ಕರೋನಾ ಮಾರಿ ಹೊಸ ಹೊಸ ಆತಂಕಗಳನ್ನು ಸೃಷ್ಟಿ ಮಾಡುತ್ತಿದೆ. ಈ ನಡುವೆ ಮಾಸ್ಕ್ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎಂಬ ಸುದ್ದಿಗಳು ಹರಿದಾಡುದ್ದವು. ಇದಕ್ಕೆ ಕೇರಳ ಸರ್ಕಾರ ಬಹಳ ಶೀಘ್ರವಾಗಿ ಪರಿಹಾರವೊಂದನ್ನು ಕಂಡುಹಿಡಿದಿದೆ.  ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಮತ್ತೆ ಮುಂದಕ್ಕೆ ಹೋಗುತ್ತಿದೆ.  ಸುಂದರಿ , ಸ್ವೀಟಿ ಅನುಷ್ಕಾ ಶೆಟ್ಟಿ ನಿಜವಾದ ಹೆಸರು ಏನು? ಕರೀನಾ ಭಯದ ನೆರಳಿನಲ್ಲಿ ಇರುವ ಐಪಿಎಲ್ ಕತೆ ಏನಾಗುತ್ತದೆ? ಮಾರ್ಚ್ 15 ರ ಟಾಪ್ 10 ಸುದ್ದಿಗಳು ಇಲ್ಲಿವೆ.


ಮಾಸ್ಕ್ ಕೊರತೆ ನೀಗಿಸುವಲ್ಲಿ ಕೇರಳ ಯಶಸ್ವಿ, ಕ್ಲಿಕ್ ಆಯ್ತು ಐಡಿಯಾ!


 

ಈ ಕುರಿತು ಟ್ವೀಟ್ ಮಾಡಿರುವ ಪಿಣರಾಯಿ ವಿಜಯನ್ 'ಮಾಸ್ಕ್ ಕೊರತೆ ಎದುರಾದಾಗ ಜೈಲಿನಲ್ಲಿರುವ ಕೈದಿಗಳಿಗೆ ಇದನ್ನು ತಯಾರಿಸಲು ಸೂಚನೆ ನೀಡಲಾಗಿತ್ತು. ಯುದ್ಧಕ್ಕೆ ತಯಾರಾಗುವಂತೆ ಈ ಕಾರ್ಯ ಆರಂಭವಾಯ್ತು. ಇಂದು ಮೊದಲ ಬ್ಯಾಚ್ ನಲ್ಲಿ ತಿರುವನಂತಪುರಂ ಜೈಲಿನ ಕೈದಿಗಳು ತಯಾರಿಸಿದ ಮಾಸ್ಕ್ ಗಳನ್ನು ಇಲ್ಲಿನ ಜೈಲು ಸಿಬ್ಬಂದಿ ಹಸ್ತಾಂತರಿಸಿದ್ದಾರೆ' ಎಂದು ಬರೆದಿದ್ದಾರೆ.

 

ಕೊರೋ​ನಾ ಶಂಕಿತರ ದಿಗ್ಬಂಧನ ಹೇಗಿ​ರು​ತ್ತೆ?...ಕೊರೋನಾ... ಈ ಹೆಸರು ಕೇಳಿದರೆ ಜನರು ಭಯಬೀಳುವಂತಾಗಿದೆ. ವಿಶ್ವಾದ್ಯಂತ 5000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಈ ಮಾರಕ ವೈರಸ್‌ಗೆ ಈಗಾಗಲೇ ದೇಶದಲ್ಲೂ ಇಬ್ಬರು ಪ್ರಾಣ ತೆತ್ತಿದ್ದಾರೆ. ದೇಶಾದ್ಯಂತ 88 ಜನರಲ್ಲಿ ಸೋಂಕು ಖಚಿತಪಟ್ಟಿದೆ. ದಿನೇದಿನೇ ಕೊರೋನಾ ತನ್ನ ಕಬಂಧಬಾಹು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಂಕಿತರ ಮೇಲೆ ನಿಗಾ ಇಡಲು ಪ್ರತ್ಯೇಕ ಕೊಠಡಿಗಳನ್ನು ದೇಶಾದ್ಯಂತ ಮೀಸಲಿಡಲಾಗಿದೆ. ಆ ಕೋಣೆಗಳಲ್ಲಿ ಯಾವೆಲ್ಲಾ ಸೌಲಭ್ಯ ಇದೆ? ಶುಶ್ರೂಷೆ ಹೇಗೆ ನಡೆಯುತ್ತೆ ಎಂಬುದು ಗೊತ್ತಾ? ಇಲ್ಲಿದೆ ಮಾಹಿತಿ.

 ಅನುಷ್ಕಾ ಶೆಟ್ಟಿ ಅಸಲಿ ಹೆಸರು ಕೇಳಿದ್ದೀರಾ?ಟಾಲಿವುಡ್‌ ಸುಂದರಿ ಅನುಷ್ಕಾ ಶೆಟ್ಟಿ ನಿಜವಾದ ಹೆಸರು ಅನುಷ್ಕಾ ಶೆಟ್ಟಿನಾ? ಈ ಕ್ಯೂಟಿ ಅಸಲಿ ಹೆಸರು ಬೇರೆನೇ ಇದೆಯಂತೆ....

 

ಆಡಿಷನ್‌ಗೆ ಕರೆದು ನಟಿ ಮೇಲೆ ಅತ್ಯಾಚಾರ ಯತ್ನ? ಸಂಸ್ಥೆಯ ಹೆಸರು ಬಯಲು!
 

 

#Metoo ಅಭಿಯಾನದ ಮೂಲಕ ಜೀವನದಲ್ಲಿ ಎದುರಿಸಿದ  ಕಹಿ ಘಟನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ನಟಿಯರು ಹಾಗೂ ಸಾಮಾನ್ಯ ಸಾಮಾನ್ಯ ಹೆಣ್ಣು ಮಕ್ಕಳು ಮುಂದಾಗಿದ್ದಾರೆ.  ಕಿರುತೆರೆಯ ಖ್ಯಾತ ನಟಿ ರಶ್ಮಿ ದೇಸಾಯಿ ಖಾಸಗಿ ಸಂದರ್ಶನದಲ್ಲಿ ತಮ್ಮ ಜೀವನದ ಕಹಿ ಘಟನೆ ನೆನೆದು ಕಣ್ಣೀರು ಹಾಕಿದ್ದಾರೆ.


ಮಾಸ್ಕ್‌, ಔಷಧಕ್ಕಾಗಿ ಮೋದಿಗೆ ಇಸ್ರೇಲ್‌ ಪ್ರಧಾನಿ ಮನವಿ!

ಕೊರೋನಾ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಮುಖ ವಸ್ತುಗಳು ಹಾಗೂ ಔಷಧಿ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ರಫ್ತು ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು ಮನವಿ ಮಾಡಿದ್ದಾರೆ. ‘

 

ಐಪಿಎಲ್‌ ಆಯೋಜನೆಗೆ ಬಿಸಿಸಿಐ ಮುಂದಿವೆ 5 ಆಯ್ಕೆಗಳು..!.


ಮಾರಕ ಕೊರೋನಾ ಸೋಂಕಿನಿಂದಾಗಿ ಏ.15ರ ವರೆಗೂ ಅಮಾನತುಗೊಂಡಿರುವ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ನಡೆಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಸರತ್ತು ಆರಂಭಿಸಿದೆ. ಶನಿವಾರ ಇಲ್ಲಿ ನಡೆದ ಐಪಿಎಲ್‌ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ಎಲ್ಲಾ 8 ತಂಡಗಳ ಮಾಲಿಕರೊಂದಿಗೆ ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಸಮಾಲೋಚನೆ ನಡೆಸಿದರು.

ಅಷ್ಟಕ್ಕೂ ಕರೋನಾ ವೈರಸ್ ಲಕ್ಷಣಗಳು ಏನು?

ಈ ರೋಗ ಮೊದಲು ಚೀನಾದಲ್ಲಿ ಆರಂಭವಾದಾಗ ಮೊದ ಮೊದಲು ಅಷ್ಟೊಂದು ತೀವ್ರವಾಗಿ ಯಾರೂ ಚಿಂತಿಸಲಿಲ್ಲ. ಆದರೆ ಕೊನೆ ಕೊನೆಗೆ ಚಿಂತೆ ಇಡಿ ಜಗತ್ತನೇ ಕಾಡುತ್ತಿದೆ. ಅಷ್ಟಕ್ಕೂ ಮೂಲ ಲಕ್ಷಣಗಳನ್ನು ಒಮ್ಮೆ ತಿಳಿದುಕೊಳ್ಳೋಣ..

ನಂಬಿದೋರನ್ನ ನಡುನೀರಲ್ಲಿ ಬಿಡದು ನೆಲ್ಲಿಕಾಯಿ!...

ಆಯುರ್ವೇದದಲ್ಲಿ ಆಮ್ಲವನ್ನು ಸೂಪರ್‌ಫುಡ್ ಎಂದೇ ಪರಿಗಣಿಸಲಾಗುತ್ತದೆ. ಹಲವಾರು ಔಷಧಿಗಳಲ್ಲಿ ನೆಲ್ಲಿಕಾಯಿ ಬಳಕೆ ಮಾಡಲಾಗುತ್ತದೆ. ಅಸ್ಕೋರ್ಬಿಕ್ ಆ್ಯಸಿಡ್ ಹಾಗೂ ವಿಟಮಿನ್ ಸಿಗಳ ಪವರ್‌ಹೌಸ್ ಆಗಿರುವ ನೆಲ್ಲಿಕಾಯಿ ರೋಗ ನಿರೋಧಕ ವ್ಯವಸ್ಥೆ ಬಲಗೊಳಿಸಿ, ದೇಹದಲ್ಲಿ ಕೊಲಾಜನ್ ಉತ್ಪಾದನೆ ಹೆಚ್ಚಿಸುತ್ತದೆ. 100 ಗ್ರಾಂನಷ್ಟು ನೆಲ್ಲಿಕಾಯಿಯಲ್ಲಿ 41.6 ಗ್ರಾಂನಷ್ಟು ವಿಟಮಿನ್ ಸಿ ನೇ ಇರುತ್ತದೆ ಎಂದರೆ ಅದು ರೋಗ ನಿರೋಧಕವಾಗಿ, ತ್ವಚೆಯ ಹಾಗೂ ಕೂದಲಿನ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ನೀವೇ ಕಲ್ಪಿಸಿಕೊಳ್ಳಿ. ಇದರ ಹೊರತಾಗಿ ಆಮ್ಲದಲ್ಲಿ ಹಲವಾರು ಮಿನರಲ್ಸ್ ಹಾಗೂ ವಿಟಮಿನ್ಸ್ ಇದ್ದು, ಬ್ಲಡ್ ಶುಗರ್ ಹಾಗೂ ಕೊಲೆಸ್ಟೆರಾಲ್ ಮಟ್ಟ ನಿಯಂತ್ರಿಸುವಲ್ಲಿ ಅವು ಸಹಕರಿಸುತ್ತವೆ. 

ಇದೀಗ ಬಿಎಸ್ ವೈ ಭೇಟಿಗೂ ಮಾರ್ಗಸೂಚಿ!


ರಾಜ್ಯದಲ್ಲಿ ಕೊರೋನಾ ಭೀತಿ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಮಾರ್ಗಸೂಚಿ ನೀಡಲಾಗಿದೆ. ಇದರಿಂದ ಸಿಎಂ ಭೇಟಿಗೆ ಈಗ ಅಷ್ಟ ಸರಳವಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರರುವರು ಮತ್ತು ಮುಖ್ಯಮಂತ್ರಿಗಳ ನಿವಾಸದಲ್ಲಿ ಕೆಲಸ ಮಾಡವ ಸಿಬ್ಬಂದಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. ಡಾಲರ್ಸ್ ಕಾಲೋನಿಯ ಸಿಎಂ ನಿವಾಸ ಧವಳಗಿರಿ  ಗೃಹ ಕಚೇರಿ ಕೃಷ್ಣಾ ಹಾಗೂ ವಿಧಾನಸೌಧದ ಕಚೇರಿಯಲ್ಲಿ ಸಿಎಂ ಭೇಟಿ ಮಾಡಬೇಕಾದಲ್ಲಿ ಈ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಮುಖ್ಯಮಂತ್ರಿಗಳ ಭೇಟಿಗಿರುವ ಮಾರ್ಗಸೂಚಿ ನಿಯಮಾವಳಿಗಳು ಹೀಗಿವೆ.

 

ವಿವಾದಗಳ ಸರದಾರ ಮಂಜ್ರೇಕರ್ ಗೆ ಗೇಟ್ ಪಾಸ್ ನೀಡಿದ್ದೇಕೆ?

ಅತಿಯಾದರೆ ಅಮೃತವೂ ವಿಷವಾಗುತ್ತೆ ಎನ್ನುವ ಮಾತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಸಂಜಯ್‌ ಮಂಜ್ರೇಕರ್‌ಗೆ ಸರಿಯಾಗಿ ಒಪ್ಪುತ್ತದೆ. ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಮಂಜ್ರೇಕರ್‌ಗೆ ಇದೀಗ ಬಿಸಿಸಿಐ ಕಾಮೆಂಟೇಟರಿಯಿಂದ ಗೇಟ್‌ಪಾಸ್ ನೀಡಿದೆ.