2ನೇ ಪುತ್ರನಿಗೆ ಅರ್ಥಗರ್ಭಿತ ನಾಮಕರಣ ಮಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರು ಮಹಾರಾಜ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಎರಡನೇ ಮಗುವಿಗೆ ನಾಮಕರಣ ಮಾಡಿದ್ದಾರೆ. ಈ ವೇಳೆ ಅವರು ಮಗನಿಗೆ ಏನು ಹೆಸರಿಟ್ಟೆವು ಎಂದು ರಿವೀಲ್ ಮಾಡಿದ್ದಾರೆ. ಕಳೆದ ನವರಾತ್ರಿ ಸಮಯದಲ್ಲಿ ಮೈಸೂರು ಮಹಾರಾಜ ಹಾಗೂ ತ್ರಿಷಿಕಾ ಕುಮಾರಿ ಅವರು ಗಂಡು ಮಗುವನ್ನು ಬರಮಾಡಿಕೊಂಡಿದ್ದರು.

ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರ ಎರಡನೇ ಮಗನ ಮುದ್ದಾದ ಫೋಟೋ ಇದು.
ಮೈಸೂರಿನ ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರು ಎರಡನೇ ಮಗುವಿಗೆ ನಾಮಕರಣ ಮಾಡಿದ್ದಾರೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಎರಡನೇ ಮಗುವಿನ ಕಿವಿಯಲ್ಲಿ ಹೆಸರು ಹೇಳಿದ್ದಾರೆ. ಬಹಳ ಅರ್ಥಪೂರ್ಣವಾದ ಹೆಸರು ಇಟ್ಟಿದ್ದಾರೆ. “ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಅನುಗ್ರಹದಿಂದ ನಮ್ಮ ಎರಡನೇ ಮಗನಿಗೆ ಅರಮನೆಯ ಸಂಪ್ರದಾಯದಂತೆ ನಮ್ಮ ತಾಯಿಯವರಾದ ಶ್ರೀಮತಿ ಡಾ. ಪ್ರಮೋದಾ ದೇವಿ ಒಡೆಯರವರ ಆಧ್ವರ್ಯದಲ್ಲಿ ಚಿರಂಜೀವಿ ಶ್ರೀ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ.ಈ ಸುಸಂದರ್ಭದಲ್ಲಿ ಪ್ರತಿಯೊಬ್ಬ ಹಿತೈಷಿಗಳಿಗೂ ನಮ್ಮ ಹೃತ್ಪೂರ್ವಕವಾದ ವಂದನೆಗಳನ್ನು ತಿಳಿಸುತ್ತೇವೆ. ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರ್, ಆ ಪುಟ್ಟ ಕಂದಮ್ಮನಿಗೆ ರಾಜಮಾತೆ ಆಶೀರ್ವಾದ ಮಾಡಿದ ಸುಂದರ ಕ್ಷಣ ಇದು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರ ಮೊದಲ ಪುತ್ರ ಆದ್ಯವೀರ್ ತನ್ನ ತಮ್ಮನನ್ನು ಮುದ್ದಾಡುತ್ತಿರುವ ದೃಶ್ಯ ಇದಾಗಿದೆ.