Asianet Suvarna News Asianet Suvarna News

ಈ ಚಿತ್ರದಲ್ಲಿ 7 ಜನರು, ಒಂದು ಬೆಕ್ಕಿದೆ; ಸುಲಭವಲ್ಲ ಈ ಚಾಲೆಂಜ್, ನಿಮ್ಮ ಕಣ್ಣುಗಳಿಗೆ ಇದು ಸವಾಲು!

ಈ ಚಿತ್ರದಲ್ಲಿ ಏಳು ಜನರು ಮತ್ತು ಒಂದು ಬೆಕ್ಕು ಅಡಗಿದೆ. ಕೇವಲ 10 ಸೆಕೆಂಡ್‌ಗಳಲ್ಲಿ ನೀವು ಅವರನ್ನು ಹುಡುಕಬಲ್ಲಿರಾ? ಸೂಕ್ಷ್ಮವಾಗಿ ಗಮನಿಸಿ, ಚಿತ್ರದೊಳಗೆ ಅಡಗಿರುವ ಚಿತ್ರಗಳು ನಿಮಗೆ ಕಾಣಿಸಬಹುದು.

find seven adults and one  cat in 10 second optical illusion test pic mrq
Author
First Published Sep 2, 2024, 3:53 PM IST | Last Updated Sep 2, 2024, 3:53 PM IST

ಬೆಂಗಳೂರು: ಒಮ್ಮೊಮ್ಮೆ ನಮ್ಮ ಕಣ್ಣುಗಳೇ ನಮಗೆ ಮೋಸ ಮಾಡಬಹುದು ಎಂಬ ಮಾತಿದೆ. ಯಾವುದೇ ವಸ್ತುವನ್ನು ಸೂಕ್ಷ್ಮವಾಗಿ ನೋಡಿದ್ರೆ ಅದರಲ್ಲಿ ಹಲವು ಚಿಹ್ನೆ, ಚಿತ್ರಗಳನ್ನು ನೋಡಬಹುದಾಗಿದೆ. ಕೆಲ ಕಲಾವಿದರ ಇಂತಹ ಚಿತ್ರಗಳನ್ನು ರಚಿಸುತ್ತಾರೆ. ಕಲಾಪ್ರೇಮಿಗಳು ಇಂತಹ ಪೇಂಟಿಂಗ್‌ಗಳಿಗೆ ಭಾರೀ ಮೊತ್ತವನ್ನು ನೀಡಿ ಖರೀದಿಸುತ್ತಾರೆ. ಸಾಮಾನ್ಯ ಜನರಿಗೆ ಅದೊಂದು ಪೇಂಟಿಂಗ್ ಮಾತ್ರ ಆಗುತ್ತಿರುತ್ತದೆ. ಆದ್ರೆ ಕಲಾಪ್ರೇಮಿಗೆ ಅದೊಂದು ಹೊಸ ಲೋಕವೇ ಆಗಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಪಟ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. 

ಇಂದು ಇಂತಹ ಚಿತ್ರಗಳನ್ನು ಆಪ್ಟಿಕಲ್ ಇಲ್ಯೂಸನ್ ಎಂದು ಕರೆಯಲಾಗುತ್ತದೆ. ಇಂತಹ ಚಿತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳು ಸೇರಿರುತ್ತವೆ. ಇದೇ ಮಾದರಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ನಿಮ್ಮ ಕಣ್ಣುಗಳಿಗೆ ಸವಾಲು ನೀಡುತ್ತದೆ. ಈ ಚಿತ್ರದಲ್ಲಿ ಏಳು ಜನರು ಮತ್ತು ಒಂದು ಬೆಕ್ಕಿದೆ. ಕೇವಲ 10 ಸೆಕೆಂಡ್‌ನಲ್ಲಿ ಹುಡುಕಬೇಕು. 

ವೈರಲ್ ಆಗಿರುವ ಚಿತ್ರದಲ್ಲಿ ಬಿಳಿ ಪೇಪರ್ ಮೇಲೆ ಕಪ್ಪು ಇಂಕ್‌ನಿಂದ ಗೆರೆಗಳನ್ನು ಎಳೆದಂತೆ ಕಾಣಿಸುತ್ತಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರೊಳಗಿನ ಒಂದೊಂದೇ ಚಿತ್ರಗಳು ಕಾಣಿಸುತ್ತವೆ. ಆದರೆ 10 ಸೆಕೆಂಡ್‌ನಲ್ಲಿ ಏಳು ಜನರು ಮತ್ತು ಬೆಕ್ಕು ಹುಡುಕೋದು ಕಷ್ಟದ ಕೆಲಸ ಎಂಬುವುದು ಹಲವರ ಅಭಿಪ್ರಾಯವಾಗಿದೆ.

Optical IllusionTest: ಫೋಟೋ ನೋಡಿ ನೀವು ಫ್ಲೆಂಡ್ಲೀನಾ, ಫ್ಲರ್ಟ್ ಮಾಡೋ ಸ್ವಭಾವದವರಾ..ತಿಳ್ಕೊಳ್ಳಿ

Instagram ನಲ್ಲಿ t_le_chic ಹೆಸರಿನ ಖಾತೆಯಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿಕೊಳ್ಳಲಾಗಿದೆ. ಹಲವರು ನಮಗೆ ಕೇವಲ ಆರು ಜನರು  ಮತ್ತು  ಒಂದು ಬೆಕ್ಕು ಕಾಣಿಸಿದೆ. ನಮಗೆ ಇನ್ನೊಬ್ಬ ವ್ಯಕ್ತಿ ಕಾಣಿಸುತ್ತಿಲ್ಲ. ನಮಗೆ ಆ ಆರು ಜನರು ಕಾಣಿಸುತ್ತಿಲ್ಲ. 10 ಸೆಕೆಂಡ್‌ನಲ್ಲಿ ಇದು ಸಾಧ್ಯವೇ ಇಲ್ಲ. ಈ ಸವಾಲನ್ನು ಪೂರ್ಣಗೊಳಿಸಲು ನಿಮಗೆ ಹೇಗೆ ಸಾಧ್ಯ ಆಯ್ತು ಅಂತಾನೂ ಕೇಳಲಾಗಿದೆ.

 
 
 
 
 
 
 
 
 
 
 
 
 
 
 

A post shared by Tonya™️ (@t_le_chic)

ಇಂದು ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆ ಅಂತಹ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಈ ಫೋಟೋಗಳು ಹಲವು ಚಿತ್ರಗಳನ್ನು ಒಳಗೊಂಡಿರುತ್ತವೆ. ಹಲವು ಫೋಟೋಗಳನ್ನು ಒಳಗೊಂಡ ಚಿತ್ರ ಇದಾಗಿರುತ್ತದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದಲ್ಲಿ ಅಡಗಿರುವ ಫೋಟೋಗಳು ಗೋಚರಿಸುತ್ತವೆ. 

ಈ ಫೋಟೋದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದು ನಿಮ್ಮ ವ್ಯಕ್ತಿತ್ವ ತೋರಿಸುವ ಚಿತ್ರ!

find seven adults and one  cat in 10 second optical illusion test pic mrq

Latest Videos
Follow Us:
Download App:
  • android
  • ios