Asianet Suvarna News Asianet Suvarna News

Optical Illusion: ನೀವ್‌ ತುಂಬಾ ಸೆನ್ಸಿಟೀವಾ ಅಥವಾ ಸ್ಟ್ರಾಂಗ್ ವ್ಯಕ್ತೀನಾ? ಫೋಟೋ ನೋಡಿ ತಿಳ್ಕೊಳ್ಳಿ

ಮಕ್ಕಳ ಮನರಂಜನೆಗೆ ಆಪ್ಟಿಕಲ್ ಭ್ರಮೆಗಳನ್ನು ಬಳಸಲಾಗುತ್ತದೆ ಎಂದು ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ ಈ ಭ್ರಮೆಗಳನ್ನು ವ್ಯಕ್ತಿಯ ಐಕ್ಯೂ ಮಟ್ಟವನ್ನು ನಿರ್ಧರಿಸಲು ಮತ್ತು ವ್ಯಕ್ತಿಯ ವ್ಯಕ್ತಿತ್ವವನ್ನು ಆಳವಾಗಿ ಅಗೆಯಲು ಬಳಸಬಹುದು. ಕೆಳಗೆ ನೀಡಲಾದ ಆಪ್ಟಿಕಲ್ ಇಲ್ಯೂಶನ್ ಫೋಟೋವನ್ನು ನೋಡಿ, ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ. 

This Optical Illusion Will Reveal Your True Personality Vin
Author
First Published Aug 25, 2023, 10:33 AM IST

ಆಪ್ಟಿಕಲ್ ಇಲ್ಯೂಶನ್‌ ಫೋಟೋಸ್ ಅಥವಾ ಭ್ರಮೆಯ ಫೋಟೋಗಳು ಮಾನವನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಹಲವಾರು ವರ್ಷಗಳನ್ನು ಕಳೆದಿದ್ದಾರೆ. ಕೆಲವರು ಆಪ್ಟಿಕಲ್ ಇಲ್ಯೂಶನ್ ಮನಸ್ಸನ್ನು ಚುರುಕುಗೊಳಿಸುತ್ತದೆ ಎನ್ನುತ್ತಾರೆ. ಇನ್ನು ಕೆಲವರು, ಇದನ್ನು ಜಸ್ಟ್ ಟೈಂ ಪಾಸ್‌ಗೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಪ್ರಯೋಜನವಿದ್ದರೂ, ಇಲ್ಲದಿದ್ದರೂ ಇಂಥಾ ಆಪ್ಟಿಕಲ್ ಇಲ್ಯೂಶನ್ ಫೋಟೋಸ್ ಆಗಾಗ ವೈರಲ್ ಅಗುತ್ತಲೇ ಇರುತ್ತವೆ. ಅಂಥಹದ್ದೇ ಗೊಂದಲಮಯವಾದ ಪೋಟೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಆ ಬಗ್ಗೆ, ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಆಪ್ಟಿಕಲ್ ಭ್ರಮೆಯನ್ನು ಪ್ರಯತ್ನಿಸಿ.

ಚಿತ್ರದಲ್ಲಿ ನಿಮಗೇನು ಕಾಣಿಸುತ್ತಿದೆ?
ಮೊದಲಿಗೆ ಚಿತ್ರವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ. ಇಮೇಜ್ ನೋಡಿದ ತಕ್ಷಣ ನಿಮ್ಮ ಮನಸ್ಸಿನಲ್ಲಿ (Mind) ಯಾವ ಚಿತ್ರ ಮೂಡಿತು ಎಂಬುದನ್ನು ನಿರ್ಧರಿಸಿ. ಆಪ್ಟಿಕಲ್ ಭ್ರಮೆಯಲ್ಲಿ ನೀವು ಮೊದಲು ನೋಡುವುದು ನಿಮ್ಮ ನಿಜವಾದ ವ್ಯಕ್ತಿತ್ವದ (Personality) ಲಕ್ಷಣಗಳನ್ನು ಬಹಿರಂಗಪಡಿಸುತ್ತದೆ. ಮಾತ್ರವಲ್ಲ ನೀವು ಸೂಕ್ಷ್ಮ ಸ್ವಭಾವದವರಾ ಅಥವಾ ತುಂಬಾ ಸ್ಟ್ರಾಂಗ್ ಆಗಿರುವ ವ್ಯಕ್ತಿನಾ ಅನ್ನೋದನ್ನು ಬಹಿರಂಗಪಡಿಸುತ್ತದೆ.

ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್‌ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ

ಚಿತ್ರದಲ್ಲಿ ಮೊದಲು ಹೂವನ್ನು ಕಂಡರೆ ಅರ್ಥವೇನು?
ಇಮೇಜ್ ನೋಡಿದ ತಕ್ಷಣ ನಿಮಗೆ ಹೂವುಗಳು (Flowers) ಕಂಡರೆ, ನೀವು ಸೂಕ್ಷ್ಮ ಮತ್ತು ಅರ್ಥಗರ್ಭಿತ ವ್ಯಕ್ತಿ ಎಂದು ಅರ್ಥ. ನೀವು ಇತರರಿಗೆ ಸಂವೇದನಾಶೀಲರಾಗಿರುತ್ತೀರಿ ಮತ್ತು ಎಲ್ಲಾ ಸಂದರ್ಭಗಳಲ್ಲಿ ಅರ್ಥಗರ್ಭಿತ ಒಳನೋಟವನ್ನು ಹೊಂದಿರುತ್ತೀರಿ. ನೀವು ಉತ್ತಮ ಕೇಳುಗರೂ ಆಗಿದ್ದೀರಿ ಜೀವನ (Life)ದಲ್ಲಿ ನಿಮಗೆ ಅರ್ಥಪೂರ್ಣವೆನಿಸುವ ವಿಷಯಗಳಿಗೆ ಗಮನ ಕೊಡುತ್ತೀರಿ ಎಂದು ತಿಳಿದುಕೊಳ್ಳಬಹುದು. ಹೂವು ಸೂಕ್ಷ್ಮ ಮತ್ತು ಸರಳವಾದ ವ್ಯಕ್ತಿತ್ವವನ್ನು ಸೂಚಿಸುತ್ತದೆ. ನೀವು ಸಹಾನುಭೂತಿಯುಳ್ಳವರು ಮತ್ತು ಅರ್ಥಗರ್ಭಿತರು ಮತ್ತು ನಿಮಗೆ ಮತ್ತು ನಿಮ್ಮ ಸುತ್ತಲಿರುವ ಜನರಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡುವಲ್ಲಿ ಹೆಚ್ಚಾಗಿ ಗಮನಹರಿಸುತ್ತೀರಿ ಎಂಬುದಾಗಿದೆ.

ಚಿತ್ರದಲ್ಲಿ ಮೊದಲು ಮಹಿಳೆಯರನ್ನು ಕಂಡರೆ ಅರ್ಥವೇನು?
ಚಿತ್ರದಲ್ಲಿ ನೀವು ಮೊದಲು ನೋಡಿದ ವಸ್ತು ಇಬ್ಬರು ಮಹಿಳೆಯರಾಗಿದ್ದರೆ, ನೀವು ಸಾಕಷ್ಟು ಆಂತರಿಕ ಶಕ್ತಿಯನ್ನು ಹೊಂದಿರುವ ಮತ್ತು ಜೀವನದಲ್ಲಿ ಸವಾಲುಗಳನ್ನು ಇಷ್ಟಪಡುವ ವ್ಯಕ್ತಿ. ಇಂಥವರನ್ನು ವಜ್ರಕ್ಕೆ ಹೋಲಿಸಲಾಗುತ್ತದೆ. ಅಮೂಲ್ಯವಾದ ಕಲ್ಲಿನಂತೆ, ನೀವು ಒತ್ತಡದಲ್ಲೂ ಸಹಿಸಿಕೊಳ್ಳುತ್ತೀರಿ ಮತ್ತು ಸುಂದರ ವ್ಯಕ್ತಿಯಾಗಿ ಹೊರಹೊಮ್ಮುತ್ತೀರಿ. ಮಾತ್ರವಲ್ಲ, ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದವರು. ಹೀಗಾಗಿ ಸ್ಟ್ರಾಂಗ್ ಆಗಿರುವಂತೆ ಆಕ್ಟ್ ಮಾಡುತ್ತೀರಿ. ಆದರೆ ನಿಮ್ಮನ್ನು ಮತ್ತು ನಿಮ್ಮ ನಿಜವಾದ ವ್ಯಕ್ತಿತ್ವವನ್ನು ತಿಳಿದಿರುವ ಜನರು ನೀವು ಎಷ್ಟು ಅದ್ಭುತ ವ್ಯಕ್ತಿ ಎಂದು ತಿಳಿದಿರುತ್ತಾರೆ.

Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

ಕೆಳಗಿನ ಕಾಮೆಂಟ್‌ಗಳಲ್ಲಿ ಆಪ್ಟಿಕಲ್ ಭ್ರಮೆಯಲ್ಲಿ ನೀವು ಏನು ನೋಡಿದ್ದೀರಿ ಎಂಬುದನ್ನು ನಮಗೆ ತಿಳಿಸಿ.

Follow Us:
Download App:
  • android
  • ios