Asianet Suvarna News Asianet Suvarna News

ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದೇ? ಏನೋನೋ ನೆಪ ಹುಡುಕೋ ಮುನ್ನ ಇದನ್ನೋದಿ

ಕುಡಿಯೋನಿಗೆ ಸಾವಿರ ಕಾರಣಗಳು  ಎನ್ನೋ ಹಾಗೆ, ಆರೋಗ್ಯಕ್ಕೆ ಒಳ್ಳೆಯದು ಎಂಬ ನೆಪದಿಂದ ಹಲವರು ಕುಡಿಯುತ್ತಾರೆ. ಅಷ್ಟಕ್ಕೂ ಆಲ್ಕೋಹಾಲ್ ನಿಜವಾಗಲೂ ಆರೋಗ್ಯಕ್ಕೆ ಒಳ್ಳೆಯದು ಹೌದಾ? 

Which Alcohol are you Useing: Is it Good for Your Health
Author
Bangalore, First Published May 31, 2022, 1:36 PM IST

ಈಗಿನ ಜನರೇಷನ್‌ನಲ್ಲಿ(Generation) ಮದ್ಯ ಸೇವನೆ ಒಂದು Addiction ಆಗಿದೆ. ಒತ್ತಡ ನಿವಾರಾಣೆ, ರಿಲಾಕ್ಸ್ ಫೀಲ್‌ಗೋ(Relax feel), ನೋವು ನೀಗಿಸಿಕೊಳ್ಳುವುದಕ್ಕೋ ಮತ್ತಿನ್ಯಾವ ಕಾರಣಕ್ಕೊ ಬಹುತೇಕ ಜನ ಮದ್ಯ ಸೇವನೆಗೆ ಒಳಗಾಗುತ್ತಾರೆ. ಇದು ಮುಂದುವರಿದರೆ ಅರಿಕ್ಷನ್ ಆಗಿಬಿಡುತ್ತದೆ. 

"ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ" ಈ ಮಾತು ಎಲ್ಲೆಡೆ ಕೇಳಿರುತ್ತೇವೆ. ಇದಿರಿಂದ ಎಷ್ಟೋ ಸಂಸಾರಗಳು(Family) ನಾಶವಾಗಿವೆ, ಜೀವ ಹೋಗಿವೆ. ಹೀಗೆ ಮದ್ಯದಿಂದ ಆಗಿರುವ ಸಾವು ನೋವುಗಳು ದಿನನಿತ್ಯ ಒಂದೊಂದು ಸುದ್ದಿ ಓದುತ್ತಿರುತ್ತೇವೆ.  ತಜ್ಞರು ಹೇಳುವ ಪ್ರಕಾರ ಮದ್ಯ ಸೇವನೆ ಒಳ್ಳೆಯದಂತೆ. ಅದು ಅತಿಯಾಗಬಾರದಷ್ಟೆ. ಆಲ್ಕೋಹಾಲ್‌ನಲ್ಲಿನ ಕೆಲ ಆರೋಗ್ಯಕಾರಿ ಅಂಶಗಳು ದೇಹಕ್ಕೆ ಬೇಕು ಎನ್ನುತ್ತಾರೆ. ಆದರೆ ಅದನ್ನು ಔಷಧಿಯಾಗಿ(Medicine) ತೆಗೆದುಕೊಳ್ಳಬೇಕೆ ಹೊರತು ಅದೇ ಆರೋಗ್ಯಕ್ಕೆ ಕುತ್ತಾಗಬಾರದು.

ವರ್ಕ್ ಲೋಡ್, ಸ್ಟೆçಸ್(Stress) ಜಾಸ್ತಿಯಾಗಿದೆ ಎಂದು ವೀಕೆಂಡ್‌ನಲ್ಲಿ(Weekend) ಕುಡಿಯುವವರು ಇದ್ದಾರೆ. ಲವ್ ಫೇಲ್ ಆಯ್ತು,  ಸಾವಿನ ನೋವು ಮರೆಯಲಿಕ್ಕೆ ದಿನವಿಡೀ ಕುಡಿಯುವವರಿದ್ದಾರೆ. ಅಷ್ಟೇ ಅಲ್ಲ ಖಷಿಗೂ(Happy) ಕುಡಿಯುವವರಿದ್ದಾರೆ. ಅತಿಯಾದ ಮದ್ಯಪಾನ ಜೀವಕ್ಕೆ ಹಾನಿ ಮಾಡುತ್ತದೆ. ಹಾಗಾದರೆ ಸೇವಿಸುವ ಆಲ್ಕೋಹಾಲ್ ಹೇಗಿರಬೇಕು? ಯಾವೆಲ್ಲಾ ಡ್ರಿಂಕ್ಸ್ ಉತ್ತಮವಾಗಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. 

