Asianet Suvarna News Asianet Suvarna News

ಕೊರೋನಾ ವೈರಸ್‌ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು?

ಏನದು, ಕೊರೋನಾ ರೋಗ ? ಕೋವಿಡ್‌ 19 ಅಂದರೆ, ಕೋ ಅಂದರೆ ಕೊರೋನಾ, ವಿ ಎಂದರೆ ವೈರಸ್‌, ಡಿ ಅಂದರೆ ಡಿಸೀಸ್‌ ಅಥವಾ ರೋಗ. 19 ಅಂದರೆ ಇಸವಿ. 2019ನಲ್ಲಿ ಚೀನಾದಲ್ಲಿ ಇದು ಶುರುವಾದ ಕಾರಣ ಇದರಲ್ಲಿ ಇಸವಿಯೂ ಸೇರಿದೆ.

Causes and symptoms of Coronavirus
Author
Bangalore, First Published Mar 15, 2020, 2:54 PM IST

ಇಡೀ ಭೂಮಿಯನ್ನೇ ಅಲ್ಲೋಲ ಕಲ್ಲೋಲ ಮಾಡಿದ ಈ ರೋಗದ ಭೀಕರತೆ ಅಷ್ಟೊಂದಿದೆಯಾ ಅನ್ನುವ ಪ್ರಶ್ನೆಗೆ ಉತ್ತರ ಹೀಗಿದೆ.

ಈ ರೋಗ ಮೊದಲು ಚೀನಾದಲ್ಲಿ ಆರಂಭವಾದಾಗ ಮೊದ ಮೊದಲು ಅಷ್ಟೊಂದು ತೀವ್ರವಾಗಿ ಯಾರೂ ಚಿಂತಿಸಲಿಲ್ಲ. ಆದರೆ ಕೊನೆ ಕೊನೆಗೆ ಚಿಂತಿಸುತ್ತಲೇ ಹೋರಾಡಬೇಕಾದ ಪರಿಸ್ಥಿತಿ ಬಂದೊದಗಿತು. ಪ್ರಯಾಣ, ಸಂಪರ್ಕ, ಸಹವಾಸದಿಂದ ಇದು ಸಾಂಕ್ರಾಮಿಕವಾಗಿ ಹಬ್ಬಿತು, ಲಂಕಾದಹನದಂತೆ.

ಹೀಗಾಗಿ ಅಸಡ್ಡೆ ಅಥವಾ ನಿಧಾನ ಗತಿಯಲ್ಲಿ ಈ ಕೋವಿಡ್‌ 19 ಬಗ್ಗೆ ಕ್ರಮ ಕೈಗೊಳ್ಳೋಣ. ಅವಸರ ಬೇಡ ಎಂಬ ನಿರ್ಣಯ ತಪ್ಪು. ಇದು ಅತಿ ಬೇಗನೆ ಹರಡುವ ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿರುವ ಕಾರಣ ಕ್ಷಿಪ್ರ ಚಿಕಿತ್ಸೆ ಅತ್ಯಗತ್ಯ.

ಕೆನಡಾ ಪ್ರಧಾನಿ ಪತ್ನಿಯನ್ನೂ ಬಿಡದ ಕೊರೋನಾ ವೈರಸ್ ಸೋಂಕು!

ಇದರ ಲಕ್ಷಣಗಳೇನು?

- ಕೆಲವರಿಗೆ ಕೆಮ್ಮು, ನೆಗಡಿ.

- ಹಲವರಿಗೆ ಜ್ವರ, ಮೈ ಕೈ ನೋವು.

- ಗಂಟಲು ಕೆರೆತ.

- ವಾಂತಿ, ವಾಕರಿಕೆ.

- ಕೊನೆಗೆ ಉಸಿರಾಡಲು ಕಷ್ಟವಾಗೋದು.

ಇಷ್ಟಾದರೂ ಈ ಎಲ್ಲ ಲಕ್ಷಣಗಳು ಮಾತ್ರ ಕೊರೋನಾ ಸೂಚಕವೇ ಅಂದರೆ ಅಲ್ಲ.

ಲಕ್ಷಣಗಳು ಕಂಡರೆ ಏನು ಮಾಡಬೇಕು?

ನೀವುಗಳು ನಿಮ್ಮ ಕುಟುಂಬ ವೈದ್ಯರನ್ನು ಕೂಡಲೇ ಸಂಪರ್ಕಿಸಿ. ಅವರು ಖಾಯಿಲೆ ಲಕ್ಷಣ, ಪರೀಕ್ಷೆ ಇತ್ಯಾದಿಗಳ ಆಧಾರದಿಂದ ನಿಭಾಯಿಸುತ್ತಾರೆ.

