ಯಾವ ಫೋಟೋದಲ್ಲೂ ನೀವು ಚೆನ್ನಾಗಿ ಕಾಣಲ್ವಾ? ಸಮಸ್ಯೆ ಕ್ಯಾಮರಾದ್ದಲ್ಲ, ನಿಮ್ದು!
ಫಂಕ್ಷನ್ ಯಾವ್ದೇ ಇರಲಿ, ಎಲ್ಲರೂ ಫೋಟೋದಲ್ಲಿ ಸುಂದರವಾಗಿ ಬಂದಿರ್ತಾರೆ. ನಿಮ್ಮ ಫೋಟೋ ಮಾತ್ರ ಸ್ವಲ್ಪವೂ ಚೆನ್ನಾಗಿರೋದಿಲ್ಲ. ಒಂದೊಂದಕ್ಕೆ ಒಂದೊಂದು ಸಮಸ್ಯೆ ಅಂತ ನೀವು ಅಂದ್ಕೊಳ್ತಿರುತ್ತೀರಾ? ಇದಕ್ಕೆ ಕಾರಣ ಏನು ಗೊತ್ತಾ?
ಬರ್ತ್ ಡೇ, ಮದುವೆ ಫಂಕ್ಷನ್ ಗೆ ಸುಂದರವಾಗಿ ರೆಡಿಯಾಗಿ ಹೋಗಿರ್ತೀರಿ. ಎಲ್ಲರಂತೆ ನಾನೂ ಚೆನ್ನಾಗಿ ಕಾಣ್ತಿದ್ದೇನೆ ಎಂಬ ಆತ್ಮವಿಶ್ವಾಸ (Confidence) ನಿಮಗಿರುತ್ತದೆ. ಆದ್ರೆ ಫಂಕ್ಷನ್ ನಲ್ಲಿ ತೆಗೆದ ಫೋಟೋ (photo) ನೋಡ್ತಿದ್ದಂತೆ ನಿಮ್ಮೆಲ್ಲ ನಿರೀಕ್ಷೆ ಸುಳ್ಳಾಗುತ್ತದೆ. ಒಂದೇ ಫೋಸ್ ನಲ್ಲಿ ತೆಗೆದ ನಾಲ್ಕೈದು ಫೋಟೋದಲ್ಲಿ ಒಂದು ಫೋಟೋ ಕೂಡ ನಿಮಗೆ ಇಷ್ಟವಾಗೋದಿಲ್ಲ. ಹತ್ತಾರು ಬಾರಿ ಫೋಟೋ ನೋಡಿ, ಆ ಫೋಟೋದಲ್ಲಿ ಕಣ್ಣು ಚಿಕ್ಕದಾಗಿ ಕಾಣ್ತಿದೆ, ಈ ಫೋಟೋದಲ್ಲಿ ಕೂದಲು ಕೆದರಿದೆ, ಮತ್ತೊಂದು ಬ್ಲರ್ ಬಂದಿದೆ ಹೀಗೆ ನಾನಾ ಕಾರಣ ಹೇಳಿ, ಅಂತೂ ಇಂತೂ ಇದ್ದದ್ದರಲ್ಲಿ ಒಂದು ಫೋಟೋವನ್ನು ಇಟ್ಟುಕೊಳ್ತೀರಿ. ಅನೇಕ ಬಾರಿ ಹತ್ತಾರು ಫೋಟೋ ತೆಗೆದ್ರೂ ಒಂದೂ ನಿಮ್ಮ ಮನಸ್ಸಿಗೆ ಬರೋದಿಲ್ಲ.
