Frozen Shoulders: ಆರಂಭದಲ್ಲೇ ಎಚ್ಚರಿಕೆ ತೆಗೆದುಕೊಳ್ಳಿ
ಭುಜಗಳಲ್ಲಿ ನೋವು, ಜೋಮು ಹಿಡಿದಂತಾಗುವುದು, ಭುಜಗಳಲ್ಲಿ ಚಲನೆ ಇಲ್ಲದಿರುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಇದು ಆಧುನಿಕ ಜೀವನಶೈಲಿಯ ಅತಿ ಸಾಮಾನ್ಯ ಸಮಸ್ಯೆ ಎಂದರೂ ಪರವಾಗಿಲ್ಲ. ದೈಹಿಕ ಚಟುವಟಿಕೆ ಕುಂಠಿತವಾಗಿರುವುದು, ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವುದು ಇದಕ್ಕೆ ಪ್ರಮುಖ ಕಾರಣ.
ಭುಜ(Shoulder)ಗಳಲ್ಲಿ ನೋವು (Pain), ಜೋಮು (Frozen) ಹಿಡಿದಂತಾಗುವುದು, ಹೆಚ್ಚು ಕೆಲಸ ಮಾಡಲೂ ಸಾಧ್ಯವಾಗದಂತೆ ತೀವ್ರವಾದ ನೋವು ಬಾಧಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿರುವ ಆರೋಗ್ಯ (Health) ಸಮಸ್ಯೆ. ದೀರ್ಘಕಾಲದಿಂದ ಇರುವ ಭುಜಗಳ ನೋವು ಕ್ರಮೇಣ ಚಲನೆಗೆ ಅಡ್ಡಿಯುಂಟುಮಾಡುವಷ್ಟು ತೊಂದರೆ ತಂದೊಡ್ಡುತ್ತದೆ. ಇದೊಂದೇ ಅಲ್ಲ, ಭುಜಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಚಲನಾರಹಿತ ಸ್ಥಿತಿ ಹಾಗೂ ನೋವನ್ನು ಉಂಟುಮಾಡುತ್ತವೆ. ಫ್ರೋಜನ್ ಶೋಲ್ಡರ್ (Frozen Shoulder) ಸಮಸ್ಯೆ ಭುಜಗಳ ಉರಿಯೂತ(Inflame)ದಿಂದಲೂ ಬರುತ್ತದೆ.
ಏನಿದು ಫ್ರೋಜನ್ ಶೋಲ್ಡರ್?
ಭುಜಗಳ ಜಾಯಿಂಟ್ (Joint) ನಲ್ಲಿ ಉರಿಯೂತ ಉಂಟಾದಾಗ ಕಿರಿಕಿರಿಯಾಗುತ್ತದೆ. ಏನೋ ಚಲಿಸಿದಂತಾಗುತ್ತದೆ. ತ್ವರಿತ ಚಲನೆಗೆ ಅಡ್ಡಿಯುಂಟಾಗುತ್ತದೆ. ಇವೇ ಫ್ರೋಜನ್ ಶೋಲ್ಡರ್ಸ್ ಸಮಸ್ಯೆಯ ಆರಂಭಿಕ ಲಕ್ಷಣಗಳು. ಹೀಗೆಯೇ ಮುಂದುವರಿದರೆ ಜೋಮು ಹಿಡಿದಂತಾಗುತ್ತದೆ. ಚಲನೆ ಮಾಡಿದರೆ ನೋವು ಹೆಚ್ಚಾಗುತ್ತದೆ. ಮೊದಮೊದಲು ನೋವು ಕಾಣಿಸಿಕೊಂಡಾಗ ವಿವಿಧ ನೋವುನಿವಾರಕ (Painkiller) ಮುಲಾಮುಗಳನ್ನು ಲೇಪಿಸುತ್ತೇವೆಯೇ ಹೊರತು ಆಮೂಲಾಗ್ರವಾಗಿ ನಿವಾರಣೆ ಮಾಡಿಕೊಳ್ಳಬೇಕೆಂದು ಯೋಚಿಸುವುದಿಲ್ಲ. ಬೇರೆ ಭಾಗದ ನೋವಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಭುಜಗಳ ನೋವಿಗೆ ಕೊಡುವುದಿಲ್ಲ. ಹೀಗಾಗಿ, ಸಾಮಾನ್ಯವಾಗಿ ಭುಜಗಳ ಸಮಸ್ಯೆ ದೀರ್ಘಕಾಲದ ಇತಿಹಾಸವನ್ನೇ ಹೊಂದಿರುತ್ತದೆ.