ಕೆಮ್ಮು, ನೆಗಡಿ, ಜ್ವರ ಇತ್ಯಾದಿಗಳು ಕಂಡುಬಂದಾಗ ಕಂಡಲ್ಲಿ ಕಂಡಲ್ಲಿ ಸೀನುವುದಾಗಲೀ, ಕೆಮ್ಮುವುದಾಗಲೀ, ಉಗುಳುವುದಾಗಲೀ ಮಾಡಬಾರದು. ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ ಹಿಡಿದುಕೊಂಡು ಕೆಮ್ಮುವುದು, ಸೀನುವುದರಿಂದ ಇನ್ನೊಬ್ಬರಿಗೆ ರೋಗ ಹರಡದಂತೆ ತಡೆಯಬಹುದು. ಮನೆ ಮಂದಿಯನ್ನು ದೂರವಿಟ್ಟು ನಿಮ್ಮವರನ್ನು ರಕ್ಷಿಸಿ.

ಈ ಟಿಪ್ಸ್ ಪಾಲಿಸಿದ್ರೆ ಕೊರೋನಾ ಸೋಂಕು ಮಕ್ಕಳನ್ನು ತಾಕದು!

ರಕ್ತ, ಮಲ, ಮೂತ್ರ ಇತ್ಯಾದಿಗಳಿಂದ ಈ ರೋಗ ಅಷ್ಟೊಂದು ಪ್ರಬಲವಾಗಿ ಹರಡುವುದಿಲ್ಲ. ಹಾಗಾಗಿ ಈ ಖಾಯಿಲೆ ಕಂಡ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಿದಲ್ಲಿ ನಾವು ಗೆದ್ದ ಹಾಗೆ.

ಮಾಲ್‌ಗಳು, ಮಾರ್ಕೆಟ್‌ಗಳು, ಜನ ನಿಬಿಡ ಸ್ಥಳಗಳು, ಸಿನಿಮಾ ಮಂದಿರ ಇತ್ಯಾದಿಗಳನ್ನು ಸದ್ಯದ ಸ್ಥಿತಿಯಲ್ಲಿ ದೂರವಿಡಿ. ನೀವು ಕೆಲಸ ಮಾಡುವ ಜಾಗದಲ್ಲಿ ಎಚ್ಚರವಾಗಿದ್ದುಕೊಂಡು ಪ್ರತಿ 2-3 ದಿನಗಳಿಗೊಮ್ಮೆ ಗೋಷ್ಠಿ ನಡೆಸಿ ಯಾರಾದರೂ ರೋಗದ ಲಕ್ಷಣ ಉಳ್ಳವರಿದ್ದರೆ ಅವರನ್ನು ಪ್ರತ್ಯೇಕಿಸಿ ಅನಗತ್ಯವಾಗಿ ಮಾಸ್ಕ್‌ ಧರಿಸುವುದಕ್ಕಿಂತ ಖಾಲೆ ಶಂಕಿತರು ಧರಿಸುವುದು ಅತ್ಯುತ್ತಮ. ಮನೆಯೊಳಗೆ ಇರುವ ಮಗು, ತಾಯಿ ಆಗಾಗ ಕೈ-ಮುಖ ತೊಳೆಯುವುದು, ಮಗುವಿನ ಮುಖಕ್ಕೆ ಮಾಸ್ಕ್‌ ಹಾಕುವುದು ಸರಿಯಲ್ಲ. ಅದು ಗಾಳಿಯಿಂದ ಹರಡುವುದಾದರೂ ಕಫ, ಸೀನು ಇವುಗಳ ಸಿಂಚನದಿಂದ ಆ ವೈರಸ್‌ ನಮ್ಮ ದೇಹವನ್ನು ಶ್ವಾಸನಾಳದ ಮೂಲಕ ಮುಖಾಂತರ ಸೇರುತ್ತದೆ. ಹಾಗಾಗಿ ಆಗಾಗ ಬಿಸಿ ನೀರು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದು, ತನ್ಮೂಲಕ ಅಪ್ಪಿತಪ್ಪಿ ನಮ್ಮ ಗಂಟಲನ್ನು ಜೀವಾಣು ಪ್ರವೇಶಿಸಿದ್ದರೂ ನೀರು ಕುಡಿಯುವುದರಿಂದ ಆಮ್ಲ ಮಾಧ್ಯಮದ ಜಠರ ಪ್ರವೇಶಿಸಿ ಅಲ್ಲಿಯೇ ಸಾಯುತ್ತದೆ. ಹಾಗಾಗಿ ಗಂಟಲು ಒದ್ದೆಯಾಗಿರಲಿ.

