ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು 10 ಸೆಕೆಂಡ್‌ಗಳಲ್ಲಿ ಕಂಡುಹಿಡಿಯುವ ಸವಾಲು. ಈ  ಫೋಟೋ ನಿಮ್ಮ ಏಕಾಗ್ರತೆ ಮತ್ತು ಗಮನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Optical Illusion: ಇಂದಿನ ಆಪ್ಟಿಕಲ್ ಇಲ್ಯುಷನ್ ಚಿತ್ರ ಸ್ವಲ್ಪ ಕಷ್ಟಕರವಾಗಿದೆ ಎಂದು ಹೇಳಬಹುದು. ಕೇವಲ ಬೆರಳಣಿಕೆಯಷ್ಟು ಜನರು ಮಾತ್ರ 10 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಪತ್ತೆ ಮಾಡಿದೆ. ಹಸಿರು ಪರಿಸರದ ಮರ-ಗಿಡ, ಪೊದೆ ಮಧ್ಯೆ ಕುಳಿತಿರುವ ಮುದ್ದಾದ ಬೆಕ್ಕನ್ನು ಕಂಡು ಹಿಡಿಯಬೇಕು. ನಿಮಗೆ 10 ಸೆಕೆಂಡ್‌ನಲ್ಲಿ ಬೆಕ್ಕು ಸಿಕ್ರೆ ನಿಮ್ಮ ಕಣ್ಣುಗಳು ಶಾರ್ಪ್ ಆಗಿ ಎಂದು ಪರಿಗಣಿಸಬಹುದು. ಇತ್ತೀಚಿನ ದಿನಗಳಲ್ಲಿ ಇಂತಹ ಆಪ್ಟಿಕಲ್ ಭ್ರಮೆ ಸವಾಲುಗಳನ್ನು ಪರಿಹರಿಸಲು ಜನರು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳಿಗೆ ಇಂತಹ ಸವಾಲುಗಳನ್ನು ನೀಡುತ್ತಾರೆ. ಇದರಿಂದ ಮಕ್ಕಳ ಬುದ್ದಿಮಟ್ಟೆ ಹೆಚ್ಚಾಗುತ್ತೆ ಎಂದು ನಂಬಲಾಗಿದೆ.

ಈ ರೀತಿಯ ಆಪ್ಟಿಕಲ್ ಇಲ್ಯುಶನ್ ಸಮಸ್ಯೆಗಳನ್ನು ಪರಿಹರಿಸೋದು ಮೆದುಳು ಮತ್ತು ಕಣ್ಣುಗಳಿಗೆ ಆರೋಗ್ಯಕರ ವ್ಯಾಯಾಮ ಮಾತ್ರವಲ್ಲ, ಇದು ನಿಮ್ಮ ಏಕಾಗ್ರತೆ ಮತ್ತು ಗಮನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ.

ಬೆಕ್ಕು ಹುಡುಕಿದ ಅನುಭವ ಹಂಚಿಕೊಂಡ ನೆಟ್ಟಿಗರು

ಇನ್ನು ವೈರಲ್ ಅಗುತ್ತಿರುವ ಬೆಕ್ಕಿನ ಆಪ್ಟಿಕಲ್ ಭ್ರಮೆ ಫೋಟೋವನ್ನು ವಿಲ್ಮಲಾಚೆನ್ ಎಂಬ ಹೆಸರಿನ ಬಳಕೆದಾರರು ರೆಡ್ಡಿಟ್‌ನ r/FindTheSniper ಗ್ರೂಪ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂನಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದು ಕೊಂಚ ಕಷ್ಟಕರವಾದ ಚಾಲೆಂಜ್ ಎಂದು ಒಪ್ಪಿಕೊಂಡಿದ್ದಾರೆ. ಈ ಬೆಕ್ಕು ಒಂದು ಕ್ಷಣ ಸಿಕ್ಕ ನಂತರ ಮನಸ್ಸಿಗೆ ಒಂದು ರೀತಿಯಲ್ಲಿ ಸಂತೋಷವಾಗುತ್ತೆ ಅಂತಾನೂ ಕಮೆಂಟ್ ಮಾಡಿದ್ದಾರೆ.

