ನಿಶ್ಚಿತಾರ್ಥ ಆಗಿ ಹತ್ತು ದಿನಗಳು ಕಳೆದಿದ್ದವು. ಮದುವೆ ತಯಾರಿಯೂ ಶುರು ಆಗಿತ್ತು. ಹುಡುಗ-ಹುಡುಗಿ ಇಬ್ಬರೂ ಹೊಸ ಜೀವನ ನಡೆಸಲು ತಯಾರಿ ಮಾಡಿಕೊಂಡಿದ್ದರು. ಹೀಗಿರುವಾಗಲೇ ಹುಡುಗ ಹೆಣವಾದ ಘಟನೆ ಗುಜರಾತ್‌ನಲ್ಲಿ ನಡೆದಿದೆ. 

ಹತ್ತು ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡು ಇನ್ನೇನು ಮದುವೆ ಆಗೋಕೆ ಆ ಹುಡುಗಿ ಕಾಯುತ್ತಿದ್ದಳು. ನನ್ನ ಹುಡುಗ ಮದುವೆಯಾಗಿ ಕರೆದುಕೊಂಡು ಹೋಗ್ತಾನೆ ಅಂತ ಅವಳು ಹಗಲು-ರಾತ್ರಿ ಎಣಿಸುತ್ತಿದ್ದಳು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ತಾಳಿ ಕಟ್ಟಲು ಬರಬೇಕಾಗಿದ್ದವನು ಹೆಣವಾಗಿ ಬಂದ.

ಎಲ್ಲಿ? ಏನಾಯ್ತು? 
ಗುಜರಾತ್‌ನ ಜಾಮ್‌ನಗರದ ಹಳ್ಳಿಯಲ್ಲಿ ಏಪ್ರಿಲ್‌ 3ರಂದು ಜಾಗ್ವಾರ್ ಫೈಟರ್ ಜೆಟ್ ಅಪಘಾತ ಆಗಿತ್ತು. ಆಗ ಭಾರತೀಯ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಸಾವನ್ನಪ್ಪಿದ್ದರು. ಕಳೆದ ಹತ್ತು ದಿನಗಳ ಹಿಂದೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಾರ್ಚ್ 23 ರಂದು ದೆಹಲಿಯಲ್ಲಿ ಸಿದ್ದಾರ್ಥ್‌ ಅವರು ಎಂಗೇಜ್‌ ಆಗಿದ್ದರು. ಮುಂಬರುವ ನವೆಂಬರ್‌ನಲ್ಲಿ ಮದುವೆ ಮಾಡುವ ಪ್ಲ್ಯಾನ್‌ ನಡೆದಿತ್ತು. ಈ ಮದುವೆಗೆ ಎರಡೂ ಕುಟುಂಬಸ್ಥರು ತಯಾರಿ ನಡೆಸಿದ್ದರು.

Aero India Show ಜ.30 ರಿಂದ ಫೆ.20ರ ವರೆಗೆ ಯಲಹಂಕ ವಾಯುನೆಲೆ ಸುತ್ತ ಮಾಂಸ ಮಾರಾಟ ನಿಷೇಧ!

ಇಬ್ಬರಲ್ಲಿ ಓರ್ವ ಮಾತ್ರ ಬದುಕುಳಿದ!
ಬುಧವಾರ ರಾತ್ರಿ 9.30ದ ಹೊತ್ತಿಗೆ ಜಾಮ್‌ನಗರ ವಾಯುನೆಲೆಯಿಂದ ಫ್ಲೈಟ್‌ ಹಾರಿತು. ಅದಾಗಿ ಸ್ವಲ್ಪ ಹೊತ್ತಿಗೆ ವಿಮಾನ ಅಪಘಾತವಾಯ್ತು. ಯುವ ಪೈಲಟ್ ಸಿದ್ದಾರ್ಥ್ ರಾತ್ರಿ ತರಬೇತಿ ಕಾರ್ಯಾಚರಣೆಯಲ್ಲಿದ್ದರು. ಜಾಮ್‌ನಗರದಿಂದ ಸರಿ ಸುಮಾರು 12 ಕಿ.ಮೀ ದೂರದಲ್ಲಿದ್ದ ಸುವರ್ದಾ ಗ್ರಾಮದ ತೆರೆದ ಮೈದಾನದಲ್ಲಿ ಜೆಟ್ ಪತನ ಆಗಿ ಬೆಂಕಿ ಹೊತ್ತಿಕೊಂಡಿತು. ಸಿದ್ಧಾರ್ಥ್ ಯಾದವ್ ಜೊತೆಗಿದ್ದ ಸಹ ಪೈಲಟ್ ಬದುಕುಳಿದರು. ಈಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಕ್ತದಲ್ಲಿಯೇ ದೇಶಪ್ರೇಮ ಇತ್ತು! 
ಹರಿಯಾಣದವರಾದ ಸಿದ್ಧಾರ್ಥ್ ಯಾದವ್ ಅವರು 2017ರಲ್ಲಿ ಭಾರತೀಯ ವಾಯುಪಡೆ ಸೇರಿದ್ದರು. ಸಿದ್ದಾರ್ಥ್‌ ತಂದೆ ಸುಶೀಲ್ ಕುಮಾರ್ ನಿವೃತ್ತ IAF ಸಿಬ್ಬಂದಿಯಾಗಿದ್ದರೆ, ತಾತ ರಘುಬೀರ್ ಸಿಂಗ್, ಮುತ್ತಜ್ಜ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಸಿದ್ದಾರ್ಥ್‌ ರಕ್ತದಲ್ಲಿಯೇ ದೇಶಪ್ರೇಮ ಹರಿಯುತ್ತಿತ್ತು. ತಾಂತ್ರಿಕ ದೋಷದಿಂದಲೇ ಈ ಅಪಘಾತ ಆಗಿದೆ, ಹೀಗಾಗಿ ಅಪಘಾತ ಆಗಿದೆ ಎನ್ನಲಾಗಿದೆ. ಈ ಬಗ್ಗೆ Indian Air Force ತಿಳಿಸಿದೆ.

