Optical Illusion Test: ಹಚ್ಚ ಹಸಿರಿನ ಚಿತ್ರದೊಳಗೆ ಅಡಗಿರುವ ಹಾವನ್ನು ಹುಡುಕುವ ಆಪ್ಟಿಕಲ್ ಇಲ್ಯೂಷನ್ ಸವಾಲು. ನಿಮ್ಮ ಚುರುಕುತನ ಪರೀಕ್ಷಿಸಿ, ಸರೀಸೃಪವನ್ನು ಪತ್ತೆ ಹಚ್ಚಿ.

Optical illusion Challenge: ಇಂದು ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯುಷನ್ ಹೆಸರಿನ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇಂತಹ ಫೋಟೋಗಳು ಕಣ್ಣುಗಳು ಮತ್ತು ಮೆದುಳಿಗೆ ಕೆಲಸ ನೀಡುತ್ತವೆ. ಈ ಚಿತ್ರಗಳಲ್ಲಿ ಅಡಗಿರುವ ವಸ್ತು ಅಥವಾ ಅದರಲ್ಲಿರುವ ಮತ್ತೊಂದು ಚಿತ್ರವನ್ನು ಹುಡುಕಾಟ ನಡೆಸೋದು ಸವಾಲಿನ ಕೆಲಸವಾಗಿರುತ್ತದೆ. ತಾಳ್ಮೆ ಮತ್ತು ಏಕಾಗ್ರತೆಯಿಂದ ಆಪ್ಟಿಕಲ್ ಇಲ್ಯುಷನ್ ಫೋಟೋ ಗಮನಿಸಿದ್ರೆ ಅದರಲ್ಲಿರೋ ರಹಸ್ಯ ಬಯಲಾಗುತ್ತದೆ. ಇಂದು ಅಂತಹವುದೇ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಆಪ್ಟಿಕಲ್ ಇಲ್ಯುಷನ್ ಚಿತ್ರದಲ್ಲಿ ಮರ-ಗಿಡಗಳಿರೋ ಹಚ್ಚ ಹಸಿರಿನ ಫೋಟೋ ಕಾಣಬಹುದಾಗಿದೆ. ಈ ಹಸಿರು ಫೋಟೋದಲ್ಲಿ ಹಾವು ಸಹ ಇದೆ. ಈ ಹಾವು ಎಲ್ಲಿದೆ ಎಂಬುದನ್ನು ವೀಕ್ಷಕರು ಪತ್ತೆ ಮಾಡಬೇಕಿದೆ. ಈ ಫೋಟೋ ನೋಡುಗರ ತಲೆಗೆ ಹುಳು ಬಿಟ್ಟಿದೆ. ಮರ-ಗಿಡಗಳ ಮಧ್ಯೆ ಅಡಗಿರೋ ಹಾವು ಎಲ್ಲಿದೆ ಎಂದು ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ.

ಹಸಿರು ಪರಿಸರದಲ್ಲಿ ಅಡಗಿರೋ ಸರೀಸೃಪ

ಅರಣ್ಯ ಪ್ರದೇಶದಲ್ಲಿ ಕ್ಲಿಕ್ಕಿಸಿದಂತೆ ಕಾಣುವ ಫೋಟೋದಲ್ಲಿಯೇ ಹಾವು ತನ್ನನ್ನು ಅಡಗಿಸಿಕೊಂಡಿದೆ. ಜೀವಿಗಳು ವೈರಿಗಳಿಂದ ತಪ್ಪಿಸಿಕೊಳ್ಳಲು ನಿಸರ್ಗವೇ ಹೇಗೆ ಸಹಾಯ ಮಾಡುತ್ತೆ ಎಂಬುದನ್ನು ಗಮನಿಸಬಹುದು. ಪ್ರಕೃತಿಯ ಸೃಷ್ಟಿ ಊಹೆಗೂ ನಿಲುಕದ್ದು. ಇಂತಹ ಹಲವು ವಿಸ್ಮಯಗಳನ್ನು ಪ್ರಕೃತಿಯಲ್ಲಿ ಕಾಣಬಹುದಾಗಿದೆ. ಈ ಆಪ್ಟಿಕಲ್ ಭ್ರಮೆ ಚಿತ್ರವನ್ನು ದಿಟ್ಟಿಸಿ ನೋಡಿದಷ್ಟು ಹಾವು ಹುಡುಕೋದು ಕಷ್ಟಕರವಾಗುತ್ತದೆ. ತುಂಬಾನೇ ಸರಳವಾಗಿ ಫೋಟೋ ಗಮನಿಸಿದ್ರೆ ಕಡಿಮೆ ಸಮಯದಲ್ಲಿಯೇ ಹಸಿರು ಪರಿಸರದಲ್ಲಿ ಅಡಗಿರೋ ಸರೀಸೃಪ ನಿಮ್ಮ ಕಣ್ಣುಗಳಿಗೆ ಗೋಚರವಾಗುತ್ತದೆ.

ಆಪ್ಟಿಕಲ್ ಇಲ್ಯುಷನ್ ಫೋಟೋ ಹೆಚ್ಚೆಚ್ಚು ವೈರಲ್ ಆಗೋದೇಕೆ?

