ಪ್ರಾಯಕ್ಕೆ ಮೊದಲೇ ಬರುವ ಬಿಳಿ ಕೂದಲಿಗೆ ವೀಳ್ಯದೆಲೆಯ ಪರಿಹಾರ: ಒಮ್ಮೆ ಟ್ರೈ ಮಾಡಿ
ಕೂದಲಿನ ಆರೋಗ್ಯಕ್ಕೆ ಮತ್ತು ಬಿಳಿ ಕೂದಲನ್ನು ಕಪ್ಪಾಗಿಸಲು ವೀಳ್ಯದೆಲೆಗಳು ತುಂಬಾ ಸಹಾಯಕ. ಏಕೆಂದರೆ ಈ ಎಲೆಗಳಲ್ಲಿ ವಿಟಮಿನ್ ಎ, ಸಿ, ಬಿ1, ಬಿ2, ಪೊಟ್ಯಾಸಿಯಮ್, ಥಯಾಮಿನ್, ನಿಯಾಸಿನ್, ರಿಬೋಫ್ಲಾವಿನ್ ನಂತಹ ಪೋಷಕಾಂಶಗಳಿವೆ.ಹೀಗಾಗಿ ಇವುಗಳನ್ನು ತಲೆಕೂದಲಿಗೆ ಪ್ರಯೋಗಿಸುವುದು ಹೇಗೆ ಅಂತ ನೋಡೋಣ...

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ತುಂಬಾ ಜನರಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಬಂದು ವಯಸ್ಸಿಗಿಂತ ಹೆಚ್ಚು ಕಾಣುವಂತೆ ಮಾಡುತ್ತದೆ. ಹಾಗೆ ಕಾಣದಿರಲು ಅನೇಕರು ಹೇರ್ ಕಲರ್ಸ್ ಅಥವಾ ಮೆಹಂದಿ ಬಳಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಕಲರ್ಸ್ ಕೂದಲಿಗೆ ಹಾನಿ ಮಾಡುತ್ತವೆ. ಹಾಗಾಗದಂತೆ ತಡೆದು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವುದು ಹೇಗೆಂದು ತಿಳಿದುಕೊಳ್ಳೋಣ.
ಕೂದಲಿನ ಆರೋಗ್ಯಕ್ಕೆ ಮತ್ತು ಬಿಳಿ ಕೂದಲನ್ನು ಕಪ್ಪಾಗಿಸಲು ವೀಳ್ಯದೆಲೆಗಳು ತುಂಬಾ ಸಹಾಯಕ. ಏಕೆಂದರೆ ಈ ಎಲೆಗಳಲ್ಲಿ ವಿಟಮಿನ್ ಎ, ಸಿ, ಬಿ1, ಬಿ2, ಪೊಟ್ಯಾಸಿಯಮ್, ಥಯಾಮಿನ್, ನಿಯಾಸಿನ್, ರಿಬೋಫ್ಲಾವಿನ್ ನಂತಹ ಪೋಷಕಾಂಶಗಳಿವೆ. ಇವೆಲ್ಲವೂ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು, ಕೂದಲು ಬೆಳವಣಿಗೆಗೆ ಮತ್ತು ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾದರೆ ವೀಳ್ಯದೆಲೆಗಳನ್ನು ಹೇಗೆ ಬಳಸಬೇಕೆಂದು ತಿಳಿದುಕೊಳ್ಳೋಣ.
ವೀಳ್ಯದೆಲೆ ನೀರಿನಿಂದ ಕೂದಲು ತೊಳೆಯಿರಿ. ನಿಮ್ಮ ಕೂದಲು ತೊಳೆಯಲು ಒಂದು ಪಾತ್ರೆಯಲ್ಲಿ 15-20 ವೀಳ್ಯದೆಲೆಗಳನ್ನು ಕುದಿಸಿ. ನಂತರ ನೀರನ್ನು ತಣ್ಣಗಾಗಿಸಿ ನಿಮ್ಮ ಕೂದಲನ್ನು ತೊಳೆಯಬಹುದು. ಇದರಿಂದ ನೀವು ಹಲವು ಪ್ರಯೋಜನಗಳನ್ನು ಪಡೆಯಬಹುದು. ವೀಳ್ಯದೆಲೆಗಳಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ತಲೆಯಲ್ಲಿನ ಸೋಂಕಿನ ಸಮಸ್ಯೆಯನ್ನು ಪರಿಹರಿಸುತ್ತದೆ.
