ತಪ್ಪಿದ ಭಾರೀ ಅನಾಹುತ! ಹಳಿ ಮೇಲೆ ಸಿಮೆಂಟ್ ಕಂಬ ಇಟ್ಟು ರೈಲು ಹಳಿ ತಪ್ಪಿಸಲು ಕಿಡಿಗೇಡಿಗಳು ಯತ್ನ!
ದೇಶದಲ್ಲಿ ರೈಲು ಹಳಿ ತಪ್ಪಿಸಿ ದುಷ್ಕೃತ್ಯ ಎಸಗುವ ಯತ್ನಗಳು ಮುಂದುವರೆದಿವೆ. ಉತ್ತರ ಪ್ರದೇಶದ ದಿಬ್ನಾಪುರ ರೈಲ್ವೆ ನಿಲ್ದಾಣದ ಬಳಿ ಹಳಿಗಳ ಮೇಲೆ ಕಬ್ಬಿಣ ತೀರು ಹಾಗೂ ಸಿಮೆಂಟ್ ಕಂಬಗಳನ್ನು ಇಟ್ಟು ಕಿಡಿಕೇಡಿಗಳು ಗೂಡ್ಸ್ ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ
ಬರೇಲಿ (ಉ.ಪ್ರ): ದೇಶದಲ್ಲಿ ರೈಲು ಹಳಿ ತಪ್ಪಿಸಿ ದುಷ್ಕೃತ್ಯ ಎಸಗುವ ಯತ್ನಗಳು ಮುಂದುವರೆದಿವೆ. ಉತ್ತರ ಪ್ರದೇಶದ ದಿಬ್ನಾಪುರ ರೈಲ್ವೆ ನಿಲ್ದಾಣದ ಬಳಿ ಹಳಿಗಳ ಮೇಲೆ ಕಬ್ಬಿಣ ತೀರು ಹಾಗೂ ಸಿಮೆಂಟ್ ಕಂಬಗಳನ್ನು ಇಟ್ಟು ಕಿಡಿಕೇಡಿಗಳು ಗೂಡ್ಸ್ ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ
ಪೀಲಿಭಿತ್‌ನಿಂದ ಬರೇಲಿಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಚಾಲಕ, ಹಳಿ ಮೇಲೆ ಇರುವ ಕಬ್ಬಿಣದ ತೀರು (ಐರನ್ ಗಾರ್ಟರ್) ಹಾಗೂ ಸಿಮೆಂಟ್ ಕಂಬಗಳನ್ನು ಗಮನಿಸಿದ್ದಾನೆ ಹಾಘೂ ತುರ್ತು ಬ್ರೇಕ್ ಹಾಕಿದ್ದಾನೆ. ಇದರಿಂದ ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿಸಿದ್ದಾನೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಸೂಕ್ತ ತನಿಖೆಗೆ ಆದೇಶಿಸಿದ್ದು, ಹಫೀಜ್‌ಗಂಜ್ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸಲಿದ್ದಾರೆ ಎಂದಿದ್ದಾರೆ.
ಗೋಧ್ರಾ ಗಲಭೆ ಬಗ್ಗೆ ಸತ್ಯ ಈಗ ಹೊರಬರುತ್ತಿದೆ, ಸುಳ್ಳು ಹೆಚ್ಚು ದಿನ ಉಳಿಯುದಿಲ್ಲ: ಪ್ರಧಾನಿ ಮೋದಿ
ಕಳೆದ ತಿಂಗಳ ನಡೆದಿತ್ತು ಇಂಥದ್ದೇ ಕೃತ್ಯ:
ಕಳೆದ ಸೆಪ್ಟೆಂಬರ್‌ನಲ್ಲಿ ಝಾನ್ಸಿ-ಪ್ರಯಾಗರಾಜ್ ಮಾರ್ಗದ ರೈಲ್ವೇ ಹಳಿಯಲ್ಲಿ ಸಿಮೆಂಟ್ ಪಿಲ್ಲರ್ ಹಾಕಿದ್ದಕ್ಕಾಗಿ ಮಹೋಬಾ ಜಿಲ್ಲೆ ಪೊಲೀಸರು 16 ವರ್ಷದ ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದರು.
ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ದುರಂತ: ಒಂದಲ್ಲ ಎರಡಲ್ಲ 13 ಬೋಗಿಗಳು ಹಳಿ ತಪ್ಪಿ ಬೆಂಕಿ, 14 ಮಂದಿ ಗಂಭೀರ!
ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು 11801 ರ ಹಳಿ ತಪ್ಪಿಸುವ ಪ್ರಯತ್ನ ನಡೆಸಲಾಗಿತ್ತು. ರೈವಾರ ಗ್ರಾಮದ ಬಳಿ ಅಡಚಣೆಯನ್ನು ಗಮನಿಸಿದ್ದ ಪೈಲಟ್ ಕೂಡಲೇ ತುರ್ತು ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ್ದರು. ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಿಮೆಂಟ್ ಕಂಬವನ್ನು ತೆಗೆದಿದ್ದರು. ಸಮೀಪದಲ್ಲೇ ದನ ಮೇಯಿಸುತ್ತಿದ್ದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚೇಷ್ಟೆಗಾಗಿ ಪಿಲ್ಲರ್ ಅನ್ನು ಟ್ರ್ಯಾಕ್ ಮೇಲೆ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದ ಅಪ್ರಾಪ್ತ. ಇದೀಗ ಅಂತಹದ್ದೇ ಘಟನೆ ಮರುಕಳಿಸಿದೆ.