113 ವರ್ಷ ಪೂರೈಸಿ ಗಿನ್ನೀಸ್ ದಾಖಲೆ: ಆರೋಗ್ಯದ ಗುಟ್ಟು ರಟ್ಟು!

ಆಲ್ಕೋಹಾಲ್ ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಸಮಸ್ಯೆಗಳು ಆಗುತ್ತವೆ. ಅಂತಯೇ ಮದ್ಯ ಸೇವನೆಯಿಂದ ಪರಿಣಾಮಕಾರಿಯ ಉಪಯೋಗವೂ ಇದೆ. ಆದರೆ ಲಿಮಿಟ್‌ನಲ್ಲಿ(Limit) ಸೇವಿಸಿದರೆ ಎರಡನೆಯದು ಸಾಧ್ಯ. ಸಂಶೋಧನೆಯ(Research) ಪ್ರಕಾರ ಶೇ.70ರಷ್ಟು ವಯಸ್ಕರು(Youths) ಪ್ರತೀ ವರ್ಷ ಕುಡಿಯುತ್ತಾರೆ. ದಿನಕ್ಕೆ ಎರಡು ಬಾರಿ ಮದ್ಯ ಸೇವಿಸುವುದರಿಂದ ಹೃದಯಕ್ಕೆ(Heart) ಒಳ್ಳೆಯದು ಹಾಗೂ ವಿಶ್ರಾಂತಿ ನೀಡುತ್ತದೆ ಎಂದು ತಿಳಿದುಬಂದಿದೆ.

ಕುಡಿಯುವ ಅಭ್ಯಾಸ ಇದ್ದರೆ ನಿಮ್ಮ ಚಾಯ್ಸ್(Choice) ಬಹಳ ಮುಖ್ಯ. ಆರೋಗ್ಯಕ್ಕೆ ಒಳ್ಳೆಯದಾದ ಮದ್ಯಗಳು ಇವೆ. ಹಾಗಾದರೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು. ಇಲ್ಲಿದೆ ಮಾಹಿತಿ.

ರೆಡ್ ವೈನ್
ಆಲ್ಕೋಹಾಲ್‌ನಲ್ಲಿ ಉತ್ತಮವಾಗಿರುವುದು ಯಾವುದು ಎಂದಾಗ ರೆಡ್ ವೈನ್‌ಗೆ(Red wine) ಮೊದಲ ಸ್ಥಾನ. ಇದರಲ್ಲಿ ಆಯಂಟಿ ಆಕ್ಸಿಡೆಂಟ್(antioxident) ಅಂಶವಿದ್ದು ಹೃದಯದ ಆರೋಗ್ಯ ಕಾಪಾಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಮೂಳೆ(Bone) ಬಲಪಡಿಸುವುದು, ಮಿದುಳು(Brain) ಬೆಳವಣಿಗೆ, ಹೃದಯದ ರಕ್ತನಾಳಗಳು ಆರೋಗ್ಯವಾಗಿರುವಂತೆ ಹಾಗೂ ಉತ್ತಮಗೊಳಿಸುತ್ತದೆ. ಕಿಡ್ನಿಗೆ(Kidney) ಸಂಬAಧಿಸಿದ ಖಾಯಿಲೆಗಳಿಗೆ ಈ ರೆಡ್ ವೈನ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.

