ಇದ್ರಲ್ಲಿ ಮೊಲ ಎಲ್ಲಿದೆ? ಟಿಕ್ ಟಿಕ್ ಒನ್… 8 ಸೆಕೆಂಡ್ ಇರೋದು ಬೇಗ ಹೇಳಿ, ನಿಮ್ಮ ವ್ಯಕ್ತಿತ್ವ ಚೆಕ್ ಮಾಡ್ಕೊಳ್ಳಿ
ಆಪ್ಟಿಕಲ್ ಭ್ರಮೆ ಗೇಮ್ ಗಳು ಕೆಲವರಿಗೆ ಮೋಜು ನೀಡುತ್ವೆ. ಫಟಾ ಫಟ್ ಅಂತಾ ಗುಟ್ಟುರಟ್ಟು ಮಾಡೋದ್ರಲ್ಲಿ ಆನಂದವಿದೆ. ಜೊತೆಗೆ ಇದು ನಿಮ್ಮ ಮೆದುಳನ್ನು ಮತ್ತಷ್ಟು ಚುರುಕುಗೊಳಿಸುತ್ತೆ. ಇಂದು ಮತ್ತೊಂದು ಒಗಟು ನಿಮ್ಮ ಮುಂದಿದೆ.
ಮೆದುಳಿಗೆ ನೀವು ಕೆಲಸ ಕೊಡದೆ ಹೋದ್ರೆ ನಿಮ್ಮ ಮೆದುಳಿಗೆ ತುಕ್ಕು ಹಿಡಿಯುತ್ತೆ. ಆಲೋಚನಾ ಶಕ್ತಿಯನ್ನೇ ಮೆದುಳು ಕಳೆದುಕೊಳ್ಳಲು ಶುರು ಮಾಡುತ್ತೆ. ಸದಾ ಚುರುಕಾಗಿರಬೇಕೆಂದ್ರೆ ಮೆದುಳಿಗೆ ಒಂದಿಷ್ಟು ಕೆಲಸ ನೀಡ್ತಾನೆ ಇರ್ಬೇಕು. ಹೆಚ್ಚು ಕೆಲಸ ಮಾಡಿದಷ್ಟು ನಿಮ್ಮ ಮೆದುಳು ಹೆಚ್ಚು ಚುರುಕಾಗುತ್ತೆ, ನೀವು ಬುದ್ಧಿವಂತರಾಗ್ತೀರಿ ಅನ್ನೋದ್ರಲ್ಲಿ ಸಂಶಯವಿಲ್ಲ.
ನಿಮ್ಮ ಮೆದುಳ (Brain) ನ್ನು ನೀವು ಮತ್ತಷ್ಟು ಶಾರ್ಪ್ ಮಾಡಲು ಅನೇಕ ವಿಧಾನಗಳಿವೆ. ನೀವು ಪಝಲ್ ಗೇಮ್‌ಗಳನ್ನು ಆಡಬಹುದು ಅಥವಾ ಆಪ್ಟಿಕಲ್ ಭ್ರಮೆಯಲ್ಲಿ ಅಡಗಿರುವ ಒಗಟುಗಳನ್ನು ಬಿಡಿಸಬಹುದು. ಆಪ್ಟಿಕಲ್ ಭ್ರಮೆ (Optical Illusion) ಸಾಕಷ್ಟು ಆಸಕ್ತಿದಾಯಕವಾಗಿರುತ್ತವೆ. ಅನೇಕರು ಇದನ್ನು ಬಿಡಿಸಲು ಆಸಕ್ತಿ ತೋರುತ್ತಾರೆ. ಬೇಗ ಬೇಗ ಅದನ್ನು ಬಿಡಿಸುವ ಪ್ರಯತ್ನ ನಡೆಸ್ತಾರೆ.
