ತೂಕ ಇಳಿಸಲು ಆಗುತ್ತಿಲ್ಲವೇ? ಅದಕ್ಕೆ ಇಲ್ಲಿವೆ 12 ಕಾರಣಗಳು
ತೂಕ ಇಳಿಸೋಕೆ ಆಗ್ತಿಲ್ಲ ಅಂತ ಚಿಂತೆ ಮಾಡ್ತಿದ್ದೀರಾ? ಹಾರ್ಮೋನ್ ಅಸಮತೋಲನ, ನಿಧಾನ ಚಯಾಪಚಯ, ನಿದ್ರಾಹೀನತೆ ಸೇರಿದಂತೆ 12 ಕಾರಣಗಳಿರಬಹುದು. ತಜ್ಞರು ಹೇಳೋದು ಇಷ್ಟು.
113

Image Credit : Getty
12 ಆರೋಗ್ಯ ಸಮಸ್ಯೆಗಳು
ಡಯಟ್, ವ್ಯಾಯಾಮ, ಎಲ್ಲಾ ಮಾಡಿದ್ರೂ ತೂಕ ಇಳಿಯುತ್ತಿಲ್ಲವೇ? ಆರೋಗ್ಯ ಸಮಸ್ಯೆಗಳೇ ಕಾರಣವಿರಬಹುದು. ತಜ್ಞರು ಹೇಳೋ 12 ಕಾರಣಗಳು ಇಲ್ಲಿವೆ
213
Image Credit : istocks
ಇನ್ಸುಲಿನ್ ನಿರೋಧಕತೆ
ಶರೀರ ಇನ್ಸುಲಿನ್ ಸರಿಯಾಗಿ ಸ್ವೀಕರಿಸದಿದ್ದರೆ, ಸಕ್ಕರೆ ರಕ್ತದಲ್ಲೇ ಉಳಿದು ಹೊಟ್ಟೆಯ ಸುತ್ತ ಕೊಬ್ಬು ಶೇಖರವಾಗುತ್ತದೆ.
313
Image Credit : stockPhoto
ಥೈರಾಯ್ಡ್ ಮಂದಗತಿ
ಥೈರಾಯ್ಡ್ ನಿಧಾನವಾಗಿ ಕೆಲಸ ಮಾಡಿದರೆ ಚಯಾಪಚಯ ಕಡಿಮೆಯಾಗಿ ತೂಕ ಹೆಚ್ಚುತ್ತದೆ. ಆಲಸ್ಯ, ನಿಶ್ಯಕ್ತಿ ಇದರ ಲಕ್ಷಣಗಳು.
413
Image Credit : stockphoto
ಕಾರ್ಟಿಸೋಲ್ ಹೆಚ್ಚಳ (ಒತ್ತಡದ ಹಾರ್ಮೋನ್)
ಒತ್ತಡದಿಂದ ಕಾರ್ಟಿಸೋಲ್ ಹೆಚ್ಚಾಗಿ ಶರೀರ ಕೊಬ್ಬನ್ನು ಸಂಗ್ರಹಿಸುತ್ತದೆ. ಸಿಹಿ ತಿನ್ನಬೇಕೆಂಬ ಆಸೆ ಹೆಚ್ಚಾಗುತ್ತದೆ.
513
Image Credit : unsplash
ದೀರ್ಘಕಾಲದ ಉರಿಯೂತ
ಅನಾರೋಗ್ಯಕರ ಆಹಾರ, ಒತ್ತಡದಿಂದ ಶರೀರದ ಉರಿಯೂತ ಹಸಿವು, ಚಯಾಪಚಯದ ಮೇಲೆ ಪರಿಣಾಮ ಬೀರುತ್ತದೆ.
613
Image Credit : iSTOCK
ಕರುಳಿನ ಆರೋಗ್ಯ ಸಮಸ್ಯೆ
ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಕಡಿಮೆಯಾದರೆ, ಚಯಾಪಚಯ ನಿಧಾನವಾಗಿ, ಇನ್ಸುಲಿನ್ ಸಮಸ್ಯೆ ಉಂಟಾಗಿ ತೂಕ ಇಳಿಕೆ ಕಷ್ಟವಾಗುತ್ತದೆ.
