Asianet Suvarna News Asianet Suvarna News

Health Tips: ಅಧಿಕ ಪ್ರೊಟೀನ್‌ನಿಂದ ಕಿಡ್ನಿಗೆ ಹಾನಿ, ಇದು ನಿಜವೇ?

ಅಧಿಕ ಪ್ರೊಟೀನ್ ಸೇವನೆಯಿಂದ ಕಿಡ್ನಿಗೆ ಹಾನಿಯಾಗುತ್ತದೆ ಎನ್ನುವ ಮಾತನ್ನು ಕೇಳಿರಬಹುದು. ಭಾರತೀಯರು ಈ ವಿಚಾರದಲ್ಲಿ ಹೆದರುವ ಅಗತ್ಯವೇ ಇಲ್ಲ. ಏಕೆಂದರೆ, ಸಾಮಾನ್ಯವಾಗಿ ನಾವು ಯಾರೂ ಸಹ ದೇಹಕ್ಕೆ ಬೇಕಷ್ಟು  ಪ್ರಮಾಣದಲ್ಲೂ ಪ್ರೊಟೀನ್ ಸೇವನೆ ಮಾಡುವುದಿಲ್ಲ. ಪ್ರೊಟೀನ್ ಅಂಶವನ್ನು ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕೇ ವಿನಾ ಕಡಿತಗೊಳಿಸುವುದು ಬೇಕಾಗಿಲ್ಲ. 
 

High protein diet effects on health of kidney
Author
First Published May 1, 2023, 7:00 AM IST

ಪ್ರೊಟೀನ್ ಡಯೆಟ್ ಈಗ ಭಾರೀ ಫೇಮಸ್. ಕಾರ್ಬೋಹೈಡ್ರೇಟ್ ಹೆಚ್ಚು ಸೇವನೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಆಹಾರದ ಬಗ್ಗೆ ಕಾಳಜಿಯುಳ್ಳವರು ಪ್ರೊಟೀನ್ ಯುಕ್ತ ಆಹಾರವನ್ನು ಹೆಚ್ಚು ಬಳಕೆ ಮಾಡುವುದು ಕಂಡುಬರುತ್ತಿದೆ. ಪ್ರೊಟೀನ್ ಅಂಶವನ್ನು ನಾವು ಹಲವು ವಿಧಗಳಲ್ಲಿ ಸೇವನೆ ಮಾಡುತ್ತೇವೆ. ಅವು ಡೈರಿ ಉತ್ಪನ್ನಗಳ ಮೂಲಕವಾಗಲಿ, ಮೊಟ್ಟೆ, ಮೀಟ್ ಅಥವಾ ಒಣಹಣ್ಣುಗಳ ಮೂಲಕ ಆಗಿರಲಿ. ಕೆಲವು ಧಾನ್ಯಗಳಲ್ಲೂ ಪ್ರೊಟೀನ್ ಇರುತ್ತದೆ. ಹಾಗೆಯೇ ತರಕಾರಿಯಲ್ಲೂ ಸಣ್ಣ ಪ್ರಮಾಣದಲ್ಲಿ ಪ್ರೊಟೀನ್ ಕಂಡುಬರುತ್ತದೆ. ಒಟ್ಟಿನಲ್ಲಿ ಇದನ್ನು ಒಂದಲ್ಲ ಒಂದು ರೀತಿಯಲ್ಲಿ ಸೇವನೆ ಮಾಡುವುದು ಸಾಮಾನ್ಯ.

ಆದರೆ, ಇವುಗಳ ಜತೆಗೆ, ಕೆಲವರು ವೇ ಪ್ರೊಟೀನ್ ಅನ್ನು ಸಹ ಬಳಕೆ ಮಾಡುತ್ತಾರೆ. ಅಂದರೆ, ಹಾಲೊಡಿಕಿನಿಂದ ಉತ್ಪಾದಿಸಲಾಗುವ ಆಹಾರ ಉತ್ಪನ್ನ. ಚೀಸ್ ತಯಾರಿಸುವ ಪ್ರಕ್ರಿಯೆಯಲ್ಲಿ ವೇ ಪ್ರೊಟೀನ್ ದೊರೆಯುತ್ತದೆ. ಆದರೆ, ಈ ವೇ ಪ್ರೊಟೀನ್ ಕಿಡ್ನಿಗೆ ಸಮಸ್ಯೆ ಉಂಟು ಮಾಡುತ್ತವೆ ಎನ್ನುವ ಮಾತು ಸಹ ಆಗಾಗ ಕೇಳಿಬರುತ್ತದೆ. ಹಾಗಿದ್ದರೆ ಇದು ನಿಜವೇ? ಏಕೆಂದರೆ, ಕೆಲವು ಆರೋಗ್ಯ ಗುರುಗಳು ಆಗಾಗ ಈ ಬಗ್ಗೆ ಹೇಳುತ್ತಲೇ ಇರುತ್ತಾರೆ. 