ಗುಂಪಿನಲ್ಲಿರು ಎಲ್ಲರೂ ನಿಮ್ಮ ಕಣ್ಣಿಗೆ ಸುಂದರವಾಗಿ ಕಾಣ್ತಾರೆ. ನೀವು ಮಾತ್ರ ಫೋಟೋದಲ್ಲಿ ಅಂದವಾಗಿ ಕಾಣೋದಿಲ್ಲ. ಇದು ಪ್ರತಿ ಬಾರಿ ನಿಮ್ಮನ್ನು ನಿರಾಸೆಗೊಳಿಸುತ್ತದೆ. ದಿನ ಕಳೆದಂತೆ ಫೋಟೋಕ್ಕೆ ಫೋಸ್ ನೀಡೋದನ್ನೇ ನೀವು ಕಡಿಮೆ ಮಾಡ್ತಾ ಬರ್ತೀರಿ. ನಾನು ಫೋಟೋದಲ್ಲಿ ಚೆನ್ನಾಗಿ ಕಾಣ್ಸಲ್ಲ, ನೀವು ತೆಗೆದುಕೊಳ್ಳಿ ಅಂತ ಸುಮ್ಮನೆ ಬದಿಗೆ ಬರ್ತೀರಿ. ಈ ಫೋಟೋ ಗೊಂದಲ ಬರೀ ನಿಮ್ಮನ್ನೊಂದೇ ಕಾಡೋದಿಲ್ಲ. ಶೇಕಡಾ 95ರಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಾರೆ. ಕೆಲ ಸೆಲೆಬ್ರಿಟಿಗಳಿಗೆ ಕೂಡ ಅವರ ಫೋಟೋ ಇಷ್ಟವಾಗೋದಿಲ್ಲ.
ಸ್ಟೇಟಸ್, ವಾಲ್ ಪೇಪರ್ ಗೆ ಮಕ್ಕಳ ಫೋಟೋ ಹಾಕ್ತಿದ್ರೆ ಎಚ್ಚರ, ಕಾಡುತ್ತೆ ಗ್ರಹದೋಷ!
ನಾವು ನಮ್ಮ ಫೋಟೋ ದ್ವೇಷಿಸಲು ಕಾರಣ ಏನು? : ನರವಿಜ್ಞಾನಿಗಳ ಪ್ರಕಾರ, ನಮ್ಮ ಫೋಟೋವನ್ನು ನಾವು ದ್ವೇಷ ಮಾಡೋದು ಮಾನಸಿಕ ಸಮಸ್ಯೆ. ಇದು ಎಕ್ಸ್ಪೋಸರ್ ಪರಿಣಾಮದಿಂದ ಉಂಟಾಗುತ್ತದೆ. ನಮಗೆ ಕನ್ನಡಿ ಪ್ರತಿಬಿಂಬ ಹತ್ತಿರವಾಗಿರುತ್ತದೆ. ಫೋಟೋ ಅಷ್ಟು ಪರಿಚಿತವಾಗಿರೋದಿಲ್ಲ. ಕನ್ನಡಿಯ ಪ್ರತಿಬಿಂಬವನ್ನು ನಾವು ಫೋಟೋಗಳಿಗಿಂತ ಹೆಚ್ಚಾಗಿ ನೋಡುತ್ತೇವೆ. ಹಾಗಾಗಿ ನಾವು ಅದರೊಂದಿಗೆ ಹೆಚ್ಚು ಆರಾಮದಾಯಕವಾಗುತ್ತೇವೆ. ಅದೇ ಫೋಟೋವನ್ನು ಅಪರೂಪಕ್ಕೆ ನೋಡೋದ್ರಿಂದ ಅದಕ್ಕೆ ಬೇಗ ಹೊಂದಿಕೊಳ್ಳುವುದಿಲ್ಲ. ಮನೆಯಿಂದ ಹೊರಡುವ ಮೊದಲು ಪ್ರತಿದಿನ ನಾವು ಕನ್ನಡಿ ನೋಡಿಕೊಳ್ತೇವೆ. ಒಂದೇ ಜಾಗದಲ್ಲಿರುವ ಕನ್ನಡಿಯಲ್ಲಿ, ಅದೇ ಲೈಟ್ ನಲ್ಲಿ ನಾವು ನಮ್ಮ ಪ್ರತಿಬಿಂಬವನ್ನು ಪ್ರತಿ ದಿನ ನೋಡ್ತಿರುತ್ತೇವೆ. ಆದ್ರೆ ಫೋಟೋವನ್ನು ನಾವು ಅಪರಿಚಿತ ಜಾಗದಲ್ಲಿ, ಬೆಳಕಿನಲ್ಲಿ ತೆಗೆದಿರುತ್ತೇವೆ. ಆ ಜಾಗದಲ್ಲಿ ನಾವೆಂದೂ ನಮ್ಮ ಪ್ರತಿಬಿಂಬವನ್ನು ನೋಡಿರುವುದಿಲ್ಲ. ಫೋಟೋದಲ್ಲಿ ಸೆರೆಯಾದ ಫೋಟೋಗಳು ನಮಗೆ ಅಪರಿಚಿತವೆನ್ನಿಸಲು ಶುರುವಾಗುತ್ತವೆ. ಅದಕ್ಕೆ ನಾವು ಬೇಗ ಹೊಂದಿಕೊಳ್ಳುವುದಿಲ್ಲ.