ಶಾಂಪೇನ್
ದ್ರಾಕ್ಷಿ(Grapes) ಬಳಸಿ ಮಾಡುವ ಈ ಡ್ರಿಂಕ್ಸ್ನಲ್ಲಿ ಫೆನೊಲಿಕ್ ಕಾಂಪೋಂಡ್ (Phenolic Compounds) ಹೆಚ್ಚಿನ ಪ್ರಮಾಣದಲ್ಲಿದೆ. ಇದು ಆಯಂಟಿ ಆಕ್ಸಿಡೆಂಟ್ (antioxident)ಆಗಿ ಕೆಲಸ ಮಾಡುವುದರಿಂದ ಮಿದುಳಿನ ಆರೋಗ್ಯ ಹಾಗೂ ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಶಾಂಪೇನ್(Champagne) ಸೇವನೆಯಿಂದ ನೆನಪಿನ ಶಕ್ತಿ(Memory power) ಹೆಚ್ಚಾಗುತ್ತದೆ ಎಂದು ಸಂಶೋಧನೆಯಿAದ ತಿಳಿದಿದೆ. 

National Wine Day 2022: ವೈನ್‌ನಲ್ಲೂ ಎಷ್ಟೊಂದು ವಿಧಗಳು

ಟಕಿಲಾ
ಮೂಳೆ(Bone) ಹಾಗೂ ಕ್ಯಾಲ್ಶಿಯಂ(Calcium) ಹೆಚ್ಚಿರುವ ಈ ಡ್ರಿಂಕ್ಸ್‌ನಿಂದ ಕ್ಯಾಲ್ಶಿಯಂ ಡಿಫೀಸಿಯನ್ಸಿಯನ್ನು(Calcium Deficiency) ನಿಯಂತ್ರಿಸುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದ ಶುಗರ್ (Sugar), ಕ್ಯಾಲೋರಿ (Calorie) ಇದ್ದು ದೇಹವನ್ನು ಚಯಾಪಚಯನಗೊಳಿಸುವಲ್ಲಿ ಸಹಕಾರಿಯಾಗಿದೆ.

ವಿಸ್ಕಿ
ರೆಡ್‌ವೈನ್‌ನಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುವ ಮತ್ತೊಂದು ಡ್ರಿಂಕ್ಸ್ ಎಂದರೆ ಅದು ವೈನ್(Wine). ಮಧ್ಯಮ ಆಲ್ಕೋಹಾಲ್ ಬಳಕೆಯಿಂದಾಗುವ ಹೃದಯ ಸಂಬAಧಿ ಖಾಯಿಲೆ ಹಾಗೂ ಹೆಚ್ಚಿರುವ ಆಯಂಟಿ ಆಕ್ಸಿಡೆಂಟ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಡಾರ್ಕ್ ಚಾಕೋಲೇಟ್(Dark chocolate) ರೀತಿ ಕೆಲಸ ಮಾಡುತ್ತದೆ.

ಹಾರ್ಡ್ ಕೊಂಬುಚಾ
ಈ ಡ್ರಿಂಕ್ಸ್ ಅನ್ನು ಕುದಿಸಿದ ಚಹಾದಿಂದ(Tea) ತಯಾರಿಸಲಾಗುತ್ತದೆ. ಅಂದ್ರೆ ಟೀ ಡಿಕಾಕ್ಷನ್ ಎನ್ನಬಹುದು. ಇದರಲ್ಲಿ ಕಡಿಮೆ ಪ್ರಮಾಣದ ಆಲ್ಕೊಹಾಲ್ ಇದ್ದು, ಆಲ್ಕೊಹಾಲ್ ಎಂದು ಕರೆಯುವುದಿಲ್ಲ. ಇತ್ತೀಚೆಗೆ ಹಾರ್ಡ್ ಕೊಂಬುಚಾವನ್ನು(Hard Kombucha) ತಯಾರಿಸಲಾಗುತ್ತಿದ್ದು, ಆಲ್ಕೋಹಾಲ್ ಹೆಚ್ಚಿದೆ. ನಾರ್ಮಲ್ ಕೊಂಬುಚಾ(Kombucha) ಸೇವನೆ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ರಕ್ತದೊತ್ತಡ(Blood Pressure) ಹಾಗೂ ಕೊಬ್ಬನ್ನು(Fat) ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ(Digestion) ಸುಲಭಗೊಳಿಸುತ್ತದೆ. 

ಮದ್ಯ ಪ್ರಿಯರೇ ಗಮನಿಸಿ ! ಸಿಂಗಾಪುರದಲ್ಲಿ ತಯಾರಾಗುತ್ತಿದೆ ಮೂತ್ರ, ಕೊಳಚೆ ನೀರಿನಿಂದ ತಯಾರಿಸಿದ ಸ್ಪೆಷಲ್ ಬಿಯರ್ !

ಯಾವ ಡ್ರಿಂಕ್ಸ್ ತಪ್ಪಿಸಬೇಕು
ಅಂಗಡಿಗಳಲ್ಲಿ ಸಿಗುವ ಎಲ್ಲಾ ಮದ್ಯಗಳು ಆರೋಗ್ಯಕ್ಕೆ ಒಲ್ಳೆಯದಲ್ಲ. ಆದರೆ ಆಯ್ಕೆ ನಮ್ಮದಾಗಿರಬೇಕು. ಆರೋಗ್ಯದ ದೃಷ್ಟಿಯಿಂದ ಕೆಲ ಡ್ರಿಂಕ್ಸ್ಗಳ ಬಳಕೆ ತಪ್ಪಿಸುವುದು ಒಳ್ಳೆಯದು ಈ ಬಗ್ಗೆ ಡೀಟೇಲ್ಸ್(Details) ಇಲ್ಲಿದೆ.
ಬೀರ್: ಇದರಲ್ಲಿ ಕ್ಯಾಲೋರಿ(Calorie) ಪ್ರಮಾಣ ಕಾಣಸಿಗುವುದಿಲ್ಲ. ಬದಲಾಗಿ ರಾಸಾಯನಿಕ ಅಂಶಗಳು ಹೆಚ್ಚಿದ್ದು ಜಡತ್ವಕ್ಕೆ ದಾರಿ ಮಾಡಿಕೊಡುತ್ತದೆ.

ಸ್ವೀಟ್ ಡ್ರಿಂಕ್ಸ್: ಪ್ಯಾಕ್(Pack) ಆಗಿ ಸಿಗುವ ಜ್ಯೂಸ್‌ಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು(Sugar) ಹಾಕಲಾಗಿರುತ್ತದೆ ಜೊತೆಗೆ  ಬಹುಬೇಗ ಮೈ ಭಾರ ಮಾಡುತ್ತದೆ. 

ಮರೆಯದಿರಿ
  ಆಲ್ಕೋಹಾಲ್ ಸೇವಿಸುವುದರಿಂದ ಒತ್ತಡ ಹಾಗೂ ಆತಂಕವನ್ನು ಆ ಕ್ಷಣ ನೀಗಿಸಿಕೊಳ್ಳಬಹುದು. ಪ್ರತಿ ದಿನ ಬಾಟೆಲ್‌ಗಟ್ಟಲೆ(Bottle) ಸೇವಿಸುವುದು ಒಳ್ಳೆಯದಲ್ಲ. ಅದು ಲಿವರ್(Liver), ಕಿಡ್ನಿ(Kidney), ಕರಳು(Intustine), ಹೃದಯಕ್ಕೆ ಸಂಬAಧಿಸಿದ ಖಾಯಿಲೆಗಳಿಗೆ ದಾರಿ ಮಾಡಿಕೊಡಬಹುದು. ಹಾಗಾಗಿ ತಜ್ಞರ ಪ್ರಕಾರ ಪುರುಷರು(Male) ದಿನಕ್ಕೆ ಎರಡು ಬಾರಿ ಹಾಗೂ ಮಹಿಳೆಯರು(Female) ಒಂದು ಬಾರಿ ಉತ್ತಮವಾದ ಆಲ್ಕೋಹಾಲ್ ಅನ್ನು ಸೇವಿಸಬಹುದು. ಇದರಿಂದ ದೇಹದ ಮೇಲೆ ಬೀರುವ ಋಣಾತ್ಮಕ(Negative) ಪರಿಣಾಮವನ್ನು ತಪ್ಪಿಸಬಹುದು ಎಂದು ಅಭಿಪ್ರಾಯಿಸಿದ್ದಾರೆ.

Follow Us:
Download App:
  • android
  • ios