ಮುಟ್ಟಿನ ಸಮಯದಲ್ಲಿ ವಜೈನಾ ಸೆಳೆತ ಕಾಣಿಸಿಕೊಂಡ್ರೆ, ಇಗ್ನೋರ್ ಮಾಡ್ಲೇಬೇಡಿ
ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು ಸಾಮಾನ್ಯ. ಆದರೆ ಕೆಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ಯೋನಿ ನೋವನ್ನು ಅನುಭವಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣಗಳು ಯಾವುವು ಅನ್ನೋದನ್ನು ತಿಳಿಯೋಣ.
ಮುಟ್ಟಿನ ಸೆಳೆತವು ಹೊಟ್ಟೆ ಕೆಳ ಭಾಗದಲ್ಲಿ ಸೆಳೆತ ಅಥವಾ ನೋವುಗಳಾಗಿವೆ. ಇದು ಸೌಮ್ಯದಿಂದ ತೀವ್ರ ನೋವಿನವರೆಗೂ ಕಾಣಿಸಿಕೊಳ್ಳುತ್ತೆ, ಮತ್ತು ಇದು ಮಹಿಳೆಯ ದೈನಂದಿನ ಜೀವನ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಗರ್ಭಾಶಯದಲ್ಲಿ ಸ್ನಾಯು ಸಂಕೋಚನದ ಪರಿಣಾಮವಾಗಿ ಇದು ಸಂಭವಿಸುತ್ತದೆ. ನಿಮ್ಮ ಋತುಚಕ್ರದ ಸಮಯದಲ್ಲಿ ಗರ್ಭಕೋಶ ತುಂಬಾ ತೀವ್ರವಾಗಿ ಸಂಕುಚಿತಗೊಂಡರೆ, ಅದು ಯೋನಿ ನೋವಿಗೆ (vaginal pain) ಕಾರಣವಾಗಬಹುದು.
ಪಿರಿಯಡ್ಸ್ (periods ) ಸಮಯದಲ್ಲಿ ಸೊಂಟದಲ್ಲಿ ಸೆಳೆತವು ಹೆಚ್ಚು ಸಾಮಾನ್ಯವಾಗಿದ್ದರೂ, ಯೋನಿಯಲ್ಲಿ ಸೆಳೆತವು ಅಸಾಮಾನ್ಯವಲ್ಲ, ಕೆಲವು ಮಹಿಳೆಯರು ಕೇವಲ ಸೌಮ್ಯ ನೋವನ್ನು ಅನುಭವಿಸಿದರೆ, ಇತರರು ಹೆಚ್ಚು ತೀವ್ರ ಸೆಳೆತ ಅನುಭವಿಸಬಹುದು. ಆದರೆ ಯೋನಿಯಲ್ಲಿ ನಿರಂತರ ನೋವನ್ನು ಅನುಭವಿಸುತ್ತಿದ್ದರೆ, ಅದಕ್ಕೆ ಕಾರಣ ಏನಿರಬಹುದು ಅನ್ನೋದನ್ನು ನೀವು ತಿಳಿದಿರಬೇಕು.
6 ಸಾಮಾನ್ಯ ಕಾರಣಗಳು ಇಲ್ಲಿವೆ:
ಮುಟ್ಟಿನ ಸೆಳೆತ (periods pain)
ಮುಟ್ಟಿನ ಸೆಳೆತ, ಅಥವಾ ಡಿಸ್ಮೆನೋರಿಯಾ, ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಯೋನಿ ನೋವನ್ನು ಉಂಟು ಮಾಡಬಹುದು. ಈ ಸೆಳೆತ ಗರ್ಭಾಶಯದ ಒಳ ಪದರವನ್ನು ಹೊರಹಾಕಲು ಗರ್ಭಾಶಯದ ಸ್ನಾಯುಗಳ ಸಂಕೋಚನದಿಂದ ಉಂಟಾಗುತ್ತವೆ, ಇದು ಯೋನಿ ಸೆಳೆತಕ್ಕೆ ಕಾರಣವಾಗುತ್ತೆ.
