Cryptic Pregnancy: ಶಾಲೆಗೆ ಹೊರಟು ನಿಂತಾಕೆಗೆ ಹೆರಿಗೆ ಆಗಿತ್ತು! ಇದು ಕ್ರಿಪ್ಟಿಕ್ ಪ್ರೆಗ್ನೆನ್ಸಿ
ಕ್ರಿಪ್ಟಿಕ್ ಪ್ರೆಗ್ನೆನ್ಸಿ ಅಪರೂಪದಲ್ಲಿ ಅಪರೂಪದ ಪ್ರಕರಣ. ಗರ್ಭ ಧರಿಸಿದ್ದರೂ ಅದರ ಬಗ್ಗೆ ಗೊತ್ತೇ ಆಗದ ಸ್ಥಿತಿ ಇದು. ಬ್ರಿಟನ್ ನಲ್ಲಿ ಇಂಥದ್ದೊಂದು ಸ್ಥಿತಿ ಎದುರಿಸಿದ್ದುದರ ಬಗ್ಗೆ ಯುವತಿಯೊಬ್ಬಳು ಹಂಚಿಕೊಂಡಿರುವ ವಿಡಿಯೋ ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿದೆ.
ಶಾಲಾ ಬಾಲಕಿಯೊಬ್ಬಳು ಇತ್ತೀಚೆಗೆ ಶಾಲೆಯಲ್ಲೇ ಮಗು ಹೆತ್ತ ವಿಚಾರ ಸುದ್ದಿಯಲ್ಲಿತ್ತು. ಆಕೆಗೆ ತಾನು ಗರ್ಭಿಣಿಯಾಗಿರುವ ಸಂಗತಿ ಗೊತ್ತಿತ್ತೇ ಇಲ್ಲವೇ ಎನ್ನುವುದು ತಿಳಿದಿಲ್ಲ. ಸ್ವತಃ ಧರಿಸಿದ್ದರೂ ತಿಳಿಯದೇ ಇರಲು ಸಾಧ್ಯವೇ ಎನ್ನಬೇಡಿ. ವೈಜ್ಞಾನಿಕವಾಗಿ ಅಂತಹ ಸಾಧ್ಯತೆಗಳೂ ಇವೆ. ಇಲ್ಲಿ, ಈ ಪ್ರಕರಣದಲ್ಲಿ ತಿಳಿದರೂ ಏನೂ ಮಾಡಲಾಗದ ಅಸಹಾಯಕತೆ ಹೆಚ್ಚಾಗಿರುವ ಸಾಧ್ಯತೆಯೇ ಅಧಿಕ. ಅದಿರಲಿ. ಇತ್ತೀಚೆಗೆ ಬ್ರಿಟನ್ ದೇಶದಲ್ಲಿ ಶಾಲಾ ಬಾಲಕಿಯೊಬ್ಬಳು ಸುದ್ದಿಯಾಗಿದ್ದಾಳೆ. ಕಾರಣ, ಆಕೆಯೂ ಮಗುವನ್ನು ಹೆತ್ತಿದ್ದಾಳೆ. ಅದು ಏಕೆ ಸುದ್ದಿಯಾಗಿದೆ ಎಂದರೆ, ಆಕೆಗೆ ತಾನು ಗರ್ಭ ಧರಿಸಿರುವುದು ತಿಳಿದಿರಲೇ ಇಲ್ಲ. ಅದೊಂದು ದಿನ… ಆಕೆ ಎಂದಿನಂತೆ ಶಾಲೆಗೆ ಹೊರಡುವ ಸಿದ್ಧತೆಯಲ್ಲಿದ್ದಳು. ಯೂನಿಫಾರಂ ಧರಿಸಿ ಹೊರಟು ನಿಂತಿದ್ದಳು. ಇದ್ದಕ್ಕಿದ್ದ ಹಾಗೆ ಭಾರೀ ನೋವು ಕಾಣಿಸಿಕೊಂಡಿತು. ನೋಡುತ್ತಿರುವಂತೆಯೇ ಆಕೆ ತನ್ನ ಮಗನಿಗೆ ಜನ್ಮ ನೀಡಿಯೇ ಬಿಟ್ಟಳು! ವೈದ್ಯ ಜಗತ್ತು ಶಾಕ್ ಆಗಿತ್ತು. ಏಕೆಂದರೆ, ಆಕೆಗೆ ಪೀರಿಯಡ್ಸ್ ಸಹಜವಾಗಿ ಆಗುತ್ತಿತ್ತು. ಪ್ರೆಗ್ನೆನ್ಸಿ ಪರೀಕ್ಷೆ ನಡೆಸಿದ್ದರೂ ಅದು ನೆಗೆಟಿವ್ ಎಂದು ತೋರಿತ್ತು.