ಐಎಎಫ್‌ ಏನು ಹೇಳಿದೆ? 
ಜಾಮ್‌ನಗರ ವಾಯುನೆಲೆಯಲ್ಲಿ ಹಾರಾಟ ಮಾಡುತ್ತಿದ್ದ ಐಎಎಫ್ ಜಾಗ್ವಾರ್‌ನಲ್ಲಿ ಎರಡು ಸೀಟ್‌ ಇತ್ತು. ರಾತ್ರಿ ಕಾರ್ಯಾಚರಣೆ ಮಾಡುವಾಗ ಅಪಘಾತ ಆಗಿತ್ತು. ಸ್ಥಳೀಯ ಜನರಿಗೆ ಹಾನಿಯಾಗದಂತೆ ತಪ್ಪಿಸಲಾಗಿದೆ. ಇನ್ನು ಜೀವಹಾನಿಗೆ ಐಎಎಫ್ ತೀವ್ರವಾಗಿ ವಿಷಾದಿಸುತ್ತದೆ, ಇನ್ನು ಕುಟುಂಬದೊಂದಿಗೆ ದೃಢವಾಗಿ ನಿಲ್ಲುವುದು. ಈ ಅಪಘಾತದ ಕಾರಣವನ್ನು ತಿಳಿಯಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ" ಎಂದು ಐಎಎಫ್‌ ಹೇಳಿದೆ.

ಆಫ್ಘ​ನ್‌​ನ​ಲ್ಲಿ ಚೀನಾ ವಾಯುನೆಲೆ? ಅಧಿಕಾರಿಗಳ ರಹಸ್ಯ ಭೇಟಿ!

ಸಿದ್ದಾರ್ಥ್‌ ತಂದೆ ಹೇಳಿದ್ದೇನು? 
ಸಿದ್ದಾರ್ಥ್‌ ತಂದೆ ಮಾತನಾಡಿದ್ದು, “ಕಮಾಂಡಿಂಗ್ ಏರ್ ಆಫೀಸರ್ ನಿನ್ನೆ ರಾತ್ರಿ 11 ಗಂಟೆಗೆ ಫೋನ್‌ ಮಾಡಿ ವಿಮಾನ ಅಪಘಾತಕ್ಕೀಡಾಗಿದೆ. ಒಬ್ಬ ಪೈಟಲ್‌ ಬದುಕುಳಿದಿದ್ದು, ನಿಮ್ಮ ಮಗ ಇನ್ನಿಲ್ಲ ಎಂದರು. ನನ್ನ ಮಗನ ಬಗ್ಗೆ ಹೆಮ್ಮೆ ಇದೆ. ಬೇರೆ ಜೀವ ಉಳಿಸುವ ಪ್ರಯತ್ನ ಮಾಡಿದ್ದಾನೆ. ಒಬ್ಬನೇ ಮಗ ಆಗಿದ್ದರಿಂದ ದುಃಖವಿದೆ” ಎಂದು ಹೇಳಿದ್ದಾರೆ. 

ಮದುವೆಯಾಗಬೇಕಿದ್ದ ಆ ಹುಡುಗಿ ಕಥೆ ಏನು? 
ಇನ್ನು ಮಗನ ಶವ ಬರುತ್ತಿದ್ದಂತೆ ತಾಯಿ, ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಮದುವೆಯಾಗಬೇಕು ಎಂದು ಆಸೆಪಟ್ಟಿದ್ದ ಹುಡುಗಿಯ ಗೋಳಿನ ಬಗ್ಗೆ ಹೇಳಲಾಗದು. “ಬಂದು ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದೆ” ಎಂದು ಶವದ ಪೆಟ್ಟಿಗೆ ಮೇಲೆ ಆ ಹುಡುಗಿ ಕಣ್ಣೀರು ಹಾಕಿದ್ದಾಳೆ. ಇನ್ನು ಮಾಧ್ಯಮದ ಜೊತೆ ಮಾತನಾಡಿದ್ದು, “ನನಗೆ ಅವನ ಮೇಲೆ ಹೆಮ್ಮೆ ಇದೆ” ಎಂದಿದ್ದಾರೆ.