ಮೆನ್‌ಸ್ಟ್ರುವಲ್ ಕಪ್ ಯೋನಿಯಲ್ಲಿ ಸಿಕ್ಕಾಕಿಕೊಂಡರೆ ಏನು ಮಾಡೋದು?
ಇತ್ತಿಚಿನ ದಿನಗಳಲ್ಲಿ ಹೈಜಿನ್ ಆಗಿರಲು ಮತ್ತು ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡಲು ಜನರು ಹೊಸ ಬೆಳವಣಿಗೆಯತ್ತ ವಾಲುತ್ತಿದ್ದಾರೆ. ಅದರಲ್ಲೂ ಇಂದು ಸ್ಯಾನಿಟರಿ ಪ್ಯಾಡ್ ಬದಲಿಗೆ, ಇತರ ಉತ್ಪನ್ನಗಳನ್ನು ಜನರು ಹೆಚ್ಚು ಉಪಯೋಗಿಸುತ್ತಿದ್ದಾರೆ. ಅದರಲ್ಲಿ ಮೆನ್ ಸ್ಟ್ರುವಲ್ ಕಪ್ ಒಂದು. ಇದನ್ನು ಬಳಸೋದರಿಂದ ತುಂಬಾನೆ ಉಪಯೋಗವಿದೆ ನಿಜ. ಆದರೆ ಒಂದು ವೇಳೆ ಮೆನ್ ಸ್ಟ್ರುವಲ್ ಕಪ್ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡರೆ ಏನು ಮಾಡೋದು? ಒಂದು ವೇಳೆ ನೀವು ಈ ಪರಿಸ್ಥಿತಿಯಲ್ಲಿದ್ದರೆ, ಟೆನ್ಷನ್ ಆಗ್ಬೇಡಿ.! ಮೆನ್ ಸ್ಟ್ರುವಲ್ ಕಪ್ ಅನ್ನು ಹೇಗೆ ತೆಗೆದುಹಾಕಬೇಕೆಂದು ಇಲ್ಲಿ ನೀಡಲಾಗಿದೆ. ಇದರಿಂದ ನೀವು ಈ ಸಮಸ್ಯೆಯನ್ನು ನಿವಾರಿಸಬಹುದು.
ಮೆನ್ ಸ್ಟ್ರುವಲ್ ಕಪ್ (menstrual cup) ಅನ್ನು ಬಳಸುವ ವಿಷಯಕ್ಕೆ ಬಂದಾಗ, ಮೊದಲನೆಯದಾಗಿ, ಅದನ್ನು ಹೇಗೆ ಬಳಸಬೇಕು ಎಂಬುದು ತಿಳಿದಿರಬೇಕು. ಅಲ್ಲದೇ ಅದು ಸೋರಿಕೆಯಾಗುತ್ತದೆಯೋ ಇಲ್ಲವೋ? ಇದು ಸುರಕ್ಷಿತವೇ? ಎನ್ನುವಂತಹ ಸಾಲು, ಸಾಲು ಪ್ರಶ್ನೆಗಳು ಕೇಳಿ ಬರುತ್ತದೆ. ಇದರಲ್ಲೂ ಎಲ್ಲರನ್ನೂ ಕಾಡುವ ಒಂದು ಪ್ರಮುಖ ಪ್ರಶ್ನೆಯಿದೆ. ಅದೇನೆಂದರೆ ಮೆನ್ ಸ್ಟ್ರುವಲ್ ಕಪ್ ವಜೈನಾದಲ್ಲಿ ಸಿಲುಕಿಕೊಂಡರೆ ಏನು ಮಾಡೋದು?
ಮೆನ್ ಸ್ಟ್ರುವಲ್ ಕಪ್ ಬಗ್ಗೆ ಪ್ರಶ್ನೆಗಳು ಹಲವಾರಿರುತ್ತವೆ. ಅದರಲ್ಲೂ ಕಪ್ ಯೋನಿಯಲ್ಲಿ ಸಿಕ್ಕಿದರೆ ಏನು ಮಾಡೋದು ಅನ್ನೋದೆ ದೊಡ್ಡ ಪ್ರಶ್ನೆ. ಇದು ಸ್ವಾಭಾವಿಕ ಪ್ರಶ್ನೆ ಮತ್ತು ಇದು ನಿಜವಾಗಿಯೂ ಸಂಭವಿಸಿದರೆ ಏನು ಮಾಡೋದು, ಎಂದು ಪ್ರತಿಯೊಬ್ಬರು ಯೋಚನೆ ಮಾಡುತ್ತಿರುತ್ತಾರೆ.
