10:54 PM (IST) Mar 16

Karnataka News Live 16th March:ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವೈರಲ್ ಆಡಿಯೋ ಪ್ರಕರಣ, ಕಮಿಷನರ್ ಮಹತ್ವದ ಆದೇಶ

ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವೈರಲ್ ಆಡಿಯೋ ಪ್ರಕರಣ, ಕಮಿಷನರ್ ಮಹತ್ವದ ಆದೇಶ ನೀಡಿದ್ದಾರೆ. ಮಹಿಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿರುವ ಆಡಿಯೋ ಕೋಲಾಹಲ ಸೃಷ್ಟಿಸಿದೆ.

Read Full Story
10:47 PM (IST) Mar 16

Karnataka News Live 16th March:ಪತಿ, ಪೋಷಕರ ವಿರುದ್ಧ ಬಾಲ್ಯವಿವಾಹ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ, ಆಯೋಜಕರು, ಪುರೋಹಿತರ ವಿರುದ್ಧ ಕ್ರಮ

16 ವರ್ಷದ ಅಪ್ರಾಪ್ತ ಬಾಲಕಿಯ ಬಾಲ್ಯವಿವಾಹ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಪ್ರಾಪ್ತ ವಯಸ್ಸಿನಲ್ಲಿ ನಡೆದ ವಿವಾಹವು ಕಾನೂನುಬಾಹಿರವಾಗಿದ್ದು, ನಂತರ ನೋಂದಾಯಿಸಿದರೂ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬಾಲ್ಯವಿವಾಹ ಆಯೋಜಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
Read Full Story
10:06 PM (IST) Mar 16

Karnataka News Live 16th March:ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ - ಬೆಂಗಳೂರು ಟು ಮಂಗಳೂರು ಟ್ರೈನ್ ಕೋಯಿಕ್ಕೋಡ್‌ವರೆಗೆ ವಿಸ್ತರಣೆ

ಬೆಂಗಳೂರು ಮತ್ತು ಮಂಗಳೂರು ಮೂಲಕ ಕಣ್ಣೂರುವರೆಗೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಇದೀಗ ಕೇರಳದ ಕೋಯಿಕ್ಕೋಡ್‌ವರೆಗೆ ವಿಸ್ತರಿಸಲಾಗಿದೆ. ಮಾರ್ಚ್ 15 ರಿಂದ ಜಾರಿಗೆ ಬರುವ ಈ ವಿಸ್ತರಣೆಯು, ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.
Read Full Story
09:49 PM (IST) Mar 16

Karnataka News Live 16th March:ಅತಿವೇಗದ ಚಾಲನೆ - ಮಾರಕ ರಸ್ತೆ ಅಪಘಾತದ ಹೈಕೋರ್ಟ್ ತೀರ್ಪು, ವ್ಯಕ್ತಿ ವಿರುದ್ಧದ ಕೇಸ್ ರದ್ದುಗೊಳಿಸಿದ್ಯಾಕೆ ಕೋರ್ಟ್‌?

ಕೇವಲ ಅತಿವೇಗದಲ್ಲಿ ವಾಹನ ಚಲಾಯಿಸುವುದರಿಂದಲೇ ಅದನ್ನು ನಿರ್ಲಕ್ಷ್ಯ ಅಥವಾ ದುಡುಕಿನ ಚಾಲನೆ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ, 2018ರ ನೈಸ್ ರಸ್ತೆ ಅಪಘಾತ ಪ್ರಕರಣದಲ್ಲಿ ಆರೋಪಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸಿ, ಆತನನ್ನು ಖುಲಾಸೆಗೊಳಿಸಿದೆ.
Read Full Story
09:25 PM (IST) Mar 16

Karnataka News Live 16th March:ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಸಾವು, ರಾಜ್ಯದಲ್ಲಿ ಮಳೆಗೆ ಮೊದಲ ಬಲಿ

ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಸಾವು, ರಾಜ್ಯದಲ್ಲಿ ಮಳೆಗೆ ಮೊದಲ ಬಲಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಮಂಜುನಾಥ್ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಹಲೆವೆಡೆ ಆಲಿಕಲ್ಲು ಮಳೆಯಾಗಿದೆ.

