Asianet Suvarna News Asianet Suvarna News

ಮಾಸ್ಕ್ ಕೊರತೆ ನೀಗಿಸುವಲ್ಲಿ ಕೇರಳ ಯಶಸ್ವಿ, ಕ್ಲಿಕ್ ಆಯ್ತು ಐಡಿಯಾ!

ದೇಶದಲ್ಲಿ ಹೆಚ್ಚಿದ ಕೊರೋನಾ ಹಾವಳಿ, ಎಲ್ಲೆಲ್ಲೂ ಮಾಸ್ಕ್ ಕೊರತೆ| ಈ ಒಂದು ರಾಜ್ಯ ಬಿಟ್ಟು ಇಡೀ ದೇಶದಲ್ಲಿ ಮಾಸ್ಕ್‌ಗಾಗಿ ಪರದಾಟ| ಮಾಸ್ಕ್ ಕೊರತೆ ನೀಗಿಸುವಲ್ಲಿ ಕೇರಳ ಕೈ ಹಿಡಿದವರಾರು?

Kerala Gets Prisoners in Jails to Make Face Masks to Solve Shortage among Coronavirus Crisis
Author
Bangalore, First Published Mar 15, 2020, 2:59 PM IST

ಕೊಚ್ಚಿ[ಮಾ.15]: ಚೀನಾದ ವುಹಾನ್ ನಿಂದ ಹಬ್ಬಿರುವ ಕೊರೋನಾ ವೈರಸ್ ಜಗತ್ತಿನಾದ್ಯಂತ ಹಬ್ಬಿದೆ. ಭಾರತಕ್ಕೂ ಕಾಲಿಟ್ಟಿರುವ ಈ ಡೆಡ್ಲಿ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿರುವಾಗ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆಯಲ್ಲಿ ಕೊರತೆ ಕಾಣಲಾರಂಭಿಸಿದೆ. ಇತ್ತ ಔಷಧ ಮಳಿಗೆ ಸಿಬ್ಬಂದಿ ಕೂಡಾ ದುಪ್ಪಟ್ಟು ಬೆಲೆಗೆ ಮಾಸ್ಕ್ ಮಾರಾಟ ಮಾಡಲಾರಂಭಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಸಾಮಾನ್ಯರಿಗೆ ಮಾಸ್ಕ್ ಪೂರೈಸಲು ಹೆಣಗಾಡುತ್ತಿರುವಾಗ ಒಂದು ರಾಜ್ಯ ಮಾತ್ರ ಈ ಸಮಸ್ಯೆ ಪರಿಹರಿಸಲು ವಿಭಿನ್ನವಾದ ಮಾರ್ಗವನ್ನು ಕಂಡುಕೊಂಡಿದೆ. ಹೀಗಾಗಿ ಇಲ್ಲಿ ಮಾಸ್ಕ್ ಕೊರತೆಯೇ ಕಂಡು ಬಂದಿಲ್ಲ.

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 90ಕ್ಕೇರಿದೆ. ಈ ನಡುವೆ ಕೇರಳ ಸಿಎಂ ಪಿಣರಾಯಿ ವಿಜಯನ್ ಶನಿವಾರ ರಾತ್ರಿ ಟ್ವೀಟ್ ಒಂದನ್ನು ಮಾಡುತ್ತಾ ತಮ್ಮ ಸರ್ಕಾರ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮದ ಕುರಿತು ಬರೆದಿದ್ದಾರೆ. ಮಾಸ್ಕ್ ಕೊರತೆಯನ್ನು ನೀಗಿಸಲು ತಾವೇನು ಮಾಡಿದ್ದೇವೆ ಎಂದು ಕೇರಳ ಸಿಎಂ ಇಲ್ಲಿ ಹೇಳಿಕೊಂಡಿದ್ದಾರೆ. ಶಿಕ್ಷೆಗೀಡಾಗಿ ಜೈಲಿನಲ್ಲಿರುವ ಕೈದಿಗಳೇ ಈಗ ಮಾಸ್ಕ್ ತಯಾರಿಸುತ್ತಿದ್ದಾರೆ. ಹೀಗಾಗಿ ಕೇರಳದಲ್ಲಿ ಮಾಸ್ಕ್ ಪೂರೈಕೆಯಲ್ಲಿ ಕೊರತೆ ಕಂಡು ಬಂದಿಲ್ಲ. 

ಈ ಕುರಿತು ಟ್ವೀಟ್ ಮಾಡಿರುವ ಪಿಣರಾಯಿ ವಿಜಯನ್ 'ಮಾಸ್ಕ್ ಕೊರತೆ ಎದುರಾದಾಗ ಜೈಲಿನಲ್ಲಿರುವ ಕೈದಿಗಳಿಗೆ ಇದನ್ನು ತಯಾರಿಸಲು ಸೂಚನೆ ನೀಡಲಾಗಿತ್ತು. ಯುದ್ಧಕ್ಕೆ ತಯಾರಾಗುವಂತೆ ಈ ಕಾರ್ಯ ಆರಂಭವಾಯ್ತು. ಇಂದು ಮೊದಲ ಬ್ಯಾಚ್ ನಲ್ಲಿ ತಿರುವನಂತಪುರಂ ಜೈಲಿನ ಕೈದಿಗಳು ತಯಾರಿಸಿದ ಮಾಸ್ಕ್ ಗಳನ್ನು ಇಲ್ಲಿನ ಜೈಲು ಸಿಬ್ಬಂದಿ ಹಸ್ತಾಂತರಿಸಿದ್ದಾರೆ' ಎಂದು ಬರೆದಿದ್ದಾರೆ.

ಕೇರಳ ಸರ್ಕಾರ ಜೈಲಿನಲ್ಲಿ ಟೈಲರಿಂಗ್ ವಿಭಾಗವನ್ನು ಆರಂಭಿಸಿದ್ದು, ಇಲ್ಲಿ ಮಾಸ್ಕ್ ಗಳು ತಯಾರಾಗುತ್ತಿವೆ. ಇದರೊಂದಿಗೆ ಇಲ್ಲಿನ ಸರ್ಕಾರ ಸ್ಯಾನಿಟೈಸರ್ ಉತ್ಪಾದನೆಯನ್ನೂ ಅಧಿಕಗೊಳಿಸಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದ್ದು, ಕೇರಳ ಸದ್ಯ ಈ ನಿಟ್ಟಿರುವ ಹೆಜ್ಜೆ ಶ್ಲಾಘನೀಯ.

Follow Us:
Download App:
  • android
  • ios