Mental Health Tips: ಗಡಿಬಿಡಿ ಜೀವನದಿಂದ ಬೇಸತ್ತಿದ್ದರೆ ಇಲ್ಲಿವೆ ಬೆಸ್ಟ್ ಸೊಲ್ಯೂಷನ್

ಗಡಿಬಿಡಿ, ಒತ್ತಡಗಳು ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯ. ಆದರೆ, ಅವು ನಿಜವಾಗಿ ಸೃಷ್ಟಿಯಾಗಿರುವುದು ಏತಕ್ಕೆ ಎಂದು ಗುರುತಿಸಬೇಕು. ಅತಿಯಾದ ಮಾಹಿತಿ, ಹೋಲಿಕೆ ಮಾಡಿಕೊಳ್ಳುವುದು, ತಂತ್ರಜ್ಞಾನದ ವ್ಯಸನ ಮುಂತಾದ ಕಾರಣಗಳಿಂದ ನಾವು ಇಂತಹ ಜೀವನಶೈಲಿಗೆ ತಳ್ಳಲ್ಪಟ್ಟಿದ್ದೇವೆ. ಹೀಗಾಗಿ, ಎಚ್ಚರಿಕೆ ಅಗತ್ಯ.
 

You can lead hustle free life like this way

ಒತ್ತಡವೆನ್ನುವುದು ಜೀವನದ ಅವಿಭಾಜ್ಯ ಅಂಗ. ಕೆಲಸದ ಒತ್ತಡದಿಂದ ಸಹಜವಾಗಿ ಗಡಿಬಿಡಿಯ ಜೀವನಶೈಲಿ ನಮ್ಮದಾಗಿದೆ. ಮೂಲಭೂತ ಅಗತ್ಯವಾದ ಆಹಾರ ಸೇವನೆಗೂ ನಮಗೆ ಸಮಯವಿಲ್ಲ. ಬೆಳಗ್ಗಿನ ತಿಂಡಿಯನ್ನು ಸಮಾಧಾನಚಿತ್ತದಿಂದ ಮಾಡಲು ಸಾಧ್ಯವಾಗದ, ಮಧ್ಯಾಹ್ನದ ಊಟವನ್ನು ಆರಾಮಾಗಿ ಕುಳಿತುಕೊಂಡು ಸೇವಿಸಲಾಗದ ಪರಿಸ್ಥಿತಿಯಲ್ಲಿದ್ದೇವೆ. ಇದು ಜೀವನಕ್ಕೆ ಸಹಜವಾಗಿ ಒಂದು ರೀತಿಯ ಗಡಿಬಿಡಿಯನ್ನು ನೀಡುತ್ತದೆ. ಸಾಮಾನ್ಯವಾಗಿ ಗಡಿಬಿಡಿಯ ಜೀವನಶೈಲಿ ಎಂದಾಕ್ಷಣ ಎಲ್ಲರೂ “ಒಂದು ನಿಮಿಷ ಪುರುಸೊತ್ತಿಲ್ಲದ ಕೆಲಸ, ಮಧ್ಯರಾತ್ರಿಯವರೆಗೂ ಕೆಲಸ ಮಾಡುವ ಜೀವನಶೈಲಿ’ ಎಂದು ಪರಿಗಣಿಸುತ್ತಾರೆ. ಆದರೆ, ನಿಜವಾದ ಗಡಿಬಿಡಿಯೆಂದರೆ ಇದಷ್ಟೇ ಅಲ್ಲ, ಇನ್ನೂ ಆಳವಾದ ಭಾವನೆ. ಅಸಲಿಗೆ ಇದನ್ನು ತಳ್ಳುವಿಕೆ ಎನ್ನಬಹುದು. ಅಂದರೆ, ಇಲ್ಲಿ ಒಂದು ರೀತಿಯ ಜೀವನಶೈಲಿಗೆ ನಾವು ನೂಕಲ್ಪಡುತ್ತೇವೆ. ಇಂಥ ತಳ್ಳುವಿಕೆಯಿಂದ ತಪ್ಪಿಸಿಕೊಳ್ಳದೇ ಹೋದರೆ  ಬದುಕೇ ಹಾಳಾಗಿಹೋಗಬಹುದು. ಇಂದು ನಮಗೆ ಸೋಷಿಯಲ್ ಮೀಡಿಯಾ ಇದೆ. ಬೇಕೋ ಬೇಡವೋ ಸಿಕ್ಕಾಪಟ್ಟೆ ವಿಚಾರಗಳು ತಲೆಯಲ್ಲಿ ಸೇರಿಕೊಳ್ಳುತ್ತವೆ. ಇದರಿಂದ ವಿಚಿತ್ರ ಉತ್ತೇಜನ ದೊರೆತಂತಾಗಿ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಬುದ್ಧಿ, ತಂತ್ರಜ್ಞಾನದ ವ್ಯಸನಕ್ಕೆ ತುತ್ತಾಗುವುದು, ಅತಿಯಾದ ಮಾಹಿತಿ, ವಿವಿಧ ಅಭ್ಯಾಸಗಳು ಎಲ್ಲವೂ ನಮ್ಮನ್ನು ಬೇರೊಂದು ರೀತಿಯ ಮನುಷ್ಯರನ್ನಾಗಿ ರೂಪಿಸುತ್ತವೆ. ಇದೊಂಥರ ತಳ್ಳುವಿಕೆಯೇ ಆಗಿದೆ. ಹೀಗಾಗಿ, ಕೆಲವು ಮಾರ್ಗಗಳ ಮೂಲಕ ನಮ್ಮನ್ನು ನಾವು ಬಚಾವು ಮಾಡಿಕೊಳ್ಳುವುದು ಅಗತ್ಯ.