ನಿಮ್ಮ ಯೋನಿ ತುಂಬಾ ಆಳವಾಗಿಲ್ಲ ಅಥವಾ ಗುಹೆಯಂತೆ ಇಲ್ಲ ಅನ್ನೋದು ನಿಮಗೆ ಗೊತ್ತೆ ಇದೆ. ನಿಮ್ಮ ಗರ್ಭಕಂಠವು ತುಂಬಾ ಕಿರಿದಾಗಿದೆ. ಅಂದ್ರೆ ಮೆನ್ ಸ್ಟ್ರುವಲ್ ಕಪ್ ನಿಮ್ಮ ದೇಹದೊಳಗೆ ನುಸುಳಲು ಸಾಧ್ಯವಿಲ್ಲ. ಆದ್ದರಿಂದ ಚಿಂತೆ ಮಾಡೋದನ್ನು ನಿಲ್ಲಿಸಿ! ಒಮ್ಮೆ ಅದು ಒಳಗೆ ಹೋದ್ರೆ, ಅದನ್ನು ಅಲ್ಲಿಂದಲೇ ಮತ್ತೆ ಹೊರಕ್ಕೆ ತೆಗೆಯಬಹುದು. ಆದುದರಿಂದ ಚಿಂತೆ ಮಾಡೋದನ್ನು ನಿಲ್ಲಿಸಿ.
ಮೆನ್ ಸ್ಟ್ರುವಲ್ ಕಪ್ ಬಳಸಲು ನೀವು ಕಲಿತಿದ್ದೀರಾ?
ನೀವು ಮೆನ್ ಸ್ಟ್ರುವಲ್ ಕಪ್ ಬಳಸಲು ಕಲಿಯದೇ ಇದ್ದರೆ, ಅದನ್ನು ತೆಗೆದುಹಾಕಲು ನಿಮಗೆ ಸ್ವಲ್ಪ ತೊಂದರೆಯಾಗಬಹುದು. ಆದ್ದರಿಂದ ತಾಳ್ಮೆಯಿಂದಿರಿ. ಯಾವ ರೀತಿ ಮೆನ್ ಸ್ಟ್ರುವಲ್ ಕಪ್ ಬಳಕೆ ಮಾಡಬಹುದು ಅನ್ನೋದನ್ನು ನೋಡೋಣ.
ಮೊದಲನೆಯದಾಗಿ, ಮೆನ್ ಸ್ಟ್ರುವಲ್ ಕಪ್ ನ ಸೀಲ್ ಓಪನ್ ಮಾಡಿದ ನಂತರ, ಕಪ್ ನ ತಳಭಾಗವನ್ನು ಹಿಸುಕಿ ನಿಧಾನವಾಗಿ ಅದನ್ನು ಯೋನಿಯೊಳಗೆ (vagina) ಸೇರಿಸಬೇಕು. ಇದು ಟ್ಯಾಂಪೂನ್ ಅನ್ನು ಹೊರತೆಗೆಯುವುದಕ್ಕಿಂತ ಸ್ವಲ್ಪ ಭಿನ್ನವಾಗಿದೆ ಮತ್ತು ಸುಮಾರು 5 ಸೆಕೆಂಡುಗಳಷ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮೆನ್ ಸ್ಟ್ರುವಲ್ ಕಪ್ ನ್ನು ತೆಗೆದುಹಾಕಲು ಆರಾಮವಾಗಿ ತೆರೆಯಲು ಶೌಚಾಲಯ ಅಥವಾ ಟಬ್ ನ ಬದಿಯಲ್ಲಿ ಒಂದು ಕಾಲನ್ನು ಎತ್ತಿ ನಿಂತರೆ, ಸುಲಭವಾಗಿ ಮೆನ್ ಸ್ಟ್ರುವಲ್ ಕಪ್ ಹೊರತೆಗೆಯಬಹುದು.
ಇನ್ನೊಂದು ವಿಧಾನವೆಂದರೆ ಸ್ವಚ್ಛವಾದ ತೋರ್ಬೆರಳು ಮತ್ತು ಹೆಬ್ಬೆರಳನ್ನು ಯೋನಿಯೊಳಗೆ ಸೇರಿಸಿ ಮತ್ತು ಕಪ್ ನ ಬುಡವನ್ನು ಹಿಡಿಯುವುದು. ಅದಕ್ಕಾಗಿ ನೀವು ಒಂದು ಕಾಲನ್ನು ಸ್ವಲ್ಪ ಎತ್ತರದ ಜಾಗದಲ್ಲಿಟ್ಟು ತೆಗೆಯಬೇಕು. ಕಪ್ ನ ಕೆಳ ಭಾಗವನ್ನು ಮೆಲ್ಲನೆ ಹಿಸುಕಿ, ತದನಂತರ ನಿಧಾನವಾಗಿ ಹೊರಕ್ಕೆ ಎಳೆಯಿರಿ. ನಂತರ ಯೋನಿಯನ್ನು ಚೆನ್ನಾಗಿ ಕ್ಲೀನ್ ಮಾಡಿ.