Women Health: ಮುಟ್ಟಿನ ವೇಳೆ ಐದಕ್ಕಿಂತ ಹೆಚ್ಚು ದಿನ ರಕ್ತಸ್ರಾವವಾಗುತ್ತಾ?

ಹೈ ಪ್ರೊಟೀನ್ ಡಯೆಟ್ (High Protein Diet) ನಿಂದ ಕಿಡ್ನಿಗೆ (Kidney) ಏನೂ ಸಮಸ್ಯೆ ಉಂಟಾಗುವುದಿಲ್ಲ. ಈವರೆಗೂ ಇದು ಅಧಿಕೃತವಾಗಿ ದೃಢಪಟ್ಟಿಲ್ಲ. ಪ್ರೊಟೀನ್ ಮಾನವ ದೇಹಕ್ಕೆ ಬೇಕಾಗುವ ಅತ್ಯಗತ್ಯ ಅಂಶ. ಇದನ್ನು ದೇಹ ರಚನೆಯ ಮಹತ್ವದ ಅಡಿಗಲ್ಲು ಎಂದರೆ ತಪ್ಪಾಗಲಾರದು. ಹಾರ್ಮೋನ್ (Hormones) ಸ್ರವಿಕೆ, ಎಂಜೈಮುಗಳು, ಕೋಶಗಳು, ಉಗುರುಗಳ ಬೆಳವಣಿಗೆ, ಕೂದಲ ಬೆಳವಣಿಗೆ ಹಾಗೂ ಮೂಳೆಗಳ ಆರೋಗ್ಯಕ್ಕೆ  ಪ್ರೊಟೀನ್ ಬೇಕೇ ಬೇಕು. ಹಾಗೆ ನೋಡಿದರೆ, ದೇಹದ ಪ್ರಮುಖ ಹಲವು ಹಲವಾರು ಕಾರ್ಯಕ್ಕೆ ಪ್ರೊಟೀನ್ ಅಗತ್ಯ. ನಮ್ಮ ದೇಹಕ್ಕೆ ಪ್ರೊಟೀನ್ ಎಷ್ಟೆಲ್ಲ ಅಗತ್ಯವಿರುತ್ತದೆ ಎಂದರೆ, ಅದನ್ನು ಪೂರೈಸುವುದು ಸಾಮಾನ್ಯವಾಗಿ ಅಸಾಧ್ಯ. 

ದೇಹದ ಅಗತ್ಯಕ್ಕಿಂತ ಅಧಿಕ ಸೇವನೆ
ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಸೇವನೆ ಮಾಡುವುದರಿಂದ ಕಿಡ್ನಿ ಆರೋಗ್ಯಕ್ಕೆ (Health) ಸಮಸ್ಯೆಯಾಗುತ್ತದೆ ಎನ್ನುವ ವಿಚಾರ ಇಲ್ಲಿ ಬರುತ್ತದೆ. ಆದರೆ, ಇದರ ಬಗ್ಗೆ ಹೆಚ್ಚು ಚಿಂತೆ ಬೇಕಾಗಿಲ್ಲ. ಏಕೆಂದರೆ, ದೇಹಕ್ಕೆ ಹೆಚ್ಚಾಗುವಷ್ಟು ಪ್ರೊಟೀನ್ ಸೇವನೆ ಮಾಡುವುದು ಸಾಮಾನ್ಯವಾಗಿ ಸಾಧ್ಯವಾಗುವುದೇ ಇಲ್ಲ. ದೇಹಕ್ಕೆ ಸಾಕಾಗುವಷ್ಟು ಪ್ರೊಟೀನ್ ಸೇವನೆ ಮಾಡುವುದೇ ಕಷ್ಟವಾಗುತ್ತದೆ. ಹೀಗಾಗಿ ಇಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಸೇವನೆಯ ಮಾತೇ ಬರುವುದಿಲ್ಲ. 

