ಮತ್ತೆ ಮತ್ತೆ ಮತ್ತೇರಿಸಲು ಬರ್ತಿರೋ ನ್ಯಾಷನಲ್ ಕ್ರಶ್: ರಶ್ಮಿಕಾ ಮಂದಣ್ಣ ಅಕೌಂಟ್​​ನಲ್ಲಿ ಅರ್ಧ ಡಜನ್ ಸಿನಿಮಾ!

ನ್ಯಾಷನಲ್ ಕ್ರಶ್ ರಶ್ಮಿಕಾ ನಟನೆಯ ಕೊನೆಯ ಸಿನಿಮಾ ಅನಿಮಲ್ ತೆರೆಗೆ ಬಂದು ಒಂದು ವರ್ಷವೇ ಕಳೀತು. ಕಿರಿಕ್ ಬ್ಯೂಟಿಯ ಫ್ಯಾನ್ಸ್ ಕಾದು ಕಾದು ಸುಸ್ತಾಗಿದ್ದಾರೆ. ಹೀಗೆ ಸುಸ್ತಾದ ಫ್ಯಾನ್ಸ್​ಗೆ ಮಸ್ತ್ ಆದ ಚಿತ್ರಗಳು, ಪಾತ್ರಗಳ ಮೂಲಕ ಮತ್ತೇರಿಸೋಕೆ ಮತ್ತೆ ಬರ್ತಿದ್ದಾರೆ ರಶ್ಮಿಕಾ.

First Published Nov 17, 2024, 5:20 PM IST | Last Updated Nov 17, 2024, 5:20 PM IST

ನ್ಯಾಷನಲ್ ಕ್ರಶ್ ರಶ್ಮಿಕಾ ನಟನೆಯ ಕೊನೆಯ ಸಿನಿಮಾ ಅನಿಮಲ್ ತೆರೆಗೆ ಬಂದು ಒಂದು ವರ್ಷವೇ ಕಳೀತು. ಕಿರಿಕ್ ಬ್ಯೂಟಿಯ ಫ್ಯಾನ್ಸ್ ಕಾದು ಕಾದು ಸುಸ್ತಾಗಿದ್ದಾರೆ. ಹೀಗೆ ಸುಸ್ತಾದ ಫ್ಯಾನ್ಸ್​ಗೆ ಮಸ್ತ್ ಆದ ಚಿತ್ರಗಳು, ಪಾತ್ರಗಳ ಮೂಲಕ ಮತ್ತೇರಿಸೋಕೆ ಮತ್ತೆ ಬರ್ತಿದ್ದಾರೆ ರಶ್ಮಿಕಾ. ನ್ಯಾಷನಲ್ ಕ್ರಶ್ ರಶ್ಮಿಕಾ ನಟನೆಯ ಸಿನಿಮಾವೊಂದು ತೆರೆಗೆ ಬಂದು ಭರ್ತಿ ಒಂದು ವರ್ಷವೇ ಕಳೆದೋಯ್ತು. ಕಳೆದ ವರ್ಷ ಡಿಸೆಂಬರ್​ನಲ್ಲಿ ರಶ್ಮಿಕಾ ನಟಿಸಿದ್ದ ಅನಿಮಲ್ ಸಿನಿಮಾ ತೆರೆಗೆ ಬಂದಿತ್ತು. ಅನಿಮಲ್ ಅಮೋಘ ಸಕ್ಸಸ್​​ನಲ್ಲಿ ರಣ್​ಬೀರ್ ಪಾಲು ಎಷ್ಟಿತ್ತೋ ರಶ್ಮಿಕಾ ಮತ್ತೇರಿಸೋ ಗ್ಲಾಮರ್ ಗಮ್ಮತ್ತಿನ ಪಾಲೂ ಅಷ್ಟೇ ಇತ್ತು ಅನ್ನಿ. ಅನಿಮಲ್​ನಲ್ಲಿ ಬೋಲ್ಡ್ ಆಗಿ ನಟಿಸಿ ಪಡ್ಡೆ ಹುಡುಗರ ಹೃದಯಕ್ಕೆ ಘಾಸಿ ಮಾಡಿದ್ದ ರಶ್ಮಿಕಾ, ಅಲ್ಲಿಂದ ಮುಂದೆ ನಾಪತ್ತೆ. 