ಈ ಫೋಟೋಗಳು ತುಂಬಾನೇ ಸರಳವಾಗಿರುತ್ತವೆ. ಹಾಗಾಗಿ ಕಡಿಮೆ ಸಮಯದಲ್ಲಿ ವೈರಲ್ ಆಗುತ್ತವೆ. ಕೆಲವರು ಮನರಂಜನೆಗಾಗಿ ಆಪ್ಟಿಕಲ್ ಭ್ರಮೆ ಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ. ಈ ಚಿತ್ರದಲ್ಲಿ ಸೀಕ್ರೆಟ್ ಪತ್ತೆ ಮಾಡೋದನ್ನು ಕೆಲವರು ತಮ್ಮಲ್ಲಿಯೇ ಸವಾಲು ಆಗಿ ಸ್ವೀಕರಿಸುತ್ತಾರೆ. ಈ ಚಿತ್ರಗಳಿಂದ ಮೆದಳು ಕ್ಷಿಪ್ರವಾಗಿ ಕೆಲಸ ಮಾಡುತ್ತೆ. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತುಗಳಿವೆ. ನಿಮ್ಮ ಮೆದಳು ನೆರಳು, ಬಣ್ಣಗಳನ್ನು ಹೇಗೆ ಪರಿಶೀಲಿಸಲಾಗುತ್ತೆ ಎಂಬುದನ್ನು ತಿಳಿದುಕೊಳ್ಳಲು ಆಪ್ಟಿಕಲ್ ಭ್ರಮೆ ಚಿತ್ರಗಳು ಸಹಾಯ ಮಾಡುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಆಪ್ಟಿಕಲ್ ಇಲ್ಯುಷನ್ ಫೋಟೋಗಳು ನೋಡುಗರನ್ನು ಸೆಳೆಯುತ್ತವೆ.

ಆನ್‌ಲೈನ್ ಭ್ರಮೆಯ ಫೋಟೋಗಳು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕರೂ, ಜನರು ಅದನ್ನು ಸವಾಲಾಗಿ ತೆಗೆದುಕೊಂಡು ಎಷ್ಟು ಕಡಿಮೆ ಸಮಯದಲ್ಲಿ ಚಿತ್ರದ ರಹಸ್ಯ ರಿವೀಲ್ ಮಾಡಿದೆ ಎಂದು ಬರೆದುಕೊಂಡು ಹೆಮ್ಮೆಯಿಂದ ಶೇರ್ ಮಾಡಿಕೊಳ್ಳುತ್ತಾರೆ. ಹಾಗೇ ಈ ಆಪ್ಟಿಕಲ್ ಭ್ರಮೆ ಚಿತ್ರಗಳ ಚಾಲೆಂಜ್ ಸ್ವೀಕರಿಸುವಂತೆ ತಮ್ಮ ಸೋಶಿಯಲ್ ಮೀಡಿಯಾ ಸ್ನೇಹಿತರಿಗೆ ಶೇರ್ ಮಾಡುತ್ತಾರೆ. ಕುತೂಹಲ ಮತ್ತು ಸ್ಪರ್ಧೆಯಿಂದಾಗಿ ಈ ಆಪ್ಟಿಕಲ್ ಭ್ರಮೆಗಳು ತುಂಬಾ ಆಕರ್ಷಕವಾಗಿ ಎಲ್ಲರನ್ನು ಸೆಳೆಯುತ್ತವೆ. ಪದೇ ಪದೇ ಜನರು ಹೆಚ್ಚಿನದಕ್ಕಾಗಿ ಮತ್ತೆ ಮತ್ತೆ ಬರುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಅಡಗಿರುವ ಹಾವು ಸಿಕ್ಕಿದೆಯಾ?

ಈ ಆಪ್ಟಿಕಲ್ ಇಮೇಜ್ ನಿಮಗೆ ನಿಜವಾಗಿಯೋ ದೊಡ್ಡ ಸವಾಲು ನೀಡುತ್ತದೆ. ಜಾಣತನದಿಂದ ಫೋಟೋ ಗಮನಿಸಿದ್ರೆ ಅದರಲ್ಲಿರುವ ಹಾವು ನಿಮಗೆ ಖಂಡಿತವಾಗಿ ಸಿಗುತ್ತದೆ. ರೆಡಿಟ್ಟ್‌ನಲ್ಲಿರುವ ಫೋಟೋ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಜನರು ತಾವು ಹೆಚ್ಚು ನೋಡುತ್ತಿದ್ದಂತೆ, ಹಾವನ್ನು ಗುರುತಿಸುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಕೆಲವರು ಫೋಟೋವನ್ನು ಹತ್ತಿರದಿಂದಲೇ ನೋಡುತ್ತಿರಿ. ಅದರಲ್ಲಿರುವ ಹಾವು ನಿಮಗೆ ಕಾಣಿಸುತ್ತದೆ ಎಂದು ಸಲಹೆ ನೀಡಿದ್ದಾರೆ. ಈ ಆಪ್ಟಿಕಲ್ ಇಮೇಜ್‌ನಲ್ಲಿ ನಿಮಗೆ ಹಾವು ಸಿಕ್ಕಿದೆಯಾ ಅಥವಾ ಇಲ್ಲವಾ ಎಂಬುದನ್ನು ಕಮೆಂಟ್ ಮಾಡಿ.