ಮಗುವನ್ನು ಬರ್ತ್ ಡಿಫೆಕ್ಟ್ಸ್ ನಿಂದ ರಕ್ಷಿಸಲು ನೀವೇನು ಮಾಡ್ಬೇಕು?
ಪ್ರೆಗ್ನನ್ಸಿ (Pregnancy)ಯಲ್ಲಿ, ಮಹಿಳೆಗೆ ಹೆಚ್ಚು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತೆ. ಈ ಟೈಮ್ ನಲ್ಲಿ ಮಹಿಳೆ (Woman) ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ರೂ ಅದು ಮಗುವಿನಲ್ಲಿ ಬರ್ತ್ ಡೆಫೆಕ್ಟ್ (Birth defect) ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಜನನ ದೋಷವು ಅಂತಹ ಒಂದು ಸಮಸ್ಯೆಯಾಗಿದೆ. ಇದು ಗರ್ಭಾವಸ್ಥೆಯಲ್ಲಿ ಮಗುವಿಗೆ (Baby) ಸಂಭವಿಸುತ್ತದೆ ಮತ್ತು ಅನೇಕ ಬಾರಿ ಇದರಿಂದಾಗಿ ಮಗುವಿನ ಜೀವನಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
ಎಲ್ಲಾ ಜನನ ದೋಷಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೂ ಮಹಿಳೆ ಗರ್ಭಧರಿಸುವ(Pregnancy) ಮೊದಲು ಮತ್ತು ನಂತರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಗುವಿನ ಜನನದಲ್ಲಿ ದೋಷ ಉಂಟಾಗುವ ಸಾಧ್ಯತೆ ಕಡಿಮೆ ಮಾಡಲು ಮಹಿಳೆ ಯಾವ ವಿಷಯ ನೆನಪಿಟ್ಟುಕೊಳ್ಳಬೇಕು ಅನ್ನೋದನ್ನು ತಿಳಿಯಿರಿ.
ಪ್ಲ್ಯಾನಿಂಗ್ ಮಾಡಿ
ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಬರ್ತ್ ಡೆಫೆಕ್ಟ್ಸ್ ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನೀವು ನಿಮ್ಮ ದೇಹವನ್ನು ಗರ್ಭಧಾರಣೆಗೆ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಸಿದ್ಧಪಡಿಸುವುದು ಬಹಳ ಮುಖ್ಯ. ನೀವು ಗರ್ಭಿಣಿ ಆಗುವ ಮೊದಲು ಕೆಲವು ತಿಂಗಳುಗಳವರೆಗೆ ಓರಲ್ ಕಾಂಟ್ರಾಸೆಪ್ಟಿವ್(Contraceptive) ತೆಗೆದುಕೊಳ್ಳುವುದನ್ನು ನಿಲ್ಲಿಸಿ ಮತ್ತು ಅದರ ಬದಲು ಫಿಸಿಕಲ್ ಕಾಂಟ್ರಾಸೆಪ್ಟಿವ್ ಆಯ್ಕೆ ಮಾಡಿ. ಜೊತೆಗೆ ಸ್ಮೋಕಿಂಗ್ ಮತ್ತು ಆಲ್ಕೋಹಾಲ್ ಗಳಿಗೆ ಗುಡ್ ಬೈ ಹೇಳಿ.
ಫೋಲಿಕ್ ಆಸಿಡ್(Folic acid) ಸೇವನೆ
ನೀವು ಗರ್ಭಿಣಿ ಆಗಲು ಬಯಸಿದ್ದರೆ ಪ್ರತಿದಿನ ಒಂದು ನಿರ್ದಿಷ್ಟ ಪ್ರಮಾಣದ ಫೋಲಿಕ್ ಆಸಿಡ್ ತೆಗೆದುಕೊಳ್ಳಲು ಪ್ರಾರಂಭಿಸಿ. ಆದರೆ, ಯಾವುದೇ ಔಷಧಿ ನೀವಾಗಿಯೇ ಆಯ್ಕೆ ಮಾಡಬೇಡಿ. ಬದಲಾಗಿ, ನೀವು ಮೊದಲು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಬೇಕು.
