ಜ್ಯೋತಿಕಾ ಅವರು 3 ತಿಂಗಳಲ್ಲಿ 9 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕ್ರ್ಯಾಶ್ ಡಯಟ್ ಅಥವಾ ವರ್ಕೌಟ್ ಇಲ್ಲದೆ, ತಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಸರಿಯಾದ ಆಹಾರ ಸೇವಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಫಿಟ್ ಆಗಿ ರೂಪಸಿಯಂತೆ ಕಾಣ್ಬೇಕು ಎಂಬುದು ಬಹುತೇಕ ಹೆಣ್ಣು ಮಕ್ಕಳ ಆಸೆ. ಇದಕ್ಕಾಗಿ ಬಹುತೇಕ ಹೆಣ್ಣು ಮಕ್ಕಳು ಡಯಟ್ ಫಾಲೋ ಮಾಡ್ತಾರೆ. ನ್ಯೂಟ್ರಿಷಿಯನ್‌ಗಳ ಸಲಹೆ ಪಡೆಯುತ್ತಾರೆ. ಜಿಮ್‌ಗೆ ಹೋಗಿ ಗಂಟೆಗಳ ಕಾಲ ಬೆವರಿಳಿಸುತ್ತಾರೆ. ದಿನಕ್ಕೆ ಗಂಟೆಗಳ ಕಾಲ ವಾಕ್ ಮಾಡ್ತಾರೆ. ಆಸೆಯಾದರೂ ಸಕ್ಕರೆ ಸೇರಿದಂತೆ ಬಹುತೇಕ ಸಿಹಿ ತಿನಿಸುಗಳನ್ನು ತ್ಯಜಿಸಿ ತ್ಯಾಗ ಮಾಡುತ್ತಾರೆ. ಆದರೂ ತೂಕ ಕಡಿಮೆಯಾಗುವುದು ಬಹುತೇಕರಿಗೆ ಬಹಳ ಕಷ್ಟದ ಕೆಲಸವಾಗಿದೆ. ಇಷ್ಟೆಲ್ಲಾ ಪ್ರಯತ್ನ ಮಾಡಿದರೂ ಒಂದು ಗ್ರಾಂ ಕೂಡ ತೂಕ ಇಳಿದಿಲ್ಲ ಎಂದು ಅನೇಕರು ಗೋಳಾಡುತ್ತಾರೆ. ಆದರೆ ಕಾಲಿವುಡ್ ನಟಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ಜ್ಯೋತಿಕಾ ಅವರು ತಮ್ಮ ಅಭಿಮಾನಿಗಳ ಬಳಿ ತಾವು 3 ತಿಂಗಳಲ್ಲಿ 9 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಯಾವುದೇ ಕ್ರ್ಯಾಶ್ ಡಯಟ್ ಅಥವಾ ವರ್ಕೌಟ್ ಇಲ್ಲದೆ ಅವರು ಈ ಸಾಧನೆ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಈ ರೂಪಾಂತರ ಕೇವಲ ದೇಹಕ್ಕೆ ಸೀಮಿತವಾಗಿರಲಿಲ್ಲ, ಬದಲಾಗಿ ಒಳಗಿನಿಂದ ಹೊರಗಿನ ಸಮತೋಲನವನ್ನು ಆಧರಿಸಿದೆ. ಹಾಗಿದ್ರೆ ಇಷ್ಟು ಸುಲಭವಾಗಿ ಅವರು ಹೇಗೆ ತೂಕ ಇಳಿಸಿಕೊಂಡಿದ್ದಾರೆ ಅನ್ನೋದನ್ನಾ ನೊಡೋಣ...
ಜ್ಯೋತಿಕಾ ಅವರು ಮೊದಲು ಮಧ್ಯಂತರ ಉಪವಾಸ ಮತ್ತು ಹೆಚ್ಚಿನ ತೀವ್ರತೆಯ ವ್ಯಾಯಾಮದಂತಹ ಹಲವು ಆಹಾರ ಯೋಜನೆಗಳು ಮತ್ತು ವ್ಯಾಯಾಮ ದಿನಚರಿಗಳನ್ನು ತಾವು ಮಾಡಿದ್ದೆ. ಆದರೆ ಯಾವುದೂ ದೀರ್ಘಕಾಲದವರೆಗೆ ಪರಿಣಾಮಕಾರಿಯಾಗಿರಲಿಲ್ಲ ಎಂದು ಜ್ಯೋತಿಕಾ ಹೇಳಿಕೊಂಡಿದ್ದಾರೆ. ಆದರೂ ನಾನು ಬಹಳ ಸಮಯದವರೆಗೆ ನನ್ನನ್ನು ನಾನು ಇದೇ ರೀತಿಯ ಡಯಟ್ ಮೂಲಕ ತಳ್ಳಿದೆ. ಆದರೆ ಫಲಿತಾಂಶಗಳು ಸಿಗಲಿಲ್ಲ. ಆದರೆ ಸರಿಯಾದ ಬೆಂಬಲ ಮತ್ತು ನಿರ್ದೇಶನ ಸಿಕ್ಕಿದ ನಂತರವೇ ನಾನು ನನ್ನನ್ನು ಬಲಶಾಲಿ ಮತ್ತು ಜೀವಂತವಾಗಿ ಭಾವಿಸಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕಾಗಿ ಅವರು ಅಮುರಾ ಹೆಲ್ತ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಬ್ರೌನ್ ರೈಸ್ vs ವೈಟ್ ರೈಸ್: ತೂಕ ಇಳಿಸಲು ಯಾವುದು ಬೆಸ್ಟ್?