ಅಸಲಿಗೆ, ಸಾಮಾನ್ಯ ಭಾರತೀಯರ ಡಯೆಟ್ ಹೇಗಿದೆ ಎಂದರೆ ಇದರಲ್ಲಿ ಪ್ರೊಟೀನ್ ಅಂಶ ಭಾರೀ ಕಡಿಮೆ ಪ್ರಮಾಣದಲ್ಲಿರುತ್ತದೆ. ಕೆಲವು ಆಹಾರಗಳಲ್ಲಿ ಪ್ರೊಟೀನ್ ಇರುವುದೇ ಇಲ್ಲ. ನಮ್ಮ ಬಹಳಷ್ಟು ಆಹಾರದಲ್ಲಿ ಕಾರ್ಬೋಹೈಡ್ರೇಟ್ (Carbohydrate) ಅಂಶವೇ ಅಧಿಕ ಪ್ರಮಾಣದಲ್ಲಿರುತ್ತದೆ. ಸಾಮಾನ್ಯ ಭಾರತೀಯರು ವಿದೇಶಿಯರಷ್ಟು ಮೊಟ್ಟೆ (Eggs), ಮೀಟ್ (Meat) ಸೇವನೆ ಮಾಡುವುದಿಲ್ಲ. ಹೀಗಾಗಿ, ನಾವು ನಮ್ಮ ಆಹಾರದಲ್ಲಿ ಪ್ರೊಟೀನ್ ಅಂಶವನ್ನು ಇನ್ನಷ್ಟು ಸೇರ್ಪಡೆ ಮಾಡಿಕೊಳ್ಳುವುದು ಆದ್ಯತೆಯಾಗಬೇಕೇ ಹೊರತು ಇಲ್ಲಿ ಹೆಚ್ಚು ಸೇವನೆಯ ಮಾತೇ ಬರುವುದಿಲ್ಲ. ಅಷ್ಟಕ್ಕೂ ಪ್ರೊಟೀನ್ ದೇಹಕ್ಕೆ ಹಾನಿ ಮಾಡುತ್ತದೆ ಎನ್ನುವುದು ಎಲ್ಲಿಯೂ ಸಾಬೀತಾಗಿಲ್ಲ. ಬದಲಿಗೆ, ಸಾಕಷ್ಟು ಅಧ್ಯಯನಗಳು (Studies) ಪ್ರೊಟೀನ್ ನಿಂದ ದೇಹಕ್ಕಾಗುವ ಅನುಕೂಲಗಳ ಬಗ್ಗೆ ಹೇಳುತ್ತವೆ. 

Health Problem : ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಗೆ ಇಮ್ಯುನೊಥೆರಪಿ

ಯಾವುದರಿಂದ ಕಿಡ್ನಿಗೆ ಹಾನಿ?
2000ರಲ್ಲಿ ನಡೆಸಲಾಗಿದ್ದ ಅಧ್ಯಯನದಲ್ಲಿ ಕೆಲವು ಕ್ರೀಡಾಪಟುಗಳ ಮೇಲೆ ಅಧಿಕ ಪ್ರೊಟೀನ್ ಸೇವನೆಯ ಪ್ರಯೋಗ ನಡೆಸಲಾಗಿತ್ತು. ಆದರೆ, ಇದರಿಂದ ಕಿಡ್ನಿಯ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗಿರಲಿಲ್ಲ. ಇನ್ಸುಲಿನ್ (Insulin) ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ (Blood Glucose Level) ಹೆಚ್ಚಾಗುವ ಮೂಲಕ ಉಂಟಾಗುವ ಆಕ್ಸಿಡೇಟಿವ್ ಸ್ಟ್ರೆಸ್ (Oxidative Stress) ಕಿಡ್ನಿಗೆ ಹೆಚ್ಚು ಹಾನಿಕರ. ಆಹಾರದಲ್ಲಿರುವ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್ ಮತ್ತು ಸಕ್ಕರೆಯಿಂದಾಗಿ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದು ಕಿಡ್ನಿಗೆ ಭಾರೀ ಹಾನಿ ತಂದೊಡ್ಡುತ್ತದೆ. 

Follow Us:
Download App:
  • android
  • ios