MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಪ್ರಸವದ ಮೊದಲು, ನಂತರ ಮಹಿಳೆಯರು ಮಾಡಲೇಬೇಕು ಈ ಯೋಗಾಸನ

ಪ್ರಸವದ ಮೊದಲು, ನಂತರ ಮಹಿಳೆಯರು ಮಾಡಲೇಬೇಕು ಈ ಯೋಗಾಸನ

ಸ್ಟ್ರೆಚಿಂಗ್, ಮನಸ್ಸಿನ ಏಕಾಗ್ರತೆ ಮತ್ತು ಉಸಿರಾಟವನ್ನು ಸುಧಾರಿಸುವ ಯೋಗವು ಡೆಲಿವರಿಯ ಮೊದಲು ತಾಯಂದಿರಿಗೆ ಅತ್ಯವಶ್ಯಕವಾಗಿದೆ ಎಂದು ತಜ್ಞರು ಸೂಚಿಸುತ್ತಾರೆ. ಅದೇ ರೀತಿ, ಹಾಲುಣಿಸುವ ತಾಯಂದಿರಿಗೆ ಯೋಗವು ಸಹ ತುಂಬಾ ಮುಖ್ಯವಾಗಿದೆ. ಇದು ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ವ್ಯಾಯಾಮ ಮತ್ತು ಯೋಗವು ಸ್ತನಗಳನ್ನು ದೃಢಗೊಳಿಸಲು ಸಹಾಯ ಮಾಡುತ್ತದೆ, ಕುತ್ತಿಗೆ-ಬೆನ್ನು ಮತ್ತು ಭುಜಗಳನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ.

2 Min read
Suvarna News
Published : Jul 26 2022, 06:09 PM IST
Share this Photo Gallery
  • FB
  • TW
  • Linkdin
  • Whatsapp
111

ಯೋಗವು(Yoga) ಇಂದು, ನಿನ್ನೆಯದಲ್ಲ ಹಲವಾರು ವರ್ಷಗಳಿಂದ ಸ್ವಾಭಾವಿಕ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ವ್ಯಕ್ತಿಗಳ ಜೀವನಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಯೋಗವು ಶಾಂತ ಮನಸ್ಸು ಮತ್ತು ಆರೋಗ್ಯಕರ ದೇಹಕ್ಕೆ ಆಧ್ಯಾತ್ಮಿಕ ಮಾರ್ಗವಿದ್ದಂತೆ. ಇದನ್ನು ಗರ್ಭಧಾರಣೆಯ ಸಮಯದಲ್ಲಿಯೂ ಮಾಡಬಹುದು. ಅಲ್ಲದೇ ಮಗು ಆದ ನಂತರವೂ ಮಾಡುವುದು ಆರೋಗ್ಯಕರ.

211

ಗರ್ಭಾವಸ್ಥೆಯಲ್ಲಿ ಮಹಿಳೆಯರು ವಿಭಿನ್ನ ಹಂತಗಳಲ್ಲಿ ಮೂಡ್ ಸ್ವಿಂಗ್ (Mood swing) ಅನುಭವಿಸುತ್ತಾರೆ. ಹೀಗಿರುವಾಗ ಯೋಗ ಮನಸನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತೆ. ಅಲ್ಲದೇ ಗರ್ಭಾವಸ್ಥೆಯಲ್ಲಿ ಆಯಾಸ, ಕಾಲುಗಳಲ್ಲಿ ನೋವು ಮತ್ತು ಉಸಿರಾಟದ ತೊಂದರೆಯನ್ನು ಸಹ ಎದುರಿಸಬೇಕಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಯೋಗಾಭ್ಯಾಸ, ತಂತ್ರಗಳು ಮತ್ತು ಭಂಗಿಗಳು ಗರ್ಭಿಣಿಯರ ಸಮಸ್ಯೆಯನ್ನು ನಿವಾರಿಸುತ್ತೆ ಅಲ್ಲದೇ ಇದು ಡೆಲಿವರಿ ಸುಲಭಗೊಳಿಸಲು ಸಹ ಸಹಾಯ ಮಾಡುತ್ತೆ.
 