ಗರ್ಭಧಾರಣೆಗೆ ಕನಿಷ್ಠ ಒಂದು ತಿಂಗಳ ಮೊದಲು ಫೋಲಿಕ್ ಆಸಿಡ್ ಟ್ಯಾಬ್ಲೇಟ್ಸ್ ತೆಗೆದುಕೊಳ್ಳಿ ಮತ್ತು ಇದು ಗರ್ಭಾವಸ್ಥೆಯಲ್ಲಿ ಮಕ್ಕಳಲ್ಲಿನ ಕೆಲವು ಪ್ರಮುಖ ಬರ್ತ್ ಡೆಫೆಕ್ಟ್ಸ್(Birth defect) ತಡೆಯಲು ಸಹಾಯ ಮಾಡುತ್ತೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
ಅಲ್ಕೋಹಾಲ್(Alcohol) ಬೇಡ
ನೀವು ಗರ್ಭಿಣಿಯಾಗಲು ಯೋಜಿಸಿದ ಸಮಯದಿಂದ ಆಲ್ಕೋಹಾಲ್ ಸೇವಿಸುವುದನ್ನು ನಿಲ್ಲಿಸಿ. ಗರ್ಭಿಣಿ ಮಹಿಳೆಯ ಮೇಲೆ ಆಲ್ಕೋಹಾಲ್ ನ ನೇರ ಪರಿಣಾಮವಿಲ್ಲದಿದ್ದರೂ, ಅದನ್ನು ತಪ್ಪಿಸುವುದು ಉತ್ತಮ. ನೀವು ಆಲ್ಕೋಹಾಲ್ ಕುಡಿದಾಗ, ಪ್ಲಾಸೆಂಟಾ ಮೂಲಕ ಮಗುವಿಗೆ ಆಲ್ಕೋಹಾಲ್ ಹೋಗುತ್ತದೆ. ಇದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತೆ.
ಸ್ಮೋಕಿಂಗ್(Smoking) ಮಾಡ್ಲೇಬೇಡಿ
ಸ್ಮೋಕಿಂಗ್ ಭ್ರೂಣದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಸೀಳು ತುಟಿ ಅಥವಾ ಜನನದ ಸಮಯದಲ್ಲಿ ಡೆತ್ ಮತ್ತು ಅಕಾಲಿಕ ಜನನಗಳಂತಹ ಅನೇಕ ಬರ್ತ್ ಡೆಫೆಕ್ಟ್ಸ್ ಸ್ಮೋಕಿಂಗ್ ಮಾಡೊದ್ರಿಂದ ಉಂಟಾಗುತ್ತವೆ. ನೀವು ಗರ್ಭಧರಿಸುವ ಮೊದಲು ಸ್ಮೋಕ್ ಮಾಡೋದು ಬಿಡಿ. ನೀವು ಈಗಾಗಲೇ ಗರ್ಭಿಣಿಯಾಗಿದ್ರೆ, ನೀವು ಅದನ್ನು ಸಾಧ್ಯವಾದಷ್ಟು ಬೇಗ ಬಿಡಬೇಕು. ಇಲ್ಲವಾದರೆ ಮಗುವಿಗೆ ಸಮಸ್ಯೆ ಉಂಟಾಗುತ್ತೆ.
ಆಹಾರದ (Food)ಬಗ್ಗೆ ಗಮನ ಹರಿಸಿ
ಗರ್ಭಿಣಿ ಮಹಿಳೆ ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವಿಸುವುದು ತುಂಬಾ ಮುಖ್ಯ. ಅಷ್ಟೇ ಅಲ್ಲ, ನೀವು ಅಧಿಕ ತೂಕ ಹೊಂದಿದ್ದರೆ, ಮೊದಲು ನಿಮ್ಮ ತೂಕ ಸ್ವಲ್ಪ ಕಡಿಮೆ ಮಾಡಿ. ಅಧಿಕ ತೂಕವು ಗರ್ಭಾವಸ್ಥೆಯಲ್ಲಿ ಅನೇಕ ರೀತಿಯ ತೊಡಕುಗಳನ್ನು ಉಂಟುಮಾಡಬಹುದು ಮತ್ತು ಇದು ಮಗುವಿನಲ್ಲಿ ಬರ್ತ್ ಡೆಫೆಕ್ಟ್ಸ್ ಸಾಧ್ಯತೆಗಳನ್ನು ಸಹ ಹೆಚ್ಚಿಸುತ್ತದೆ.
ವೈದ್ಯರನ್ನು ಸಂಪರ್ಕಿಸಿ(Consult doctor)
ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಬರ್ತ್ ಡೆಫೆಕ್ಟ್ಸ್ಗಳ ಹಿಸ್ಟರಿ ಹೊಂದಿದ್ದರೆ, ಗರ್ಭಧರಿಸುವ ಮೊದಲು ನೀವು ಒಮ್ಮೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸುವುದು ಮುಖ್ಯ.. ಅಲ್ಲದೆ, ವರ್ಷಕ್ಕೆ ಒಮ್ಮೆಯಾದರೂ ನಿಮ್ಮ ದೇಹವನ್ನು ಸಂಪೂರ್ಣವಾಗಿ ಪರೀಕ್ಷಿಸಿ.
ಕೆಲವು ಸೋಂಕುಗಳು(Infection) ನಿಮಗೆ ಅಪಾಯಕಾರಿಯಾಗಬಹುದು ಮತ್ತು ಹುಟ್ಟಲಿರುವ ಮಗುವಿಗೆ ಹಾನಿಕಾರಕವಾಗಬಹುದು. ಆದ್ದರಿಂದ ಜಾಗೃತರಾಗಿರಿ ಮತ್ತು ಅವರ ಬಗ್ಗೆ ಮಾಹಿತಿ ಪಡೆಯಿರಿ. ಎಚ್ಚರಿಕೆಯಿಂದ ಮಾತ್ರ ನೀವು ಅವುಗಳನ್ನು ತಪ್ಪಿಸಬಹುದು.