MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಪದ್ಮಶ್ರೀ ಪುರಸ್ಕೃತೆಯಿಂದ ಐಶ್ಚರ್ಯ ರೈ ಬಾಡಿ ಶೇಮಿಂಗ್: ಯಾರೀ ಮೃಣಾಲ್​? ಪ್ರಶಸ್ತಿ ಸಿಕ್ಕಿದ್ದು ಹೇಗೆ

ಪದ್ಮಶ್ರೀ ಪುರಸ್ಕೃತೆಯಿಂದ ಐಶ್ಚರ್ಯ ರೈ ಬಾಡಿ ಶೇಮಿಂಗ್: ಯಾರೀ ಮೃಣಾಲ್​? ಪ್ರಶಸ್ತಿ ಸಿಕ್ಕಿದ್ದು ಹೇಗೆ

ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಐಶ್ವರ್ಯ ರೈ ಅವರ ದೇಹದ ತೂಕದ ಬಗ್ಗೆ ಪದ್ಮಶ್ರೀ ಪುರಸ್ಕೃತೆ ಮೃಣಾಲ್ ಪಾಂಡೆ ಟೀಕಿಸಿದ್ದಾರೆ. ಈ ಬಾಡಿ ಶೇಮಿಂಗ್​ ಹೇಳಿಕೆಯಿಂದಾಗಿ ಪಾಂಡೆ ತೀವ್ರ ಟೀಕೆಗೆ ಗುರಿಯಾಗಿದ್ದು, ನಟಿ ಕಂಗನಾ ರಣಾವತ್ ಐಶ್ವರ್ಯಾ ಪರವಾಗಿ ಧ್ವನಿ ಎತ್ತಿದ್ದಾರೆ.

2 Min read
Author : Suchethana D
Published : May 26 2026, 05:32 PM IST
Share this Photo Gallery
  • FB
  • TW
  • Linkdin
  • Whatsapp
15
ಕೇನ್ಸ್​ನಲ್ಲಿ ಐಶ್ವರ್ಯ ರೈ
Image Credit : Getty

ಕೇನ್ಸ್​ನಲ್ಲಿ ಐಶ್ವರ್ಯ ರೈ

ಬಾಲಿವುಡ್​ ನಟಿ ಐಶ್ವರ್ಯ ರೈ ಹಲವು ವರ್ಷಗಳಿಂದ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕೆಲವೊಂದು ಸಮಸ್ಯೆಗಳಿಂದಾಗಿ ಐಶ್ವರ್ಯಾ ರೈ ಬಚ್ಚನ್ ಸ್ವಲ್ಪ ದಪ್ಪ ಆಗಿದ್ದಾರೆ. ಅಷ್ಟಕ್ಕೂ ಸೆಲೆಬ್ರಿಟಿಗಳಿಗೆ ದೇಹದ ಸೌಂದರ್ಯವೇ ಮುಖ್ಯ. ಅದಕ್ಕಾಗಿ ಅವರು ಹಗಲು ಇರುಳು ಶ್ರಮಿಸುತ್ತಾರೆ. ಹಾಗಿದ್ದ ಮೇಲೂ ಕೆಲವೊಂದು ಸಮಸ್ಯೆಗಳು ನಮ್ಮ ಕೈಯಲ್ಲಿ ಇರುವುದಿಲ್ಲವಲ್ಲ. ದುಡ್ಡಿದ್ದರೆ ಎಲ್ಲವೂ ಸಾಧ್ಯ ಎನ್ನಲೂ ಆಗುವುದಿಲ್ಲವಲ್ಲ. ಅದೇ ರೀತಿ ಐಶ್ವರ್ಯ ಅವರ ದೇಹದ ತೂಕವೂ ಹೆಚ್ಚಾಗಿದೆ. ಆದರೆ ಕೇನ್ಸ್​ನಲ್ಲಿ ಅವರು ಎಲ್ಲರ ಗಮನವನ್ನು ಸೆಳೆದರು.

Add Asianetnews Kannada as a Preferred SourcegooglePreferred
25
ಪದ್ಮಶ್ರೀ ಪುರಸ್ಕೃತೆಯಿಂದ ಟೀಕೆ
Image Credit : Getty

