New Study: ಸಾವಿನ ನಂತ್ರವೂ ಮೆದುಳಲ್ಲಿ ಆಗೋ ಚಟುವಟಿಕೆ ನೋಡಿ ದಂಗಾದ ವಿಜ್ಞಾನಿಗಳು
ನಮ್ಮ ದೇಹ, ಅಂಗಾಗಗಳ ಬಗ್ಗೆ ಎಷ್ಟು ಸಂಶೋಧನೆ ನಡೆದ್ರೂ ಸಾಲದು. ಮೆದುಳಿನ ಬಗ್ಗೆ ವಿಜ್ಞಾನಿಗಳು ಪತ್ತೆ ಹಚ್ಚಬೇಕಾಗಿದ್ದು ಸಾಕಷ್ಟಿದೆ. ಸಾವು, ಹುಟ್ಟಿನ ಬಗ್ಗೆಯೂ ಸವಾಲಿದೆ. ಈ ಮಧ್ಯೆ ಈಗ ವಿಜ್ಞಾನಿಗಳು ಆಸಕ್ತಿಕರ ವಿಷ್ಯವೊಂದನ್ನು ಹೊರಹಾಕಿದ್ದಾರೆ.
ಹುಟ್ಟು – ಸಾವು ನಮ್ಮ ಕೈನಲ್ಲಿ ಇಲ್ಲ. ಅದೆಷ್ಟೇ ಪ್ರಯತ್ನಿಸಿದ್ರೂ ಸಾವನ್ನು ತಡೆಯೋದು ಸಾಧ್ಯವಾಗೋದಿಲ್ಲ. ಸಾವು ಯಾವಾಗ ಬರುತ್ತೆ ಎಂಬುದು ಕೂಡ ಗೊತ್ತಿರೋದಿಲ್ಲ. ಹೀಗಿರುವಾಗ ಸಾವಿನ ಕೊನೆ ಕ್ಷಣದಲ್ಲಿ ಮನುಷ್ಯನ ದೇಹ ಹೇಗೆ ವರ್ತಿಸುತ್ತೆ ಎಂಬುದನ್ನು ಪತ್ತೆ ಹಚ್ಚೋದು ಸವಾಲಿನ ಕೆಲಸ. ವಿಜ್ಞಾನಿಗಳು ಮನುಷ್ಯನ ಹುಟ್ಟು, ಸಾವು, ದೇಹದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಸಂಶೋಧನೆ ನಡೆಸುತ್ತಲೇ ಇರ್ತಾರೆ. ಈಗ ಮನುಷ್ಯ ಸಾವಿನ ಸಂದರ್ಭದಲ್ಲಿ ಹೇಗೆ ವರ್ತಿಸ್ತಾನೆ, ಆತನ ಮೆದುಳು ಹೇಗೆ ರಿಯಾಕ್ಟ್ ಮಾಡುತ್ತೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಈ ಸಂಶೋಧನಾ ವರದಿಯನ್ನು ವಿಜ್ಞಾನಗಳು ಹೊರಹಾಕಿದ್ದಾರೆ.
ಅಮೆರಿಕ (America)ದ ಮಿಚಿಗನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ (Research) ಮಾಡಿದ್ದಾರೆ. ಮಾನವನ ಮೆದುಳಿನ ಬಗ್ಗೆ ವಿಚಿತ್ರವಾದ ವಿಷಯವನ್ನು ಪತ್ತೆ ಹಚ್ಚಿದ್ದಾರೆ. ವ್ಯಕ್ತಿಯೊಬ್ಬ ಸಾವಿನ ಅಂಚಿನಲ್ಲಿರುವಾಗ ಆತನ ಮೆದುಳು ಹೇಗೆ ವರ್ತಿಸುತ್ತದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಸಾವಿನ ವೇಳೆ ಮೆದುಳಿನಲ್ಲಿ ವಿಚಿತ್ರವಾದ ಚಟುವಟಿಕೆ ನಡೆಯುತ್ತದೆ ಎಂದು ವಿಜ್ಞಾನಿ (Scientist) ಗಳು ಹೇಳಿದ್ದಾರೆ. ಈ ಮೊದಲು ಪ್ರಾಣಿಗಳ ಮೆದುಳಿನಲ್ಲಿ ಇದೇ ರೀತಿಯ ಚಟುವಟಿಕೆ ಕಂಡುಬಂದಿತ್ತು. ಪ್ರಾಣಿ ಹಾಗೂ ಮನುಷ್ಯನ ಹೃದಯ ಬಡಿತ ನಿಂತು ಹೋದ್ರೂ ಅವರ ಮೆದುಳು ಕೆಲಸ ಮಾಡುತ್ತಿರುತ್ತದೆ.
ಸರಳವಾದ್ರೂ ಪರಿಣಾಮಕಾರಿ ಈ ಚಿಕಿತ್ಸಾ ವಿಧಾನಗಳು..
