ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವ
ನೈಜೀರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಸರ್ಕಾರ ತನ್ನ ದೇಶದ 2ನೇ ಅತ್ಯುತ್ತಮ ನಾಗರಿಕ ಪ್ರಶಸ್ತಿ ‘ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಗರ್’ ಪ್ರಶಸ್ತಿ ನೀಡಿ ಗೌರವಿಸಿದೆ.
Nigeria honours PM Modi with Grand Commander of the Order of the Niger award : ನೈಜೀರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಸರ್ಕಾರ ತನ್ನ ದೇಶದ 2ನೇ ಅತ್ಯುತ್ತಮ ನಾಗರಿಕ ಪ್ರಶಸ್ತಿ ‘ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಗರ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಮೂರು ದೇಶಗಳ ಪ್ರವಾಸ ಕೈಗೊಂಡಿರುವ ಮೋದಿ ಮೊದಲ ಭಾಗವಾಗಿ ನೈಜಿರಿಯಾ ಪ್ರಧಾನಿ ಬೋಲಾ ಅಹ್ಮದ್ ಟಿನುಬು ಆಹ್ಮಾನದ ಮೇರೆಗೆ ನೈಜೀರಿಯಾಗೆ ಬಂದಿದ್ದಾರೆ. 17 ವರ್ಷದ ಬಳಿಕ ಭಾರತದ ಪ್ರಧಾನಿಯೊಬ್ಬರು ನೈಜೀರಿಯಾ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.
ಗೋಧ್ರಾ ಗಲಭೆ ಬಗ್ಗೆ ಸತ್ಯ ಈಗ ಹೊರಬರುತ್ತಿದೆ, ಸುಳ್ಳು ಹೆಚ್ಚು ದಿನ ಉಳಿಯುದಿಲ್ಲ: ಪ್ರಧಾನಿ ಮೋದಿ
ಇದಕ್ಕೆ ಕೃತಜ್ಞತೆ ಸಲ್ಲಿಸಿದ ಮೋದಿ, ‘ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ’ ಎಂದಿದ್ದಾರೆ.
ಈ ಹಿಂದೆ 1969ರಲ್ಲಿ ರಾಣಿ ಎಲಿಜಬೆತ್‌ಗೆ ಗೌರವ ದೊರೆತಿತ್ತು. ಅದಾದ ಬಳಿಕ ಈ ಪ್ರಶಸ್ತಿ ಪಡೆದ 2ನೇ ವಿದೇಶಿ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಇದು ಪ್ರಧಾನಿಗೆ ದೊರೆತಿರುವ 17ನೇ ಅಂತರಾಷ್ಟ್ರೀಯ ಪ್ರಶಸ್ತಿ.
ನೈಜೀರಿಯಾ ಅಧ್ಯಕ್ಷರ ಜತೆ ದ್ವಿಪಕ್ಷೀಯ ಮಾತುಕತೆ:
‘ನೈಜೀರಿಯಾದೊಂದಿಗಿನ ವ್ಯೂಹಾತ್ಮಕ ಪಾಲುದಾರಿಕೆಗೆ ಭಾರತ ಗರಿಷ್ಠ ಆಧ್ಯತೆ ನೀಡುತ್ತದೆ. ಜೊತೆಗೆ ನೈಜೀರಿಯಾ ಜೊತೆಗೆ ರಕ್ಷಣೆ, ವ್ಯಾಪಾರ ಸೇರಿದಂತೆ ಎಲ್ಲಾ ವಲಯಗಳಲ್ಲಿ ಸಂಬಂಧ ವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ನೈಜೀರಿಯಾ ಭೇಟಿ ವೇಳೆ ಭಾನುವಾರ ಇಲ್ಲಿ ಅಧ್ಯಕ್ಷ ಬೋಲಾ ಅಹಮದ್ ತಿನುಬು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ, ‘ಭಯೋತ್ಪಾದನೆ, ಪ್ರತ್ಯೇಕತಾವಾದ, ಕೃತಿಚೌರ್ಯ, ಮಾದಕ ವಸ್ತು ಕಳ್ಳಸಾಗಣೆ ನಮ್ಮ ಮುಂದಿನ ಬಹುದೊಡ್ಡ ಸವಾಲುಗಳಾಗಿದ್ದು, ಎರಡೂ ದೇಶಗಳು ಈ ಸಮಸ್ಯೆ ನಿರ್ವಹಣೆಗೆ ಒಂದಾಗಿ ಕಾರ್ಯನಿರ್ವಹಿಸಲಿವೆ’ ಎಂದು ಹೇಳಿದರು.
ಏರ್‌ಪೋರ್ಟ್ ಟಾಯ್ಲೆಟ್ ಅನ್ನೂ ಮೋದಿಗೆ ರಿಸರ್ವ್ ಮಾಡ್ತೀರಾ?: ಲಾಂಜ್‌ಗೆ ಬಿಡದ್ದಕ್ಕೆ ಖರ್ಗೆ ಕಿಡಿ
ಜತೆಗೆ ನೈಜೀರೀಯಾದಲ್ಲಿರುವ 60000 ಭಾರತೀಯ ಸಮುದಾಯ, ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಣ್ಣಿಸಿದ ಮೋದಿ, ಭಾರತೀಯರ ಅಭ್ಯುದಯವನ್ನು ಖಚಿತಪಡಿಸುತ್ತಿದ್ದೀರಿ ಎಂದು ತಿನುಬು ಅವರಿಗೆ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಇತ್ತೀಚಿನ ಪ್ರವಾಹದಿಂದ ನಲುಗಿರುವ ನೈಜೀರಿಯಾಕ್ಕೆ 20 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಪ್ರಧಾನಿ ಮೋದಿ ಘೋಷಿಸಿದರು.