ಜ್ಯೋತಿಕಾ ಅವರು ತಾನು ತನ್ನ ಜೀರ್ಣಾಂಗ ವ್ಯವಸ್ಥೆಯನ್ನು (ಕರುಳಿನ ಆರೋಗ್ಯ) ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ ನಿಜವಾದ ಬದಲಾವಣೆ ಬಂದಿತು ಎಂದು ಹೇಳಿದರು. ನಾನು ಕೇವಲ ಕ್ಯಾಲೊರಿಗಳನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸಲಿಲ್ಲ, ಬದಲಾಗಿ ಯಾವ ಆಹಾರಗಳು ತಮ್ಮ ದೇಹಕ್ಕೆ ಶಕ್ತಿ ಮತ್ತು ಸಮತೋಲನವನ್ನು ನೀಡುತ್ತವೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಿದೆ. ಉರಿಯೂತದ ಆಹಾರಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಫೈಬರ್ ಮತ್ತು ಪ್ರೋಬಯಾಟಿಕ್‌ಗಳಂತಹ ಅಂಶಗಳನ್ನು ಸೇರಿಸುವುದು ತನ್ನ ಶಕ್ತಿ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಿದೆ ಎಂದು ಜ್ಯೋತಿಕಾ ಹೇಳಿಕೊಂಡಿದ್ದಾರೆ.
ತೂಕ ಇಳಿಸಿಕೊಳ್ಳುವುದು ಮುಖ್ಯ ಆದರೆ ಶಕ್ತಿ ಮತ್ತು ಸ್ವಾವಲಂಬನೆ ಹೆಚ್ಚು ಮುಖ್ಯ ಎಂದು ಅವರು ಹೇಳಿದ್ದಾರೆ. ಮಹಿಳೆಯರಿಗೆ ಬಲ ತರಬೇತಿಯು ದೇಹವನ್ನು ಟೋನ್ ಮಾಡುವುದಲ್ಲದೆ, ವಯಸ್ಸಾದಂತೆ ಉಂಟಾಗುವ ಮೂಳೆ ಸಮಸ್ಯೆಗಳಿಂದಲೂ ರಕ್ಷಿಸುತ್ತದೆ ಎಂದು ಜ್ಯೋತಿಕಾ ಹೇಳಿದ್ದಾರೆ. ನನ್ನ ರೂಪಾಂತರವೂ ಕೇವಲ ತೂಕ ಯಂತ್ರದಲ್ಲಿ ಕಾಣುವ ಸಂಖ್ಯೆಗಳಿಗೆ ಸೀಮಿತವಾಗಿಲ್ಲ.ಮಾನಸಿಕ ಸಮತೋಲನ, ಒತ್ತಡ ನಿರ್ವಹಣೆ ಮತ್ತು ನಮ್ಮ ಮೇಲೆ ನಮಗೆ ಇರುವ ಸ್ವ-ಪ್ರೀತಿಯನ್ನು ಸಮಾನವಾಗಿ ಮುಖ್ಯವಾಗಿದೆ. ನಿಜವಾದ ಆರೋಗ್ಯವು ನಿಮ್ಮ ದೇಹದೊಂದಿಗೆ ನೀವು ಸಂಪರ್ಕ ಸಾಧಿಸುವುದು, ಸರಿಯಾದ ಆಯ್ಕೆಗಳನ್ನು ಮಾಡುವುದು ಮತ್ತು ನಿಮ್ಮನ್ನು ಪ್ರೀತಿಸುವುದಾಗಿದೆ ಎಂದು ಜ್ಯೋತಿಕಾ ಅವರು ಹೇಳಿದ್ದಾರೆ.
ಕೇವಲ 10 ನಿಮಿಷಗಳಲ್ಲಿ ಮೂಗಿನ ಮೇಲಿನ ವೈಟ್‌ಹೆಡ್ಸ್ ತೆಗೆದುಹಾಕಿ