•    ನಿಮ್ಮ ಪ್ರಕಾರ ಯಶಸ್ಸು (Success) ಅಂದರೇನು?  
ಸಮಾಜ (Society) ಬೋಧನೆ (Teach) ಮಾಡುವ ಯಶಸ್ಸಲ್ಲ, ನಿಮಗೆ ಯಾವುದು ಯಶಸ್ಸು ಎಂದೆನಿಸುತ್ತದೆ ಎಂದು ಗುರುತಿಸಿಕೊಳ್ಳಿ. ಪ್ರಪಂಚದ ಎಲ್ಲ ಯಶಸ್ವಿ ಉದ್ಯಮಿಗಳು (Businessmen) ತಮಗೆ ಯಾವುದು ಬೇಕೋ ಅದನ್ನೇ ಮಾಡಿದ್ದಾರೆ. ಸಮಾಜ ಯಾವುದನ್ನು ಯಶಸ್ಸು ಎಂದು ಹೇಳುತ್ತದೆಯೋ ಅದು ನಿಮ್ಮ ಪಾಲಿನದ್ದಾಗಿರಬೇಕಾಗಿಲ್ಲ. ಅದನ್ನು ಅನುಸರಿಸಿದರೆ ನೀವು ದೊಡ್ಡ ಖೆಡ್ಡಾದಲ್ಲಿ ಬೀಳುತ್ತೀರಿ. 

Mental Health : ಪದೇ ಪದೇ ಮೂಡ್ ಕೆಡ್ತಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ

•    ಸಮಯ ಮೌಲ್ಯಯುತವಾಗಲಿ (Add Value)
ನಿಮ್ಮ ವೈಯಕ್ತಿಕ ಸಮಯವನ್ನು (Time) ಲೆಕ್ಕ ಪರಿಶೋಧನೆ ಮಾಡಿಕೊಳ್ಳಿ. ಅಂದರೆ, ಕೆಲಸಕ್ಕೆ ಮೌಲ್ಯ ಸೇರ್ಪಡೆ ಮಾಡಿಕೊಂಡು ಬ್ಯುಸಿಯಾಗುವುದಕ್ಕೂ, ಬರೀ ಕೆಲಸ ಮಾಡುತ್ತಲೇ ಇರುವುದಕ್ಕೂ ವ್ಯತ್ಯಾಸವಿದೆ. ಸಮಯವನ್ನು ಹೇಗೆ ಸದುಪಯೋಗ (Well Used) ಮಾಡಿಕೊಳ್ಳುತ್ತೀರಿ ಎನ್ನುವುದು ಸ್ಪಷ್ಟವಾಗಿದ್ದರೆ ಯಾವುದೇ ಒತ್ತಡಕ್ಕೆ (Stress) ನೀವು ತಳ್ಳಲ್ಪಡುವುದಿಲ್ಲ. 

•    ಚಿಲ್ಲರೆ ವಿಷಯದಿಂದ ದೂರವಿರಿ
ಪ್ರಗತಿ (Development) ಹೊಂದಲು ನಿರಂತರವಾದ ಬದ್ಧತೆ (Commitment) ಅಗತ್ಯ. ಜೀವನದ ಗಡಿಬಿಡಿಯಲ್ಲಿ (Hustle) ಕಳೆದುಹೋಗದೆ ಇರಲು ಮತ್ತೊಬ್ಬರೊಂದಿಗೆ ಹೋಲಿಕೆ (Compare) ಮಾಡಿಕೊಳ್ಳುವುದನ್ನು ಬಿಟ್ಟುಬಿಡಬೇಕು. ಇದು ಹೆಚ್ಚು ಹೆಚ್ಚು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಅತಿಯಾದ ಒತ್ತಡಕ್ಕೆ ತಳ್ಳಿ ಬದುಕನ್ನು ವಿಷಯುಕ್ತವನ್ನಾಗಿ ಮಾಡಿಬಿಡುತ್ತದೆ. ಹೀಗಾಗಿ, ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು, ಚಿಲ್ಲರೆ ವಿಚಾರಗಳಲ್ಲಿ ಮನಸ್ಸನ್ನು ತೊಡಗಿಸಬಾರದು.