ನಿಮ್ಮ ಕಣ್ಣುಗಳಿಗೆ ಸವಾಲು

ಫಸ್ಟ್ ಟೈಮ್ ಆಪ್ಟಿಕಲ್ ಇಲ್ಯುಷನ್ ಚಾಲೆಂಜ್‌ ಹೊಂದಿರುವ ಫೋಟೋ ನೋಡಿದ್ರೆ ಹಲವು ಮರ, ಪೊದೆ ಮತ್ತು ಹುಲ್ಲುಗಾವಲಿನ ಪ್ರದೇಶ ಕಾಣಿಸುತ್ತದೆ. ಈ ಹಸಿರುಮಯ ಚಿತ್ರದಲ್ಲಿ ಅಡಗಿರೋ ಬೆಕ್ಕು ಹುಡುಕೋದು ನಿಮ್ಮ ಕಣ್ಣುಗಳಿಗೆ ಸವಾಲು. ಸ್ವಲ್ಪ ಸೂಕ್ಷ್ಮವವಾಗಿ ನೋಡಿದ್ರೆ ಖಂಡಿತ ನಿಮಗೆ ಫೋಟೋದಲ್ಲಿರುವ ಬೆಕ್ಕು ಕಾಣಿಸುತ್ತದೆ. ಮೊದಲ ನೋಟದಲ್ಲಿ ಇದು ಸಾಮಾನ್ಯ 'ಪ್ರಾಣಿಯನ್ನು ಗುರುತಿಸುವ' ಸವಾಲಿನಂತೆ ಕಾಣುತ್ತದೆ. ನೀವು ಬೆಕ್ಕನ್ನು ಹುಡುಕಲು ಪ್ರಾರಂಭಿಸಿದಾಗ, ಈ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸುವುದು ಎಷ್ಟು ಕಷ್ಟ ಎಂದು ನಿಮಗೆ ಅರಿವಾಗುತ್ತದೆ.

ಇದನ್ನೂ ಓದಿ:ಇದ್ರಲ್ಲಿ ಮೊಲ ಎಲ್ಲಿದೆ? ಟಿಕ್ ಟಿಕ್ ಒನ್… 8 ಸೆಕೆಂಡ್ ಇರೋದು ಬೇಗ ಹೇಳಿ, ನಿಮ್ಮ ವ್ಯಕ್ತಿತ್ವ ಚೆಕ್ ಮಾಡ್ಕೊಳ್ಳಿ

ಬೆಕ್ಕು ಹುಡುಕಲು ಸುಳಿವು ಬೇಕೇ?

ಈ ಫೋಟೋದ ಬಲಭಾಗದಲ್ಲಿ ಬೆಕ್ಕು ಇದೆ. ಈ ಚಿತ್ರದ ಸವಾಲು ಪರಿಹರಿಸುವ ಉತ್ತಮ ದಾರಿಯಂದ್ರೆ ಫೋಟೋದಲ್ಲಿರುವ ಎಲ್ಲಾ ಅಂಶಗಳನ್ನು ವಿವರವಾಗಿ ನೋಡುತ್ತಾ ಹೋಗಬೇಕು. ಹಾಗೆಯೇ ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳಬಾರದು. ನಿಮ್ಮಲ್ಲಿ ಹುಡುಕುವ ಭರವಸೆ ಇದ್ರೆ, ನೂರಕ್ಕೆ ನೂರರಷ್ಟು ನಿಮಗೆ ಅಡಗಿರುವ ಬೆಕ್ಕು ಸಿಗುತ್ತದೆ. ನೀವು ನಿಜವಾಗಿಯೂ ಚಿತ್ರದಲ್ಲಿರುವ ಬೆಕ್ಕನ್ನು 10 ಸೆಕೆಂಡುಗಳಲ್ಲಿ ಹುಡುಕಲು ಸಾಧ್ಯವಾದರೆ, ನೀವು ಖಂಡಿತವಾಗಿಯೂ ಹೆಚ್ಚಿನ ಐಕ್ಯೂ ಹೊಂದಿದ್ದೀರಿ ಎಂದರ್ಥ. ಚಿತ್ರದ ಕಮೆಂಟ್‌ ಬಾಕ್ಸ್‌ನಲ್ಲಿ ಹಲವು ನೆಟ್ಟಿಗರು ಚಿತ್ರದಲ್ಲಿರುವ ಬೆಕ್ಕಿನ ನಿಖರವಾದ ಸ್ಥಳದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಬೆಕ್ಕನ್ನು ಪತ್ತೆ ಮಾಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನಿಜವಾಗಿಯೂ ಎಲ್ಲಿದೆ ಬೆಕ್ಕು?