311

ಮಹಿಳೆ ಪ್ರಕೃತಿಯ ಸುಂದರ ಸೃಷ್ಟಿಯಾಗಿದ್ದು, ಮಗುವಿಗೆ ಜನ್ಮ ನೀಡುವಾಗ ತನ್ನ ಜೀವನದ ಅತ್ಯಂತ ಸೂಕ್ಷ್ಮ ಹಂತವನ್ನು ಹಾದುಹೋಗುತ್ತಾಳೆ. ಪ್ರಸವಕ್ಕೆ ಮೊದಲು ಮಾಡುವ ಯೋಗವು ತಾಯಂದಿರಿಗೆ ಆರಾಮದಾಯಕ ಗರ್ಭಾವಸ್ಥೆಗೆ ಸಹಾಯ ಮಾಡುತ್ತೆ. ಹಾಗಾದ್ರೆ ಪ್ರಸವಪೂರ್ವ ಯೋಗದ ಪ್ರಯೋಜನಗಳು ಯಾವುವು? ನೋಡೋಣ… ಯೋಗದಿಂದಾಗಿ ಉತ್ತಮ ನಿದ್ರೆ(Sleep), ಕಡಿಮೆ ಒತ್ತಡ ಮತ್ತು ಆತಂಕ ನಿವಾರಣೆ, ಹೆಚ್ಚಿದ ಸ್ನಾಯು ಬಲ, ಹೆಚ್ಚಿನ ಸಾಮರ್ಥ್ಯ, ಬೆನ್ನು ನೋವು ನಿವಾರಣೆ, ವಾಕರಿಕೆಯಿಂದ ಪರಿಹಾರ ಮತ್ತು ಉಸಿರಾಟದ ತೊಂದರೆಯಿಂದ ಸಹ ಪರಿಹಾರ ಸಿಗುತ್ತೆ. 

411

ಈ ಪ್ರಾಣಾಯಾಮವು(Pranayama) ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ
ಗರ್ಭಾವಸ್ಥೆಯಲ್ಲಿ ಭ್ರಮರಿ ಪ್ರಾಣಾಯಾಮ ಮಾಡುವುದು ಪ್ರಯೋಜನಕಾರಿ ಎಂದು ತಜ್ಞರು ಸೂಚಿಸುತ್ತಾರೆ. ಹೆರಿಗೆಯ ಕೊನೆಯ ದಿನದವರೆಗೂ ಗರ್ಭಿಣಿ ಮಹಿಳೆ ಮಾಡಬಹುದಾದ ಏಕೈಕ ಪ್ರಾಣಾಯಾಮ ಇದಾಗಿದೆ. ಇದು ಭ್ರೂಣದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ತಾಯಿ ಮತ್ತು ಮಗುವಿನ ಮಾನಸಿಕ ಆರೋಗ್ಯವನ್ನು ಕಾಪಾಡುತ್ತೆ.

511

ಹಾಲುಣಿಸುವ(Breast feeding) ತಾಯಂದಿರಿಗೆ ಯೋಗ ಅತ್ಯಗತ್ಯ
ಹಾಲುಣಿಸುವ ತಾಯಂದಿರಿಗೆ ಯೋಗ ಬಹಳ ಮುಖ್ಯ. ನಿಯಮಿತ ಯೋಗಾಭ್ಯಾಸವು ಸ್ತನಗಳಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಪ್ರೊಲ್ಯಾಕ್ಟಿನ್ ಸ್ರವಿಸುವಿಕೆಗೆ ಸಹಾಯ ಮಾಡುವ ಪಿಟ್ಯುಟರಿ ಗ್ರಂಥಿಯನ್ನು ಸಕ್ರಿಯಗೊಳಿಸುತ್ತದೆ. ಇದು ಎದೆಹಾಲಿನ ಉತ್ಪಾದನೆಯನ್ನು ಸುಗಮಗೊಳಿಸುತ್ತದೆ. ವ್ಯಾಯಾಮ ಮತ್ತು ಯೋಗವು ಸ್ತನಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಮತ್ತು ಕುತ್ತಿಗೆ, ಬೆನ್ನು ಮತ್ತು ಭುಜಗಳಲ್ಲಿನ ಒತ್ತಡ ನಿವಾರಿಸುತ್ತದೆ. ಸ್ತನಗಳ ಆರೋಗ್ಯ ಕಾಪಾಡಲು ಸಹ ಇದು ಸಹಕಾರಿ.

611


ಭುಜಗಳನ್ನು ತಿರುಗಿಸುವುದು
ನೇರವಾಗಿ ಎದ್ದುನಿಂತು ನಿಮ್ಮ ಪಾದಗಳನ್ನು ಭುಜದ(Shoulder) ಅಗಲಕ್ಕೆ ಇರಿಸಿ.
ನಿಧಾನವಾಗಿ ನಿಮ್ಮ ಭುಜಗಳನ್ನು ಮುಂದಕ್ಕೆ ತಿರುಗಿಸಿ ಮತ್ತು ದೀರ್ಘವಾಗಿ ಉಸಿರಾಡಿ. ಉಸಿರಾಟದ ಕ್ರಿಯೆ ನಡೆಯುತ್ತಿರಲಿ. 
ಅದೇ ರೀತಿ ಭುಜಗಳನ್ನು ಹಿಂದಕ್ಕೆ ತಿರುಗಿಸಿ ಮತ್ತು ಇದನ್ನೆ ಪುನರಾವರ್ತಿಸಿ.
ನಿಮ್ಮ ಉಸಿರಾಟದ ವ್ಯಾಯಾಮಗಳೊಂದಿಗೆ ನೀವು ಈ ವ್ಯಾಯಾಮ ಮಾಡಬಹುದು, ಇದರಿಂದ ಅದರ ಹೆಚ್ಚಿನ ಪ್ರಯೋಜನ ಪಡೆಯಬಹುದು.