ವೀಳ್ಯದೆಲೆ ಹೇರ್ ಮಾಸ್ಕ್: ವೀಳ್ಯದೆಲೆ ಮತ್ತು ತುಪ್ಪದ ಹೇರ್ ಪ್ಯಾಕ್ ಕೂದಲನ್ನು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. 15-20 ವೀಳ್ಯದೆಲೆಗಳನ್ನು ರುಬ್ಬಿ ಅದಕ್ಕೆ 1 ಚಮಚ ತುಪ್ಪ ಸೇರಿಸಿ. ಇದನ್ನು ತಲೆಗೆ ಹಚ್ಚಿ ಒಂದು ಗಂಟೆ ಬಿಡಿ. ನಂತರ ಸ್ನಾನ ಮಾಡಿದರೆ ಸಾಕು.
ವೀಳ್ಯದೆಲೆ ಎಣ್ಣೆ: ನಿಮ್ಮ ಕೂದಲನ್ನು ಆರೋಗ್ಯವಾಗಿಡಲು ವೀಳ್ಯದೆಲೆ ಎಣ್ಣೆ ಬಳಸಿ. ವೀಳ್ಯದೆಲೆ ಎಣ್ಣೆ ತಯಾರಿಸಲು, ಕೊಬ್ಬರಿ ಅಥವಾ ಸಾಸಿವೆ ಎಣ್ಣೆಯಲ್ಲಿ 10 ರಿಂದ 15 ವೀಳ್ಯದೆಲೆಗಳನ್ನು ಕಡಿಮೆ ಉರಿಯಲ್ಲಿ ಕುದಿಸಿ. ವೀಳ್ಯದೆಲೆಗಳು ಕಪ್ಪಾದ ನಂತರ, ಈ ಎಣ್ಣೆಯನ್ನು ಸೋಸಿ ಕೂದಲಿಗೆ ಹಚ್ಚಿ. ನೀವು ಇದನ್ನು ರಾತ್ರಿಯಿಡೀ ಕೂದಲಿನ ಮೇಲೆ ಇಡಬಹುದು. ಇದರ ಜೊತೆಗೆ, ಕೂದಲು ತೊಳೆಯುವ 1 ಗಂಟೆ ಮೊದಲು ಇದನ್ನು ಹಚ್ಚಬಹುದು. ಹೀಗೆ ನಿಯಮಿತವಾಗಿ ಮಾಡುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗುತ್ತದೆ.
ಕೂದಲು ಉದುರುವಿಕೆಯನ್ನು ತಡೆಯಲು ವೀಳ್ಯದೆಲೆ ಬಳಸುವುದು ಉತ್ತಮ ಮಾರ್ಗ. 5-6 ವೀಳ್ಯದೆಲೆ, 4-5 ತುಳಸಿ ಎಲೆ ಮತ್ತು 2-3 ದಾಸವಾಳ ಎಲೆಗಳನ್ನು ತೊಳೆದು ರುಬ್ಬಿ. ಈ ಪೇಸ್ಟ್‌ಗೆ 1 ಟೀಚಮಚ ಎಳ್ಳೆಣ್ಣೆ ಸೇರಿಸಿ ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ಕೂದಲು ಬೆಳವಣಿಗೆಗೆ ವೀಳ್ಯದೆಲೆ ಮಾಸ್ಕ್: ಕೂದಲು ಉದ್ದವಾಗಿ ಬೆಳೆಯಲು ವೀಳ್ಯದೆಲೆ ಹೇರ್ ಮಾಸ್ಕ್ ಪ್ರಯತ್ನಿಸಿ. 3-4 ವೀಳ್ಯದೆಲೆಗಳನ್ನು ತೊಳೆದು ರುಬ್ಬಿ. ಈ ಪೇಸ್ಟ್‌ಗೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಸೇರಿಸಿ ತಲೆ ಮತ್ತು ಕೂದಲಿಗೆ ಹಚ್ಚಿ. 1-2 ಗಂಟೆಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುವುದರಿಂದ ಕೂದಲು ಉದ್ದವಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ. ಬಿಳಿ ಕೂದಲಿನ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.