ಒಬ್ಬ ವ್ಯಕ್ತಿ ಬೆಕ್ಕು ಕೆಳಗಿನ ಬಲಭಾಗದಲ್ಲಿ "ಮರದ ಕೆಳಗೆ/ಪೊದೆಯಲ್ಲಿ" ಇದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಅದು "ಮರಗಳ ಸಾಲಿನ ಒಳಗೆ ಕೆಳಗಿನ ಬಲಭಾಗದಲ್ಲಿ" ಇದೆ ಎಂದು ಸೇರಿಸಿದ್ದಾರೆ. ಹೀಗೆ ಹಲವರು ತಾವು ಕಂಡ ಬೆಕ್ಕು ಎಲ್ಲಿದೆ ಎಂದು ಬೇರೆ ಬೇರೆ ಕಮೆಂಟ್‌ಗಳನ್ನು ಮಾಡಿದ್ದಾರೆ. ನಿಮಗೆ ಬೆಕ್ಕು ಎಲ್ಲಿ ಕಾಣಿಸಿತು ಎಂದು ಕಮೆಂಟ್ ಮಾಡಿ

ಇದನ್ನೂ ಓದಿ: ಈ ಚಿತ್ರದಲ್ಲಿ 7 ಜನರು, ಒಂದು ಬೆಕ್ಕಿದೆ; ಸುಲಭವಲ್ಲ ಈ ಚಾಲೆಂಜ್, ನಿಮ್ಮ ಕಣ್ಣುಗಳಿಗೆ ಇದು ಸವಾಲು!

FAQ ಗಳು:

1.ವೈರಲ್ ಆಪ್ಟಿಕಲ್ ಭ್ರಮೆಯಲ್ಲಿ ಬೆಕ್ಕು ಎಲ್ಲಿದೆ?

ಮರದ ಕೆಳಗೆ ಬಲಭಾಗದಲ್ಲಿ ನೀವು ಬೆಕ್ಕನ್ನು ಕಾಣಬಹುದು. ಬೆಕ್ಕು ಪೊದೆಯಲ್ಲಿ ಅಡಗಿಕೊಂಡಿದೆ.

2.ಬೆಕ್ಕನ್ನು ಗುರುತಿಸುವುದು ಏಕೆ ತುಂಬಾ ಕಷ್ಟವಾಗಿತ್ತು?

ಬೆಕ್ಕು ನೆರಳುಗಳು ಮತ್ತು ವಸ್ತುಗಳಲ್ಲಿ ಸಂಪೂರ್ಣವಾಗಿ ಬೆರೆತುಹೋಗಿದೆ. ಹಾಗಾಗಿ ಬೆಕ್ಕು ಸ್ಪಷ್ಟವಾಗಿ ಕಾಣಿಸಲ್ಲ.

3.ಆಪ್ಟಿಕಲ್ ಭ್ರಮೆಗಳನ್ನು ಏಕೆ ಪರಿಹರಿಸಬೇಕು?

ಆಪ್ಟಿಕಲ್ ಭ್ರಮೆ ಸವಾಲುಗಳನ್ನು ಪರಿಹರಿಸೋದರಿಂದ ಮೆದುಳು ಮತ್ತು ಕಣ್ಣುಗಳಿಗೆ ಉತ್ತಮ ವ್ಯಾಯಾಮವಾಗಬಹುದು. ಮಕ್ಕಳಿಗೆ ಈ ಚಟುವಟಿಕೆ ತುಂಬಾ ಒಳ್ಳೆಯದ್ದು ಎಂದು ಪರಿಗಣಿಸಲಾಗುತ್ತದೆ.