ವರ್ಷವಾದ್ರೂ ರಶ್ಮಿಕಾ ನಟಿಸಿದ ಒಂದು ಸಿನಿಮಾ ಬಂದಿಲ್ಲವಲ್ಲ ಅಂತ ಫ್ಯಾನ್ಸ್ ತಲೆಕೆಡಿಸಕೊಂಡಿರೋ ಹೊತ್ತಲ್ಲೇ ಕಿರಿಕ್ ಬ್ಯೂಟಿ ಶ್ರೀವಲ್ಲಿಯಾಗಿ ಮೋಡಿ ಮಾಡೋಕೆ ಬರ್ತಾ ಇದ್ದಾಳೆ. ಹೌದು ಇದೇ ಡಿಸೆಂಬರ್ 5ಕ್ಕೆ ಪುಷ್ಪ-2 ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬರ್ತಾ ಇದೆ,. ಈ ಸಿನಿಮಾ ಬಗ್ಗೆ ಅದ್ಯಾಪರಿಯ ನಿರೀಕ್ಷೆ ಇದೆ ಅನ್ನೋದನ್ನ ಹೇಳೊದೇ ಬೇಡ. ಮೊದಲ ಭಾಗದಲ್ಲಿ  ಸಾಮಿ ಅಂತ ಕರೀತಾ ಪುಷ್ಪನ ಜೊತೆ ಸರಸವಾಡಿದ್ದ ಪುಷ್ಪವಲ್ಲಿ, ಪಾರ್ಟ್​​-2 ಡಬಲ್ ಕಿಕ್ ಕೊಡೋಕೆ ಸಜ್ಜಾಗಿದ್ದಾಳೆ. ಇನ್ನೂ ಡಿಸೆಂಬರ್​ 5ಕ್ಕೆ ಪುಷ್ಪ-2 ತೆರೆಗೆ ಬಂದ್ರೆ ಅದರ ಮರದಿನವೇ ರಶ್ಮಿಕಾ ನಟಿಸಿರೋ ಬಾಲಿವುಡ್ ಮೂವಿ ಛಾವಾ ತೆರೆಗೆ ಬರಲಿದೆ. ಎಪಿಕ್ ಹಿಸ್ಟಾರಿಕಲ್ ಸಿನಿಮಾ ಆಗಿರೋ ಈ ಚಿತ್ರದಲ್ಲಿ ವಿಕಿ ಕೌಶಾಲ್ ಸಂಭಾಜಿ ಮಹಾರಾಜನಾಗಿ ನಟಿಸಿದ್ರೆ , ರಶ್ಮಿಕಾ ರಾಣಿ ಯೇಸುಬಾಯಿ ಆಗಿ ಮಿಂಚಿದ್ದಾರೆ. 

ಅಲ್ಲಿಗೆ ಭರ್ತಿ ಒಂದು ವರ್ಷ ಕಾದ ಫ್ಯಾನ್ಸ್​​ಗೆ ಡಿಸೆಂಬರ್ ಮೊದಲ ವಾರದಲ್ಲಿ ಎರಡೆರಡು ಸಿನಿಮಾಗಳ ಮೂಲಕ ಡಬಲ್ ಗಿಫ್ಟ್ ಕೊಡ್ತಾ ಇದ್ದಾರೆ ರಶ್ಮಿಕಾ. ಇನ್ನೂ ರಶ್ಮಿಕಾ ಅಕೌಂಟ್​​ನಲ್ಲಿ ಅರ್ಧ ಡಜನ್​ಗೂ ಹೆಚ್ಚು ಸಿನಿಮಾಳಿದ್ದು ಬರಲಿರುವ ವರ್ಷ ರಶ್ಮಿಕಾ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಗೆ ಬರಲಿದೆ. ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಜೊತೆಗಿನ ಸಿಕಂದರ್, ಧನುಷ್ ಜೊತೆ ನಟಿಸಿರೋ ಕುಬೇರನ್, ಆಯುಷ್ಮಾನ್ ಖುರಾನ ಜೊತೆ ನಟಿಸ್ತಾ ಇರೋ ತಮಾ, ದಿ ಗರ್ಲ್​ಫ್ರೆಂಡ್, ರೈನ್ ಬೋ, ದಿ ಕೇರಳ ಫ್ರೆಂಡ್ ಸೇರಿದಂತೆ ಕಿರಿಕ್ ಬ್ಯೂಟಿ ಅಕೌಂಟ್​​ನಲ್ಲಿ ಸಾಲು ಸಿನಿಮಾ ಇವೆ. ಸೋ ಇಷ್ಟು ದಿನ ರಶ್ಮಿಕಾನ ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್​ಗೆ ಮುಂದಿನ ವರ್ಷ ಫುಲ್ ಹಬ್ಬದೂಟ..!