ಎಂಟು ವರ್ಷದ ಕೆಳಗೆ ನಾವಿಬ್ರೂ ಹೇಗಿದ್ವಿ ಗೊತ್ತಾ? ಕೇಳ್ತಿದ್ದಾರೆ ಮೈಸೂರು ಮಹಾರಾಣಿ

ಎಂಟು ವರ್ಷದ ಕೆಳಗೆ ಲಂಡನ್ನಲ್ಲಿ ಪ್ರೇಮಿಗಳಾಗಿ ಸುತ್ತಾಡಿದ ತನ್ನ ಹಾಗೂ ಯದುವೀರ್‌ ಫೋಟೋವನ್ನು ರಿಷಿಕಾ ಕುಮಾರಿ ಪೋಸ್ಟ್ ಮಾಡಿದ್ದಾರೆ. ಇವರ ಲೈಫ್‌ ಜರ್ನಿ ಎಷ್ಟು ಇಂಟರೆಸ್ಟಿಂಗ್‌ ಗೊತ್ತಾ?

 

Mysore queen Trishikha Kumari Wadiyar remembers their love days

ಯದುವೀರ್‌ ತ್ರಿಷಿಕಾ ಮದುವೆ ಆಗಿ ಆಗಲೇ ಎಂಟು ವರ್ಷ ಕಳೆಯಿತು (Mysore King Yaduveer and Thrishika Rani gor married 8 years ago). ಲಂಡನ್‌ನಲ್ಲಿ ಓದುತ್ತಿರುವಾಗಲೇ ಪ್ರೇಮದಲ್ಲಿ ಬಿದ್ದವರು ಇವರು. ಯದುವೀರ್‌ ತ್ರಿಷಿಕಾ ಲವ್ವಿನ ಕಥೆ ಮುಗಿದು ಅದ್ದೂರಿ ಮದುವೆಯೂ ಆಗಿ ಇದೀಗ ಈ ಇಬ್ಬರೂ ಮುದ್ದು ಮಗನ ತಂದೆ ತಾಯಿಯಾಗಿದ್ದಾರೆ. ಯದುವೀರ್ ಮತ್ತು ತ್ರಿಶಿಕಾ ಒಂದು ರೀತಿಯಲ್ಲಿ ಬಾಲ್ಯದ ಗೆಳೆಯರು. ಇಬ್ಬರೂ ಪಾರ್ಟಿಗಳಲ್ಲಿ ಚಿಕ್ಕವರಿದ್ದಾಗಿಂದಲೇ ಭೇಟಿ ಆಗುತ್ತಿದ್ದರು. ಯಾಕೆಂದರೆ ಈ ಇಬ್ಬರು ಚಿಕ್ಕವರ ದೊಡ್ಡವರು ಫ್ರೆಂಡ್ಸ್‌. ಹೀಗೆ ಇಬ್ಬರೂ ದೊಡ್ಡವರ ಜೊತೆಗೆ ಪಾರ್ಟಿಗೆ ಬರುತ್ತಿದ್ದರು. ಭೇಟಿ ಮಾಡುತ್ತಿದ್ದರು. ಆಗ ಇಬ್ಬರ ನಡುವೆ ಅಂಥಾ ಸ್ನೇಹ ಇರಲಿಲ್ಲ. ಆದರೆ ಇಬ್ಬರೂ ಆರಂಭಿಕ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲೇ. ಯದುವೀರ್‌ ಅವರು ವಿದ್ಯಾನಿಕೇತನ ಸ್ಕೂಲಿನಲ್ಲಿ ಓದಿದರೆ, ತ್ರಿಶಿಕಾ ಬಾಲ್ಡ್‌ವಿನ್‌ ಕಾಲೇಜು, ಜ್ಯೋತಿನಿವಾಸ್‌ ಕಾಲೇಜು, ಕೆನಡಿಯನ್ ಇಂಟರ್‌ನ್ಯಾಶನಲ್‌ ಸ್ಕೂಲಿನಲ್ಲಿ ಕಲಿತವರು. 

ಆದರೆ ಅಮೆರಿಕದಲ್ಲಿ ಇಬ್ಬರೂ ಓದುತ್ತಿದ್ದಾಗ ಪ್ರೇಮಾಂಕುರವಾಯಿತು ಅಂತ ಆಪ್ತಮೂಲಗಳು ಹೇಳುತ್ತವೆ. ಅಮೆರಿಕದ ಆಮ್‌ಹರ್ಸ್ಟ್‌ನ ಮಸಾಚುಸೆಟ್ಸ್‌ ಯೂನಿವರ್ಸಿಟಿಯಲ್ಲಿ ಯದುವೀರ್‌ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಎಕಾನಮಿಕ್ಸ್ ಮತ್ತು ಇಂಗ್ಲಿಷ್‌ ಓದಿದರು. ಅದೇ ಸಂದರ್ಭದಲ್ಲಿ ತ್ರಿಶಿಕಾ ಕೂಡ ಬಾಸ್ಟನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ಅದೇ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು ಹಾಗೂ ಇಬ್ಬರಲ್ಲೂ ಪ್ರೀತಿ ಮೂಡಿತ್ತು ಎಂದು ಹೇಳಲಾಗುತ್ತದೆ. ನಂತರ ಇಬ್ಬರ ಹಿರಿಯರೂ ಅವರ ವಿವಾಹವನ್ನು ನಿಶ್ಚಯಿಸಿದರು. 

 

ಮದುವೆ ಭರ್ಜರಿಯಾಗಿ (Grand Wedding) ನಡೆಯಿತು.ಸುವರ್ಣ ಲೇಪಿತ ತೆಳು ಗುಲಾಬಿ ಅಂಗರಕ್‌ನೊಂದಿಗೆ ಅದೇ ಬಣ್ಣದ ವಲ್ಲಿ. ಜರಿಪೇಟ ತೊಟ್ಟ ವರ ಯದುವೀರ್, ಗುಲಾಬಿ ಅಂಚಿನ ಕೇಸರಿ ಬಣ್ಣದ ಅಪ್ಪಟ ಮೈಸೂರು ಸೀರೆ ಉಟ್ಟ ಸುಂದರಿ ತ್ರಿಷಿಕಾ ಹಸೆಮಣೆ ಏರಿ ದಾಂಪತ್ಯಕ್ಕೆ ಅಡಿ ಇಟ್ಟರು. ಇದೆಲ್ಲ ಈಗ ಸುಂದರ ನೆನಪು. ಈ ನೆನಪುಗಳೆಲ್ಲ ಮತ್ತೆ ಮುನ್ನೆಲೆಗೆ ಬರಲು ಕಾರಣ ತ್ರಿಶಿಕಾ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿರೋ ಪೋಸ್ಟ್. ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವನ್ಯಜೀವಿ ಫೋಟೋಗಳನ್ನು, ತಮ್ಮ ಕುಟುಂಬದ ಫೋಟೋಗಳನ್ನು ಶೇರ್‌ ಮಾಡುವ ಈ ಮಹಾರಾಣಿ ತಮ್ಮ ಸರಳತನದಿಂದಲೂ ಗಮನಸೆಳೆಯುತ್ತಾರೆ. 

ನೇಪಾಳದ ಬೀದಿಯಲ್ಲಿ ಮೈಸೂರಿನ ರಾಜ-ರಾಣಿ ವಾಕಿಂಗ್, ಶಾಪಿಂಗ್!

ಸುವರ್ಣ ಲೇಪಿತ ತೆಳು ಗುಲಾಬಿ ಅಂಗರಕ್‌ನೊಂದಿಗೆ ಅದೇ ಬಣ್ಣದ ವಲ್ಲಿ. ಜರಿಪೇಟ ತೊಟ್ಟ ವರ ಯದುವೀರ, ಗುಲಾಬಿ ಅಂಚಿನ ಕೇಸರಿ ಬಣ್ಣದ ಅಪ್ಪಟ ಮೈಸೂರು ಸೀರೆ ಉಟ್ಟ ಸುಂದರಿ ತ್ರಿಷಿಕಾ ಪರಸ್ಪರ ತಲೆಬಾಗಿದರು.