ಬ್ರಿಟನ್ ನ 19ರ ವಯೋಮಾನದ ಎಲೆಕ್ಸಿಸ್ ಕ್ವೀನ್ (Alexis Queen) ಎಂಬಾಕೆ ತನ್ನ ಅನುಭವದ ಬಗ್ಗೆ ಸೋಷಿಯಲ್ ಮೀಡಿಯಾ(Social Media) ದಲ್ಲಿ ಇತ್ತೀಚೆಗೆ ವಿಡಿಯೋ ಹಂಚಿಕೊಂಡಿದ್ದಾಳೆ. ಅದೀಗ ಭಾರೀ ಚರ್ಚೆಯಲ್ಲಿದೆ. ಆಕೆಗೆ 15 ವರ್ಷವಾಗಿದ್ದಾಗ ತಾಯಿ(Mother)ಯಾಗಿದ್ದಳು. ಈ ಘಟನೆ ನಡೆದಿರುವುದು ನಾಲ್ಕು ವರ್ಷಗಳ ಹಿಂದೆ. ಆದರೆ, ಈಗ ಪ್ರಪಂಚದಾದ್ಯಂತ ಸುದ್ದಿಯಾಗಿದೆ.
ಎಲೆಕ್ಸಿಸ್ ಹೇಳುತ್ತಾಳೆ, “ಒಂದು ದಿನ, ಎಂದಿನಂತೆ ಶಾಲೆಗೆ (School) ಹೊರಡುವ ಸಿದ್ಧತೆಯಲ್ಲಿದ್ದೆ. ಅಚಾನಕ್ಕಾಗಿ ಹೊಟ್ಟೆಯಲ್ಲಿ (Stomach) ನೋವು (Pain) ಕಾಣಿಸಿಕೊಂಡಿತು. ಪಾಲಕರ (Parents) ಬಳಿ ಹೇಳಿದರೆ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹೀಗೆ ಹೇಳುತ್ತಿದ್ದೇನೆ ಎಂದು ಭಾವಿಸಿದರು. ಬಾಗಿಲ ಬಳಿ ನಿಂತಿದ್ದೆ. ಒಂದು ಹೆಜ್ಜೆ ಮುಂದಿಟ್ಟಾಗ ಪರಿಸ್ಥಿತಿ ಇನ್ನೂ ಗಂಭೀರವಾಗತೊಡಗಿತು. ನನ್ನನ್ನು ನೋಡಿ ಅಮ್ಮನಿಗೆ ಗಾಭರಿಯಾಯಿತು. ಅಲ್ಲಿಯೇ ಕುಸಿದುಬಿಟ್ಟೆ. ಆಗ ಅಮ್ಮ ನನ್ನೊಳಗಿಂದ ಮಗುವಿನ ತಲೆ (Head of Child) ಹೊರಬರುವುದನ್ನು ನೋಡಿ ಕಿರುಚಿಬಿಟ್ಟಳುʼ ಎಂದು.
ಎಲೆಕ್ಸಿಸ್ ಲಿವಿಂಗ್ ರೂಮಿನಲ್ಲಿ ನೋವಿನಿಂದ ಒದ್ದಾಡುತ್ತಿದ್ದರೆ, ಪಾಲಕರು ಪ್ಯಾನಿಕ್ (Panic) ಆಗಿದ್ದರು. ತಂದೆ ಪ್ರೆಗ್ನೆನ್ಸಿ ಪರೀಕ್ಷೆ ಕಿಟ್ ತರಲು ಆಚೆ ಓಡಿದರು. ಆಂಟಿಯೊಬ್ಬರು ತಕ್ಷಣ ಆಂಬುಲೆನ್ಸ್ ಗೆ ಫೋನ್ ಮಾಡಿದರು. ಅವರೂ ಸಹ ಮಗುವಿನ ತಲೆ ಹೊರಬರುವುದನ್ನು ಕಂಡು ಈಕೆಯ ಅಮ್ಮನ ಮೇಲೆ ರೇಗಿದರು. “ನೀನು ಎಲೆಕ್ಸಿಸ್ ಳನ್ನು ನಂಬಲಿಲ್ಲ. ಆಕೆ ಮೊದಲಿನಿಂದಲೂ ಎದೆಯುರಿ (Burning in Chest), ಹೊಟ್ಟೆನೋವು ಎನ್ನುತ್ತಿದ್ದರೂ ಆಕೆಯನ್ನು ನಂಬಲಿಲ್ಲʼ ಎಂದು ಗದರಿದರು. ಆಂಬುಲೆನ್ಸ್ ನಿಂದ ವೈದ್ಯ ಸಿಬ್ಬಂದಿ ಮನೆಯ ಗೇಟ್ ಬಳಿ ಬರುತ್ತಿರುವ ಸಮಯದಲ್ಲಿ ಎಲೆಕ್ಸಿಸ್ ಗೆ ಹೆರಿಗೆ (Give Birth)ಯಾಯಿತು!
