Asianet Suvarna News Asianet Suvarna News

ಆಡಿಷನ್‌ಗೆ ಕರೆದು ನಟಿ ಮೇಲೆ ಅತ್ಯಾಚಾರ ಯತ್ನ? ಸಂಸ್ಥೆಯ ಹೆಸರು ಬಯಲು!

ಅವಕಾಶ ನೀಡುವುದಾಗಿ ಆಡಿಷನ್‌ಗೆ ಕರೆದು ಅತ್ಯಾಚಾರ ಮಾಡಿರುವ ಪ್ರಕರಣ ಬಯಲಿಗೆ ಬಂದಿದೆ. 16ನೇ ವಯಸ್ಸಿಗೆ  ಕಹಿ ಘಟನೆ ಅನುಭವಿಸಿದ ನಟಿ.....
 

Bollywood Rashami Desai reveals casting couch ordeal  at 16
Author
Bangalore, First Published Mar 15, 2020, 12:36 PM IST
  • Facebook
  • Twitter
  • Whatsapp

#Metoo ಅಭಿಯಾನದ ಮೂಲಕ ಜೀವನದಲ್ಲಿ ಎದುರಿಸಿದ  ಕಹಿ ಘಟನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ನಟಿಯರು ಹಾಗೂ ಸಾಮಾನ್ಯ ಹೆಣ್ಣು ಮಕ್ಕಳು ಮುಂದಾಗಿದ್ದಾರೆ. 

ಕಿರುತೆರೆಯ ಖ್ಯಾತ ನಟಿ ರಶ್ಮಿ ದೇಸಾಯಿ ಖಾಸಗಿ ಸಂದರ್ಶನದಲ್ಲಿ ತಮ್ಮ ಜೀವನದ ಕಹಿ ಘಟನೆ ಕಾಸ್ಟಿಂಗ್‌ ಕೌಚ್‌ ಬಗ್ಗೆ ನೆನೆದು ಕಣ್ಣೀರಿಟ್ಟಿದ್ದಾರೆ. ಚಿಕ್ಕವಯಸ್ಸಿನಿಂದಲೂ ನಟಿಯಾಗಬೇಕೆಂದು ಕನಸು ಕಂಡ ರಶ್ಮಿಗೆ 16ನೇ ವಯಸ್ಸಿನಲ್ಲಿ ಆಡಿಷನ್‌ಗೆ ಕರೆ ಬಂದಿತ್ತು.

'ನನಗೆ ಸೂರಜ್‌ ಎಂಬಾತನ ಪರಿಚಯವಾಗಿತ್ತು. ಅತ ಯಶ್‌ ರಾಜ್‌ ಫಿಲ್ಮ್‌ ಬಾಲಾಜಿ ಫಿಲ್ಮ್‌ನವರು ಗೊತ್ತು, ನಿನಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದ. ಅದನ್ನು ನಂಬಿ ಪ್ರತಿ ದಿನ ಭೇಟಿ ಮಾಡುತ್ತಿದ್ದೆ. ಅಲ್ಲದೇ ಭೇಟಿಯಾದ ದಿನವೇ ನನ್ನ ದೇಹದ ಅಳತೆ ಕೇಳಿದ್ದನು ನಾನು ನನಗೆ ಗೊತ್ತಿಲ್ಲ' ಎಂದು ಹೇಳಿದೆ ಎಂದು ಹೇಳಿಕೊಂಡಿದ್ದಾರೆ. 

ಮಂಚಕ್ಕೆ ಬರಲೊಪ್ಪದ್ದಕ್ಕೆ ಅವಕಾಶ ಕಳೆದುಕೊಂಡೆ; ಕಣ್ಣೀರಿಟ್ಟ ಗೋಲ್ಡನ್ ಸ್ಟಾರ್ ಹಿರೋಯಿನ್

'ಆಡಿಷನ್ ಕೊಡಲು ಹೊಟೇಲ್‌ಗೆ ಬಾ ಎಂದು ಕರೆದರು. ಆದರೆ ಆತ ರೋಮಿನಲ್ಲಿ ನನಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದ, ನಾನು ಕುಡಿಯಲು ನಿರಾಕರಿಸಿದೆ. ಆ ನಂತರ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ.  ನನಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡುವ ಪ್ಲಾನ್‌ ಇತ್ತು ಎಂದು ತಿಳಿದು ಬಂದಿತ್ತು' ಎಂದು ತಿಳಿಸಿದ್ದಾರೆ. 

 ಈ ಘಟನೆಯನ್ನು ರಶ್ಮಿ ತಾಯಿಯ ಬಳಿ  ಹೇಳಿಕೊಂಡಾಗ ಅತನಿಗೆ ಕಪಾಳಕ್ಕೆ ಹೊಡೆದು ಎಚ್ಚರಿಕೆ ನೀಡಿದ್ದಾರೆ.  ಇದಾದ ನಂತರ ಮಾನಸಿಕವಾಗಿ ದೃಢವಾದರು. ಆ ನಂತರ ಬಾಲಿವುಡ್‌ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಅದೃಷ್ಟ ಕುಲಾಯಿಸಿದ್ದು ಕಿರುತೆರೆಯಲ್ಲಿ ಮಾತ್ರ.

ಆಡಿಷನ್‌ನಲ್ಲಿ ರೇಪ್‌ ಸೀನ್ ಮಾಡಿ ಎಂದಿದ್ದಕ್ಕೆ ರೂಮ್‌ನಿಂದ ಓಡಿ ಹೋದ ನಟಿ!

Follow Us:
Download App:
  • android
  • ios