ಇತ್ತೀಚೆಗೆ ಅನೇಕರು ಹೀಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಹೀಮೋಗ್ಲೋಬಿನ್  ಪ್ರಮಾಣದಲ್ಲಿ ಗಣನೀಯ ಇಳಿಕೆ ಉಂಟಾದಾಗ ರಕ್ತಹೀನತೆ ಅಥವಾ ಅನೀಮಿಯಾ ರೋಗಗಳು ಬರುತ್ತವೆ. ಇಲ್ಲಿ ಹೀಮೋಗ್ಲೋಬಿನ್‌ ಪ್ರಮಾಣವನ್ನು ಹೆಚ್ಚಿಸುವಂತಹ ಕೆಲ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.

ಇತ್ತೀಚೆಗೆ ಅನೇಕರು ರಕ್ತಹೀನತೆಯಿಂದ ಬಳಲುತ್ತಿರುವುದು ಸಾಮಾನ್ಯ ಎನಿಸಿಬಿಟ್ಟಿದೆ. ಹೀಮೋಗ್ಲೋಬಿನ್ ಮತ್ತು ಕೆಂಪು ರಕ್ತ ಕಣಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಉಂಟಾದಾಗ ರಕ್ತಹೀನತೆ ಅಥವಾ ಅನೀಮಿಯಾ ಎಂಬ ರೋಗ ಬರುತ್ತದೆ. ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಮತ್ತು ದೇಹದಲ್ಲಿ ಕಬ್ಬಿಣಾಂಶ ಪಡೆಯಲು, ರಕ್ತಹೀನತೆ ತಡೆಯಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ಈಗ ನೋಡೋಣ.

1. ಪಾಲಕ್ ಮತ್ತು ಇತರ ಸೊಪ್ಪುಗಳು

ಪಾಲಕ್ ಮತ್ತು ಇತರ ಸೊಪ್ಪುಗಳಲ್ಲಿ ಕಬ್ಬಿಣ ಮತ್ತು ಬಿ ಕಾಂಪ್ಲೆಕ್ಸ್ ಜಾಸ್ತಿ ಇರುತ್ತದೆ. ಇವು ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಿ ರಕ್ತಹೀನತೆ ತಡೆಯಲು ಸಹಾಯ ಮಾಡುತ್ತವೆ.

2. ಬೀನ್ಸ್ ಮತ್ತು ಕಾಳುಗಳು 

ಹೆಸರು ಕಾಳು, ಬಿಳಿ ಕಡಲೆ, ಬೀನ್ಸ್ ಎಲ್ಲದರಲ್ಲೂ ಕಬ್ಬಿಣ, ಪ್ರೋಟೀನ್ ಮತ್ತು ಫೈಬರ್ ಅಂಶಗಳು ಇವೆ. ಇವೆಲ್ಲಾ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತವೆ. 

3. ಬೀಟ್ರೂಟ್

ಕಬ್ಬಿಣ ಮತ್ತು ವಿಟಮಿನ್ ಸಿ ಅಂಶವಿರುವ ಬೀಟ್ರೂಟ್ ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ.

ಟಾಪ್ 7 ಕಬ್ಬಿಣಾಂಶವಿರುವ ಹಣ್ಣು

4. ದಾಳಿಂಬೆ 

ದಾಳಿಂಬೆಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ದಾಳಿಂಬೆಯಲ್ಲಿರುವ ವಿಟಮಿನ್ ಸಿ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಿ ರಕ್ತಹೀನತೆ ತಡೆಯುತ್ತದೆ.

5. ಕುಂಬಳಕಾಯಿ ಬೀಜ 

ಕುಂಬಳಕಾಯಿ ಬೀಜದಲ್ಲಿ ಕಬ್ಬಿಣ ಮತ್ತು ಮೆಗ್ನೀಷಿಯಂ ಇದೆ. ಇವು ಕೂಡಾ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತವೆ. 

6. ಒಣದ್ರಾಕ್ಷಿ 

ಒಣದ್ರಾಕ್ಷಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಕಬ್ಬಿಣದ ಕೊರತೆ ನೀಗಿಸಬಹುದು ಮತ್ತು ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಿ ರಕ್ತಹೀನತೆ ತಡೆಯಬಹುದು. 

7. ಕೆಂಪು ಮಾಂಸ 

ಮಿತವಾದ ಪ್ರಮಾಣದಲ್ಲಿ ಕೆಂಪು ಮಾಂಸ ತಿನ್ನುವುದರಿಂದ ಕಬ್ಬಿಣಾಂಶ ಪಡೆಯಬಹುದು. 

8. ಮೊಟ್ಟೆ 

ಕಬ್ಬಿಣಾಂಶ ಹೆಚ್ಚಿರುವ ಮೊಟ್ಟೆ ತಿನ್ನುವುದರಿಂದ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಬಹುದು ಮತ್ತು ರಕ್ತಹೀನತೆ ತಡೆಯಬಹುದು. 

ಗಮನಿಸಿ: ಆರೋಗ್ಯ ತಜ್ಞರು ಅಥವಾ ನ್ಯೂಟ್ರಿಶಿಯನಿಸ್ಟ್ ಸಲಹೆ ಪಡೆದ ನಂತರವಷ್ಟೇ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿ. 

ಮಶ್ರೂಮ್ ಬೇಡ ಅನ್ಬೇಡಿ… ಆರೋಗ್ಯ ಪ್ರಯೋಜನಗಳು ಎಷ್ಟಿವೆ ನೋಡಿ