ಮೈಸೂರು ಸಂಸ್ಥಾನದ ನಂಟು ರಜಪೂತರೊಂದಿಗೆ ನೆರವೇರಿದ್ದು 1900ರಲ್ಲಿ. ಕೃಷ್ಣರಾಜ ಒಡೆಯರ್ ಮೊದಲು ಗುಜರಾತ್ ವಾಣಾ ಪ್ರಾಂತದ ಪ್ರತಾಪರುದ್ರಕುಮಾರಿ ಅವರನ್ನು ವರಿಸಿದ್ದರು. ಆನಂತರ ಜಯಚಾಮರಾಜ ಒಡೆಯರ್ ಬುಂದೇಲ್‌ಖಂಡ್‌ನ ಸತ್ಯಪ್ರೇಮಕುಮಾರಿ ಅವರನ್ನು ವಿವಾಹವಾಗಿದ್ದರು. ಈಗ ಮೂರನೆಯವರಾಗಿ ತ್ರಿಷಿಕಾ ಯದುವಂಶದ ಸೊಸೆಯಾಗಿದ್ದಾರೆ. ಮದುವೆಗೆ ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ಪಂಜಾಬ್ ಸಂಸ್ಥಾನದ ರಾಜವಂಶಸ್ಥರು ಬಂದಿದ್ದರು. ವಿಶೇಷವಾಗಿ ರಾಜಸ್ಥಾನದ ಜೈಪುರ, ಉದಯಪುರ, ಜೋಧಪುರ ಸಂಸ್ಥಾನದವರು, ರಾಜಕೋಟ್, ಶಿರೋಹ, ಇರಾದ್, ಪಂಜಾಬ್‌ನ ನಾಭಾ ಸಂಸ್ಥಾನದ ಪ್ರತಿನಿಧಿಗಳು ಸಂತಸದಿಂದಲೇ ಮದುವೆಯಲ್ಲಿ ಪಾಲ್ಗೊಂಡರು.

ಸರಳತೆಗೆ ಹೆಸರಾದ ಮೈಸೂರು ರಾಜ ಯದುವೀರ್ - ತ್ರಿಷಿಕಾ ದೇವಿ ರಾಯಲ್‌ ಲವ್‌ಸ್ಟೋರಿ!
ಮೈಸೂರಿನ ರಾಜಮನೆತನದವರೂ, ಪಂಜಾಬ್‌ನ ರಾಜಮನೆತನದವರೂ ಕೂಡಿದಾಗ ಈ ಪಾರ್ಟಿಗಳು ನಡೆಯುತ್ತಿದ್ದವು. ಅಲ್ಲಿ ಇವರಿಬ್ಬರ ಪರಿಚಯ, ಸ್ನೇಹ ಉಂಟಾಗಿತ್ತು. ಅದು ಪ್ರೇಮಕ್ಕೆ ತಿರುಗಿದ್ದು ಅವರಿಬ್ಬರ ವಿದ್ಯಾಭ್ಯಾಸದ ಟೈಮ್‌ನಲ್ಲಿ. ಇಬ್ಬರೂ ಹೆಚ್ಚು ಕಡಿಮೆ ಸಮಾನ ವಯಸ್ಸಿನವರು. ಮದುವೆಯಾದಾಗ ಯದುವೀರ್‌ಗೆ ಇಪ್ಪತ್ತನಾಲ್ಕು, ತ್ರಿಶಿಕಾಗೆ ಇಪ್ಪತ್ತಮೂರು.

ಇಬ್ಬರೂ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣಗಳನ್ನು ಬೆಂಗಳೂರಿನಲ್ಲಿ ಮಾಡಿದವರು. ಯದುವೀರ್‌ ಅವರು ವಿದ್ಯಾನಿಕೇತನ ಸ್ಕೂಲಿನಲ್ಲಿ, ತ್ರಿಶಿಕಾ ಬಾಲ್ಡ್‌ವಿನ್‌ ಕಾಲೇಜು, ಜ್ಯೋತಿನಿವಾಸ್‌ ಕಾಲೇಜು, ಕೆನಡಿಯನ್ ಇಂಟರ್‌ನ್ಯಾಶನಲ್‌ ಸ್ಕೂಲಿನಲ್ಲಿ ಕಲಿತವರು. ನಂತರದ ಶಿಕ್ಷಣವನ್ನು ಅಮೆರಿಕದಲ್ಲಿ ಇಬ್ಬರೂ ಇದ್ದು ಓದಿದವರು. ಆಮ್‌ಹರ್ಸ್ಟ್‌ನ ಮಸಾಚುಸೆಟ್ಸ್‌ ಯೂನಿವರ್ಸಿಟಿಯಲ್ಲಿ ಯದುವೀರ್‌ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಇಕಾನಮಿಕ್ಸ್ ಮತ್ತು ಇಂಗ್ಲಿಷ್‌ ಓದಿದರು. 

