Tips for Pregnants: ಹೆರಿಗೆಯ ನಂತರ ಇವು ಬೇಕೇ ಬೇಕು… ಇಲ್ಲಾಂದ್ರೆ, ನರ್ಸ್ ಸಹ ಸಹಾಯಕ್ಕೆ ಬರೋದಿಲ್ಲ!
ತಾಯ್ತನ ಅನ್ನೋದು ಪ್ರತಿಯೊಬ್ಬ ಮಹಿಳೆಯ ಪಾಲಿನ ಒಂದು ಸಂತಸದ ಕ್ಷಣವಾಗಿದೆ. ಒಂಭತ್ತು ತಿಂಗಳು ಆಕೆ ತನ್ನ ಮಗುವಿನ ಬರುವಿಕೆಯಾಗಿ, ತನ್ನನ್ನು ತಾನು ಆರೈಕೆ ಮಾಡುತ್ತಾರೆ. ಆದರೆ ಮಗುವಿಗೆ ಜನ್ಮ ನೀಡೋದು ಕಷ್ಟಕರವಾದ ಮತ್ತು ಆಯಾಸಗೊಳಿಸುವ ಪ್ರಕ್ರಿಯೆ. ಒಬ್ಬ ಮಹಿಳೆ ತಾಯಿಯಾಗಲು ಹೊರಟಾಗ, ಪ್ರತಿಯೊಬ್ಬರೂ ಅವಳಿಗೆ ಸಾಕಷ್ಟು ಸಲಹೆಗಳನ್ನು ನೀಡುತ್ತಾರೆ. ಏನು ಮಾಡಬೇಕು, ಏನು ತಿನ್ನಬೇಕು, ಹೇಗೆ ಬದುಕಬೇಕು, ಹೇಗೆ ಮಲಗಬೇಕು ಮತ್ತು ಏನು ಮಾಡಬಾರದು ಎಂದು ಅವಳಿಗೆ ಹೇಳುತ್ತಾರೆ. ಆದರೆ ಹೆರಿಗೆಯ ನಂತರ ಏನೆಲ್ಲಾ ಮಾಡಬೇಕು ಅನ್ನೋರು ಕಡಿಮೆ. ನಾವೀಗ ಅದರ ಬಗ್ಗೆ ತಿಳಿಯೋಣ.
ಗರ್ಭಧಾರಣೆಯ(Pregnancy) ಒಂಬತ್ತು ತಿಂಗಳುಗಳು ಎಷ್ಟು ಕಷ್ಟಕರವಾಗಿರುತ್ತೆಂದರೆ, ಜನರ ಸಲಹೆ ಎಲ್ಲೋ ಒಂದು ಕಡೆ ಸಹಾಯಕ್ಕೆ ಬರುತ್ತೆ. ಒಂದು ವೇಳೆ ಈ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಈಗಾಗಲೇ ತಿಳಿದುಕೊಳ್ಳೋದು ಒಳ್ಳೆಯದು. ಆದರೆ, ಗರ್ಭಧಾರಣೆಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಯಾರೂ ಹೇಳೋದಿಲ್ಲ ಮತ್ತು ಕೊನೆಯಲ್ಲಿ ಡೆಲಿವೆರಿಗೆ ಹತ್ತಿರವಾದಾಗ, ಅವುಗಳಿಂದಾಗಿ ತಲೆ ಹಾಳಾಗುತ್ತೆ.
ಗರ್ಭಾವಸ್ಥೆಯಲ್ಲಿ ಏನು ಮಾಡಬೇಕು ಅಥವಾ ಮಗುವನ್ನು ಪಡೆದ ನಂತರ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅನೇಕ ಜನರು ನಿಮಗೆ ಹೇಳಿರಬಹುದು, ಆದರೆ ಹೆರಿಗೆಯ(Delivery) ನಂತರ ನಿಮಗೆ ಏನು ಬೇಕಾಗಬಹುದು ಅಥವಾ ಆಸ್ಪತ್ರೆಗೆ ಹೊರಡುವ ಮೊದಲು ನೀವು ನಿಮ್ಮೊಂದಿಗೆ ಏನೆಲ್ಲಾ ವಸ್ತುಗಳನ್ನು ಕೊಂಡೊಯ್ಯಬೇಕು ಎಂದು ಯಾರಾದರೂ ನಿಮಗೆ ಹೇಳಿದ್ದಾರಾ? ಡೆಲಿವರಿಯ ನಂತರ ನಿಮಗೆ ಅಗತ್ಯವಿರುವ ಕೆಲವು ವಿಷಯಗಳಿವೆ. ನೀವು ಅವರ ಬಗ್ಗೆ ಮುಂದೆ ಓದಬಹುದು.
ಒಳ ಉಡುಪು (Under wear)
ಹೆರಿಗೆಯ ನಂತರ, ನೀವು ಶಿಯರ್ ಸೈಜ್ ಒಳ ಉಡುಪುಗಳನ್ನು ಧರಿಸಬೇಕು. ರಕ್ತಸ್ರಾವವು ಹೆರಿಗೆಯ ನಂತರ ತುಂಬಾ ಹೆಚ್ಚಾಗಿರುತ್ತೆ, ಆದ್ದರಿಂದ ಈ ಸಮಯದಲ್ಲಿ ನಿಮಗೆ ಒಳ ಉಡುಪುಗಳ ಅಗತ್ಯವಿರುತ್ತೆ. ಆಸ್ಪತ್ರೆಯಲ್ಲಿರಲು ವೈದ್ಯರು ಸೂಚಿಸಿದ ದಿನಗಳಿಗಿಂತ ನೀವು ಒಂದು ಅಥವಾ ಎರಡು ದಿನಗಳವರೆಗೆ ಹೆಚ್ಚುವರಿಯಾಗಿ ಒಳಉಡುಪುಗಳನ್ನು ತೆಗೆದುಕೊಳ್ಳಬೇಕು.
ಸ್ಯಾನಿಟರಿ ಪ್ಯಾಡ್(Sanitary pad)
ಮೊದಲೇ ಹೇಳಿದಂತೆ, ರಕ್ತಸ್ರಾವವು ಹೆರಿಗೆಯ ನಂತರ ಪಿರೇಡ್ಸ್ ಗಳಂತೆ ಸಂಭವಿಸುತ್ತೆ, ಆದ್ದರಿಂದ ಈ ಸಮಯದಲ್ಲಿ ನೀವು ಮೆಟರ್ನಿಟಿ ಸ್ಯಾನಿಟರಿ ಪ್ಯಾಡ್ ಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು, ಅವುಗಳ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುತ್ತೆ. ಇದನ್ನು ಬಳಸೋದ್ರಿಂದ ಡೆಲಿವರಿಯ ನಂತರ ಪದೇ ಪದೇ ಪ್ಯಾಡ್ ಬದಲಾಯಿಸಲು ನಿಮಗೆ ತೊಂದರೆ ಆಗೋದಿಲ್ಲ.
ಸ್ಟೂಲ್ ಸಾಫ್ಟನರ್(Stool softner)
ಡೆಲಿವರಿಯ ನಂತರ ಮುಂಬರುವ ದಿನಗಳಲ್ಲಿ ನಿಮಗೆ ಇದು ಬೇಕಾಗಬಹುದು. ಈ ಸಮಯದಲ್ಲಿ ನೀವು ಸ್ತನ್ಯಪಾನ ಮಾಡುತ್ತಿರೋದರಿಂದ, ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ. ಹೆರಿಗೆಯ ನಂತರ ನೀವು ಮಲಬದ್ಧತೆ ಸಮಸ್ಯೆಗೆ ಒಳಗಾಗುತ್ತಿದ್ದರೆ, ಸ್ಟುಟೆಲ್ ಸಾಫ್ಟ್ನರ್ ಗಳು ಅಂದರೆ ಮಲಬದ್ಧತೆ ನಿವಾರಕ ಔಷಧಗಳನ್ನು ಬಳಕೆ ಮಾಡಬಹುದು.
ನಿಪ್ಪಲ್ ಕ್ರೀಮ್(Nipple cream)
ಮಗು ಹೊರಬಂದ ನಂತರ ನಿಮಗೆ ಇದು ಬೇಕಾಗಬಹುದು. ಸ್ತನ್ಯಪಾನ ಮಾಡುವ ಮಹಿಳೆಯರಿಗೆ ಪ್ರಸವದ ನಂತರದ ಮೊದಲ ಕೆಲವು ವಾರಗಳಲ್ಲಿ ನಿಪ್ಪಲ್ ಕ್ರೀಮ್ ತುಂಬಾ ಸಹಾಯಕ. ಸ್ತನ್ಯಪಾನವು ಮೊಲೆತೊಟ್ಟುಗಳ ಮೇಲೆ ಬಿರುಕು ಅಥವಾ ನೋವನ್ನು ಉಂಟುಮಾಡಬಹುದು. ಇದಕ್ಕಾಗಿ ನಿಪ್ಪಲ್ ಕ್ರೀಮ್ ಅವಶ್ಯಕ. ಇವುಗಳನ್ನು ಬ್ಯಾಗ್ ನಲ್ಲಿ ಇರಿಸಲು ಮರೆಯಬೇಡಿ.
ಎಂಟರ್ ಟೇನ್ ಮೆಂಟ್(Entertainment)
ಹೆರಿಗೆಯ ನಂತರ ಕೆಲವು ವಾರಗಳವರೆಗೆ, ನೀವು ಮಾಡಬೇಕಾಗಿರೋದು ವಿಶ್ರಾಂತಿ ಮತ್ತು ನಿಮ್ಮ ಮಗುವಿಗೆ ಹಾಲುಣಿಸೋದು. ನೀವು ತುಂಬಾನೆ ವಿಶ್ರಾಂತಿ ಪಡೆಯಬೇಕು ಮತ್ತು ಈ ಸಮಯದಲ್ಲಿ ನಿಮಗೆ ಬೋರ್ ಆಗುತ್ತೆ. ಈ ಬೇಸರವನ್ನು ನಿವಾರಿಸಲು ನಿಮ್ಮೊಂದಿಗೆ ಮನರಂಜನೆಗಾಗಿ ಏನನ್ನಾದರೂ ಇರಿಸಿಕೊಳ್ಳಿ. ನೀವು ನಿಮ್ಮ ನೆಚ್ಚಿನ ಧಾರಾವಾಹಿ ಅಥವಾ ಚಲನಚಿತ್ರಗಳನ್ನು ನಿಮ್ಮ ಫೋನ್ ನಲ್ಲಿ ವೀಕ್ಷಿಸಬಹುದು.