ಈ ಕ್ರಮಗಳು ಸಹ ಕೆಲಸ ಮಾಡದಿದ್ದರೆ, ಕಪ್ ಅನ್ನು ಹೊರತೆಗೆಯಲು ನಿಮಗೆ ಸಹಾಯ ಮಾಡಲು ಸ್ನೇಹಿತರು ಅಥವಾ ಸಂಗಾತಿಯನ್ನು ಕೇಳಬಹುದು, ಆದರೆ ಉತ್ತಮ ಆಯ್ಕೆಯೆಂದರೆ ಯೋನಿಯೊಳಗೆ ಸಿಲುಕಿರುವ ಮೆನ್ ಸ್ಟ್ರುವಲ್ ಕಪ್ ಸುಲಭವಾಗಿ ತೆಗೆದುಹಾಕಬಲ್ಲ ಸ್ತ್ರೀರೋಗತಜ್ಞ ಅಥವಾ ತರಬೇತಿ ಪಡೆದ ನರ್ಸ್ ಅನ್ನು ಭೇಟಿ ಮಾಡುವುದು.
ಮೆನ್ ಸ್ಟ್ರುವಲ್ ಕಪ್ ಎಂದರೇನು ಮತ್ತು ಅದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತದೆ?
ಮೆನ್ ಸ್ಟ್ರುವಲ್ ಕಪ್ ಪರಿಸರ ಸ್ನೇಹಿ (eco friendly) ಮತ್ತು ಪಾಕೆಟ್ ಸ್ನೇಹಿಯಾಗಿದ್ದು, ಸ್ಯಾನಿಟರಿ ಪ್ಯಾಡ್ ಗಳು ಮತ್ತು ಟ್ಯಾಂಪೂನ್ ಗಳ ಬದಲಿಗೆ ಪಿರಿಯಡ್ಸ್ ಹೈಜಿನ್ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತೆ. ಮೆನ್ ಸ್ಟ್ರುವಲ್ ಕಪ್ ಎಂಬುದು ಮೃದುವಾದ ಸಿಲಿಕಾನ್ ನಿಂದ ಮಾಡಿದ ಒಂದು ಸಣ್ಣ ಕಪ್ ಆಕಾರದ ವಸ್ತುವಾಗಿದೆ, ಇದನ್ನು ನಿಮ್ಮ ಋತುಚಕ್ರದ ಸಮಯದಲ್ಲಿ ರಕ್ತವನ್ನು ಸಂಗ್ರಹಿಸಲು ಯೋನಿಯೊಳಗೆ ಸೇರಿಸಲಾಗುತ್ತದೆ. ಇದು ಮುಟ್ಟಿನ ರಕ್ತವನ್ನು ಸಂಗ್ರಹಿಸುತ್ತದೆ, ಆದರೆ ಸ್ಯಾನಿಟರಿ ಪ್ಯಾಡ್ ಗಳು ಮತ್ತು ಟ್ಯಾಂಪೂನ್ ಗಳು ರಕ್ತವನ್ನು ಹೀರಿಕೊಳ್ಳುತ್ತವೆ.
ಎಲ್ಲಾ ಹೊಸ ವಿಷಯಗಳಂತೆ, ಯೋನಿಯಿಂದ ಮೆನ್ ಸ್ಟ್ರುವಲ್ ಕಪ್ ಸೇರಿಸಲು ಮತ್ತು ತೆಗೆದುಹಾಕಲು ಸ್ವಲ್ಪ ತಾಳ್ಮೆ ಮತ್ತು ಅಭ್ಯಾಸದ ಅಗತ್ಯವಿದೆ. ಒಮ್ಮೆ ನೀವು ಈ ಪ್ರಕ್ರಿಯೆಗೆ ಒಗ್ಗಿಕೊಂಡರೆ, ಮೆನ್ ಸ್ಟ್ರುವಲ್ ಕಪ್ ಒಳಗೆ ಮತ್ತು ಹೊರಗೆ ಹೋಗುವುದು ತುಂಬಾ ಸುಲಭ. ಅಲ್ಲದೇ ಪರಿಸರ ಸ್ನೇಹಿಯಾಗಿರೋದರಿಂದ ಇದು ಬಳಸಲು ತುಂಬಾ ಯೋಗ್ಯವೂ ಆಗಿದೆ.