ಬರೋಬ್ಬರಿ 2,600 ಲೀಟರ್ ಎದೆಹಾಲು ದಾನದಿಂದ ಗಿನ್ನೆಸ್ ದಾಖಲೆ ಮಾಡಿದ ಮಹಿಳೆ
ಇಲ್ಲೊಬ್ಬ ಮಹಾತಾಯಿ 2,600 ಲೀಟರ್‌ಗೂ ಹೆಚ್ಚು ಎದೆಹಾಲು ದಾನ ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 3,50,000 ಕ್ಕೂ ಹೆಚ್ಚು ಅವಧಿಪೂರ್ವ/ಅನಾರೋಗ್ಯದಿಂದ ಬಳಲುತ್ತಿರುವ ಶಿಶುಗಳಿಗೆ ಇದು ಸಹಾಯ ಮಾಡಿದೆ.
ತಾಯಿಯ ಎದೆಹಾಲಿನ ಮಹತ್ವ ಎಲ್ಲರಿಗೂ ತಿಳಿಸಿದೆ. ಎದೆಹಾಲಿನಿಂದ ಮಕ್ಕಳಿಗೆ ಬರುವ ರೋಗ ನಿರೋಧಕ ಶಕ್ತಿಯನ್ನು ಬೇರೆ ಯಾವುದೇ ಅಮೃತ ನೀಡಿದರೂ ಬರುವುದಿಲ್ಲ. ಹೀಗಾಗಿ, ತಾಯಿಯ ಎದೆಹಾಲನ್ನು ಅಮೃತಕ್ಕಿಂತಲೂ ಮಿಗಿಲು ಎಂದು ಹೇಳಲಾಗುತ್ತದೆ. ಆದರೆ, ಇಲ್ಲೊಬ್ಬ ಮಹಾತಾಯಿ ಬರೋಬ್ಬರಿ 2,645 ಲೀ. ಎದೆಹಾಲನ್ನು ದಾನ ಮಾಡುವ ಮೂಲಕ 3.50 ಲಕ್ಷ ಅಪೌಷ್ಠಿಕ ಮಕ್ಕಳ ಆರೋಗ್ಯಕ್ಕೆ ಕಾರಣವಾಗಿದ್ದಾಳೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ಹೆಚ್ಚು ಎದೆಹಾಲು ದಾನ ಮಾಡಿದ ಮಹಿಳೆ ಎಂಬ ಗಿನ್ನೆಸ್ ದಾಖಲೆಗೂ ಪಾತ್ರವಾಗಿದ್ದಾರೆ.
ಈ ಮಹಿಳೆ ಅಮೇರಿಕಾದ ಟೆಕ್ಸಾಸ್‌ನ 36 ವರ್ಷದ ಅಲಿಸಾ ಓಗ್ಲೆಟ್ರೀ 2,645.58 ಲೀಟರ್ ಎದೆಹಾಲು ದಾನ ಮಾಡುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 2014ರಲ್ಲಿ 1,569.79 ಲೀಟರ್ ದಾನ ಮಾಡಿದ್ದರು. ಪುನಃ ಈವರೆಗೆ 2,645 ಲೀ. ಎದೆಹಾಲು ದಾನದ ಮಾಡುವ ಮೂಲಕ ಅವರ ಹಿಂದಿನ ದಾಖಲೆಯನ್ನು ಅವರೇ ಮುರಿದಿದ್ದಾರೆ. ಅವರ ಈ ಉದಾರ ದಾನವು 3,50,000ಕ್ಕೂ ಹೆಚ್ಚು ಅವಧಿಪೂರ್ವವಾಗಿ ಜನಿಸಿದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಶಿಶುಗಳಿಗೆ ಅಗತ್ಯ ಪೋಷಣೆ ಒದಗಿಸಲು ಸಹಾಯ ಮಾಡಿದೆ.
ಇದನ್ನೂ ಓದಿ: 150 ವರ್ಷ ಹಳೆಯ ಹಿಂದೂ ಕ್ಯಾಲೆಂಡರ್ ಜರ್ಮನಿಯಲ್ಲಿ ಪತ್ತೆ
ದಿ ಗಾರ್ಡಿಯನ್ ಪ್ರಕಾರ, ಅಲಿಸಾ ಅವರ ಪ್ರಯತ್ನಗಳನ್ನು ನಾರ್ತ್ ಟೆಕ್ಸಾಸ್‌ನ ತಾಯಿಯ ಹಾಲಿನ ಬ್ಯಾಂಕ್ ಮೂಲಕ ಸಂಘಟಿಸಲಾಗಿದೆ. ಇದು ಒಂದು ಲೀಟರ್ ತಾಯಿ ಹಾಲು 11 ಅವಧಿ ಪೂರ್ವ ಶಿಶುಗಳಿಗೆ ಆಧಾರವಾಗಬಹುದು ಎಂದು ತಿಳಿಸಿದೆ. 'ನನಗೆ ದೊಡ್ಡ ಹೃದಯವಿದೆ, [ಆದರೆ] ದಿನದ ಕೊನೆಯಲ್ಲಿ, ನಾನು ಹಣವನ್ನು ಸಂಪಾದನೆ ಮಾಡಲಾಗುತ್ತಿಲ್ಲ ಮತ್ತು ಒಳ್ಳೆಯ ಕಾರಣಗಳಿಗಾಗಿ ಹಣವನ್ನು ಪದೇ ಪದೇ ನೀಡಲು ಸಾಧ್ಯವಿಲ್ಲ. ಕಾರಣ ನಾನು ಕುಟುಂಬವನ್ನು ಪೋಷಿಸಬೇಕಾಗಿದೆ. ಆದರೆ, ನಾನು ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಹಂಬಲಕ್ಕೆ ಎದೆ ಹಾಲು ದಾನ ಮಾಡುವುದು ನಾನು ಸಮಾಜಕ್ಕೆ ವಾಪಸ್ ಕೊಡಲು ಇರುವ ಒಂದು ಮಾರ್ಗವಾಗಿತ್ತು, ಎಂದು ಅವರು ಹೇಳಿಕೊಂಡಿದ್ದಾರೆ. ಜೊತೆಗೆ, ಮುಂದಿನ ದಿನಗಳಲ್ಲಿಯೂ ತಾನು ತಮ್ಮ ಎದೆಹಾಲನ್ನು ದಾನವನ್ನು ಮುಂದುವರಿಸುವ ಬಗ್ಗೆಯೂ ಹೇಳಿಕೊಂಡಿದ್ದಾರೆ.
2010ರಲ್ಲಿ ನನಗೆ ಒಬ್ಬ ಮಗ ಜನಿಸಿದ್ದಾರೆ. ಈಗ ಮಗ ಕೈಲ್‌ಗೆ 14ವರ್ಷ. ಅಂದು ವೈದ್ಯರು ಓಗ್ಲೆಟ್ರೀ ಅವರಿಗೆ ದೇವರು ನಿಮಗೆ ಅಸಾಧಾರಣ ಉಡುಗೊರೆ ನೀಡಿದ್ದಾನೆ. ನಿಮ್ಮಲ್ಲಿ ಎದೆ ಹಾಲಿನ ಅತಿಯಾದ ಸಮೃದ್ಧಿಯಿದೆ ಎಂದು ಹೇಳಿದ್ದಾರೆ. ಇನ್ನು ಓಗ್ಲೆಟ್ರೀ ಅವರು ಮಗನಿಗೆ ಹಾಲುಣಿಸುತ್ತಿದ್ದಾಗ, ಒಬ್ಬ ನರ್ಸ್ ಹೆಚ್ಚುವರಿಯನ್ನು ಗುರುತಿಸಿ ತಮ್ಮ ಮಕ್ಕಳಿಗೆ ಆಹಾರ ನೀಡಲು ಹೆಣಗಾಡುತ್ತಿರುವ ತಾಯಂದಿರಿಗೆ ಅದನ್ನು ದಾನ ಮಾಡಲು ಸಲಹೆ ನೀಡಿದರು. ಈ ಅವಕಾಶದ ಸಂಭಾಷಣೆಯು ಅಲಿಸಾ ಅವರ ತಾಯಿ ಹಾಲು ದಾನದ ಉತ್ಸಾಹವನ್ನು ಹುಟ್ಟುಹಾಕಿತು. ಇದು ಮುಂದಿನ ದಿನಗಳಲ್ಲಿ ಎದೆ ಹಾಲಿನ ದಾನಕ್ಕೆ ಪ್ರೇರಣೆಯನ್ನು ನೀಡಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಚೀಪ್ ಅಂಡ್ ಬೆಸ್ಟ್ ಟೂರ್ ಪ್ಯಾಕೇಜಸ್; ರೂ. 1,650 ರಿಂದ ಆರಂಭ!
ಇದೀಗ ಅಲಿಸಾ ಓಗ್ಲೆಟ್ರೀ ಅವರಿಗೆ ನಾಲ್ಕು ಮಕ್ಕಳಿದ್ದರೂ, ಎದೆಹಾಲಿನ ದಾನದಕ್ಕೆ ಈಗಲೂ ಬದ್ಧರಾಗಿದ್ದಾರೆ. ಅವರು ಪ್ರತಿ 3 ಗಂಟೆಗಳಿಗೊಮ್ಮೆ ತಾಯಿ ಹಾಲು ಪಂಪ್ ಮಾಡುತ್ತಾರೆ. ರಾತ್ರಿಯೂ ಸೇರಿದಂತೆ, ಪ್ರತಿ ಬಾರಿ 15-30 ನಿಮಿಷಗಳನ್ನು ಎದೆ ಹಾಲನ್ನು ತೆಗೆಯುತ್ತಾರೆ. ಪಂಪ್ ಮಾಡಿದ ನಂತರ, ಅವರು ಹಾಲನ್ನು ಫ್ರೀಜ್ ಮಾಡಿ ಸ್ಥಳೀಯ ಹಾಲಿನ ಬ್ಯಾಂಕ್‌ಗೆ ತಲುಪಿಸುತ್ತಾರೆ. ಅಲಿಸಾ ಇತರ ತಾಯಂದಿರನ್ನು ದಾನ ಮಾಡಲು ಪ್ರೋತ್ಸಾಹಿಸುತ್ತಾರೆ. ಇದರಿಂದ ದುರ್ಬಲ ಶಿಶುಗಳ ಆರೋಗ್ಯ ಮತ್ತು ಅಂತ ಮಕ್ಕಳನ್ನು ಬದುಕುಳಿಸಲು ನೆರವಾಗಲಿದೆ ಎಂಬುದನ್ನು ಒತ್ತಿ ಹೇಳುತ್ತಾರೆ.