ಬಿಬಿಎಂಪಿ: 5 ವರ್ಷಗೊಳಗಿನ ಮಕ್ಕಳಿಗೆ ಈ ರೋಗ ಲಕ್ಷಣಗಳಿದ್ದರೆ ನ್ಯೂಮೋನಿಯಾ ಲಸಿಕೆ ಹಾಕಿಸಿ!

ಮಕ್ಕಳಲ್ಲಿ ನ್ಯುಮೋನಿಯಾ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಿ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ ಹಾಕಿಸಬೇಕು. 5 ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ಉಚಿತವಾಗಿ ಲಭ್ಯವಿದೆ.

BBMP Pneumonia vaccine for children under 5 years if they have these symptoms sat

ಬೆಂಗಳೂರು (ನ.15): ನಿಮ್ಮ ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ, ಉಸಿರಾಟ ತೊಂದರೆ ಸೇರಿದಂತೆ ಈ ಕೆಳಗಿನ ಲಕ್ಷಣಗಳಿದ್ದಲ್ಲಿ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಿ ಈ ನ್ಯೂಮೋನಿಯಾ ಲಸಿಕೆ ಹಾಕಿಸಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ನ್ಯುಮೋನಿಯಾ ಹರಡದಂತೆ ಪಾಲಿಕೆ ಆರೋಗ್ಯ ಇಲಾಖೆಯ ವತಿಯಿಂದ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ(PCV)ಯನ್ನು 5 ವರ್ಷದೊಳಗಿನ ಮಕ್ಕಳಿಗೆ  ಉಚಿತವಾಗಿ ನೀಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ(PCV)ಯನ್ನು 5 ವರ್ಷ ದೊಳಗಿನ ಮಕ್ಕಳಿಗೆ ಹಾಕಿಸಲು ಪಾಲಿಕೆ ವ್ಯಾಪ್ತಿಯ ಎಲ್ಲ ನಾಗರೀಕರಲ್ಲಿ ಅರಿವು ಮೂಡಿಸಬೇಕು ಎಂದು ಪಾಲಿಕೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನ್ಯುಮೋನಿಯಾ ಎಂದರೇನು? 
ಇದು ಶ್ವಾಸಕೋಶದ ಸೋಂಕು, ಶ್ವಾಸಕೋಶದಲ್ಲಿನ ಗಾಳಿಯ ಚೀಲಗಳಿಗೆ ಹರಡಿ ಸೋಂಕಿನ ದ್ರವದಿಂದ ಶ್ವಾಸಕೋಶವನ್ನು ಬಲಹೀನಗೊಳಿಸುತ್ತದೆ. ನ್ಯುಮೋನಿಯಾ ಸೋಂಕು ಎರಡು ಶ್ವಾಸಕೋಶಗಳಿಗೂ ಹರಡಬಹುದು. ಸರಿಯಾದ ಸಮಯಕ್ಕೆ ಸರಿಯಾದ ಆರೈಕೆಯಿಂದ ಸೋಂಕು ತಗುಲಿದ ಮಗುವನ್ನು ರಕ್ಷಿಸಬಹುದು.

ಇದನ್ನೂ ಓದಿ: ಬೆಂಗಳೂರು ವೈದ್ಯೆಗೆ ನಗ್ನ ಫೋಟೋ ಕೇಳಿದ ಬಸವನಗುಡಿ PSI ಕೇಸಲ್ಲಿ ಬಿಗ್ ಟ್ವಿಸ್ಟ್!

ನ್ಯುಮೋನಿಯಾ ರೋಗದ ಲಕ್ಷಣಗಳು
1. ಕೆಮ್ಮು ಮತ್ತು ನೆಗಡಿ.
2. ತೀವ್ರ ಜ್ವರ.
3. ಉಸಿರಾಟದ ತೊಂದರೆ, ಉಸಿರಾಟದ ಸಮಯದಲ್ಲಿ ಪಕ್ಕೆ ಅಥವಾ ಎದೆಯ ಸೆಳೆತ.
4. ತೀವ್ರ ಉಸಿರಾಟ.
5. ಹಸಿವು ಇಲ್ಲದಿರುವುದು, ಆಹಾರ ಸೇವನೆ ಕಷ್ಟಕರವಾಗುವುದು.
6. ಸುಸ್ತು.
7. ಫಿಟ್ಸ್ ಬರುವುದು.
8. ಕೆಮ್ಮು ಮತ್ತು ಹಳದಿ / ರಕ್ತದ ಕಫ ಬರುವುದು.
ಈ ಲಕ್ಷಣ ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಮಗಳಿಗೆ ಭುವನೇಶ್ವರಿ ಎಂದು ನಾಮಕರಣ ಮಾಡಿ, 2000 ಜನರಿಗೆ ಊಟ ಹಾಕಿದ ಕನ್ನಡದ ದಂಪತಿ

ತಡೆಗಟ್ಟುವ ಸರಳ ಪರಿಹಾರಗಳು: 
1. ಮಗುವಿಗೆ ಮೊದಲ 6 ತಿಂಗಳು ಸಂಪೂರ್ಣವಾಗಿ ಎದೆಹಾಲು ನೀಡುವುದು.
2. ವಿಶೇಷವಾಗಿ 6 ತಿಂಗಳಿನಿಂದ 2 ವರ್ಷದೊಳಗಿನ ಮಕ್ಕಳಿಗೆ ಉತ್ತಮ ಪೋಷಣೆ ನೀಡುವುದು.
3. ಸುರಕ್ಷಿತ ಕುಡಿಯುವ ನೀರು ಮತ್ತು ಉತ್ತಮ ನೈರ್ಮಲ್ಯ.
4. ಸಾಬೂನು ಬಳಸಿ ಕೈಗಳನ್ನು ಶುಚಿಗೊಳಿಸುವುದು.
5. ಮಗುವಿಗೆ ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸುವುದು.
6. ಮನೆಯೊಳಗೆ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ.
5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ ಹಾಕಿಸಿ.

Latest Videos
Follow Us:
Download App:
  • android
  • ios