Mental Health : ಪದೇ ಪದೇ ಮೂಡ್ ಕೆಡ್ತಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ

ಯಾವ ಕೆಲಸಕ್ಕೂ ಮೂಡ್ ಇಲ್ಲ, ಯಾಕೋ ಬೋರ್, ಯಾರ ಜೊತೆ ಬೆರೆಯುವ ಆಸಕ್ತಿಯಿಲ್ಲ.. ಹೀಗೆ ನಿಮಗೆ ಎಲ್ಲೋ ಅಪರೂಪಕ್ಕೆ ಅನ್ನಿಸಿದ್ರೆ ನೋ ಪ್ರಾಬ್ಲಂ. ಆದ್ರೆ ದಿನವಿಡಿ ಹೀಗೆ ಮೂಡ್ ಇರುತ್ತೆ ಎಂದಾದ್ರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. ನಿಮಗೂ ಈ ಖಾಯಿಲೆ ಕಾಡ್ತಿರಬಹುದು.
 

Dysthymia Persistent Depressive Disorder Causes Symptoms And Treatment

ಬದುಕಿನಲ್ಲಿ ಸುಖ ದುಃಖ ಇರಲೇಬೇಕು. ಸುಖವಾಗಲೀ ದುಃಖವಾಗಲೀ ತುಂಬಾ ದಿನ ಇರಲು ಸಾಧ್ಯವಿಲ್ಲ. ಹಾಗಾಗಿಯೇ ಈ ಎಲ್ಲವನ್ನೂ ಸಮನಾಗಿ ತೆಗೆದುಕೊಳ್ಳಬೇಕೆಂದು ನಮ್ಮ ಹಿರಿಯರು ನಮಗೆ ಅನೇಕ ಬಾರಿ ಹೇಳುತ್ತಾರೆ. ಏನೋ ಒಂದು ಸಮಸ್ಯೆ ಬಂದಾಗ ಅಥವಾ ಕಷ್ಟ ಬಂದಾಗ ಇಲ್ಲವೇ ನಮ್ಮ ಹತ್ತಿರದವರು ತೊಂದರೆಯಲ್ಲಿದ್ದಾಗ ಬೇಸರವಾಗುವುದು, ನೋವಾಗುವುದು ಸಹಜ. ಆಗ ಯಾವ ಕೆಲಸ ಮಾಡಲೂ ಮೂಡ್ ಇರುವುದಿಲ್ಲ. ಆದರೆ ಯಾವುದೇ ಕಾರಣವಿಲ್ಲದೇ ವಿನಾಕಾರಣ ಪದೇ ಪದೇ ಮೂಡ್ ಆಫ್ ಆಗುವುದು, ಒಂಟಿಯಾಗಿರಬೇಕು ಎನಿಸುವ ಭಾವನೆ ಮಾನಸಿಕ ಅಸ್ವಸ್ಥತೆಯ ಮುನ್ಸೂಚನೆಯಾಗಿದೆ. ಇದನ್ನು ಡಿಸ್ತಿಮಿಯಾ ಡಿಸಾರ್ಡರ್ ಅಥವಾ ಪರ್ಸಿಸ್ಟೆನ್ಸ್ ಡಿಪ್ರೆಸಿವ್ ಡಿಸಾರ್ಡರ್ ಎಂದು ಕೂಡ ಕರೆಯಲಾಗುತ್ತದೆ.

ಡಿಸ್ಟಿಮಿಯಾ (Dysthymia) ಖಾಯಿಲೆಯಿರುವವರು ಒಂದೇ ಚಟುವಟಿಕೆಯನ್ನು ಹೆಚ್ಚು ಹೊತ್ತು ಎಂಜಾಯ್ ಮಾಡುವುದಿಲ್ಲ. ನಂತರ ಕ್ರಮೇಣವಾಗಿ ಅವರು ಜನರ ಸಂಪರ್ಕವನ್ನು ಕೂಡ ಕಡಿದುಕೊಳ್ಳುತ್ತಾರೆ. ಯಾರೊಂದಿಗೂ ಸೇರಿಕೊಳ್ಳದೆ ಅವರ ಕಂಪನಿಯನ್ನೊಂದೇ ಅವರು ಎಂಜಾಯ್ ಮಾಡುತ್ತಾರೆ. ಇದು ತೀರ ಗಂಭೀರ ಖಾಯಿಲೆ (Disease) ಯಲ್ಲದ ಕಾರಣ ಇದನ್ನು ಮೈಲ್ಡ್ ಡಿಪ್ರೆಶನ್ ಎನ್ನುತ್ತಾರೆ. ಉಳಿದ ಮಾನಸಿಕ ಖಾಯಿಲೆಯಂತೆ ಇದಕ್ಕೆ ಯಾವುದೇ ಗಂಭೀರ ಲಕ್ಷಣಗಳು ಇರುವುದಿಲ್ಲ.