ಭುಜಗಳಲ್ಲಿರುವ ಗ್ಲೆನೋಹ್ಯುಮರಲ್ (Glehumaral) ಎನ್ನುವ ಸಂಧಿಯಲ್ಲಿ ಸಹಜ ಚಲನೆ ನಾಶವಾದಾಗ ಕ್ರಮೇಣ ಭುಜಗಳು ಜೋಮು ಹಿಡಿಯುತ್ತವೆ ಎನ್ನುತ್ತಾರೆ ತಜ್ಞರು. ಈ ಸಂಧಿಯಲ್ಲಿ ಒಂದು ರೀತಿಯ ಚೆಂಡಿನಂತಹ ರಚನೆಯಿರುತ್ತದೆ. ಇದರಲ್ಲಿಯೂ ಕೆಲವು ಭಾಗ. ಹ್ಯುಮೆರಲ್ ಹೆಡ್, ಸಾಕೆಟ್ ನಂತಹ ರಚನೆಯನ್ನು ಗ್ಲೆನೊಯ್ಡ್ (Glenoid) ಎನ್ನಲಾಗುತ್ತದೆ. ನಿಮಗೆ ಗೊತ್ತೇ? ಭುಜಗಳಲ್ಲಿರುವ ಈ ಜಾಯಿಂಟ್ ದೇಹದ ಎಲ್ಲ ಜಾಯಿಂಟ್ ಗಳಿಗಿಂತ ಹೆಚ್ಚು ಚಲನಶೀಲವಾದದ್ದು. ಆದರೆ, ಜೋಮು ಹಿಡಿದ ಸ್ಥಿತಿಯಲ್ಲಿ ಈ ಸಂಧಿ ಚಲನೆಯನ್ನು ಕಳೆದುಕೊಳ್ಳುತ್ತದೆ ಅಥವಾ ಚಲನೆಗೆ ಅಡ್ಡಿಯಾಗುತ್ತದೆ.
ಭುಜಗಳಲ್ಲಿ ನೋವು ಕಂಡು, ತಿಂಗಳಾದರೂ ವಾಸಿಗಾಗದೆ ಆಗಾಗ ಕಾಣಿಸಿಕೊಳ್ಳುತ್ತಿದ್ದರೆ ಹೆಚ್ಚು ತಡಮಾಡಬಾರದು. ವೈದ್ಯರನ್ನು ಕಾಣಬೇಕು. ಎಕ್ಸ್ ರೇ ಮಾಡಿಸಿದರೆ ಸಮಸ್ಯೆಯ ತೀವ್ರತೆ ಹಾಗೂ ಕಾರಣ ತಿಳಿದುಬರುತ್ತದೆ.
ಯಾವುದಾದರೂ ಶಸ್ತ್ರಚಿಕಿತ್ಸೆ (Surgery) ಮಾಡಿಸಿಕೊಂಡಿದ್ದರೆ ಹಾಗೂ ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವ ಜೀವನಶೈಲಿ(Lifestyle)ಯಿಂದ ಸಮಸ್ಯೆ ಉಲ್ಬಣವಾಗಬಹುದು. ದೇಹ(Body)ಕ್ಕೆ ಹಿತವಲ್ಲದ ಭಂಗಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವವರಲ್ಲಿ, ಬೆನ್ನು ಬಾಗಿಸಿ ಕುಳಿತುಕೊಳ್ಳುವವರಲ್ಲೂ ಹೆಚ್ಚಾಗಿ ಕಂಡುಬರುತ್ತದೆ.