ಎಂಡೊಮೆಟ್ರಿಯೋಸಿಸ್ (Endometriosis)
ಎಂಡೊಮೆಟ್ರಿಯೋಸಿಸ್ ಎಂಬುದು ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯುವ ಸ್ಥಿತಿ. ಈ ಅಸಹಜ ಅಂಗಾಂಶವು ಮುಟ್ಟಿನ ಸಮಯದಲ್ಲಿ ವಲ್ವರ್ ಅಸ್ವಸ್ಥತೆ ಸೇರಿದಂತೆ ತೀವ್ರವಾದ ಪೆಲ್ವಿಕ್ ನೋವನ್ನು ಉಂಟು ಮಾಡಬಹುದು.
ಅಡೆನೊಮೈಯೋಸಿಸ್ (Adenomyosis)
ಅಡೆನೊಮೈಯೋಸಿಸ್ ಎಂದರೆ ಗರ್ಭಾಶಯದ ಒಳಪದರದ ಅಂಗಾಂಶವು ಸ್ನಾಯು ಗೋಡೆಯಾಗಿ ಬೆಳೆದಾಗ ಉಂಟಾಗುವ ಸ್ಥಿತಿ. ಇದು ಗರ್ಭಾಶಯದ ಸಂಕೋಚನ ಮತ್ತು ಹೆಚ್ಚು ತೀವ್ರವಾದ ಮುಟ್ಟಿನ ನೋವಿಗೆ ಕಾರಣವಾಗಬಹುದು, ಅದು ಯೋನಿ ಪ್ರದೇಶಕ್ಕೆ ಹರಡಬಹುದು.
ಫೈಬ್ರಾಯ್ಡ್ (Fibroids)
ಗರ್ಭಾಶಯದ ಫೈಬ್ರಾಯ್ಡ್ಗಳು ಯೋನಿಯಲ್ಲಿ ಅಲ್ಲ, ಗರ್ಭಾಶಯದಲ್ಲಿ ಕ್ಯಾನ್ಸರ್ ರಹಿತ ಬೆಳವಣಿಗೆಗಳಾಗಿವೆ, ಇದು ಸೊಂಟದಲ್ಲಿ ನೋವು ಮತ್ತು ಒತ್ತಡವನ್ನು ಉಂಟುಮಾಡಬಹುದು, ಇದು ಮುಟ್ಟಿನ ಸಮಯದಲ್ಲಿ ಯೋನಿ ಅಸ್ವಸ್ಥತೆಗೆ ಕಾರಣವಾಗುತ್ತದೆ. ನೋವಿನ ಸಂಭೋಗವೂ ಇದರ ಸಾಮಾನ್ಯ ಲಕ್ಷಣವಾಗಿದೆ.
ಯೋನಿ ಸೋಂಕು (Vaginal infections)
ಯೀಸ್ಟ್ ಸೋಂಕು ಅಥವಾ ಬ್ಯಾಕ್ಟೀರಿಯಾದ ಯೋನಿನೋಸಿಸ್ ನಂತಹ ಸೋಂಕು ಯೋನಿ ನೋವಿಗೆ ಕಾರಣವಾಗಬಹುದು, ಇದು ಜನನಾಂಗದ ಪ್ರದೇಶದಲ್ಲಿ ಪಿಎಚ್ ಮತ್ತು ತೇವಾಂಶದ ಮಟ್ಟದಲ್ಲಿನ ಬದಲಾವಣೆಗಳಿಂದಾಗಿ ಮುಟ್ಟಿನ ಸಮಯದಲ್ಲಿ ಉಲ್ಬಣಗೊಳ್ಳಬಹುದು.
ಕಿರಿಕಿರಿ ಮತ್ತು ಅಲರ್ಜಿಗಳು (Irritation and allergies)
ಕೆಲವು ಮಹಿಳೆಯರು ಪ್ಯಾಡ್ ಗಳು ಅಥವಾ ಟ್ಯಾಂಪೂನ್ ಗಳಂತಹ ಮುಟ್ಟಿನ ಉತ್ಪನ್ನಗಳಿಗೆ ಅಲರ್ಜಿ ಅಥವಾ ಸೂಕ್ಷ್ಮತೆಯನ್ನು ಹೊಂದಿರಬಹುದು, ಇದು ಅವರ ಮುಟ್ಟಿನ ಸಮಯದಲ್ಲಿ ಯೋನಿ ಕಿರಿಕಿರಿ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು.