ಮೈಸೂರು ಮಹಾರಾಣಿ ತ್ರಿಶಿಕಾಗೆ ಅಡುಗೆ ಬರುತ್ತಾ? ಅವರ ಒಂದು ದಿನದ ಜೀವನ ಶೈಲಿ ಹೇಗಿದೆ?
ಮೂಲತಃ ರಾಜಸ್ಥಾನದ ರಾಜಮನೆತವರಾದ ಮೈಸೂರು ರಾಜ ಯದುವೀರ್ ಮಡದಿ ಮೈಸೂರು ಮಹಾರಾಣಿ ತ್ರಿಶಿಕಾ ಕುಮಾರಿ ಸಿಂಪಲ್ ಜೀವನ ಎಲ್ಲರಿಗೂ ಮಾದರಿ. ತಮ್ಮದೇ ಆದ ಉದ್ಯಮವೊಂದನ್ನು ಹೊಂದಿದ್ದು, ಅಡುಗೆಯಲ್ಲಿ ಅಭಿರುಚಿ ಇದೆ. ಸಂಸಾರದ ಮೇಲೆ ಪ್ರೀತಿ, ನೃತ್ಯದಲ್ಲಿ ಹಿಡಿತವನ್ನೂ ಹೊಂದಿದ್ದಾರೆ.

ಮೈಸೂರು-ಕೊಡಗು ಸಂಸದ, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಅವರ ಧರ್ಮಪತ್ನಿ ತ್ರಿಶಿಕಾಕುಮಾರಿ (Trishikha Kumari) ಅವರು ವಿದೇಶದಲ್ಲಿ ಓದಿದವರು. ಆದರೆ, ರಾಜಮನೆತನದ ಸೊಸೆ ಅಂದ ಮೇಲೆ ಎಲ್ಲ ಸಂಪ್ರದಾಯಗಳನ್ನು ಚಾಚೂ ತಪ್ಪದೇ ಪಾಲಿಸಲೇ ಬೇಕು. ಮೊದಲ ಸಲ ಗರ್ಭಿಣಿಯಾದಾಗ ಬೆಂಗಳೂರಿನಿಂದ ಮೈಸೂರಿಗೆ ರೈಲಲ್ಲೇ ಪಯಣಿಸಿ ಸುದ್ದಿಯಾಗಿದ್ದರು. ಎಲ್ಲರಿಗೂ ಇವರ ಜೀವನ ಶೈಲಿ ಬಗ್ಗೆ ಸದಾ ಎಲ್ಲಿಲ್ಲದ ಕುತೂಹಲ ಇದ್ದೇ ಇರುತ್ತದೆ. ಅಷ್ಟಕ್ಕೂ ಅವರ ದಿನಚರಿ ಹೇಗಿರುತ್ತದೆ?
ಸಾಮಾನ್ಯರಾದ ನಮ್ಮ ನಿಮ್ಮಂತೇ ನಾರ್ಮಲ್ ಡೇ ಇರುತ್ತದಂತೆ. ಬೆಳಗ್ಗೆ ಬೇಗನೇ ಏಳ್ತಾರೆ. ಯೋಗ (Yoga) ತಪ್ಪದೇ ಮಾಡುತ್ತಾರೆ. ಮೊದಲ ಮಗನನ್ನು ಎಬ್ಬಿಸಿ ತಯಾರು ಮಾಡಿ, ಶಾಲೆಗೆ ಕಳುಹಿಸುತ್ತಾರೆ. ಆಮೇಲೆ ಯಾರಾದ್ರೂ ವಿಸಿಟರ್ಸ್ ಇದ್ದರೆ ಅಟೆಂಡ್ ಮಾಡುತ್ತಾರೆ. ತಾವೇ ಆರಂಭಿಸಿದ ಆನ್‌ಲೈನ್ (Online) ವ್ಯವಹಾರ ನೋಡಿಕೊಳ್ಳುವುದರಲ್ಲಿಯೂ ಹೆಚ್ಚಿನ ಸಮಯ ಸ್ಪೆಂಡ್ ಮಾಡುತ್ತಾರೆ. ಮಗ ಶಾಲೆಯಿಂದ ಬಂದ ಮೇಲೆ ಅವನೆಡೆ ಮತ್ತೆ ಗಮನ ಕೊಡುತ್ತಾರೆ. ಸಂಜೆಯೂ ವಿಸಿಟರ್ಸ್ ಇದ್ದರೆ ಭೇಟಿಯಾಗುತ್ತಾರೆ. ಆಗಾಗ ಪತಿ-ಮಗನ ಜೊತೆ ಸಂಜೆ ವಾಕಿಂಗ್ ಮಾಡುತ್ತಾರೆ. ಸ್ಟ್ರೆಸ್ ಬಸ್ಟರ್ ಅಂತ ಕೆಲವೊಮ್ಮೆ ಸುತ್ತಮುತ್ತಲಿನ ಬಂಡಿಪುರ, ನಾಗರಹೊಳೆ ಇತ್ಯಾದಿ ಕಾಡಿನೆಡೆಗೆ ತಿರುಗಾಟಕ್ಕೂ ಹೋಗುತ್ತಿರುತ್ತಾರೆ.
ಈಗ ಒತ್ತಡ ಇಲ್ಲದೇ ಯಾರಿರುತ್ತಾರೆ ಹೇಳಿ? ಹಾಗೆಯೇ ರಾಣಿ ತ್ರಿಷಿಕಾರನ್ನು ಇದು ತಪ್ಪಿದ್ದಲ್ಲ. ಮೈಸೂರು ಅರಮನೆಯ (Mysore Palace) ರಾಜಮನೆತನದವರಿಂದ ಹೆಚ್ಚಿನ ಉನ್ನತ ಮಾದರಿಯ ನಡವಳಿಕೆಯನ್ನು ಜನರು ನಿರೀಕ್ಷಿಸುತ್ತಾರೆ. ಹಾಗಾಗಿ ಎಲ್ಲರ ಥರ ಇರುವುದು ಸ್ವಲ್ಪ ಕಷ್ಟ ಬಿಡಿ. ಬೇರೆಲ್ಲೋ ಹೋದರೆ ನಡೆಯುತ್ತೆ. ಮುಕ್ತವಾಗಿರಬಹುದು. ಆದರೆ ಮೈಸೂರಿನ ಸಾಂಪ್ರದಾಯಿಕ ಹಳೆಯ ತಲೆಮಾರಿನ ಜನತೆ ರಾಜಮನೆತನದವರು ಹೇಗಾಯ್ತೋ, ತಮ್ಮಿಷ್ಟದಂತಿದ್ದರು ಆಕ್ಷೇಪಿಸುತ್ತಾರೆ.
ಸಾಂಸ್ಕೃತಿಕ ನಗರಿ ಮೈಸೂರಿನ ಜನರೂ ಈ ರಾಜಮನೆತದ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಿಕೊಂಡಿದ್ದಾರೆ. ಹಾಗಾಗಿ ಅವರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವುದು ರಾಜಮನೆತನದವರ ಕರ್ತವ್ಯವೂ ಹೌದು. ಅದು ಹೊರೆ ಎಂದು ಎಂದೂ ಅನಿಸಿಲ್ಲವಂತೆ. ಹಾಗಂತ ರಾಜಮನೆತನದ ರೀತಿ ರಿವಾಜು ನಡಾವಳಿಗಳನ್ನೆಲ್ಲ ಎತ್ತಿ ಹಿಡಿಯುವ ಸೂಕ್ಷ್ಮ ಹೊರೆಯೂ ಸಹಜವಾಗಿಯೇ ಅವರ ಮೇಲಿರುತ್ತೆ.
2ನೇ ಪುತ್ರನಿಗೆ ಅರ್ಥಗರ್ಭಿತ ನಾಮಕರಣ ಮಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ತ್ರಿಶಿಕಾ ರಾಜಸ್ಥಾನದ ದುಂಗರ್‌ಪುರ್ (Dungarpur) ಅರಮನೆಯಲ್ಲಿ ಹುಟ್ಟಿ ಬೆಳೆದವರು. ಅರಮನೆಗೇನೂ ಹೊಸಬರಲ್ಲ. ರಾಜಸ್ಥಾನದ ದುಂಗರ್‌ಪುರ್ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರಿ ಕುಮಾರಿ ದಂಪತಿಯ ಪುತ್ರಿ. ಅವರ ಬಾಲ್ಯವೂ ಖುಷ್ ಖುಷಿಯಾಗಿ ಚೆನ್ನಾಗಿಯೇ ಇತ್ತು. ಬಾಸ್ಕೆಟ್‌ಬಾಲ್ ಮತ್ತು ಟೆನ್ನಿಸ್ ಆಡೋದನ್ನೂ ಎಂಜಾಯ್ ಮಾಡುತ್ತಿದ್ದರು.
ಸ್ಕೂಲ್ ಕಾಲೇಜು ಟೀಂಗೂ ಆಡುತ್ತಿದ್ದರಂತೆ. ಡ್ಯಾನ್ಸ್ ಕೂಡ ತ್ರಿಶಿಕಾಕುಮಾರಿಗೆ ಗೊತ್ತಿದೆ. ಭರತನಾಟ್ಯ ಮತ್ತು ಹೊಸಬಗೆಯ ಜಾಝ್ (Jaz) ಡ್ಯಾನ್ಸ್ (Dance) ಎರಡನ್ನೂ ಬಲ್ಲವರು. ಅಲ್ಲದೇ ಅಡುಗೆ ಮಾಡೋದ ಫೇವರೇಟ್ ಹಾಬಿಯಂತೆ. ಮೈಸೂರು ಒಡೆಯರ್ ವಂಶದ ರಾಣಿಯಾದರೂ ಸಂಜೆ ಅಥವಾ ರಾತ್ರಿ ಬಿಡುವಿದ್ದರೆ ಅವರೇ ಎಲ್ಲರಿಗೂ ಅಡುಗೆ ಮಾಡಿ ಬಡಿಸುತ್ತಾರಂತೆ. ಇದು ಒತ್ತಡ ನಿವಾರಿಸುತ್ತಂತೆ.
ಮೈಸೂರು ಮಹಾರಾಣಿ ಮಗುವಿನ ಜೊತೆ ಹೇಗಿರ್ತಾರೆ ನೋಡಿ! ತ್ರಿಶಿಕಾ ಸಿಂಪ್ಲಿಸಿಟಿಗೆ ನೆಟ್ಟಿಗರು ಫಿದಾ
ಅರಮನೆ. ದರ್ಬಾರ್ ಹಾಲ್ (Durbar Hall) ಅಥವಾ ಸಜ್ಜೆ ತ್ರಿಶಿಕಾಗೆ ಇಷ್ಟವಾದ ಜಾಗವಂತೆ. ದಸರಾ ಬಿಟ್ಟರೆ ಬೇರೆ ದಿನಗಳಲ್ಲಿ ಇಲ್ಲಿ ಏನೂ ಇರೋಲ್ಲ. ಅಲ್ಲದೇ ಹಾಗೇ ಶ್ವೇತವರಾಹಸ್ವಾಮಿ ದೇವಸ್ಥಾನ, ಪ್ರಸನ್ನಕೃಷ್ಣಸ್ವಾಮಿ ದೇವಸ್ಥಾನಗಳೆಂದರೂ ಅಚ್ಚುಮೆಚ್ಚಂತ. ಅಲ್ಲಿನ ಗೋಡೆಗಳಲ್ಲಿರುವ ಅರಮನೆಯ ಹಿಂದಿನ ಪೇಂಟಿಂಗ್ಸ್ ರಾಣಿಗೆ ಪಂಚಪ್ರಾಣ. ಅದು ಅರಮನೆ ಸಂಸ್ಕೃತಿಯ ಜೀವಂತಿಕೆ ಎನ್ನೋದು ಅವರ ಅಭಿಪ್ರಾಯ.
ತ್ರಿಶಿಕಾಕುಮಾರಿ ಉದ್ಯಮಿಯೂ ಹೌದು. 'ದಿ ಲಿಟಲ್ ಬಂಟಿಂಗ್ಸ್' (The Little Buntings) ಎಂಬ ಸ್ಟಾರ್ಟಪ್‌ನ (Startup) ಒಡತಿ. ಪುಟ್ಟ ಮಕ್ಕಳಿಗಾಗಿ ಪರಿಸರಸ್ನೇಹಿ (Eco Friendly) ಉತ್ಪನ್ನಗಳ ಆನ್‌ಲೈನ್ ವ್ಯವಹಾರ ಮಳಿಗೆ ಇದು. ತಮ್ಮ ಪುಟ್ಟ ಮಗನನ್ನು ಬೆಳೆಸುವ ಹೊತ್ತಿಗೆ ಇಂಥ ಪ್ರಾಡಕ್ಟುಗಳ ಅಗತ್ಯದ ಅರಿವು ಆಗಿ, ಅಂಥದ್ದೊಂದು ಉದ್ಯಮವನ್ನೇ ಆರಂಭಿಸಿದ್ದರಂತೆ.