ಆಪ್ಟಿಕಲ್ ಚಿತ್ರಗಳಲ್ಲಿ ಅಡಗಿರುವ ಗುಟ್ಟನ್ನು ಪತ್ತೆ ಹಚ್ಚೋದು ಸುಲಭವಲ್ಲ. ಚಿತ್ರ ನೋಡಿ ಜನ ಕನ್ ಫ್ಯೂಸ್ (Confuse) ಆಗೋದೇ ಹೆಚ್ಚು. ಯಾಕೆಂದ್ರೆ ನಮ್ಮ ಕಣ್ಣೇ ನಮಗೆ ಮೋಸ ಮಾಡಿರುತ್ತದೆ. ಇಲ್ಲವೆ ತಕ್ಷಣ ಎಲ್ಲಿ ತಪ್ಪಿದೆ ಅಥವಾ ಯಾವ ವಸ್ತು ಅಡಗಿ ಕುಳಿತಿದೆ ಎಂದು ನಮ್ಮ ಮೆದುಳಿಗೆ ಅರ್ಥವೇ ಆಗೋದಿಲ್ಲ. ಇಂದು ಮತ್ತೊಮ್ಮೆ ಆಪ್ಟಿಕಲ್ ಇಲ್ಯೂಷನ್ ಚಿತ್ರ ನಿಮ್ಮ ಮುಂದಿದೆ. ಈ ಚಿತ್ರದಲ್ಲಿ ಮೊಲ ಎಲ್ಲಿದೆ ಎಂದು ನೀವು ಹೇಳ್ಬೇಕು. ಕೇವಲ ಎಂಟು ಸೆಕೆಂಡುಗಳನ್ನು ನೀವು ಮೊಲವನ್ನು ಹುಡುಕುವ ಪ್ರಯತ್ನ ನಡೆಸಿ.
ಎಲ್ಲರೂ ನಿಮ್ಮ ಆಪ್ತರಲ್ಲ.. ಖುಷಿ ಹಂಚಲು ಹೋಗಿ ದುಃಖಪಡಬೇಡಿ
ಚಿತ್ರದಲ್ಲಿ ಏನಿದೆ? : ಚಿತ್ರದಲ್ಲಿ ಹಸಿರಿನಿಂದ ಕೂಡಿದ ಒಂದು ಬೆಟ್ಟಿವಿದೆ. ಒಂದು ಕಾಲುದಾರಿಯಿದ್ದು, ದಾರಿ ಅಕ್ಕಪಕ್ಕ ಸಂಪೂರ್ಣ ಹಸಿರನ್ನು ನೀವು ನೋಡ್ಬಹುದು. ಈ ಹಸಿರಿನ ಮಧ್ಯೆ ಮೊಲವೊಂದು ಅಡಗಿ ಕುಳಿತಿದೆ. ಅದು ಎಲ್ಲಿದೆ ಎಂಬುದನ್ನು ನೀವು ಪತ್ತೆ ಮಾಡಬೇಕಾಗುತ್ತದೆ.
ಮೊಲ ಎಲ್ಲಿದೆ ಗೊತ್ತಾ? : ಎಂಟು ಸೆಕೆಂಡಿನಲ್ಲಿ ಮೊಲ ನಿಮ್ಮ ಕಣ್ಣಿಗೆ ಬಿದ್ರೆ ಸರಿ. ನಿಮ್ಮ ಬುದ್ಧಿ ತುಂಬಾ ಚುರುಕಾಗಿದೆ ಎಂದೇ ಅರ್ಥ. ಒಂದ್ವೇಳೆ ಮೊಲ ಕಣ್ಣಿಗೆ ಬಿದ್ದಿಲ್ಲವೆಂದ್ರೆ ಚಿಂತೆಯಿಲ್ಲ. ಸ್ವಲ್ಪ ಸೂಕ್ಷ್ಮವಾಗಿ ಈ ಚಿತ್ರವನ್ನು ಗಮನಿಸಿ. ರಸ್ತೆ ತಿರುವಿರುವ ಭಾಗದಲ್ಲಿ ಹುಲ್ಲಿನ ಮಧ್ಯೆ ಹಾವಿನ ಆಕಾರದಂತಿರುವ ಒಂದು ಆಕೃತಿ ನಿಮ್ಮ ಕಣ್ಣಿಗೆ ಬೀಳುತ್ತದೆ. ಅದೇ ಮೊಲ.
