘಾತದ ನಂತ್ರ ಸಂಪೂರ್ಣ ಬದಲಾಗಿದೆ. ಘಟನೆ ನಡೆದು ಒಂದು ವರ್ಷವಾದ್ರೂ 18 ವರ್ಷದ ಆರ್ಯನ್, ಆ ಶಾಕ್ ನಿಂದ ಹೊರ ಬಂದಿಲ್ಲ. ಆರ್ಯನ್ ಈಗ ಏರೋಪ್ಲೇನ್ ಬಾಯ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಪ್ರಸಿದ್ಧಿ ಹೆಚ್ಚಾದ್ರೂ ಮಾನಸಿಕ ನೋವು ಬಿಡ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏರೋಪ್ಲೇನ್ ಬಾಯ್ (Airplane Boy)

ಕಳೆದ ವರ್ಷ ಜೂನ್ 12 ರಂದು ಅಹಮದಾಬಾದ್ನಲ್ಲಿ ವಿಮಾನ ಅಪಘಾತ ಸಂಭವಿಸಿತ್ತು. ಏರ್ ಇಂಡಿಯಾ ವಿಮಾನದಲ್ಲಿದ್ದ 260 ಮಂದಿ ಸಾವನ್ನಪ್ಪಿದ್ದರು. ಅಂತಿಮ ಕ್ಷಣಗಳನ್ನು ಆರ್ಯನ್ ಆಕಸ್ಮಿಕವಾಗಿ ರೆಕಾರ್ಡ್ ಮಾಡಿದ್ದರು. ಈ ವೀಡಿಯೊ ಏರೋಪ್ಲೇನ್ ಬಾಯ್ ಎಂಬ ಅಡ್ಡಹೆಸರನ್ನು ತಂದುಕೊಟ್ಟಿದೆ.

CM Vijay Kollur: ಸಿಎಂ ವಿಜಯ್‌ ಜೊತೆಗೆ ಕೊಲ್ಲೂರಿಗೆ ತಮಿಳುನಾಡಿನಿಂದ ಬಂದ ಆ ಸ್ಪೆಷಲ್‌

ಆಗಿದ್ದೇನು?

ಅಹಮದಾಬಾದ್ನ ಮೇಘನಿನಗರ ಪ್ರದೇಶದ ವಿಮಾನ ನಿಲ್ದಾಣದ ಬಳಿ ತನ್ನ ತಂದೆಯ ಬಾಡಿಗೆ ಮನೆಯ ಮೇಲ್ಛಾವಣಿಯ ಮೇಲೆ ನಿಂತಿದ್ದ ಆರ್ಯನ್, ಹತ್ತಿರದಲ್ಲಿ ಹಾರಾಡುತ್ತಿದ್ದ ವಿಮಾನ ನೋಡಿದ್ದಾರೆ. ಅವರು ಅಷ್ಟು ಹತ್ತಿರದಿಂದ ವಿಮಾನ ನೋಡಿರಲಿಲ್ಲ. ಸ್ನೇಹಿತರಿಗೆ ತೋರಿಸಲು ವಿಡಿಯೋ ಶುರು ಮಾಡಿದ್ದಾರೆ. ವಿಡಿಯೋ ಶೂಟ್ ಆಗ್ತಿದ್ದಂತೆ ವಿಮಾನ ದುರಂತಕ್ಕೀಡಾಗಿದೆ. ಇದನ್ನು ನೋಡಿ ಆರ್ಯನ್ ಭಯಗೊಂಡಿದ್ದಾರೆ. ತಮ್ಮ ಕಣ್ಣೆದುರೇ ಈ ರೀತಿಯ ಘಟನೆ ಸಂಭವಿಸಬಹುದು ಎಂದು ಅವರು ಊಹಿಸಿರಲಿಲ್ಲ.

ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರ್ಯನ್ ಸುದ್ದಿಗೆ ಬಂದಿದ್ದರು. ಮಿಡಿಯಾ ಅವರ ಸಂದರ್ಶನ ಮಾಡಿತ್ತು. ತಿಂಗಳ ನಂತ್ರ ಊರಿಗೆ ಬಂದ್ಮೇಲೆ ಅವರನ್ನು ಎಲ್ಲರೂ ಏರೋಪ್ಲೇನ್ ಬಾಯ್ ಅಂತ ಕರಿಯೋದು ಗೊತ್ತಾಯ್ತು. ಪ್ರಸಿದ್ಧಿ ಬಂದ್ರೂ ಆರ್ಯನ್ ಮನಸ್ಸಿನಲ್ಲಿ ಭಯವಿದೆ. ಆ ದಿನದ ನಂತ್ರ ಆರ್ಯನ್ ವಿಮಾನದ ಯಾವುದೇ ವೀಡಿಯೊವನ್ನು ಮಾಡಿಲ್ಲ. ವಿಡಿಯೋ ಮಾಡಿದ್ರೆ ಮತ್ತೆ ಇಂಥ ಘಟನೆ ನಡೆದ್ರೆ ಎನ್ನುವ ಭಯ ಅವರನ್ನು ಕಾಡ್ತಿದೆ. ಹಾಗೆಯೇ ವಿಮಾನ ಪ್ರಯಾಣದ ಭಯ ಕೂಡ ಅವರನ್ನು ಕಾಡ್ತಿದೆ.

TN CM Vijay to Kollur: ಕೊಲ್ಲೂರು ದೇಗುಲದಲ್ಲಿ ಆ ಸಂಕಲ್ಪ ಮಾಡಿ, ಅರ್ಚಕರ

ಪಿಯುಸಿ ಪರೀಕ್ಷೆ ಮುಗಿಸಿ ಮುಂದಿನ ಅಭ್ಯಾಸಕ್ಕೆ ಆರ್ಯನ್ ಅಣಿಯಾಗಿದ್ದಾರೆ. ಜೀವನ ಯಾವುದೇ ಸಮಸ್ಯೆ ಇಲ್ದೆ ಸಾಗ್ತಿದೆ. ಆದ್ರೆ ವಿಮಾನ ಎಂದಾಗ ಭಯ ಶುರುವಾಗುತ್ತದೆ. ಹಳ್ಳಿಯಲ್ಲಿರುವ ಆರ್ಯನ್ ಗೆ ವಿದೇಶಕ್ಕೆ ಹೋಗುವ ಆಸೆ ಇದೆ. ಆದ್ರೆ ವಿಮಾನ ಪ್ರಯಾಣ ಕಷ್ಟವಾಗ್ತಿದೆ. ಇನ್ನೂ ನನಗೆ ಈ ಬಗ್ಗೆ ಧೈರ್ಯ ಬಂದಿಲ್ಲ, ವಿಮಾನ ಹತ್ತಲು ಸಾಧ್ಯವಾಗ್ತಿಲ್ಲ ಎಂದು ಆರ್ಯನ್ ಹೇಳಿದ್ದಾರೆ.