ಪದ್ಮಶ್ರೀ ಪುರಸ್ಕೃತೆಯಿಂದ ಟೀಕೆ

ಆದರೆ, ಇದೇ ವೇಳೆ ಪದ್ಮಶ್ರೀ ಪುರಸ್ಕೃತೆಯೊಬ್ಬರು ಐಶ್ವರ್ಯ ರೈ ಅವರ ಬಾಡಿ ಶೇಮಿಂಗ್​ ಮಾಡುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಆಕೆಯ ತೂಕ ಮಾತ್ರವಲ್ಲದೇ ವಯಸ್ಸಿನ ಬಗ್ಗೆಯೂ ಅವರು ಟೀಕಿಸಿದ್ದಾರೆ. ಇವರೇ ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಮೃಣಾಲ್ ಪಾಂಡೆ. ವಿಚಿತ್ರ ಎಂದರೆ ಇವರಿಗೆ ಪದ್ಮಶ್ರೀ ಸಿಕ್ಕಿರುವುದು ಮಹಿಳಾ ಹಕ್ಕುಗಳ ಬಗ್ಗೆ ಬರೆದಿರುವುದಕ್ಕೆ. ಬಾಯಲ್ಲಿ ಭಗವದ್ಗೀತೆ, ಮಾಡೋದೆಲ್ಲಾ ಅನಾಚಾರ ಎನ್ನುವ ಸಾಲಿನಲ್ಲಿ ಈಕೆ ಸೇರಿದ್ದಾರೆ ಎಂದು ಇವರ ವಿರುದ್ಧ ಇನ್ನಿಲ್ಲದಂತೆ ಟೀಕೆಗಳು ಕೇಳಿಬರುತ್ತಿವೆ.

Related Articles

Related image1
10 ವರ್ಷ ಬಾಲೆಯ ಗ್ಯಾಂಗ್​ರೇ*ಪ್​, ಮರ್ಡರ್​ ಸುದ್ದಿಗೋಷ್ಠಿಯಲ್ಲಿ ಬಿದ್ದೂ ಬಿದ್ದೂ ನಕ್ಕ ಪೊಲೀಸ್​ ಅಧಿಕಾರಿ
Related image2
ಡಿವೋರ್ಸ್​ ಮಗಳು ಬೇಕೋ, ಆಕೆ ಹೆಣ ಬೇಕೊ? ಗೋಡೆಗೆ ಗುದ್ದುವವರೆಗೂ ಕಾಯ್ತೀರಾ? ಕೋರ್ಟ್​ ಪ್ರಶ್ನೆ
35
ಪ್ರಶಸ್ತಿ ಕೊಟ್ಟೋರು ಯಾರು?
Image Credit : Social Media

ಪ್ರಶಸ್ತಿ ಕೊಟ್ಟೋರು ಯಾರು?

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮತ್ತು ದಶಕಗಳಿಂದ ಮಹಿಳಾ ಹಕ್ಕುಗಳ ಬಗ್ಗೆ ಬರೆದ ಪತ್ರಕರ್ತೆಯಿಂದ ಇಂಥ ಬಾಡಿ ಶೇಮಿಂಗ್ ನಿರೀಕ್ಷಿಸಲಾಗದ್ದು ಎನ್ನಲಾಗಿದೆ. ಇದೇ ಕಾರಣಕ್ಕೆ ಇಂಥವರಿಗೆ ಪದ್ಮಶ್ರೀ ಕೊಟ್ಟವರು ಯಾರು ಎನ್ನುವ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಮೃಣಾಲ್ ಪಾಂಡೆ ಅವರಿಗೆ ಪದ್ಮಶ್ರೀ ಸಿಕ್ಕಿದ್ದು 2006ರಲ್ಲಿ. ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದ ಸಮಯದಲ್ಲಿ. ಆ ಸಮಯದಲ್ಲಿ ಹೆಚ್ಚಾಗಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಭಾರಿ ಮನ್ನಣೆ ಸಿಗುತ್ತಿತ್ತು. ಹಲವಾರು ಸಿನಿಮಾ ತಾರೆಯರಿಗೂ ಈ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕಳೆದ 11 ವರ್ಷಗಳಿಂದ ಯಾವುದೋ ಮೂಲೆಯಲ್ಲಿ ಇರುವ, ಯಾರಿಗೂ ಪರಿಚಯವೇ ಇಲ್ಲದ, ಸಮಾಜ ಸೇವೆಯಲ್ಲಿ ಅಥವಾ ಇನ್ನಾವುದೋ ಕಾರ್ಯದಲ್ಲಿ ತಮ್ಮನ್ನು ತೋಡಗಿಸಿಕೊಂಡು ಪ್ರಚಾರದ ಗೊಡವೇ ಇಲ್ಲದವರನ್ನು ಹುಡುಕಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಬಂದ ಮೇಲೆ ಅವರ ಕಾರ್ಯವನ್ನು ಗಮನಿಸಿದರೆ ಅಬ್ಬಾ ಇಂಥವರೂ ನಮ್ಮ ದೇಶದಲ್ಲಿಯೇ ಇದ್ದಾರೆಯೇ ಎನ್ನುವಂಥ ಸಾಧನೆ ಮಾಡಿರುವುದು ತಿಳಿಯುತ್ತದೆ.