ಬೇಸಿಗೆಯಲ್ಲಿ ಕೂಲ್ ಆಗಿರ್ಲಿ ಅಂತ ಫ್ರಿಡ್ಜ್‌ ವಾಟರ್ ಕುಡಿತೀರಾ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ

ಡಿಸ್ಟಿಮಿಯಾ ಎಂದರೇನು? : ಪರ್ಸಿಸ್ಟೆನ್ಸ್ ಡಿಪ್ರೆಸಿವ್ ಡಿಸಾರ್ಡರ್ (ಪಿಡಿಡಿ) ದೀರ್ಘಕಾಲದ ಖಿನ್ನತೆಯಾಗಿದೆ. ಇದಕ್ಕೆ ಒಳಗಾದ ವ್ಯಕ್ತಿ ಯಾವಾಗಲೂ ಡಿಪ್ರೆಸ್ಡ್ ಅಥವಾ ದೀರ್ಘಕಾಲದ ಖಿನ್ನತೆಯಲ್ಲಿರುತ್ತಾನೆ. ಇದು ವ್ಯಕ್ತಿಯ ನಿತ್ಯ ಜೀವನ, ಅವನ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.

ಪಿಡಿಡಿ ಲಕ್ಷಣಗಳೇನು? : ಪಿಡಿಡಿಗೆ ಒಳಗಾದವರು ದಿನಪೂರ್ತಿ ಲೋ ಮೂಡ್ (Mood) ನಲ್ಲೇ ಇರುತ್ತಾರೆ. ಬಹುಪಾಲು ಮಂದಿ ನಿರಾಸೆ, ಹತಾಶೆ, ಆಯಾಸಗೊಂಡ ಸ್ಥಿತಿಯಲ್ಲೇ ಇರುತ್ತಾರೆ. ಡಿಸ್ತಿಮಿಯಾ ಹೊಂದಿರುವವರಿಗೆ ಏಕಾಗ್ರತೆಯ ಕೊರತೆ ಇರುತ್ತದೆ ಮತ್ತು ಇವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗಿರುತ್ತಾರೆ. ಇವರ ಹಸಿವು ಹಾಗೂ ದೇಹದ ತೂಕದಲ್ಲಿ ಕೂಡ ಬದಲಾವಣೆ ಕಂಡುಬರುತ್ತದೆ. ಕೆಲವರು ನಿದ್ರಾಹೀನತೆಯಿಂದ ಬಳಲಿದರೆ ಕೆಲವರಿಗೆ ಅತಿನಿದ್ರೆಯ ಸಮಸ್ಯೆ ಇರುತ್ತದೆ. ಈ ಖಾಯಿಲೆಗೆ ತುತ್ತಾದವರಿಗೆ ಯಾವುದೇ ಚಟುವಟಿಕೆಯಲ್ಲಿ ಕೂಡ ಆಸಕ್ತಿ ಇರುವುದಿಲ್ಲ.

SHOCKING! ಬಿಯರ್‌ ಕುಡಿದ್ರು, ಮಾಂಸ ತಿಂದ್ರೂ ಬರುತ್ತೆ ಕ್ಯಾನ್ಸರ್‌, ಯುರೋಪಿಯನ್‌ ಸಂಸ್ಥೆಯ ಎಚ್ಚರಿಕೆ!