ಆಪ್ಟಿಕಲ್ ಇಲ್ಯೂಷನ್ ಎಂದರೇನು? ಅದು ಶುರುವಾಗಿದ್ದು ಹೇಗೆ? : ಆಪ್ಟಿಕಲ್ ಇಲ್ಯೂಷನ್ ಎನ್ನುವುದು ಆಪ್ಟಿಕಲ್ ಭ್ರಮೆಯಾಗಿದೆ. ಇದರಲ್ಲಿ ನಾವು ನೈಜ ವಸ್ತುವಿನ ಬದಲಾಗಿ ವಿಭಿನ್ನ ವಸ್ತು ಅಥವಾ ಆಕಾರವನ್ನು ನೋಡುತ್ತೇವೆ. ಸರಳವಾಗಿ ಹೇಳುವುದಾದರೆ, ಆಪ್ಟಿಕಲ್ ಭ್ರಮೆಯು ಕಣ್ಣು ಮತ್ತು ಮೆದುಳಿನ ರಚನೆಯಿಂದ ಉಂಟಾಗುವ ಭ್ರಮೆಯಾಗಿದೆ. ಒಂದು ವಸ್ತುವಿನ ಮೇಲೆ ಬೆಳಕು ಬಿದ್ದಾಗ, ಆ ಬೆಳಕು ಆ ವಸ್ತುವಿನಿಂದ ಪ್ರತಿಫಲಿಸುತ್ತದೆ ಮತ್ತು ನಮ್ಮ ಕಣ್ಣುಗಳಿಗೆ ಬಡಿಯುತ್ತದೆ, ಅದರ ಪರಿಣಾಮವಾಗಿ ಆ ವಸ್ತುವು ನಮಗೆ ಗೋಚರಿಸುತ್ತದೆ. ಇದು 20 ನೇ ಶತಮಾನದಲ್ಲಿ ಶುರುವಾಯ್ತು ಎನ್ನಲಾಗುತ್ತದೆ. ಆಗ ಅದು ಅತ್ಯಂತ ಜನಪ್ರಿಯ ಕಲೆಯಾಗಿತ್ತು. ನಂತರ ಈ ಕಲೆಯನ್ನು ಪ್ರತಿಮೆಗಳ ತಯಾರಿಕೆಯಲ್ಲಿ ಬಳಸಲಾಯಿತು.
ವಿವಾಹಿತ ಮಹಿಳೆ ಕಡೆ ಕೆಲವು ಪುರುಷರಿಗೇಕೆ ವಿಪರೀತ ಆಕರ್ಷಣೆ?
ಕೌರವರ ರಾಜಕುಮಾರ ದುರ್ಯೋಧ,ಯುಧಿಷ್ಠರನನ್ನು ಭೇಟಿಯಾಗಲು ಅರಮನೆಗೆ ಬಂದಾಗ, ಕಾರಿಡಾರ್‌ನಲ್ಲಿ ಒಂದು ಘಟನೆ ನಡೆಯುತ್ತದೆ. ನೆಲದ ಮೇಲೆ ಮಾಡಿದ ಕೆತ್ತನೆಗಳನ್ನು ನೀರು ಎಂದು ಭಾವಿಸಿ ಆತ ಜಿಗಿಯುತ್ತಾನೆ. ಆದ್ರೆ ಆತ ಜಿಗಿದಿದ್ದು ತಪ್ಪು ಸ್ಥಳವಾಗಿರುತ್ತದೆ. ನೀರು ಎಂದು ಭಾವಿಸಿ ಜಿಗಿದ ದುರ್ಯೋದನ ನಿಜವಾದ ನೀರಿಗೆ ಬೀಳ್ತಾನೆ. ಇದನ್ನು ನೋಡಿ ರಾಜಕುಮಾರಿ ದ್ರೌಪದಿ ನಗ್ತಾಳೆ ಎಂಬ ಕಥೆಯಿದೆ. ಅಲ್ಲಿಂದಲೇ ಆಪ್ಟಿಕಲ್ ಭ್ರಮೆಯನ್ನು ಸೃಷ್ಟಿಸುವ ಕಲೆಯ ಮೇಲೆ ಭಾರತದಲ್ಲಿ ಪ್ರಯೋಗಗಳು ನಡೆಯುತ್ತಿವೆ ಎನ್ನಲಾಗಿದೆ.