•    ವಿಚಾರಗಳನ್ನು ಬರೆಯಿರಿ (Write down Thoughts)
ಮನಸ್ಸು ಕೆಲವೊಮ್ಮೆ ಹಲವು ಅಂಶಗಳಿಂದ ತುಂಬಿ ಹೋಗುತ್ತದೆ. ಒತ್ತಡ, ಪ್ರಶ್ನೆ, ಆತಂಕ, ವಿಚಾರಗಳು ತಲೆ ತುಂಬ ಆವರಿಸುತ್ತವೆ. ಇಂತಹ ಸಮಯದಲ್ಲಿ ಬರೆಯುವುದು ಉತ್ತಮ ಆಯ್ಕೆ. ಏಕೆಂದರೆ, ಇವು ಮನದಲ್ಲೇ ಲೆಕ್ಕಾಚಾರಕ್ಕೆ ಒಳಗಾಗುತ್ತಿದ್ದರೆ ನೀವು ಬೇರೊಂದು ಲೋಕಕ್ಕೆ ನೂಕಲ್ಪಡುತ್ತೀರಿ. ಬರೆಯುವುದರಿಂದ ಗೊಂದಲಗಳಿಂದ (Chaos) ಮುಕ್ತಿ ದೊರೆಯುತ್ತದೆ.

Health Tips : ಅಡುಗೆ ಮಾಡೋದು ಬರೀ ಕೆಲಸವಲ್ಲ, ಔಷಧಿ..

•    ಸೋಷಿಯಲ್ ಮೀಡಿಯಾಕ್ಕೆ ಮಿತಿ (Limit Social Media)
ಸೋಷಿಯಲ್ ಮೀಡಿಯಾಗಳು ಪ್ರಪಂಚವನ್ನು ಬದಲಿಸಿವೆ. ಊಹೆ ಮಾಡಲು ಸಾಧ್ಯವಿಲ್ಲದಷ್ಟು ಜನರನ್ನು ಒಂದೆಡೆ ಸೇರಿಸಿವೆ. ಬೇರೆಲ್ಲೋ ಇರುವ ನಿಮ್ಮದೇ ಕುಟುಂಬದ ಜನರೊಂದಿಗೆ ಸಂಪರ್ಕ (Connect) ಸಾಧ್ಯವಾಗಿಸಿದೆ. ಆದರೆ, ಇದರ ಕರಾಳ ಮುಖವೆಂದರೆ, ನಿಮ್ಮಲ್ಲಿ ನಿಧಾನವಾಗಿ ಕುಗ್ಗುವಿಕೆ (Feel Low), ಅಭದ್ರತೆ (Insecurity), ಆತಂಕ, ಭಯ (Fear) ಹೆಚ್ಚುತ್ತದೆ. ನೈಜ ಬದುಕಿನಿಂದ (Real Life) ದೂರವಾಗಿ ಇನ್ನೊಬ್ಬರ ಜೀವನದ ಬಗ್ಗೆ ಆಸಕ್ತಿ ವಹಿಸುವಂತೆ ಮಾಡುತ್ತದೆ. ಇದರಿಂದಾಗುವ ಪರಿಣಾಮಗಳು ಒಂದೆರಡಲ್ಲ.

•    ನಿಮ್ಮ ಬಗ್ಗೆ ಸಹಾನುಭೂತಿ (Kind) ಇರಲಿ
ನಮ್ಮ ಬಗ್ಗೆ ನಾವು ಹೆಚ್ಚು ಸಹಾನುಭೂತಿಯ ಭಾವನೆ ಹೊಂದಿರುವುದು ಇಂದಿನ ದಿನಗಳಲ್ಲಿ ಅಗತ್ಯ. ನಮ್ಮ ಬಗ್ಗೆ ಅತಿಯಾದ ಟೀಕೆ, ಕಠೋರ (Harsh) ಭಾವನೆ ತಾಳುವುದರಿಂದ ನಾವು ನಾವಾಗಿ ಜೀವಿಸಲು ಸಾಧ್ಯವಾಗುವುದಿಲ್ಲ. 

Latest Videos
Follow Us:
Download App:
  • android
  • ios