ಸಾವಿಗೆ (Death) ಸಮೀಪವಿದ್ದ ವ್ಯಕ್ತಿಯ ಮೆದುಳಿನಲ್ಲಿ ಸಂಭವಿಸುವ ಅಲೆಗಳನ್ನು ವಿಜ್ಞಾನಿಗಳು ಕಳೆದ ವರ್ಷ ಪತ್ತೆ ಮಾಡಿದ್ದರು. ದುಃಖದ ಸಂದರ್ಭಗಳಲ್ಲಿ ಮೆದುಳಿನಲ್ಲಿ ವಿಶೇಷ ರೀತಿಯ ಚಟುವಟಿಕೆ ಇರುತ್ತದೆ ಎಂದಿರುವ ವಿಜ್ಞಾನಿಗಳು, ಇದನ್ನು ಗಾಮಾ ತರಂಗ ಎಂದು ಹೆಸರಿಸಿದ್ದಾರೆ. ಸಾವಿಗಿಂತ ಮೊದಲು ಮನುಷ್ಯನ ಮೆದುಳಿನಲ್ಲಿ ನಡೆಯುವ ಚಟುವಟಿಕೆ ಎಷ್ಟು ವೇಗವಾಗಿರುತ್ತದೆ ಅಂದ್ರೆ ಮೆದುಳು ಬ್ಲಾಸ್ಟ್ (Brain Blast) ಆಗುವಂತೆ ತೋರುತ್ತದೆ ಎಂದು ಮನುಷ್ಯನ ಸಾವಿಗೆ ಸಂಬಂಧಿಸಿದಂತೆ ನಡೆದ ಇನ್ನೊಂದು ಸಂಶೋಧನೆಯಲ್ಲಿ ಹೇಳಲಾಗಿದೆ.
2013ರಲ್ಲಿ ನರವಿಜ್ಞಾನಿ ಜಿಮೊ ಬೊರ್ಜಿಗಿನ್ ಮತ್ತು ಸಹೋದ್ಯೋಗಿಗಳು, ಸಾವಿನ ಸಮಯದಲ್ಲಿ ಎಲ್ಲಾ ಮನುಷ್ಯರ ಮೆದುಳಿನಲ್ಲಿಯೂ ಒಂದೇ ರೀತಿಯ ಚಟುವಟಿಕೆ ನಡೆಯುತ್ತದೆಯೇ ಎಂಬುದನ್ನು ಪತ್ತೆ ಮಾಡುವ ಪ್ರಯತ್ನ ನಡೆಸಿದ್ದರು. ಪ್ರಾಣಿಗಳಿಗಿಂತ ಮನುಷ್ಯದ ಮೆದಳು ಹೆಚ್ಚು ವೇಗವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಹೃದಯ ಸ್ತಂಭನದ ನಂತರ ಬದುಕಿಬಂದ ಜನರ ಅನುಭವವನ್ನು ಕೂಡ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
Health Tips: ಅಧಿಕ ಪ್ರೊಟೀನ್‌ನಿಂದ ಕಿಡ್ನಿಗೆ ಹಾನಿ, ಇದು ನಿಜವೇ?
ಬೋರ್ಜಿಗಿನ್ ಮತ್ತು ಅವರ ಸಹೋದ್ಯೋಗಿಗಳು ಸಾವಿನ ವೇಳೆ ಮಾನವನ ಮೆದುಳಿನಲ್ಲಿ ಏನೆಲ್ಲ ಚಟುವಟಿಕೆ ನಡೆಯುತ್ತದೆ ಎನ್ನುವ ಬಗ್ಗೆ ಸಂಶೋಧನೆ ನಡೆಸಿ ಅದನ್ನು ನಮೂದಿಸಿದ್ದಾರೆ. 2014ರಿಂದಲೇ ಅವರು ಸಂಶೋಧನೆ ನಡೆಸುತ್ತಿದ್ದಾರೆ. ವೈದ್ಯರು ನಿಗಾವಹಿಸುತ್ತಿರುವಾಗಲೇ ಸಾವನ್ನಪ್ಪಿದ ನಾಲ್ಕು ಮೂರ್ಛೆ ರೋಗಿಗಳಲ್ಲಿ ಇಬ್ಬರ ಮೆದುಳಿನಲ್ಲಿ ಏನೆಲ್ಲ ನಡೆದಿದೆ ಎಂಬುದನ್ನು ಅವರು ಗುರುತಿಸಿದ್ದಾರೆ. ಹೃದಯ ಸ್ತಂಭನ ಅಥವಾ ಮೆದುಳಿನ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದರೂ ಅವರ ಮೆದುಳಿನ ಒಂದು ಭಾಗದಲ್ಲಿ ಗಾಮಾ ತರಂಗಗಳ ಕ್ಷಿಪ್ರ ಸ್ಫೋಟ ನಡೆದಿದೆಯಂತೆ. ಇದು ಹೃದಯ ಸ್ತಂಭನದ ಪರಿಣಾಮವಲ್ಲ ಸಾವಿನ ಹಿಂದಿನ ಚಟುವಟಿಕೆಯಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಹೃದಯ ಬಡಿತ ನಿಂತ್ರೂ ಕೆಲಸ ಮಾಡುತ್ತೆ ಮೆದುಳು : ಹೃದಯ ಬಡಿತ ನಿಲ್ಲುತ್ತಿದ್ದಂತೆ ಮನುಷ್ಯ ಸಾವನ್ನಪ್ಪುತ್ತಾನೆ. ಆತನ ದೇಹ ಕೆಲಸ ನಿಲ್ಲಿಸುತ್ತದೆ. ಆದ್ರೆ ಮಾನವನ ಹೃದಯವು ನಿಂತ ನಂತರವೂ ಮೆದುಳು ಸ್ವಲ್ಪ ಸಮಯದವರೆಗೆ ಜೀವಂತವಾಗಿರುತ್ತದೆ. ಆಗ್ಲೂ ಮೆದುಳು ಕೆಲಸ ಮಾಡ್ತಿರುತ್ತದೆ. ಹೃದಯ ಬಿಡಿತ ನಿಂತ ನಂತ್ರ ಮೆದುಳಿಗೆ ಆಮ್ಲಜನಕ ಸರಬರಾಜಾಗುವುದಿಲ್ಲ. ಆಮ್ಲಜನಕದ ಕೊರತೆಯುಂಟಾಗುತ್ತಿದ್ದಂತೆ ಮೆದುಳು ನಿಧಾನವಾಗಿ ತನ್ನ ಕೆಲಸ ನಿಲ್ಲಿಸುತ್ತದೆ.