ಹೃದಯ ಸಮಸ್ಯೆಗಳು ಇಂದು ಸಾಮಾನ್ಯವಾಗಿದ್ದು, ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಡಾ. ದೇವಿ ಶೆಟ್ಟಿ, ಹೃದಯ ಶಸ್ತ್ರಚಿಕಿತ್ಸಕರು, 25 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಮೂರು ಪರೀಕ್ಷೆಗಳನ್ನು ಶಿಫಾರಸು ಮಾಡುತ್ತಾರೆ. ಅವು ಯಾವುವು ಅಂತ ಇಲ್ಲಿ ನೋಡಿ. 

ಹೃದಯದ ಸಮಸ್ಯೆ ಇಂದು ಕಾಮನ್.‌ ಎಷ್ಟು ಕಾಮನ್‌ ಎಂದರೆ ನಮಗೆ ಹೃದಯದ ಸಮಸ್ಯೆ ಇದೆ ಅನ್ನೋದೇ ಗೊತ್ತಾಗಿರೋಲ್ಲ. ನಡೆದುಕೊಂಡು ಹೋಗುವಾಗ, ಊಟ ಮಾಡುವಾಗ, ಜಿಮ್‌ನಲ್ಲಿ ಬೆವರಿಳಿಸಿ ದಣಿದು ಕುಳಿತಾಗ, ಮಕ್ಕಳೊಂದಿಗೆ ಆಟವಾಡುವಾಗ, ಮದುವೆ ಪಾರ್ಟಿಯಲ್ಲಿ ಡ್ಯಾನ್ಸ್‌ ಮಾಡುವಾಗ- ಯಾವಾಗ ಬೇಕಿದ್ದರೂ ಸಡನ್‌ ಆಗಿ ಕೆಳಗೆ ಬಿದ್ದು ಅಲ್ಲೇ ಅಸುನೀಗುವವರನ್ನು ನೀವು ನೋಡಿರಬಹುದು. ಇದಕ್ಕೆ ವಯಸ್ಸಿನ ಭೇದವಿಲ್ಲ. ಐವತ್ತರ ನಂತರ ಹಾರ್ಟ್‌ ಫೇಲ್ಯೂರ್‌ ಅನ್ನುವ ಕಾಲ ಹೋಯಿತು. ಹತ್ತು ಹದಿನೈದರ ಬಾಲಕರೂ ಯುವಕರೂ ಹೃದಯಾಘಾತಕ್ಕೆ ತುತ್ತಾಗುವುದು ಕಾಮನ್‌ ಎಂಬಂತಾಗಿದೆ. ಇದಕ್ಕೆಲ್ಲ ಕಾರಣವೇನು ಎಂಬುದನ್ನು ತಜ್ಞರು ಹುಡುಕಲಿ ಬಿಡಿ. ಆದರೆ ಇದರಿಂದ ನಮ್ಮನಿಮ್ಮಂತವರು ಪಾರಾಗೋದು ಹೇಗೆ ಎಂಬುದನ್ನು ಮೊದಲು ನೋಡಿಕೊಂಡು ನಾವು ಸೇಫ್‌ ಆಗೋಣ.

ಈ ನಿಟ್ಟಿನಲ್ಲಿ, ಸಾವಿರಾರು ಹೃದಯ ಸರ್ಜರಿಗಳನ್ನು ಮಾಡಿದ ಸರ್ಜನ್‌ ದೇವಿ ಶೆಟ್ಟಿಯವರ ವೈರಲ್‌ ವಿಡಿಯೋದ ಮಾತುಗಳನ್ನು ಕೇಳೋಣ. ನಮ್ಮ ದೇಶದಲ್ಲಿ ಕೊರೊನರಿ ಆರ್ಟರಿ ಬ್ಲಾಕೇಜ್‌ ಅನ್ನುವುದು ತುಂಬಾ ಕಾಮನ್.‌ ನಾವು ಭಾರತೀಯರು, ಯುರೋಪಿನವರಿಗಿಂತ ಮೂರು ಪಟ್ಟು ಹೆಚ್ಚು ಹೃದಯ ಸಮಸ್ಯೆಗಳಿಗೆ ತುತ್ತಾಗುವವರು. ಯುರೋಪ್‌, ಚೀನಾ, ಜಪಾನ್‌ನವರಿಗಿಂತ ಬಹಳ ಮೊದಲ ವಯಸ್ಸಿನಲ್ಲಿ ನಮಗೆ ಬ್ಲಾಕ್‌ ಆಗುತ್ತವೆ. ಅವರೆಲ್ಲರಿಗೂ ಬೇರೆ ಕಾಯಿಲೆಗಳಿವೆ, ಹಾಗೇ ನಮಗೆ ಹೃದಯದ್ದು ಅಂತಾರೆ ದೇವಿ ಶೆಟ್ಟಿ.