713
Image Credit : iSTOCK
ಪೌಷ್ಟಿಕಾಂಶಗಳ ಕೊರತೆ
ವಿಟಮಿನ್ ಡಿ, ಬಿ12, ಮೆಗ್ನೀಷಿಯಂ ಕೊರತೆಯಾದರೆ, ಶಕ್ತಿ ಬಳಕೆ ಮತ್ತು ಕ್ಯಾಲೋರಿ ಬರ್ನ್ ನಿಧಾನವಾಗುತ್ತದೆ.
813
Image Credit : freepik
ವಿಷಕಾರಿ ಅಂಶಗಳ ಹೊರೆ
ಕಾಳಜ ಹೆಚ್ಚು ವಿಷಕಾರಿ ಅಂಶಗಳಿಂದ ತುಂಬಿದ್ದರೆ, ಕೊಬ್ಬನ್ನು ತೆಗೆಯದೆ ಸಂಗ್ರಹಿಸುತ್ತದೆ. ಇದು ತೂಕ ಇಳಿಕೆಯನ್ನು ನಿಲ್ಲಿಸುತ್ತದೆ.
913
Image Credit : instagram
ಚಯಾಪಚಯ ಬದಲಾವಣೆಗಳು
ದೀರ್ಘಕಾಲ ಕಡಿಮೆ ಕ್ಯಾಲೋರಿ ಸೇವಿಸಿದರೆ ಶರೀರ ಕಡಿಮೆ ಶಕ್ತಿಯನ್ನು ಬಳಸುವುದಕ್ಕೆ ಹೊಂದಿಕೊಳ್ಳುತ್ತದೆ. ಇದರಿಂದ ತಿಂದದ್ದೆಲ್ಲಾ ಕೊಬ್ಬಾಗಿ ಮಾರ್ಪಡುತ್ತದೆ.
1013
Image Credit : instagram
ಅತಿಯಾದ ವ್ಯಾಯಾಮ
ವಿಶ್ರಾಂತಿ ಇಲ್ಲದೆ ಹೆಚ್ಚು ವ್ಯಾಯಾಮ ಮಾಡಿದರೆ ಕಾರ್ಟಿಸೋಲ್ ಹೆಚ್ಚಾಗಿ ತೂಕ ಇಳಿಕೆ ನಿಲ್ಲುತ್ತದೆ. ಸ್ನಾಯುಗಳು ಕೂಡ ಕಡಿಮೆಯಾಗುತ್ತವೆ.
1113
Image Credit : AI Generated Photo
ಹಾರ್ಮೋನುಗಳ ಅಸಮತೋಲನ
ಈಸ್ಟ್ರೋಜೆನ್, ಟೆಸ್ಟೋಸ್ಟೆರಾನ್, ಪ್ರೊಜೆಸ್ಟೆರಾನ್ ಹಾರ್ಮೋನುಗಳು ಸಮತೋಲನದಲ್ಲಿಲ್ಲದಿದ್ದರೆ ತೂಕ ಇಳಿಕೆ ಕಷ್ಟ. ಮಹಿಳೆಯರಲ್ಲಿ ಇದು ಹೆಚ್ಚು ಕಂಡುಬರುತ್ತದೆ.
1213
Image Credit : instagram
ನಿದ್ರಾಹೀನತೆ
ಸರಿಯಾಗಿ ನಿದ್ದೆ ಮಾಡದಿದ್ದರೆ ಹಸಿವಿನ ಹಾರ್ಮೋನುಗಳು ಲೆಪ್ಟಿನ್, ಗ್ರೆಲಿನ್ ಅಸಮತೋಲನಗೊಂಡು ಹೆಚ್ಚು ತಿನ್ನುವ ಅಭ್ಯಾಸ ಬೆಳೆಯುತ್ತದೆ.
1313
Image Credit : Getty
ಶಕ್ತಿಯ ಸಮತೋಲನದ ಕೊರತೆ
ಕ್ಯಾಲೋರಿ ಕಡಿಮೆ ಮಾಡುವುದಷ್ಟೇ ಅಲ್ಲ, ಶರೀರ ಶಕ್ತಿಯನ್ನು ಹೇಗೆ ಸ್ವೀಕರಿಸುತ್ತದೆ, ಸಂಗ್ರಹಿಸುತ್ತದೆ ಎಂಬುದರ ಮೇಲೂ ಪರಿಣಾಮ ಬೀರುತ್ತದೆ. ನಿದ್ರೆ, ಒತ್ತಡ, ವಂಶವಾಹಿಗಳು ಇದರ ಮೇಲೆ ಪ್ರಭಾವ ಬೀರುತ್ತವೆ.
Latest Videos