ಪಿರಿಯಡ್ಸ್’ಗೂ ಮುನ್ನ ಗಂಡನ ಜೊತೆ ಜಗಳ… ಹೆಂಗಸರು ಹೀಗ್ಯಾಕೆ ಮಾಡ್ತಾರೆ ?
Women Health: ಹೆಚ್ಚಾಗಿ ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ತಮ್ಮ ಸಂಗಾತಿ ಜೊತೆ ಜಗಳ ಮಾಡುತ್ತಾರೆ. ಸಣ್ಣಪುಟ್ಟ ವಿಷಯಕ್ಕೂ ಕಿಡಿ ಕಾಡುತ್ತಾರೆ . ಕೋಪ ಮಾಡುತ್ತಾರೆ ,ಅಳುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ? ಈ ರೀತಿ ಮೂಡ್ ಸ್ವಿಂಗ್ ಆಗೋದಕ್ಕೆ ಕಾರಣಗಳು ಹಲವು ಅವುಗಳ ಬಗ್ಗೆ ರಿವೀಲ್ ಮಾಡೋಣ.

ಪಿರಿಯಡ್ಸ್’ಗೂ ಮುನ್ನ ಜಗಳ
ಹೆಚ್ಚಿನ ಮಹಿಳೆಯರು ಪಿರಿಯಡ್ಸ್ ಗೆ ಕೆಲವು ದಿನಗಳ ಮುಂಚಿನಿಂದಲೂ ವಿಚಿತ್ರವಾಗಿ ಆಡೋದಕ್ಕೆ ಶುರು ಮಾಡ್ತಾರೆ. ಸಣ್ಣ ಪುಟ್ಟ ವಿಷಯಕ್ಕೆ ಜಗಳ, ಕೋಪ, ತಾಳ್ಮೆ ಕಳೆದುಕೊಳ್ಳುವುದು, ಬೇಗನೆ ರಿಯಾಕ್ಟ್ ಮಾಡೋದು ಇತ್ಯಾದಿ ಬದಲಾವಣೆಗಳನ್ನು ನಾವು ಅವಳಲ್ಲಿ ಕಾಣುತ್ತೇವೆ. ಆದರೆ ಇದ್ಯಾಕೆ ಆಗುತ್ತೆ ಗೊತ್ತಾ? ಇಲ್ಲಿದೆ ಪಿರಿಯಡ್ಸ್ ಗೂ ಮುನ್ನ ಜಗಳ ಮಾಡುವ ಹೆಂಡ್ತಿಯರ ಬಗ್ಗೆ ಪುರುಷರು ತಿಳಿಯಬೇಕಾದ ವಿಷಯಗಳು.
ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿರುವುದು
ಪಿರಿಯಡ್ಸಿಗೂ ಮುನ್ನ ಕೆಲವು ಸಣ್ಣ ಘಟನೆಗಳು ಸಹ ಮಹಿಳೆಯರಿಗೆ ದೊಡ್ಡದಾಗಿ ಫೀಲ್ ಕೊಡುತ್ತದೆ. ಅಂದರೆ ಎಂದಿಗಿಂತಲೂ ಹೆಚ್ಚಾಗಿ ಬೇಗನೆ ರಿಯಾಕ್ಟ್ ಮಾಡುವುದು. ಮನಸ್ಸಿನಲ್ಲಿ ಬೇಸರ ತುಂಬಿರುವಂತಹ ಭಾವನೆ. ಜನ ಅಥವಾ ಶಬ್ದದಿಂದ ಇರಿಟೇಟ್ ಆಗುವುದು. ಒಬ್ಬಳೇ ಇರಲು ಇಷ್ಟಪಡುವುದು. ಇದಕ್ಕೆ ಕಾರಣ ಏನೆಂದರೆ ಈ ಸಮಯದಲ್ಲಿ ಮಹಿಳೆಯರಲ್ಲಿ ಭಾವನಾತ್ಮಕ ಸಹಿಷ್ಣುತೆ ಕಡಿಮೆಯಾಗುತ್ತದೆ.
ಆಂತರಿಕ ಉಷ್ಣತೆ
ಮಹಿಳೆಯರ ದೇಹದಲ್ಲಿ ಆಗುವಂತಹ ಹಾರ್ಮೋನ್ಸ್ ಬದಲಾವಣೆಯಿಂದ ಆಂತರಿಕ ಭಾವನಾತ್ಮಕ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದಾಗಿ ಖಡಕ್ ಮಾತುಗಳು, ತಾಳ್ಮೆ ಇಲ್ಲದಿರುವುದು, ಶಾಂತ ರೀತಿಯಲ್ಲಿ ವರ್ತಿಸಲು ಸಾಧ್ಯವಾಗದೇ ಇರುವಂತಹ ಕ್ಷಣಗಳು ಉಂಟಾಗುತ್ತವೆ. ಆಯುರ್ವೇದದ ಪ್ರಕಾರ ಇದಕ್ಕೆ ಕಾರಣ ಏನೆಂದರೆ ದೇಹದಲ್ಲಿ ಪಿತ್ತದ ಅಂಶ ಹೆಚ್ಚಾಗುವುದು.