Read Full Story
09:24 PM (IST) Mar 16

Karnataka News Live 16th March:ಸಂಬಂಧ ಇಟ್ಟುಕೊಂಡಿರುವುದು ದ್ವಿವಿವಾಹವಾಗುವುದಿಲ್ಲ - 73 ವರ್ಷದ ವ್ಯಕ್ತಿಯ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಕೇವಲ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧದಲ್ಲಿರುವುದನ್ನು ದ್ವಿವಿವಾಹ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಎರಡನೇ ಮದುವೆ ನಡೆದ ಬಗ್ಗೆ ಸ್ಪಷ್ಟ ಸಾಕ್ಷ್ಯವಿಲ್ಲದ ಕಾರಣ, 73 ವರ್ಷದ ಪತಿಯ ವಿರುದ್ಧ ಪತ್ನಿ ದಾಖಲಿಸಿದ್ದ ದ್ವಿವಿವಾಹ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.

Read Full Story
09:10 PM (IST) Mar 16

Karnataka News Live 16th March:Bhagyalakshmi Making Video - ಸೀರೆಯುಟ್ಟು ಭಾಗ್ಯ ಫೈಟಿಂಗ್‌- ಮುಟ್ತಿದ್ದಂತೆಯೇ ಉರುಳಿ ಉರುಳಿ ಬಿದ್ದ ರೌಡಿಗಳು

ಶ್ರೇಷ್ಠಾಳ ಕುತಂತ್ರದಿಂದ ಅಪಹರಣಕ್ಕೊಳಗಾದ ಭಾಗ್ಯ, ಸೀರೆಯುಟ್ಟೇ ರೌಡಿಗಳನ್ನು ಸದೆಬಡಿದು ತನ್ನ ಕರಾಟೆ ಪರಾಕ್ರಮವನ್ನು ಪ್ರದರ್ಶಿಸಿದ್ದಾಳೆ. ಹೆಣ್ಣುಮಕ್ಕಳಿಗೆ ಸ್ಫೂರ್ತಿದಾಯಕವಾದ ಈ ಫೈಟಿಂಗ್ ದೃಶ್ಯದ ಶೂಟಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.
Read Full Story
09:00 PM (IST) Mar 16

Karnataka News Live 16th March:ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ 105 ವರ್ಷಗಳ ಇತಿಹಾಸ ಹೊಂದಿದೆ - ಎಚ್.ಡಿ.ಕುಮಾರಸ್ವಾಮಿ

ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ 105 ವರ್ಷಗಳ ಇತಿಹಾಸ ಹೊಂದಿದ್ದು, ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕದ ಅತ್ಯುತ್ತಮ ಸಹಕಾರ ಬ್ಯಾಂಕ್ ಆಗಿ ಹೆಸರು ಗಳಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದರು.

Read Full Story
08:58 PM (IST) Mar 16

Karnataka News Live 16th March:Brahmagantu Serial ದೀಪಾ ರೋಲ್‌ ಚೇಂಜ್‌ ಆಗೋಯ್ತು! ಬೆಟ್ಟದ ಮೇಲಿನಿಂದ ಬಿದ್ದು ಸತ್ತಿದ್ದು ಅವಳಲ್ಲ, ಇವಳು

ಬ್ರಹ್ಮಗಂಟು ಸೀರಿಯಲ್‌ನಲ್ಲಿ ನಾಯಕಿ ದೀಪಾ ಸತ್ತಂತೆ ತೋರಿಸಲಾಗಿದ್ದು, ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದೆ. ಆದರೆ, ಬೆಟ್ಟದಿಂದ ತಳ್ಳುವ ದೃಶ್ಯದಲ್ಲಿ ದೀಪಾಳ ಬದಲು ಆಕೆಯನ್ನೇ ಹೋಲುವ ಗೊಂಬೆಯನ್ನು ಬಳಸಿರುವ ವಿಡಿಯೋ ವೈರಲ್ ಆಗಿದೆ. ಇದು ದೀಪಾಳ ಪಾತ್ರದ ಅಂತ್ಯದ ಬಗ್ಗೆ ಹೊಸ ಕುತೂಹಲವನ್ನು ಸೃಷ್ಟಿಸಿದೆ.
Read Full Story
08:41 PM (IST) Mar 16

Karnataka News Live 16th March:ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೊಳಿಸಲಾದ ಕಾರ್ಯಕ್ರಮಗಳು ಶಾಶ್ವತ - ಸಚಿವ ಮಧು ಬಂಗಾರಪ್ಪ

ಸಮಾಜದಲ್ಲಿನ ಪ್ರತಿಯೊಬ್ಬರಿಗೂ ರೂಪಿಸಲಾದ ಕಾರ್ಯಕ್ರಮವನ್ನು ಭವಿಷ್ಯದಲ್ಲಿನ ಯಾವುದೇ ಸರ್ಕಾರ ತೆಗೆದುಹಾಕಲು ಸಾದ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Read Full Story
07:44 PM (IST) Mar 16