ಶೇವಿಂಗ್ ಆದ ಮೇಲೆ ಚರ್ಮ ಒಣಗುತ್ತಾ? ನಯವಾದ ತ್ವಚೆಗಾಗಿ ಇಲ್ಲಿವೆ Beauty Tips
ದೇಹವೂ ಒಂದು ಯಂತ್ರ (Machine). ಇದು ಸುಸ್ಥಿತಿಯಲ್ಲಿರಬೇಕಾದರೆ ಕೀಲುಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಇವು ಸರಿಯಾಗಿರಲು ಸೂಕ್ತ ವ್ಯಾಯಾಮ (Exercise), ಚಟುವಟಿಕೆ (Activity) ಅತ್ಯಗತ್ಯ.
ನಿವಾರಣೆ ಹೇಗೆ?
ಆರಂಭದಲ್ಲಿಯೇ ಸಮಸ್ಯೆಯ ಕುರಿತು ಗಮನ ನೀಡಿದರೆ ಪರಿಹರಿಸಿಕೊಳ್ಳುವುದು ಸುಲಭ. ಭುಜಗಳ ನೋವಿಗೆ ಕುತ್ತಿಗೆ ಹಾಗೂ ಭುಜಗಳ ವ್ಯಾಯಾಮ ಅತ್ಯಂತ ಸೂಕ್ತ. ಕುತ್ತಿಗೆಯನ್ನು ಹಿಂದೆ, ಮುಂದೆ, ಅಕ್ಕ-ಪಕ್ಕ ಬಾಗಿಸುವ ವ್ಯಾಯಾಮ ಮಾಡಬೇಕು. ಹಾಗೆಯೇ, ಕೈಗಳೆರಡನ್ನೂ ಮೇಲೆತ್ತುವುದು, ಹಿಂದಕ್ಕೆ ಮುಂದಕ್ಕೆ ಬಿಗಿಯಾಗಿ ಹಿಡಿದುಕೊಳ್ಳುವುದು, ಕಿಟಕಿ ಸರಳುಗಳನ್ನು ಬಿಗಿಯಾಗಿ ಹಿಡಿದುಕೊಂಡು ಹಿಂದೆ-ಮುಂದೆ ಭುಜಗಳನ್ನು ಚಲಿಸುವ ವ್ಯಾಯಾಮಗಳ ಮೂಲಕ ನೋವಿಗೆ ಪರಿಣಾಮ ಕಂಡುಕೊಳ್ಳಬಹುದು. ಫಿಸಿಯೋ ಥೆರಪಿಸ್ಟ್ (Physio Therapist) ಗಳ ನೆರವು ಪಡೆದುಕೊಂಡು ದಿನವೂ ವಿವಿಧ ಚಟುವಟಿಕೆ ಮಾಡಬೇಕು.
ಸೇನೆಯ ಮುಖ್ಯ ಹುದ್ದೆ ಬಿಟ್ಟು porn ಚಿತ್ರೋದ್ಯಮಕ್ಕೆ ಧುಮುಕಿದ ಬೆಡಗಿ
ಭುಜಗಳಲ್ಲಿ ಬಿರುಸು ಸೃಷ್ಟಿ
ನಗರವಾಸಿಗಳಲ್ಲಿ ಈ ಸಮಸ್ಯೆ ಹೆಚ್ಚು. ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಪ್ರಮುಖ ಕಾರಣ. ಕೆಲವೊಮ್ಮೆ,
ಭುಜಗಳಲ್ಲಿ ಬಿರುಸುತನ ಹೆಚ್ಚಲು ಬೇರೆ ಸಮಸ್ಯೆಯೂ ಕಾರಣವಾಗಬಲ್ಲದು. ಗಾಯ, ಟ್ಯೂಮರ್ (tumor), ಆರ್ಥರೈಟಿಸ್ ಕೂಡ ಭುಜಗಳಲ್ಲಿ ಬಿರುಸುತನ ಹೆಚ್ಚಿಸಬಹುದು. ಮಧುಮೇಹದಿಂದಲೂ ಉರಿಯೂತ ಉಂಟಾಗಲು ಸಾಧ್ಯ.