ಇದನ್ನೂ ಓದಿ: Women Health: ಗರ್ಭಿಣಿಯರು ಸ್ಕೂಟರ್ ಓಡಿಸೋದು ಎಷ್ಟು ಸುರಕ್ಷಿತ?
ಕ್ರಿಪ್ಟಿಕ್ ಪ್ರೆಗ್ನೆನ್ಸಿ (Cryptic Pregnancy)
ಎಲೆಕ್ಸಿಸ್ ಗೆ ಹೆರಿಗೆ ಆಗುವುದಕ್ಕೂ ಸ್ವಲ್ಪ ದಿನ ಮುನ್ನ ಎದೆಯಲ್ಲಿ ಉರಿ, ಹೊಟ್ಟೆಯಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಿತ್ತು. ಆಗ ಶಾಲೆಗೆ ಹೋಗದೆ ರಜೆ ಮಾಡುತ್ತಿದ್ದಳು. ಆಕೆಯ ಅಮ್ಮ ಗರ್ಭ ಧರಿಸಿದ್ದಾಗಲೂ ಎದೆಯಲ್ಲಿ ತೀವ್ರವಾಗಿ ಉರಿಯಾಗುತ್ತಿತ್ತೆಂದು ಹೇಳಿದಾಗ ಪರೀಕ್ಷೆ ಮಾಡಿಸಿದ್ದರು. ಆದರೆ, ಆಗ ಅದು ನೆಗೆಟಿವ್ (Negative) ಎಂದು ತೋರಿತ್ತು. ಈ ರೀತಿಯ ಗರ್ಭಧಾರಣೆಯನ್ನು ಕ್ರಿಪ್ಟಿಕ್ ಪ್ರೆಗ್ನೆನ್ಸಿ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ತನ್ನ ಗರ್ಭಾವಸ್ಥೆಯ ಬಗ್ಗೆ ಮಹಿಳೆಗೆ ಯಾವುದೇ ರೀತಿಯ ಅರಿವಾಗುವುದಿಲ್ಲ. ಕೊನೆಯ ಹಂತದವರೆಗೂ ತಿಳಿದುಬರುವುದಿಲ್ಲ. ಗರ್ಭ ಧರಿಸಿದಾಗ ಕಂಡುಬರುವ ಯಾವೊಂದೂ ಲಕ್ಷಣಗಳೂ ಕಂಡುಬರುವುದಿಲ್ಲ. ಪೀರಿಯಡ್ಸ್ (Periods) ಎಂದಿನಂತೆ ಇರುತ್ತದೆ. ಹೊಟ್ಟೆ ಕೂಡ ದಪ್ಪ (Baby Bump) ಆಗುವುದಿಲ್ಲ. ಕೆಲವೊಮ್ಮೆ ತಲೆಸುತ್ತು, ಸುಸ್ತು, ವಾಂತಿ ಆಗುತ್ತದೆಯೇ ಹೊರತು ಬೇರ್ಯಾವ ಲಕ್ಷಣಗಳೂ ಇರುವುದಿಲ್ಲ.
ಇದನ್ನೂ ಓದಿ: ಆಕೆ ವೈದ್ಯೆ, ಗಂಡನೂ ವೈದ್ಯ, ಮೊದಲ ರಾತ್ರೀಲಿ ಬ್ಲೀಡ್ ಆಗದಿದ್ದಕ್ಕೆ ಚಚ್ಚಿದ ಪತಿ ರಾಯ!
ಹಾರ್ಮೋನ್ ಅಸಮತೋಲನ (Hormone Imbalance)
ಹಾರ್ಮೋನ್ ಗಳಲ್ಲಿ ಅಸಮತೋಲನ ಇದ್ದಾಗ ಈ ರೀತಿಯಲ್ಲಿ ಗರ್ಭಧಾರಣೆ ಆಗಬಹುದು ಎನ್ನುತ್ತದೆ ವೈದ್ಯ ವಿಜ್ಞಾನ. ಪಿಸಿಒಎಸ್, ಅತಿಯಾದ ಒತ್ತಡ, ಆಲ್ಕೋಹಾಲ್-ಧೂಮಪಾನದ ವ್ಯಸನ, ಸಂತಾನೋತ್ಪತ್ತಿ ನಿಯಂತ್ರಣದ ವಿಧಾನ ಮುಂತಾದವುಗಳಿಂದಲೂ ಕ್ರಿಪ್ಟಿಕ್ ಪ್ರೆಗ್ನೆನ್ಸಿ ಸಂಭವಿಸಬಹುದು ಎನ್ನಲಾಗುತ್ತದೆ.