711

ಇದರಿಂದ ಏನೆಲ್ಲಾ ಪ್ರಯೋಜನಗಳಿವೆ
ಭುಜದಲ್ಲಿ ಸಂಗ್ರಹವಾದ ಒತ್ತಡವನ್ನು ನಿವಾರಿಸಲು ಅತ್ಯುತ್ತಮ ವ್ಯಾಯಾಮ ಇದಾಗಿದೆ.
ಇದು ಭುಜದ ಕೀಲುಗಳಲ್ಲಿ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ.
ಇದು ಸ್ನಾಯುಗಳು, ರಂಧ್ರಗಳು ಮತ್ತು ಕೀಲುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ.
ಭುಜಗಳಲ್ಲಿ ನೋವು(Pain) ಮತ್ತು ಬಿಗಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

811

ಕುತ್ತಿಗೆಯ(Neck) ವ್ಯಾಯಾಮ
ನಿಮ್ಮ ಅಂಗೈಯನ್ನು ನಿಮ್ಮ ಹಣೆಗೆ ಒತ್ತಿ.
ಕತ್ತಿನ ಸ್ನಾಯುಗಳನ್ನು ಬಳಸಿಕೊಂಡು ಕತ್ತನ್ನು ಒಂದು ಸುತ್ತು ತಿರುಗಿಸಿ.
ಇದನ್ನು 10 ಸೆಕೆಂಡುಗಳ ಕಾಲ ಮುಂದುವರಿಸಿ.
ವಿಶ್ರಾಂತಿ ಪಡೆಯಿರಿ. 5 ಬಾರಿ ಪುನರಾವರ್ತಿಸಿ.

911

ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ
ಬೆನ್ನು ನೋವನ್ನು(Back pain) ಕಡಿಮೆ ಮಾಡುತ್ತದೆ.
ಕುತ್ತಿಗೆ ನೋವನ್ನು ಕಡಿಮೆ ಮಾಡುತ್ತದೆ.
ದಣಿದ ಸ್ನಾಯುಗಳಿಗೆ ಶಕ್ತಿ ಮತ್ತು ಆರಾಮವನ್ನು ನೀಡುತ್ತದೆ. ಇದರಿಂದ ಗರ್ಭಿಣಿ ಮಹಿಳೆಯ ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ. 

1011

 ತೋಳುಗಳ (Arm)ವ್ಯಾಯಾಮ
ನಿಮ್ಮ ಪಾದಗಳನ್ನು ಭುಜದ ಅಗಲದಲ್ಲಿ ಇರಿಸಿ ಮತ್ತು ತೋಳುಗಳನ್ನು ನೆಲಕ್ಕೆ ಸಮಾನಾಂತರವಾಗಿ ಮುಂದೆ ಚಾಚಿ.
ನಿಮ್ಮ ತೋಳುಗಳನ್ನು ನಿಧಾನವಾಗಿ ಮುಂದಕ್ಕೆ ಸರಿಸಿ, ನಿಮ್ಮ ಟ್ರೈಸೆಪ್ಸ್ ನಲ್ಲಿ ನೀವು ಹಿಗ್ಗುವಿಕೆಯನ್ನು ಅನುಭವಿಸುವವರೆಗೂ ನಿಧಾನವಾಗಿ ತೋಳುಗಳನ್ನು ತಿರುಗಿಸುತ್ತಿರಿ.
ಸುಮಾರು 10 ಸೆಕೆಂಡುಗಳ ನಂತರ ಚಕ್ರಗಳ ದಿಕ್ಕನ್ನು ಹಿಮ್ಮುಖಗೊಳಿಸಿ.

1111

ಪ್ರಯೋಜನ
ಈ ಸರಳ ಮತ್ತು ಸಣ್ಣ ತಾಲೀಮು ಹೊಸ ತಾಯಂದಿರ ತೋಳುಗಳು ಮತ್ತು ಭುಜಗಳ ನೋವು ಮತ್ತು ಬಿಗಿತವನ್ನು ಕಡಿಮೆ ಮಾಡುತ್ತದೆ. ಮತ್ತು ತಾಯಂದಿರ ಬೆನ್ನಿನ ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ನೀವು ಮಾಡಿದ್ರೆ ಉತ್ತಮ.

About the Author

SN
Suvarna News
ಆರೋಗ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved