ಬಿಗ್ ಬಾಸ್ ಮನೆಯಲ್ಲಿ ಎರಡು ಮಹತ್ವದ ಬೆಳವಣಿಗೆಯಾಗಿದೆ. ಅನುಷಾ ಹೊರಗೆ ಬಂದ್ರೆ ಇಬ್ಬರು ಒಳಗೆ ಹೋಗಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಖುಷಿಯಾಗಿರುವ ಅನುಷಾ, ವಿಡಿಯೋ ಪೋಸ್ಟ್ ಮಾಡಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11)ರ 50ನೇ ದಿನಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಗ್ ಬಾಸ್ ಮನೆಯಿಂದ ಅನುಷಾ ರೈ (Anusha Rai) ಹೊರಬಿದ್ದಿದ್ದಾರೆ. ಇಬ್ಬರು ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ (Wild Card Entry) ಪಡೆದಿದ್ದಾರೆ. ಏಳು ವಾರಗಳ ಕಾಲ ಉತ್ತಮ ಸ್ಪರ್ಧೆ ನೀಡಿದ್ದ ಅನುಷ್ಕಾ, ಮನೆಯಿಂದ ಹೊರಗೆ ಬರ್ತಿದ್ದಂತೆ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಾಕಿರುವ ನಟಿ, ಅಭಿಮಾನಿಗಳಿಗೆ, ಬೆಂಬಲಿಗರಿಗೆ ಧನ್ಯವಾದ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಿಂದ ಅಳ್ತಾ, ದುಃಖದಲ್ಲಿ ಬಂದ ಅನುಷ್ಕಾ ರೈ, ಅಭಿಮಾನಿಗಳ ಅಭಿಮಾನಕ್ಕೆ ಕರಗಿದ್ದಾರೆ. ನೋವಿನಲ್ಲಿದ್ದ ನಾನು ನಿಮ್ಮ ಬೆಂಬಲ ನೋಡಿ ಖುಷಿಯಾಗಿದ್ದೇನೆ. ಬಿಗ್ ಬಾಸ್ ಮನೆಯ ಹೊರಗೆ ನನಗೆ ಇಷ್ಟೆಲ್ಲ ಪ್ರೀತಿ ಸಿಕ್ಕಿದೆ ಎಂಬುದು ನನಗೆ ಗೊತ್ತಿರಲಿಲ್ಲ. ನಾನು ಅಳ್ತಾ ಮನೆಯಿಂದ ಹೊರಗೆ ಬಂದೆ. ಆದ್ರೆ ಇಲ್ಲಿ ನಿಮ್ಮ ಕಮೆಂಟ್ಸ್, ಬೆಂಬಲ ನೋಡಿ ನಾನು ದುಃಖವನ್ನು ಮರೆತಿದ್ದೇನೆ. ದಯವಿಟ್ಟೂ ನಾನು ಮನೆಯಿಂದ ಹೊರಗೆ ಬಂದೆ ಎನ್ನುವ ಕಾರಣಕ್ಕೆ ಯಾರೂ ಬೇಸರಪಟ್ಟುಕೊಳ್ಳಬೇಡಿ. ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ವಿಡಿಯೋ ಹಾಕಿಋವ ಅನುಷಾ, ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ ಎಂದು ಶೀರ್ಷಿಕೆ ಹಾಕಿದ್ದಾರೆ.

ಕೆಬಿಸಿ ಷೋನಲ್ಲಿ ಅಮಿತಾಭ್​ ಟೇಕ್ವಾಂಡೋ ಕಿಕ್! 82ರ ನಟನ ಎನರ್ಜಿಗೆ ಪ್ರೇಕ್ಷಕರು ಬೆರಗು- ವಿಡಿಯೋ ವೈರಲ್

ಅನುಷ್ಕಾ ರೈ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ಸ್ ಬಂದಿದೆ. ಗೌತಮಿ, ಮೋಕ್ಷಿತಾ ಹಾಗೂ ಚೈತ್ರಾಗಿಂತ ಅನುಷ್ಕಾ ತುಂಬಾ ಉತ್ತಮವಾಗಿ ಆಟವಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಮುಖವಾಡಕ್ಕೆ ಹೆಚ್ಚು ಬೆಲೆ ಎಂಬುದು ಮತ್ತೊಮ್ಮೆ ಅರ್ಥವಾಯ್ತು ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ನೀವಿಲ್ಲದ ಬಿಗ್ ಬಾಸ್ ನಾವು ನೋಡೋದಿಲ್ಲ ಎಂದು ಇನ್ನೊಬ್ಬರು ತಮ್ಮ ನೋವು ತೋಡಿಕೊಂಡಿದ್ದಾರೆ. ನೀವು ಅಪರಂಜಿ. ಬಿಗ್ ಬಾಸ್ ನಲ್ಲಿ ಗೆಲುವು ಸಿಕ್ಕಿಲ್ಲ ಅಂದ್ರೂ ಹೊರಗೆ ನಿಮಗೆ ಬೆಂಬಲ ಸಿಕ್ಕಿದೆ, ಖುಷಿಯಾಗಿರಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಧರ್ಮ ಅವರ ಜೊತೆ ನೀವು ಮದುವೆ ಆಗಿ, ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಎಂದು ಕೆಲವರು ಅನುಷಾ ರೈಗೆ ಸಲಹೆ ನೀಡಿದ್ದಾರೆ. ನೀವು ಹೊರಬಿದ್ದಿದ್ದಕ್ಕೆ ನಾವು ಅತ್ತಿದ್ದೇವೆ, ನಮ್ಮ ಸಪೋರ್ಟ್ ಸದಾ ನಿಮಗಿರುತ್ತದೆ ಎಂದು ಬಹುತೇಕ ಅಭಿಮಾನಿಗಳು ಬರೆದಿದ್ದಾರೆ. 

ಬಿಗ್ ಬಾಸ್ ನಲ್ಲಿ ಈ ಬಾರಿ ಜೋಡಿ ಎಲಿಮಿನೇಷನ್ ಆಗುತ್ತೆ ಅಂದ್ಕೊಳ್ಳಲಾಗಿತ್ತು. ಕಿಚ್ಚ ಸುದೀಪ್ ಈ ಬಗ್ಗೆ ಎಚ್ಚರಿಕೆ ಕೂಡ ನೀಡಿದ್ದರು. ಆದ್ರೆ ಧರ್ಮ ಹಾಗೂ ಅನುಷಾ ಇವರಲ್ಲಿ ಕಡಿಮೆ ವೋಟು ಪಡೆದ ಅನುಷಾ, ಬಿಗ್ ಬಾಸ್ ಮನೆಯಿಂದ ಹೊರಬರಬೇಕಾಯ್ತು. ಧರ್ಮ, ಚೈತ್ರಾ, ಭವ್ಯ ಗೌಡ ಮನೆಯಿಂದ ಹೊರಬಿದ್ದ ಅನುಷಾ ಅವರನ್ನು ಮಿಸ್ ಮಾಡ್ಕೊಳ್ತಿದ್ದಾರೆ.

ವೇದಿಕೆ ಮೇಲೆ ಬಂದ ಅನುಷಾ, ತಾವೆಲ್ಲಿ ಎಡವಿದೆ ಎಂಬುದನ್ನು ಹೇಳಿದ್ದಾರೆ. ಆಗಾಗ ಗಲಾಟೆಯಲ್ಲಿ ಅನುಷಾ ಧ್ವನಿ ಸ್ವಲ್ಪ ಕೇಳಿಸಿದ್ದು ಬಿಟ್ಟರೆ ಟಾಸ್ಕ್, ಮನರಂಜನೆ ವಿಷ್ಯದಲ್ಲಿ ಅನುಷಾ ಸ್ವಲ್ಪ ಹಿಂದಿದ್ದರು. ನೇರವಾಗಿ ಮಾತನಾಡ್ತಿದ್ದ ಅವರನ್ನು ಮನೆಯವರು ಒಪ್ಪಿಕೊಂಡಿರಲಿಲ್ಲ. ಅದನ್ನು ಅನುಷಾ ಕೂಡ ಹೇಳಿದ್ದಾರೆ. ಅವರ ಸಹೋದರ ಕೂಡ, ಅಕ್ಕನ ಎಫರ್ಟ್ ಇನ್ನಷ್ಟು ಬೇಕಿತ್ತು ಎಂದಿದ್ದಾರೆ. 

ಗಂಡನ ಜೊತೆ ವರ್ಷದಲ್ಲಿ 10 ದಿನ ಇರೋದೇ ಕಷ್ಟವಾಗಿದೆ: ಸಂಸಾರದ ಸುಖ-ದುಃಖ ಬಿಚ್ಚಿಟ್ಟ ನಟಿ

ಬಿಗ್ ಬಾಸ್ ಮನೆಯಿಂದ ಅನುಷಾ ಹೊರಗೆ ಬರ್ತಿದ್ದಂತೆ ಇಬ್ಬರು ಸ್ಪರ್ಧಿಗಳು ಒಳಗೆ ಹೋಗಿದ್ದಾರೆ. ಪ್ರಬಲ ಸ್ಪರ್ಧಿಗಳಿಗೆ ಟಕ್ಕರ್ ನೀಡಲು ಡಬಲ್ ಎಂಟ್ರಿಯಾಗಿದೆ. ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿ ಪಡೆದಿರುವ ರಜತ್ ಶೆಟ್ಟಿ (Rajat Shetty) ಹಾಗೂ ತೆಲುಗು ಬಿಗ್ ಬಾಸ್ (Telugu Bigg Boss)ನಲ್ಲಿ ಅಬ್ಬರಿಸಿದ್ದ ಕನ್ನಡ ಕಿರುತೆರೆ ನಟಿ ಶೋಭಾ ಶೆಟ್ಟಿ (TV Actress Shobha Shetty) ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ಬಿಗ್ ಬಾಸ್ ಮತ್ತಷ್ಟು ರೋಚಕತೆ ಪಡೆಯಲಿದೆ. 

View post on Instagram