ಅದೇ ಸಂದರ್ಭದಲ್ಲಿ ತ್ರಿಶಿಕಾ ಕೂಡ ಬಾಸ್ಟನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ಅದೇ ಸಂದರ್ಭದಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು ಹಾಗೂ ಇಬ್ಬರಲ್ಲೂ ಪ್ರೀತಿ ಮೂಡಿತ್ತು ಎಂದು ಹೇಳಲಾಗುತ್ತದೆ. ನಂತರ ಇಬ್ಬರ ಹಿರಿಯರೂ ಅವರ ವಿವಾಹವನ್ನು ನಿಶ್ಚಯಿಸಿದರು. 

ಬೆಳ್ಳಿಯ ದೇಗುಲದಲ್ಲಿ ಚಿನ್ನದ ವಿಗ್ರಹಗಳು; ಅನಂತ್ ರಾಧಿಕಾ ವೆಡ್ಡಿಂಗ್ ಕಾರ್ಡ್ ವಿಡಿಯೋ ವೈರಲ್

ಯದುವೀರ್‌ ಅವರನ್ನು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ದತ್ತು ಸ್ವೀಕರಿಸಿಕೊಂಡಿದ್ದರು. ಯದುವೀರ್ ಮೈಸೂರಿನ ಮಹಾರಾಜರಾಗಿದ್ದರು. ತ್ರಿಶಿಕಾ ನೇರವಾಗಿ ಮೈಸೂರಿನ ಮಹಾರಾಣಿಯಾಗಿಯೇ ಅರಮನೆಗೆ ಕಾಲಿಟ್ಟರು. ನಾಲ್ಕು ದಶಕಗಳ ನಂತರ ಕಂಡ ಅದ್ದೂರಿಯ ಮದುವೆಗೆ ಮೈಸೂರು ಸಾಕ್ಷಿಯಾಯಿತು. ತ್ರಿಶಿಕಾ ಕಟ್ಟುನಿಟ್ಟಾದ ವೆಜೆಟೇರಿಯನ್. ಮೊಟ್ಟೆ ಕೂಡ ಸೇವಿಸುವುದಿಲ್ಲ. ಈಕೆ ಪ್ರಾಣಿಗಳನ್ನು ಇಷ್ಟಪಡುತ್ತಾರೆ. ಹೀಗಾಗಿ ಮಾಂಸಾಹಾರ ಸೇವಿಸಲು ಇಷ್ಟಪಡುವುದಿಲ್ಲ. ಮಹಾರಾಜರಾದರೋ ಆಗಲೋ ಈಗಲೋ ಎಂದು ಮಾಂಸ ಸೇವಿಸುವುದು ಉಂಟು. 
 
ಅರಮನೆಯಲ್ಲಿ ಮಾಂಸಾಹಾರದ ಸೇವನೆ ಇಲ್ಲ. ಇಬ್ಬರ ದಿನಚರಿಯೂ ಹೆಚ್ಚುಕಡಿಮೆ ಒಂದೇ ರೀತಿ ಇದೆ. ಇಬ್ಬರೂ ರಾತ್ರಿ ಒಂಬತ್ತೂವರೆಗೆಲ್ಲ ಮಲಗಿ ಬಿಡುತ್ತಾರೆ. ಮೈಸೂರಿನ ಜೀವನ ಬೆಂಗಳೂರಿನ ಹಾಗಲ್ಲ ತಾನೆ. ಆದರೆ ಇಬ್ಬರೂ ಬೆಳಗ್ಗೆ ಐದು ಗಂಟೆಗೆ ಏಳುತ್ತಾರೆ. ಯದುವೀರ್‌ ಸೂರ್ಯ ನಮಸ್ಕಾರ ಮತ್ತು ಇತರ ಯೋಗಾಸನಗಳನ್ನು ಮಾಡುತ್ತಾರೆ. ತ್ರಿಶಿಕಾ ಕೂಡ ಯೋಗಾಸನ ಮಾಡುತ್ತಾರೆ. ದಿನಕ್ಕೊಮ್ಮೆ ಹನುಮಾನ್‌ ಚಾಲೀಸ್ ಪಠಿಸುತ್ತಾರೆ.

ಬಳ್ಳಾರಿ ಜೀನ್ಸ್ ಉದ್ಯಮ ಪ್ರಗತಿಗೆ ಮೋದಿ ಕ್ರಮ: ಯದುವೀ

Latest Videos
Follow Us:
Download App:
  • android
  • ios