- Home
- Entertainment
- Cine World
- ಚಿಕ್ಕ ವಯಸ್ಸಿಗೆ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದ ಈ ಬಾಲನಟ ಈಗ ಲೆಜೆಂಡರಿ ಸ್ಟಾರ್!
ಚಿಕ್ಕ ವಯಸ್ಸಿಗೆ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದ ಈ ಬಾಲನಟ ಈಗ ಲೆಜೆಂಡರಿ ಸ್ಟಾರ್!
ಆರನೇ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಪುರಸ್ಕಾರ ಪಡೆದಿದ್ದ ನಟರೋರ್ವರು ಈಗ ಭಾರತೀಯ ಚಿತ್ರರಂಗದ ದಿಗ್ಗಜ ನಟರೆಂಬ ಹೆಗ್ಗಳಿಕೆ ಪಡೆದಿದ್ದಾರೆ. ಇದಾದ ಬಳಿಕ ಅವರಿಗೆ ಸಿಕ್ಕ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ ಎನ್ನಬಹುದು. ಹಾಗಾದರೆ ಆ ನಟ ಯಾರು?
14

ನಟ ಕಮಲ್ ಹಾಸನ್ ಅವರಿಗೆ ಉತ್ತಮ ಬಾಲ ನಟ ಎನ್ನುವ ಪ್ರಶಸ್ತಿ ಸಿಕ್ಕಿದೆ. 1959ರಲ್ಲಿ ತೆರೆ ಕಂಡಿದ್ದ ʼkalathur kannammaʼ ಸಿನಿಮಾದಲ್ಲಿ ಕಮಲ್ ಹಾಸನ್ ಅದ್ಭುತವಾಗಿ ನಟಿಸಿದ್ದರು. ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸಿಕ್ಕಾಗ ಅವರ ವಯಸ್ಸು ಆರು ಆಗಿತ್ತು.
24
ಕಮಲ್ ಹಾಸನ್ ಅವರ ತಾಯಿ ಎವಿಎಂ ಅವರನ್ನು ಭೇಟಿ ಮಾಡುವ ಪ್ರಸಂಗ ಬಂತು. ಅವರು ಕಮಲ್‌ರನ್ನು ನೋಡಿ ಇಂಪ್ರೆಸ್ ಆಗಿ ಪ್ರೊಡಕ್ಷನ್ ಹೌಸ್‌ಗೆ ನಟಿಸಲು ಅವಕಾಶ ಕೊಡುವಂತೆ ಹೇಳಿದರು. ಆಗಲೇ ಅವರು ಸಿನಿಮಾಕ್ಕೆ ಆಯ್ಕೆ ಆಗಿ ಉತ್ತಮ ಬಾಲನಟ ಪ್ರಶಸ್ತಿ ಪಡೆದರು.
34
ಒಟ್ಟಾರೆಯಾಗಿ ಕಮಲ್ ಹಾಸನ್ ಅವರು ಆರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇನ್ನು 18 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರ ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಕೂಡ ಸಿಕ್ಕಿದೆ.
44
ಕಮಲ್ ಹಾಸನ್ ಅವರು ಮಲಯಾಳಂ, ಬಂಗಾಳಿ, ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿ ಒಟ್ಟೂ 230 ಸಿನಿಮಾಗಳಲ್ಲಿ ನಟಿಸಿದ್ದಾರೆ.
Latest Videos