Karnataka News Live 16th March:ಪೊಲೀಸ್ ಅಂದ್ರೆ ಭಯ ಅಲ್ಲ ಭರವಸೆ - ಒಂಟಿ ವೃದ್ಧೆಯರ ಬದುಕಿಗೆ ಬೆಳಕು ತಂದ ಕಾನ್ಸ್ಟೇಬಲ್

ದನದ ಕೊಟ್ಟಿಗೆಗಳಂತಿರುವ ತಗಡಿನ ಶೆಡ್ಗಳಲ್ಲಿ ಅದರಲ್ಲು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯ ಕೂಪದಲ್ಲಿ ಬದುಕುತ್ತಿರುವ ಈ ಬಡ ವೃದ್ಧೆಯರ ದುಸ್ಥಿತಿ ಕಂಡ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ.

Read Full Story
07:31 PM (IST) Mar 16

Karnataka News Live 16th March:ರಸ್ತೆಗಳು ಅಭಿವೃದ್ಧಿಯಾದರೆ ಹಳ್ಳಿಗಳ ಮೂಲ ಸಮಸ್ಯೆ ಬಗೆಹರಿದಂತೆ - ಸಚಿವ ಚಲುವರಾಯಸ್ವಾಮಿ

ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಯಾದರೆ ಹಳ್ಳಿಗಳಲ್ಲಿ ಮೂಲ ಸಮಸ್ಯೆಗಳಿಗೆ ಬಹುತೇಕ ಪರಿಹಾರ ಸಿಕ್ಕಂತಾಗುತ್ತದೆ. ಹೀಗಾಗಿ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

Read Full Story
07:22 PM (IST) Mar 16

Karnataka News Live 16th March:ಪ್ರಜಾ ಸೌಧ ಸರ್ಕಾರದ ಪ್ರತಿಬಿಂಬ, ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು - ಕೃಷ್ಣ ಭೈರೇಗೌಡ

ಆಶಯವನ್ನು ಪೂರೈಸಬೇಕು. ಪ್ರಜೆಗಳಿಗಾಗಿ ನಾವು ಎಂಬ ಭಾವನೆ ಅಧಿಕಾರಿ, ರಾಜಕಾರಣಿಗಳಲ್ಲಿ ಮೂಡಿದಾಗ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

Read Full Story
07:19 PM (IST) Mar 16

Karnataka News Live 16th March:ಬೆಂಗಳೂರಿಂದ ವಿದೇಶಕ್ಕೆ ಶಿಫ್ಟ್ - ₹1.3 ಕೋಟಿ ವೇತನ, ಟೆಕ್ಕಿ ಜೀವನದಲ್ಲಿ ದೊಡ್ಡ ಬದಲಾವಣೆ, ಭಾರತಕ್ಕೆ ಮರಳೋದು ಡೌಟ್!

ಬೆಂಗಳೂರಿನಿಂದ ಐರ್ಲೆಂಡ್‌ನ ಡಬ್ಲಿನ್‌ಗೆ ಸ್ಥಳಾಂತರಗೊಂಡ 27 ವರ್ಷದ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್, ಅಲ್ಲಿನ ದುಬಾರಿ ಜೀವನ ವೆಚ್ಚದ ನಡುವೆಯೂ ಉತ್ತಮ ಜೀವನ ಗುಣಮಟ್ಟವನ್ನು ಕಂಡುಕೊಂಡಿದ್ದಾರೆ. ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿರುವ ಅವರು, ಭಾರತಕ್ಕಿಂತ ದುಪ್ಪಟ್ಟು ಸಂಬಳ ಪಡೆಯುತ್ತಿದ್ದು, ಯುರೋಪಿಯನ್ ಜೀವನಶೈಲಿಯನ್ನು ಆನಂದಿಸುತ್ತಿದ್ದಾರೆ.
Read Full Story
07:09 PM (IST) Mar 16

Karnataka News Live 16th March:ಬಂಗಾರದಂತಹ ಭೂಮಿ ಯಾರೂ ಮಾರಾಟ ಮಾಡಬೇಡಿ - ಸಚಿವ ಎಂ.ಬಿ.ಪಾಟೀಲ ರೈತರಿಗೆ ಮನವಿ

ಭೂಮಿ ಮಾರಾಟ ಮಾಡಿದರೆ ಮತ್ತೆ ಖರೀದಿಸಲು ಸಾಧ್ಯವಿಲ್ಲ. ಭೂಮಿ ಬಂಗಾರವಿದ್ದಂತೆ. ಅದನ್ನು ಯಾರೂ ಮಾರಾಟ ಮಾಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

Read Full Story
06:58 PM (IST) Mar 16

Karnataka News Live 16th March:ವರ್ಷದೊಳಗೆ ಪ್ರತಿ ಹಳ್ಳಿಗೂ ಶಾಶ್ವತ ಕುಡಿಯುವ ನೀರು - ಸಚಿವ ಕೆ.ಎಚ್.ಮುನಿಯಪ್ಪ ಭರವಸೆ

ವಿಜಯಪುರ ಪಟ್ಟಣಗಳಿಗೆ ಮಾತ್ರವಲ್ಲದೆ, ಪ್ರತಿ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

Read Full Story
06:54 PM (IST) Mar 16

Karnataka News Live 16th March:ಬಳ್ಳಾರಿ - ಮೇಲಾಧಿಕಾರಿ ಕಿರುಕುಳ ಆರೋಪ - ಕೃಷಿ ಇಲಾಖೆ ಗುತ್ತಿಗೆ ನೌಕರ ಸಾವಿಗೆ ಶರಣು

Sandur contract employee death: ಬಳ್ಳಾರಿಯ ಸಂಡೂರಿನಲ್ಲಿ ಕೃಷಿ ಇಲಾಖೆಯ ಗುತ್ತಿಗೆ ನೌಕರರೊಬ್ಬರು ಮೇಲಾಧಿಕಾರಿಯ ಮಾನಸಿಕ ಕಿರುಕುಳದಿಂದ ನೊಂದು ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ಅಧಿಕಾರಿ ಹೆಸರನ್ನು ಉಲ್ಲೇಖಿಸಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

Read Full Story
06:24 PM (IST) Mar 16

Karnataka News Live 16th March:ಶಿರಸಿಯಲ್ಲಿ ಬಾವಿಗೆ ಬಿದ್ದ 2 ವರ್ಷದ ಮಗು; ಪಂಪ್‌ಸೆಟ್‌ ಪೈಪು ಹಿಡಿದು ಕೂತಿದ್ದ ಬಾಲೆ; ಕಾಪಾಡಿದ ರಿಯಲ್‌ ಹೀರೋ

Girl fell into well: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದಿದೆ. ಆ ಬಳಿಕ ಆ ಮಗುವನ್ನು ಮೇಲಕ್ಕೆತ್ತಿ ಬಚಾವ್‌ ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.

Read Full Story
05:46 PM (IST) Mar 16

Karnataka News Live 16th March:ಬೆಂಗಳೂರಲ್ಲಿ ಐಟಿ ಜಾಬ್ ಪಡೆಯೋದು ಸುಲಭವಲ್ಲ - 15 ದಿನಗಳಲ್ಲಿ ಡೆವೆಲಪರ್ ಹುದ್ದೆಗಳಿಗೆ 34 ಸಾವಿರಕ್ಕೂ ಹೆಚ್ಚು ಅರ್ಜಿ!

ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ತಾಂತ್ರಿಕ ಉದ್ಯೋಗ ಮಾರುಕಟ್ಟೆಯು ತೀವ್ರ ಸ್ಪರ್ಧೆಯಿಂದ ಕೂಡಿದೆ. ಇತ್ತೀಚೆಗೆ MERN ಸ್ಟಾಕ್ ಮತ್ತು React ಡೆವಲಪರ್ ಹುದ್ದೆಗಳಿಗಾಗಿ ಕೇವಲ 15 ದಿನಗಳಲ್ಲಿ 34,742 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದು ನಗರದಲ್ಲಿ ಉದ್ಯೋಗ ಪಡೆಯುವ ಸವಾಲನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಅಂಕಿಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ .

Read Full Story
05:26 PM (IST) Mar 16

Karnataka News Live 16th March:ಚಿನ್ನದ ಬೆಲೆಯಲ್ಲಿಂದು ಮತ್ತೆ ಮಹಾ ಕುಸಿತ, ಮಾರ್ಚ್ ತಿಂಗಳಲ್ಲೇ ಅತ್ಯಂತ ಕಡಿಮೆ ದರಕ್ಕೆ ಇಳಿದ ಗೋಲ್ಡ್ ರೇಟ್!

ಕರ್ನಾಟಕದಲ್ಲಿ ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಿದ್ದು, 22 ಮತ್ತು 24 ಕ್ಯಾರೆಟ್ ಚಿನ್ನದ ದರಗಳು ಈ ತಿಂಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿವೆ. ಪ್ರತಿ ಗ್ರಾಂಗೆ 205 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಇದು ಗ್ರಾಹಕರಿಗೆ ಮತ್ತು ಹೂಡಿಕೆದಾರರಿಗೆ ದೊಡ್ಡ ಸಮಾಧಾನ ತಂದಿದೆ.
Read Full Story