ಕನ್ನಡಿ ಹಾಗೂ ಫೋಟೋ ಎರಡೂ ನಮ್ಮ ಪ್ರತಿಬಿಂಬವನ್ನು ಭಿನ್ನವಾಗಿ ತೋರಿಸುತ್ತದೆ. ಕನ್ನಡಿ ಮುಖದ ಅಸಿಮ್ಮೆಟ್ರಿಯನ್ನು ತಿರುಗಿಸುತ್ತದೆ. ಅದೇ ಫೋಟೋ ನಮ್ಮ ನಿಜವಾದ ಚಿತ್ರವಾಗಿದೆ. ಫೋಟೋಗಳು ಕನ್ನಡಿಗಳಲ್ಲಿ ನಾವು ನಿಯಮಿತವಾಗಿ ನೋಡದ ಕೋನಗಳು ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತವೆ. ಹಾಗೆಯೇ ನಾವು ನಮ್ಮ ಫೋಟೋಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುತ್ತೇವೆ, ನ್ಯೂನತೆಗಳ ಮೇಲೆ ಕೇಂದ್ರೀಕರಿಸುತ್ತೇವೆ. ಸಾಮಾಜಿಕ ಮಾಧ್ಯಮ ಫೋಟೋಗಳಿಗೆ ನಮ್ಮನ್ನು ಹೋಲಿಸಿಕೊಳ್ಳುವುದು.
ಯೂರಿಕ್ ಆಸಿಡ್‌ನಿಂದ ಬಳಲುತ್ತಿದ್ದೀರಾ? ಕಡಿಮೆ ಮಾಡಲು ಈ ಪಾನೀಯ ಸೇವಿಸಿ
ನಮ್ಮ ಫೋಟೋದಲ್ಲಿರುವ ಸ್ನೇಹಿತರು ಏಕೆ ಸುಂದರವಾಗಿ ಕಾಣ್ತಾರೆ? : ನಮ್ಮ ಜೊತೆ ಫೋಟೋಕ್ಕೆ ಫೋಸ್ ನೀಡಿದ ಸ್ನೇಹಿತರು ಅಥವಾ ಕುಟುಂಬಸ್ಥರು ಸಹಜವಾಗಿ ಅಥವಾ ಸುಂದರವಾಗಿ ಕಾಣಲು, ಅವರ ಚಿತ್ರ ನಿಮ್ಮ ಮೆದುಳಿನಲ್ಲಿ ಅಚ್ಚಾಗಿರುವುದು ಕಾರಣ. ಅವರನ್ನು ನೀವು ಎಲ್ಲ ಪರಿಸರದಲ್ಲಿ, ಎಲ್ಲ ಬೆಳಕಿನಲ್ಲಿ ನೋಡಿರುತ್ತೀರಿ. ನಮ್ಮ ಮಿದುಳುಗಳು ಅವರ ಬದಲಾಗದ ಚಿತ್ರಗಳಿಗೆ ಒಗ್ಗಿಕೊಳ್ಳುತ್ತವೆ, ಅವರ ಫೋಟೋಗಳನ್ನು ಹೆಚ್ಚು ಸಾಪೇಕ್ಷವಾಗಿ ಕಾಣುವಂತೆ ಮಾಡುತ್ತದೆ.
ಸ್ಪಾಟ್‌ಲೈಟ್ ಎಫೆಕ್ಟ್ ಕೂಡ ಈ ಅಸಜತೆಗೆ ಕಾರಣ ಎಂದು ತಜ್ಞರು ಹೇಳ್ತಾರೆ. ನಮ್ಮ ಫೋಟೋ ನೋಡಿ ಬೇರೆಯವರು ಏನು ಅಂದ್ಕೊಳ್ತಾರೆ ಎಂಬ ಆಲೋಚನೆಯನ್ನು ನಾವು ಮಾಡ್ತೇವೆ. ಆದ್ರೆ ಬೇರೆಯವರು ಅವರ ಫೋಟೋ ನೋಡ್ಕೊಳ್ಳೋದ್ರಲ್ಲಿ ನಿರತರಾಗಿರುತ್ತಾರೆ ಎಂಬುದು ನಮಗೆ ತಿಳಿದಿಲ್ಲ.