ಮಕ್ಕಳು ಬಳಸೋ ಹಲವು ಆಟಿಕೆಗಳು ಹಾನಿಕರ ವಿಷ, ರಾಸಾಯನಿಕಗಳೂ ಇರುತ್ತವೆ. ಅಲ್ಲದೇ ವಸ್ತು, ಆಟಿಕೆಗಳಿಗೆ ತುಂಬಾ ಬೇಡಿಕೆಯೂ ಇದೆ. ಇದರು ಆನ್‌ಲೈನ್ ಮಾರಾಟ ವ್ಯವಸ್ಥೆ ಲಿಟಲ್ ಬಂಟಿಂಗ್ಸ್‌ನಲ್ಲಿದೆ.
ಎಂಟು ವರ್ಷದ ಕೆಳಗೆ ನಾವಿಬ್ರೂ ಹೇಗಿದ್ವಿ ಗೊತ್ತಾ? ಕೇಳ್ತಿದ್ದಾರೆ ಮೈಸೂರು ಮಹಾರಾಣಿ
ಈ ಉದ್ಯಮದಿಂದ ಚನ್ನಪಟ್ಟಣದ ಗೊಂಬೆ ಸೇರಿ ಸುತ್ತಮುತ್ತಲಿನ ಹಲವು ಸ್ಥಳೀಯ ಕರಕುಶಲ ವಸ್ತುಗಳ ತಯಾರಿಕೆ, ಜವಳಿ ತಯಾರಿಸೋರು ಗೊತ್ತಾದರಂತೆ. ಜಗತ್ತಿನಾದ್ಯಂತ ಚನ್ನಪಟ್ಟಣದ ಗೊಂಬೆಗಳಿಗೆ ಬೇಡಿಕೆಯಿದೆ. ಚೀನಾದ ಅಗ್ಗದ ಪ್ಲಾಸ್ಟಿಕ್ ಗೊಂಬೆಗಳಿಗೆ ಸಡ್ಡು ಹೊಡೆಯುತ್ತೆ. ಆದರೆ ಅದನ್ನು ಪೂರೈಸುವ, ಮಾರ್ಕೆಂಟಿಂಗ್ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲು ತ್ರಿಷಿಕಾ ಶ್ರಮಿಸುತ್ತಿದ್ದಾರೆ.
ಅರಮನೆಯ ಮುದ್ದಿನ ರಾಣಿಯಾಗಿರುವಂತೆಯೇ ಅವರು ಕೋವಿಡ್ ಟೈಮಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಿದ್ದರು. ಜನಪ್ರೀತಿ ಹಾಗೂ ಪತಿ ಯದುವೀರ್ ನೆರವಿನಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ.
ಸಶಕ್ತ ಮಹಿಳೆ ಆಗಿರೋದು ಅಂದ್ರೆ ಸ್ವತಃ ತನ್ನತನವನ್ನು ಕಂಡುಕೊಳ್ಳುವುದು. ನಮ್ಮ ಅಸ್ಮಿತೆಯಲ್ಲೇ ನಮ್ಮ ಬದುಕಿನ ಸಾರ್ಥಕತೆ ಕಂಡುಕೊಳ್ಳೋದು ಅಂತಾರೆ ತ್ರಿಶಿಕಾ.
ರಾಜಮನೆತನದ ಮೇಲೆ 400 ವರ್ಷಗಳ ಹಿಂದಿನ ಶಾಪದ ನಂತರ ಒಡೆಯರ್ ರಾಜವಂಶದಲ್ಲಿ ಸ್ವಾಭಾವಿಕವಾಗಿ ಜನಿಸಿದ ಮೊದಲ ಮಗು ಯುವರಾಜ ಆದ್ಯವೀರ ನರಸಿಂಹರಾಜ ಒಡೆಯರ್ ಮತ್ತು ಎರಡನೇ ಮಗು ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಅವರ ಪೋಷಣೆಯಲ್ಲಿದ್ದಾರೆ.