ನೀವು ಜನರೊಂದಿಗೆ ಬೆರೆಯುವ ವ್ಯವಹರಿಸುವ ನಿರಂತರವಾಗಿ ಇನ್ನೊಬ್ಬರ ಸಂಪರ್ಕದಲ್ಲಿರುವವರಾದರೆ ಆಗಾಗ್ಗೆ ನಿಮ್ಮ ಕೈಗಳನ್ನು dಜಿsಜ್ಞ್ಛಿಛ್ಚಿಠಿa್ಞಠಿ sp್ಟay ದ್ರಾವಣದಿಂದ ಆಗಾಗ ತೊಳೆಯಬೇಕು. ಹಾಗೆಂದು ಮನೆಯೊಳಗೆ ಕುಳಿತಿರುವವರು ಈ ರೀತಿ ಮಾಡಬೇಕೆಂದೇನೂ ಇಲ್ಲ.

ಮನೆಯಿಂದ ಹೊರ ಹೋದರೆ ಎರಡು ಬಾರಿ ಸ್ನಾನ ಮಾಡೋದು ಉತ್ತಮ. ಹೊರಗಿನಿಂದ ಬಂದು ಮೈ ಕೈ ಸ್ವಚ್ಛವಾಗಿ ತೊಳೆದುಕೊಳ್ಳದೇ ಮಕ್ಕಳನ್ನು ಮುದ್ದಿಸಬೇಡಿ. ನಿಮ್ಮ ನೆರೆಹೊರೆಯವರನ್ನು ಸೇರಿಸಿಕೊಂಡು ನಿಮ್ಮದೇ ಒಂದು ಗುಂಪು ರಚಿಸಿ ಎಚ್ಚರದ ಕಣ್ಣು ಹಾಗೂ ಹೆಜ್ಜೆ ಇಟ್ಟರೆ ನಿಮಗೆ ಈ ಸೋಂಕು ತಗಲುವುದಿಲ್ಲ.

ಭಯ ಬೇಡ: ಶೇ. 80 ರಷ್ಟು ಕೊರೋನಾ ರೋಗಿಗಳು ಸಾಯೋದಿಲ್ಲ!

ರೋಗ ಹೆಚ್ಚಾಗಿ ಕಾಣಿಸಿಕೊಂಡ ಪ್ರದೇಶಕ್ಕೆ ಹೆಚ್ಚು ಸಲ ಹೋಗುವುದು ಅಪಾಯ. ವಿನಾಕಾರಣ ಬೇರೆ ದೇಶಗಳಿಗೆ ಪ್ರಯಾಣಿಸುವುದು ಬೇಡವೇ ಬೇಡ.

ಕೊರೋನಾ ವೈರಸ್‌ ಹೇಗೆ ಹರಡುತ್ತದೆ?

1. ಕುಡಿಯುವ ನೀರಿನಿಂದ ಹರಡುತ್ತದೆಯೇ?

-ಇಲ್ಲ. ಇಲ್ಲಿಯತನಕ ಕುಡಿಯುವ ನೀರಲ್ಲಿ ಕೋವಿಡ್‌-19 ಪತ್ತೆಯಾಗಿಲ್ಲ.

2. ಮಲಮೂತ್ರಗಳಲ್ಲಿ, ರಕ್ತಕಶ್ಮಲಗಳಲ್ಲಿ ಈ ವೈರಸ್‌ ಇದೆಯೇ?

-ಕೆಲವು ಕೋವಿಡ್‌-19 ಪಾಸಿಟಿವ್‌ ರೋಗಿಗಳ ಮಲದಲ್ಲಿ ಈ ವೈರಸ್‌ ಕಂಡುಬಂದರೂ, ಅದು ರೋಗ ಹರಡುವುದಕ್ಕೆ ಎಷ್ಟರ ಮಟ್ಟಿಗೆ ಕಾರಣವಾಗುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಿಂದಿನ ಸಾರ್ಸ್‌ ಹಾಗೂ ಮರ್ಸ್‌ (ಮಿಡ್ಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್‌) ಹಬ್ಬಿದಾಗ ನಡೆದ ಸಂಶೋಧನೆಯ ಪ್ರಕಾರ ಮಲಮೂತ್ರಗಳಿಂದ ಹಬ್ಬುವ ಸಾಧ್ಯತೆ ತೀರಾ ಕಡಿಮೆ.

3. ಸಾರ್ವಜನಿಕ ಕೊಳ, ಸ್ನಾನದ ಮನೆಯಿಂದ ಹಬ್ಬೀತೇ?

- ಇಲ್ಲ, ಸಾಮಾನ್ಯವಾಗಿ ಶುದ್ಧೀಕರಿಸುವ ವಿಧಾನದಿಂದಾಗಿ ಇವೆಲ್ಲ ಶುದ್ಧವಾಗಿಯೇ ಇರುತ್ತವೆ. ಇಲ್ಲಿಂದ ವೈರಸ್‌ ಹರಡುವ ಸಾಧ್ಯತೆ ಕಡಿಮೆ.

4. ಚರಂಡಿ ಮತ್ತು ಒಳಚರಂಡಿಯ ನೀರಿನಿಂದ ಹಬ್ಬುವುದೇ?

- ಇಲ್ಲ, ಆದರೆ ಅವರು ಸುರಕ್ಷಿತ ವಿಧಾನಗಳನ್ನು ಬಳಸುವುದು ಒಳ್ಳೆಯದು. ತಾವು ಕೆಲಸ ಮಾಡುವಾಗ ಎಚ್ಚರದಿಂದ ಇರಬೇಕು ಮತ್ತು ಸೂಕ್ತ ವೈದ್ಯಕೀಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಯಾರು ಈ ರೋಗಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ?

ಸೋಂಕು ತಗುಲುವ ಮನುಷ್ಯನಿಗೆ ದೀರ್ಘ ಕಾಲದಿಂದ ಈ ಕೆಳಗಿನ ಆರೋಗ್ಯ ಸಮಸ್ಯೆಗಳಿದ್ದರೆ

- ದೀರ್ಘ ಕಾಲದಿಂದ ರಕ್ತದೊತ್ತಡ

- ಮಧುಮೇಹದಿಂದ ಬಳಲುತ್ತಿದ್ದರೆ

- ಪ್ರತಿರೋಧ ಶಕ್ತಿ ಕಡಿಮೆಯಿದ್ದಲ್ಲಿ

ಈ ಸೋಂಕು ಮಾರಣಾಂತಿಕವಾಗಬಹುದು.

- ಈವರೆಗಿನ ಅಂಕಿ ಅಂಶಗಳ ಪ್ರಕಾರ ವೃದ್ಧರು ಹಾಗೂ ಮಕ್ಕಳನ್ನು ಈ ವೈರಸ್‌ ಹೆಚ್ಚಿನ ಪ್ರಮಾಣದಲ್ಲಿ ಬಲಿ ಪಡೆದಿದೆ.

- ರೋಗಿಯ ಹತ್ತಿರದ ಬಂಧುಗಳು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಶುಶ್ರೂಷಕಿಯರು ಅತೀ ಹೆಚ್ಚು ಜಾಗೃತೆಯಿಂದಿರಬೇಕು. ರೋಗಿಯನ್ನು ಪ್ರತ್ಯೇಕವಾಗಿ ಐಸೋಲೇಶನ್‌ನಲ್ಲಿರಿಸಿ ಕ್ರಮಬದ್ಧವಾಗಿ ಚಿಕಿತ್ಸೆ ನೀಡಬೇಕು.

ಅಂಕಿ ಅಂಶಗಳು ಏನು ಹೇಳುತ್ತವೆ?

ಜಗತ್ತಿನಲ್ಲಿ ನಿನ್ನೆಯವರೆಗೆ 1,46,299 ಜನರಿಗೆ ಕೊರೋನಾ ವೈರಸ್‌ ತಗುಲಿದೆ. 5,441 ಜನರು ಮೃತಪಟ್ಟಿದ್ದಾರೆ. ನಮ್ಮ ದೇಶದಲ್ಲಿ ಈವರೆಗೆ ಈ ವೈರಸ್‌ ಸೋಂಕು ತಗುಲಿದವರ ಸಂಖ್ಯೆ 86. ಈ 86 ಜನರಲ್ಲಿ 64 ಜನ ನಮ್ಮ ದೇಶದವರೇ. ಉಳಿದ 17 ಜನ ಬೇರೆ ದೇಶದವರು. ಹೊರದೇಶದಿಂದ ಯಾತ್ರೆ ಮುಗಿಸಿ ಬಂದ ವೃದ್ಧರೊಬ್ಬರ ಸಾವು ಕರ್ನಾಟಕದಲ್ಲೇ ಆಗಿದೆ. ಹಾಗಾಗಿ ನಮ್ಮ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 2.

Follow Us:
Download App:
  • android
  • ios