ಬ್ಲಡ್ ಶುಗರ್ ಸ್ವಿಂಗ್
ಪಿರಿಯಡ್ಸ್ ಗೂ ಮುನ್ನ ಅನಗತ್ಯವಾಗಿ ತಿನ್ನುವುದರಿಂದ ಬ್ಲಡ್ ಶುಗರ್ ಏರುತ್ತದೆ, ಇದರಿಂದ ಕೆಲವೊಮ್ಮೆ ಮೂಡ್ ಕೆಟ್ಟದಾಗಿ ಬದಲಾಗೋದಕ್ಕೆ ಕಾರಣವಾಗುತ್ತದೆ. ಅನಗತ್ಯ ತಿನ್ನುವುದರಿಂದ ದಿಢೀರ್ ಆಗಿ ಕೋಪ ಬರುತ್ತದೆ, ಇರಿಟೇಶನ್ ಆಗುತ್ತದೆ, ಶಕ್ತಿಯೇ ಇಲ್ಲದಂತೆ ಭಾಸವಾಗುತ್ತದೆ. ನಮ್ಮ ದೇಹ ಮತ್ತು ಭಾವನೆಗಳು ಒಂದಕ್ಕೊಂದು ಕನೆಕ್ಟ್ ಆಗಿರುವುದರಿಂದ ಅದಕ್ಕೆ ವಿರುದ್ಧವಾಗಿ ಏನಾದರು ಮಾಡಿದರೆ ಎರಡರ ಮೇಲೂ ಪರಿಣಾಮ ಬೀರುತ್ತದೆ.
ನರಮಂಡಲ ವ್ಯವಸ್ಥೆ ಕೂಡ ಸೆನ್ಸಿಟಿವ್ ಆಗಿರುತ್ತದೆ
ನೀವೇ ನೋಡಿದ ಹಾಗೆ ಮಹಿಳೆಯರ ಮೆದುಳು ಪಿರಿಯಡ್ಸ್ ಗೂ ಮುನ್ನ ಬೇರೆಯದೇ ರೀತಿಯಲ್ಲಿ ವರ್ತಿಸುತ್ತದೆ. ಓವರ್ ಸ್ಟಿಮಿಲೇಷನ್, ಮಾನಸಿಕವಾಗಿ ತುಂಬಾ ಆಯಾಸಗೊಂಡಂತೆ ಅಥವಾ ಭಾವನಾತ್ಮಕವಾಗಿ ಹೊರಗುಳಿದಂತೆ, ಒಬ್ಬರೇ ಇರಬೇಕು ಎನ್ನುವ ಭಾವನೆ, ಒತ್ತಡ ನಿರ್ವಹಿಸಲು ಸಾಧ್ಯವಾಗದಂತೆ ಭಾಸವಾಗುತ್ತದೆ. ಇದಕ್ಕೆ ನಮ್ಮ ನರಮಂಡಲ ವ್ಯವಸ್ಥೆ ಸಮತೋಲನವಾಗಿರಲು ವಿಫಲವಾಗಿರುವುದೇ ಕಾರಣವಾಗಿರುತ್ತದೆ.
ರಿಲೀಸ್ ಆಗದ ಭಾವನೆಗಳು
ಕೆಲವು ಭಾವನೆಗಳು ಪಿರಿಯಡ್ಸ್’ಗೂ ಮುನ್ನ ಸ್ಟ್ರಾಂಗ್ ಎಂದು ಅನಿಸುತ್ತದೆ. ಆದರೆ ಪಿರಿಯಡ್ ಸಮಯದಲ್ಲಿ ದೇಹವು ತುಂಬಾನೇ ಭಾವನಾತ್ಮಕವಾಗಿ ಎಕ್ಸ್ ಪ್ರೆಸ್ ಮಾಡುತ್ತದೆ. ಇದರಿಂದ ಹಳೆಯ ಕೋಪ, ಹತಾಶೆ ಮತ್ತೆ ಹೊರ ಹಾಕುವಂತಾಗುತ್ತದೆ. ಸುಲಭವಾಗಿ ಅಳು ಬರುತ್ತದೆ. ಭಾವನಾತ್ಮಕವಾಗಿ ಮನಸ್ಸು ಭಾರವಾಗುತ್ತದೆ, ಬೇಗನೆ ರಿಯಾಕ್ಟ್ ಕೂಡ ಮಾಡುವಂತಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