ಡಿಸ್ಟಿಮಿಯಾಗೆ ಕಾರಣವೇನು? : ಡಿಸ್ತಿಮಿಯಾಗೆ ಪ್ರಮುಖ ಕಾರಣ ಏನೆಂಬುದು ತಜ್ಞರಿಗೂ  ತಿಳಿದಿಲ್ಲ. ಆದರೆ ಕೆಲವು ಸಂಶೋಧನೆಯ ಪ್ರಕಾರ ಅನುವಂಶಿಕ, ಸುತ್ತಲ ಪರಿಸರ ಮತ್ತು ಜೈವಿಕ ಅಂಶಗಳು ಕಾರಣ ಎಂದು ತಿಳಿದುಬಂದಿದೆ. ಇದರ ಹೊರತಾಗಿ ಆಘಾತ, ನಿಂದನೆ ಅಥವಾ ಒತ್ತಡದ ಘಟನೆಗಳಿಂದ ಕೂಡ ಡಿಸ್ತಿಮಿಯಾಗೆ ಒಳಗಾಗುವ ಸಂಭವವಿದೆ. ಕೆಲವರಿಗೆ ಸಿರೊಟೋನಿನ್ ಅಥವಾ ಡೋಪಮೈನ್ ಕೊರತೆಯಂತಹ ಮೆದುಳಿನ ಅಸಮತೋಲನದಿಂದ ದೀರ್ಘಕಾಲದ ಅನಾರೋಗ್ಯ ಸಂಭವಿಸುತ್ತದೆ. ದೈಹಿಕ ನೋವು ಮತ್ತು ಮಾದಕ ವ್ಯಸನದಿಂದಲೂ ಡಿಸ್ಟಿಮಿಯಾಗೆ ಗುರಿಯಾಗಬಹುದು. ಈ ಖಾಯಿಲೆಗೆ ಲಿಂಗ್ ಹಾಗೂ ವಯಸ್ಸಿನ ಭೇದವಿಲ್ಲ. ಇದು ಯಾರಿಗೆ ಬೇಕಾದರೂ ಪರಿಣಾಮ ಬೀರಬಹುದು.

ಪಿಡಿಡಿಗೆ ಒಳಗಾದ ವ್ಯಕ್ತಿಗೆ ಏನು ಮಾಡ್ತಾನೆ? : ಈ ಖಾಯಿಲೆಗೆ ತುತ್ತಾದ ವ್ಯಕ್ತಿಗೆ ಒಂದು ಚಟುವಟಿಕೆಯಲ್ಲೇ ತುಂಬಾ ಸಮಯ ಕಳೆಯುವುದುಕಷ್ಟವಾಗುತ್ತದೆ. ತಮ್ಮಷ್ಟಕ್ಕೆ ತಾವೇ ನಿರಾಶರಾಗಿರುತ್ತಾರೆ ಅಥವಾ ಹತಾಶರಿರುತ್ತಾರೆ. ಇದರಿಂದ ಅವರಿಗೆ ಹೊರಬರಲು ಸಾಧ್ಯವಾಗುವುದೇ ಇಲ್ಲ. ಇನ್ನೊಬ್ಬರ ಬಳಿ ಮಾತನಾಡಲು, ತಮ್ಮ ಭಾವನೆಯನ್ನು ಹಂಚಿಕೊಳ್ಳಲು ಕೂಡ ಅವರು ಅಸಮರ್ಥರಾಗಿರುತ್ತಾರೆ.

ಡಿಸ್ಟಿಮಿಯಾಗೆ ಚಿಕಿತ್ಸೆ :  ವ್ಯಕ್ತಿಯಲ್ಲಿರುವ ರೋಗಲಕ್ಷಣಗಳನ್ನು ಗುರುತಿಸಿದ ಮೇಲೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬಹುದಾಗಿದೆ. ಇದಕ್ಕೆ ಚಿಕಿತ್ಸೆ ಎನ್ನುವುದಿಲ್ಲ. ಮಾನಸಿಕವಾಗಿ ವ್ಯಕ್ತಿ ಚೇತರಿಸಿಕೊಂಡು ವೈದ್ಯರಿಗೆ ಸಹಕರಿಸಿ, ಸ್ಪಂದಿಸಿದರೆ ಗಮನಾರ್ಹ ಬದಲಾವಣೆ ಕಾಣಬಹುದಾಗಿದೆ. ಇದರ ಹೊರತಾಗಿ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯಂತಹ ಮಾನಸಿಕ ಚಿಕಿತ್ಸೆಗಳು ಮನುಷ್ಯನ ಕೌಶಲ್ಯವನ್ನು ಹೆಚ್ಚಿಸಿ ನಕಾರಾತ್ಮಕ ಚಿಂತನೆಗಳನ್ನು ದೂರಮಾಡುತ್ತವೆ.  
 

Latest Videos
Follow Us:
Download App:
  • android
  • ios