ನಾನು ಮೊದಲು ಇಂಗ್ಲೆಂಡಿನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅಲ್ಲಿನ ಹೃದಯದ ಪೇಷೆಂಟ್‌ಗಳೆಂದರೆ 65 ವರ್ಷ ಮೇಲಿನವರು, ನಿವೃತ್ತರಾದವರು. ನಮ್ಮ ದೇಶದಲ್ಲಿ ಹೃದಯ ಸರ್ಜರಿಗೆ ಬರುವವರ ಸರಾಸರಿ ವಯಸ್ಸು 45-50 ವರ್ಷಗಳು. ವೃದ್ಧರು ತಮ್ಮ ತರುಣ ಮಗನನ್ನು ಬೈಪಾಸ್‌ ಸರ್ಜರಿಗೆ ಕರೆತರುವ ದೃಶ್ಯ ಕರುಣಾಜನಕ, ಆದರೆ ಇದು ರಿಯಾಲಿಟಿ. ಸಡನ್‌ ಆಗಿ ಸಣ್ಣ ವಯಸ್ಸಿನವರು ಕೊಲ್ಯಾಪ್ಸ್‌ ಆಗುವ ಘಟನೆಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಬಹುದು ಅಂತಾರೆ.

ಅದು ಹೇಗೆ? 25 ವರ್ಷದ ನಂತರದ ಗಂಡಸರು ಈ ಮೂರು ಟೆಸ್ಟ್‌ಗಳನ್ನು ಮಾಡಿಸಿಕೊಳ್ಳಬೇಕು. ಗಂಡಸರೇ ಯಾಕೆ? ಯಾಕೆಂದರೆ ಗಂಡಸರಿಗೆ ಹೃದಯದ ಸಮಸ್ಯೆ ಜಾಸ್ತಿ. ಪ್ರಕೃತಿ ಹೆಂಗಸರ ಪರವಾಗಿದೆ. ಅದು ಹೆಣ್ಣು ಜೀವಗಳನ್ನು ಉಳಿಸಿಕೊಳ್ಳಲು ಯತ್ನಿಸುತ್ತದೆ, ಗಂಡಸರನ್ನಲ್ಲ. ಹೆಂಗಸರಿಗೆ ಅವರ 45 ವರ್ಷಗಳವರೆಗೆ ಅವರ ಹಾರ್ಮೋನ್‌ಗಳನ್ನು ಅವರನ್ನು ರಕ್ಷಿಸುತ್ತವೆ. ಮುಖ್ಯವಾಗಿ ಜಿಮ್‌ಗಳಲ್ಲಿ ತೀವ್ರವಾದ ಕಾರ್ಡಿಯಾಕ್‌ ವ್ಯಾಯಾಮಗಳನ್ನು ಮಾಡುವವರು ಈ ಟೆಸ್ಟ್‌ಗಳನ್ನು ಮಾಡಿಸಿಕೊಳ್ಳಲೇಬೇಕು. ಯಾಕೆಂದರೆ ಈ ವ್ಯಾಯಾಮಗಳ ಸಂದರ್ಭದಲ್ಲಿ ಅವರ ಹೃದಯದ ಬಡಿತ ಅತೀ ಹೆಚ್ಚಿನ ಮಟ್ಟಕ್ಕೆ ಹೋಗುತ್ತದೆ.

ತೂಕ ಇಳಿಸಲು ಆಗುತ್ತಿಲ್ಲವೇ? ಅದಕ್ಕೆ ಇಲ್ಲಿವೆ 12 ಕಾರಣಗಳು

ಆ ಮೂರು ಟೆಸ್ಟ್‌ಗಳು- ಇಸಿಜಿ, ಎಕೋಕಾರ್ಡಿಯೋಗ್ರಾಮ್‌, ಸಿಟಿ ಆಂಜೋ. ಸಿಟಿ ಆಂಜೋ ಎರಡು ಸೆಕೆಂಡ್‌ಗಳಲ್ಲಿ ಆಗುತ್ತದೆ. ಈ ಮೂರನ್ನು ಮಾಡಿಸಿದರೆ, ಹೆಚ್ಚಿನ ಸಡನ್‌ ಹೃದಯವೈಫಲ್ಯಗಳನ್ನು ತಡೆಗಟ್ಟಬಹುದು. ಯಾಕೆಂದರೆ ಈ ಪರೀಕ್ಷೆಗಳಲ್ಲಿ ಪೇಷೆಂಟ್‌ಗೆ ಆರ್ಟರಿಗಳಲ್ಲಿ ಬ್ಲಾಕೇಜ್‌ ಆಗಿದೆಯಾ, ಅಥವಾ ಮಸಲ್‌ ದಪ್ಪವಾಗಿ ಸಮಸ್ಯೆಯಾಗಿದೆಯಾ (ಇದನ್ನು ಹೈಪರ್‌ಟ್ರಾಪಿಕ್‌ ಕಾರ್ಡಿಯೋಮಯೋಪತಿ ಎನ್ನುತ್ತಾರೆ) ಅಥವಾ ಅನಾಮಲಸ್‌ ಕೊರೊನರಿ ಆರ್ಟರಿ ಇದೆಯಾ ಎಂಬುದೆಲ್ಲ ತಿಳಿಯುತ್ತವೆ. ಇವುಗಳನ್ನು ಮೊದಲೇ ಪತ್ತೆ ಹಚ್ಚಿದರೆ ಮುಂದೆ ಹಾರ್ಟ್‌ ಅಟ್ಯಾಕ್‌ ಆಗುವುದನ್ನು ತಡೆಯಬಹುದು ಎನ್ನುತ್ತಾರೆ ಶೆಟ್ಟಿ.

ಅನ್ನ ತಿನ್ನೋದ ಬಿಟ್ರೆ ದೇಹ ಏನಾಗುತ್ತೆ? ಕಾರ್ಬೋಹೈಟ್ರೇಡ್ ತೂಕದ ಮೇಲೆ ಮಾಡುತ್ತಾ ಎಫೆಕ್ಟ್?

ಗೊತ್ತಾಯಿತಲ್ಲವೇ. ನೀವು ಜಿಮ್‌ನಲ್ಲಿ ಬೆವರಿಳಿಸುವವರಾದರೆ, ಗಂಡಸರಾಗಿದ್ದರೆ (ಹೆಂಗಸರಾಗಿದ್ದರೂ ಸರಿ), ಹೃದಯದಲ್ಲಿ ಸಮಸ್ಯೆ ಇರಬಹುದು ಅನ್ನಿಸಿದರೆ, ಆಗಾಗ ಹೆಚ್ಚಿನ ದಣಿವು ಎನ್ನಿಸುತ್ತಿದ್ದರೆ, ಆಗಾಗ ಬಿಪಿ ಹೆಚ್ಚಾದಂತೆನಿಸಿದರೆ, ಪದೇ ಪದೇ ತಲೆ ತಿರುಗುವಂತಾಗುತ್ತಿದ್ದರೆ- ಈ ಮೂರು ಟೆಸ್ಟ್‌ಗಳನ್ನು ತಪ್ಪದೆ ಮಾಡಿಸಿ.

View post on Instagram