45
ಹೇಗೆ ಕೆಲಸ ಮಾಡಿರಬಹುದು
Image Credit : twitter

ಹೇಗೆ ಕೆಲಸ ಮಾಡಿರಬಹುದು

ಅದೇನೇ ಇದ್ದರೂ, ಸದ್ಯ ಪದ್ಮಶ್ರೀ ಪುರಸ್ಕೃತೆ ಮೃಣಾಲ್ ಪಾಂಡೆ ಅವರು ಯಾವ ರೀತಿಯಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಕೆಲಸ ಮಾಡಿರಬಹುದು ಎನ್ನುವುದು ಅವರ ಒಂದೇ ಒಂದು ಲೈನ್​ ಸಾರಿ ಸಾರಿ ಹೇಳುತ್ತಿದೆ. ಇದರಿಂದಾಗಿ ಈಗ ಈಕೆ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ.

55
ಕಂಗನಾ ರಣಾವತ್​ ಟೀಕೆ
Image Credit : Instgaram

ಕಂಗನಾ ರಣಾವತ್​ ಟೀಕೆ

ನಟಿ, ಸಂಸದೆ ಕಂಗನಾ ರಣಾವತ್ ಐಶ್ವರ್ಯ ಬಾಡಿ ಶೇಮಿಂಗ್​ ಮಾಡಿದವರ ವಿರುದ್ಧ ಕಿಡಿ ಕಾರಿದ್ದಾರೆ. ಐಶ್ವರ್ಯಾ ಅವರನ್ನು ಹೊಗಳಿದ ಕಂಗನಾ, "ಐಶ್ ಸಂಪೂರ್ಣವಾಗಿ ಸುಂದರವಾಗಿ ಕಾಣುತ್ತಾರೆ, ಮತ್ತು ಕೆಲವರು ಅವಳನ್ನು ವಿಭಿನ್ನ ರೀತಿಯಲ್ಲಿ ನೋಡಲು ಬಯಸಿದರೆ, ಅವರು ಮೊದಲು ತಮ್ಮನ್ನು ತಾವು ನೋಡಿಕೊಳ್ಳಬೇಕು. ಐಶ್ವರ್ಯಾ ಯಾರನ್ನೂ ಮೆಚ್ಚಿಸಲು ರೆಡ್ ಕಾರ್ಪೆಟ್‌ಗೆ ಬರುವುದಿಲ್ಲ. ಬದಲಾಗಿ, ಅವರು ತಮ್ಮದೇ ಆದ ಕಾಂತಿ ಮತ್ತು ಆತ್ಮವಿಶ್ವಾಸದಿಂದ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳುತ್ತಾರೆ. ಜನರು ರೆಡ್ ಕಾರ್ಪೆಟ್ ಮೇಲೆ ವಯಸ್ಸಾದ ಮಹಿಳೆಯರನ್ನು ನೋಡುವ ಅಭ್ಯಾಸವನ್ನು ಹೊಂದಿಲ್ಲದಿದ್ದರೆ, ಅವರು ಈಗ ಅದಕ್ಕೆ ಒಗ್ಗಿಕೊಳ್ಳಬೇಕು ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕೇನ್ಸ್ ಚಲನಚಿತ್ರೋತ್ಸವ
ಫ್ಯಾಷನ್
ಐಶ್ವರ್ಯಾ ರೈ
ಮನರಂಜನಾ ಸುದ್ದಿ
ಭಾರತ ಸುದ್ದಿ

Latest Videos
Recommended Stories
Recommended image1
ಉಜ್ಜಿದ್ರೆ ಪ್ರಯೋಜನವಿಲ್ಲ, ಶರ್ಟ್ ಕಾಲರ್ ಮೇಲಿನ ಕಪ್ಪು ಕಲೆ ತೆಗೆಯಲು ಈ ಟ್ರಿಕ್ಸ್ ಬಳಸಿ
Recommended image2
ಅಗ್ಗ ಮತ್ತು ಸುರಕ್ಷಿತ ವಿಧಾನವಿದು.. ಜಿರಲೆಗಳು ಓಡಾಡುವ ಜಾಗದಲ್ಲಿ ಈ ಪೌಡರ್ ಉದುರಿಸಿ
Recommended image3
ಮೀನನ್ನು ಫ್ರಿಡ್ಜ್‌ನಲ್ಲಿ ಇಡ್ತೀರಾ? ಅದಕ್ಕೂ ಮುನ್ನ ಇದನ್ನ ತಿಳ್ಕೊಳ್ಳಿ
Related Stories
Recommended image1
10 ವರ್ಷ ಬಾಲೆಯ ಗ್ಯಾಂಗ್​ರೇ*ಪ್​, ಮರ್ಡರ್​ ಸುದ್ದಿಗೋಷ್ಠಿಯಲ್ಲಿ ಬಿದ್ದೂ ಬಿದ್ದೂ ನಕ್ಕ ಪೊಲೀಸ್​ ಅಧಿಕಾರಿ
Recommended image2
ಡಿವೋರ್ಸ್​ ಮಗಳು ಬೇಕೋ, ಆಕೆ ಹೆಣ ಬೇಕೊ? ಗೋಡೆಗೆ ಗುದ್ದುವವರೆಗೂ ಕಾಯ್ತೀರಾ? ಕೋರ್ಟ್​ ಪ್ರಶ್ನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved